ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಅಂಗಡಿಯವನ ಮೇಲೆ ಡೆಡ್ಲಿ ಆಟ್ಯಾಕ್‌ ಮಾಡಿದ ಹುಡುಗಿ- ಕಾರಣ ಕೇಳಿದ್ರೆ ಬೆಚ್ಚಿ ಬೀಳ್ತೀರಿ!

15 ವರ್ಷದ ಹುಡುಗಿಯೊಬ್ಬಳು ತಾನು ಖರೀದಿಸಿದ ವಸ್ತುಗಳನ್ನು ಹಿಂಪಡೆಯಲು ನಿರಾಕರಿಸಿದ್ದಕ್ಕಾಗಿ ಅಂಗಡಿಯವನ ಮೇಲೆ ಹರಿತವಾದ ಬ್ಲೇಡ್‍ನಿಂದ ಹಲ್ಲೆ ನಡೆಸಿದ ಘಟನೆ ಮೇ 2ರಂದು ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಹಿಡಿಯಾಗಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.

ಅಂಗಡಿಯವನ ಮೇಲೆ ಬ್ಲೇಡ್‌ನಿಂದ ಹಲ್ಲೆ ಮಾಡಿದ ಹುಡುಗಿ-ಕಾರಣವೇನು?

Profile pavithra May 5, 2025 1:13 PM

ಲಖನೌ: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ 15 ವರ್ಷದ ಹುಡುಗಿಯೊಬ್ಬಳು ತಾನು ಖರೀದಿಸಿದ ವಸ್ತುಗಳನ್ನು ಹಿಂಪಡೆಯಲು ನಿರಾಕರಿಸಿದ್ದಕ್ಕಾಗಿ ಅಂಗಡಿಯವನ ಮೇಲೆ ಹರಿತವಾದ ಬ್ಲೇಡ್‍ನಿಂದ ಹಲ್ಲೆ ನಡೆಸಿದ ಘಟನೆಯೊಂದು ನಡೆದಿದೆ. ಕೃಷ್ಣಗಂಜ್‍ನ ಅಂಗಡಿಯೊಳಗೆ ಇತ್ತೀಚೆಗೆ ಈ ಘಟನೆ ನಡೆದಿದ್ದು, ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video)ಆಗಿದೆ.ಅಂಗಡಿ ಮಾಲೀಕರ ಪ್ರಕಾರ, ಹುಡುಗಿ ಅವನ ಅಂಗಡಿಯಿಂದ ವಸ್ತುಗಳನ್ನು ಖರೀದಿಸಿದ್ದಳು ಮತ್ತು ಅವುಗಳನ್ನು ಸ್ವಲ್ಪ ಸಮಯದವರೆಗೆ ಬಳಸಿದ ಮೇಲೆ ಮರಳಿ ತೆಗೆದುಕೊಂಡು ಬಂದು ಹಣವನ್ನು ಹಿಂದಿರುಗಿಸುವಂತೆ ಒತ್ತಾಯಿಸಿದ್ದಾಳೆ ಎಂದು ಹೇಳಿದ್ದಾನೆ.

ಅದು ಅಲ್ಲದೇ ಆಕೆ ಅನೇಕ ಬಾರಿ ಹೀಗೆ ಮಾಡಿದ್ದಳು. ಆದರೆ, ಈ ಬಾರಿ ಅಂಗಡಿಯವನು ತೆಗೆದುಕೊಳ್ಳಲು ನಿರಾಕರಿಸಿದ್ದಾನೆ.ಇದರಿಂದ ಕೋಪಗೊಂಡ ಹುಡುಗಿ ಬ್ಲೇಡ್ ಹೊರತೆಗೆದು ಅಂಗಡಿಯವನ ಮೇಲೆ ದಾಳಿ ಮಾಡಿದ್ದಾಳೆ, ಅವನ ಕೈ ಮತ್ತು ಹೊಟ್ಟೆಗೆ ತೀವ್ರವಾಗಿ ಗಾಯಮಾಡಿದ್ದಾಳಂತೆ.

ಘಟನೆಯ ಸಮಯದಲ್ಲಿ ಅಂಗಡಿಯಲ್ಲಿ ಇಬ್ಬರು ಪುರುಷರು ಮತ್ತು ಮಹಿಳೆಯರು ಹಾಜರಿದ್ದರು. ಹುಡುಗಿ ಅಂಗಡಿಯಿಂದ ಹೊರಗೆ ಓಡುತ್ತಿದ್ದಂತೆ, ನಾಲ್ಕು ಜನರು ಅವಳನ್ನು ಹಿಡಿದಿದ್ದಾರೆ. ಅಂಗಡಿ ಮಾಲೀಕನನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಂತ್ರಸ್ತನ ಕುಟುಂಬವು ಹುಡುಗಿಯ ವಿರುದ್ಧ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ಶುರುಮಾಡಿದ್ದಾರೆ ಹಾಗೂ ಹುಡುಗಿ ಮಾನಸಿಕ ಅಸ್ವಸ್ಥಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂಬುದಾಗಿ ತಿಳಿದುಬಂದಿದೆ.

ವೈರಲಾಗಿರುವ ವಿಡಿಯೊ ಇಲ್ಲಿದೆ



ಇದಕ್ಕೂ ಮುನ್ನ ಏಪ್ರಿಲ್ 19 ರಂದು ಉತ್ತರಪ್ರದೇಶದ ಹಾಪುರದಲ್ಲಿ ರಶೀದ್ ಎಂಬ ವ್ಯಕ್ತಿ ತನ್ನ ಹೆತ್ತವರ ಮನೆಗೆ ಭೇಟಿ ನೀಡುವ ವಿಚಾರಕ್ಕೆ ಆಗಾಗ ಜಗಳವಾಡುತ್ತಿದ್ದ ತನ್ನ ಪತ್ನಿ ನಜ್ರೀನ್ ಅವಳನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದನು.

ಈ ಸುದ್ದಿಯನ್ನೂ ಓದಿ:Viral Video: ಡಿವೋರ್ಸ್‌ ಸಿಕ್ಕ ಖುಷಿಯಲ್ಲಿ ಪಾರ್ಟಿ ಮಾಡಿದ ಮಹಿಳೆ; ಸಿಕ್ಕಾಪಟ್ಟೆ ವೈರಲ್‌ ಆಯ್ತು ಮೆಹೆಂದಿ ಡಿಸೈನ್‌!

ರಶೀದ್ ಸ್ವತಃ ಪೊಲೀಸರಿಗೆ ಕರೆ ಮಾಡಿದ ನಂತರ ತಪ್ಪೊಪ್ಪಿಕೊಂಡ ನಂತರ ಈ ಘಟನೆ ಬೆಳಕಿಗೆ ಬಂದಿದೆ. ಆರೋಪಿ ತನ್ನ ವಿಕಲಚೇತನ ತಂದೆ, ಪತ್ನಿ ನಜ್ರೀನ್ (40) ಮತ್ತು ಅವರ ಮೂವರು ಮಕ್ಕಳೊಂದಿಗೆ ರಫೀಕ್ ನಗರ ಪ್ರದೇಶದಲ್ಲಿ ವಾಸಿಸುತ್ತಿದ್ದನು. ಕಳೆದ ಎರಡು ದಿನಗಳಿಂದ ನಜ್ರೀನ್ ತನ್ನ ತಾಯಿಯ ಮನೆಗೆ ಭೇಟಿ ನೀಡುವಂತೆ ಒತ್ತಾಯಿಸಿದ್ದರಿಂದ ಇದು ಆಗಾಗ್ಗೆ ಜಗಳಕ್ಕೆ ಕಾರಣವಾಗುತ್ತಿತ್ತು. ಹೀಗಾಗಿ ಕೋಪದಿಂದ ಅವನು ಈ ಅಪರಾಧವನ್ನು ಮಾಡಿದ್ದಾನೆ ಎಂದು ವರದಿಗಳು ಸೂಚಿಸಿವೆ. ನಂತರ ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.