ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

‌Viral Video: ಮದ್ವೆಯ ಜೋಶ್‌ನಲ್ಲಿ ಈ ವ್ಯಕ್ತಿ ಮಾಡಿದ ಕೆಲ್ಸವನ್ನೊಮ್ಮೆ ನೋಡಿ; ವಿಡಿಯೊ ವೈರಲ್

ವ್ಯಕ್ತಿಯೊಬ್ಬ ಮದುವೆಯ ಸಂದರ್ಭದಲ್ಲಿ ಡೋಲು ಬಡಿಯುವವರಿಗೆ ಉಡುಗೊರೆಯೊಂದನ್ನು ನೀಡಿದ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಖುಷಿಯಿಂದ ಡೋಲು ಬಡಿಯುವವರಿಗೆ ಈತ ಬಾಯಲ್ಲಿ ಹಣವನ್ನು ಕಚ್ಚಿಕೊಂಡು ಅವರಿಗೆ ನೀಡಿದ್ದಾನೆ. ಈ ವಿಶಿಷ್ಟ ಶೈಲಿಯು ಸೋಶಿಯಲ್ ಮೀಡಿಯಾದವರ ಗಮನಸೆಳೆದು ವೈರಲ್(Viral Video) ಆಗಿದೆ.

ಮದ್ವೆಯ ಜೋಶ್‌ನಲ್ಲಿ ಈ ವ್ಯಕ್ತಿ ಮಾಡಿದ ಕೆಲ್ಸವನ್ನೊಮ್ಮೆ ನೋಡಿ

Profile pavithra May 3, 2025 3:58 PM

ನವದೆಹಲಿ: ಭಾರತದಲ್ಲಿ ಮದುವೆಯ ಸಂದರ್ಭದಲ್ಲಿ ಡೋಲು ಬಡಿಯುವವರಿಗೆ ಶಗುನ್ (ಸಣ್ಣ ನಗದು ಉಡುಗೊರೆ) ನೀಡುವುದು ಸಾಮಾನ್ಯ ಸಂಪ್ರದಾಯವಾಗಿದೆ. ಅತಿಥಿಗಳು ಅಥವಾ ಕುಟುಂಬ ಸದಸ್ಯರು ಸಾಮಾನ್ಯವಾಗಿ ನೃತ್ಯ ಮಾಡುವಾಗ ಅಥವಾ ಕಾರ್ಯಕ್ರಮದ ಕೊನೆಯಲ್ಲಿ ಈ ಹಣವನ್ನು ನೀಡುತ್ತಾರೆ. ಇಲ್ಲಿ ವ್ಯಕ್ತಿಯೊಬ್ಬ ಡೋಲು ಬಡಿಯುವವರಿಗೆ ವಿಶಿಷ್ಟ ಶೈಲಿಯಲ್ಲಿ ಹಣವನ್ನು ನೀಡಿದ್ದಾನೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌(Viral Video) ಆಗಿದೆ. ವ್ಯಕ್ತಿಯೊಬ್ಬ ತನ್ನ ಬಾಯಲ್ಲಿ ಎರಡು 500 ರೂಪಾಯಿಗಳ ನೋಟುಗಳನ್ನು ಹಿಡಿದುಕೊಂಡು ಅವುಗಳನ್ನು ತೆಗೆದುಕೊಳ್ಳುವಂತೆ ಡೋಲು ಬಡಿಯುವವರಿಗೆ ಹೇಳಿದ್ದಾನೆ. ಅವರಿಬ್ಬರೂ ಸಾಕಷ್ಟು ಪ್ರಯತ್ನ ಮಾಡಿ ವ್ಯಕ್ತಿಯ ಬಾಯಿಂದ ಹಣವನ್ನು ತೆಗೆದುಕೊಂಡಿದ್ದಾರೆ. ಇದಾದ ಬಳಿಕ ಹಣ ನೀಡಿದ ವ್ಯಕ್ತಿ ಡೋಲು ಬಡಿಯುವವರ ಜೊತೆ ಸಖತ್‌ ಆಗಿ ಡ್ಯಾನ್ಸ್‌ ಮಾಡಿದ್ದಾನೆ.

ವಿಡಿಯೊ ಇಲ್ಲಿದೆ ನೋಡಿ...



ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಗಮನಸೆಳೆದು ವೈರಲ್ ಆಗಿದೆ. ಆದರೆ ಸದ್ಯ ಈ ವಿಡಿಯೊವನ್ನು ಡಿಲೀಟ್ ಮಾಡಲಾಗಿದೆ. ಅಲ್ಲದೆ, ವೀಡಿಯೊದ ಬಗ್ಗೆ ಹೆಚ್ಚಿನ ವಿವರಗಳು ತಿಳಿದಿಲ್ಲ. ಏಪ್ರಿಲ್ 30 ರಂದು ಶೇರ್ ಮಾಡಲಾದ ಈ ವಿಡಿಯೊ 18,000 ಕ್ಕೂ ಹೆಚ್ಚು ಲೈಕ್‍ಗಳನ್ನು ಗಳಿಸಿದೆ. ಈ ಹಿಂದೆ 2022 ರಲ್ಲಿ, ಪೇಟಿಎಂ ಬಳಸಿ ಡೋಲು ಬಡಿಯುವ ವ್ಯಕ್ತಿಗೆ ವ್ಯಕ್ತಿಯೊಬ್ಬ ಉಡುಗೊರೆ ನೀಡುವ ವಿಡಿಯೊ ವೈರಲ್ ಆಗಿತ್ತು. ಪೇಟಿಎಂ ಮೂಲಕ ಡೋಲು ಬಡಿಯುವವನಿಗೆ ಹಣವನ್ನು ನೀಡುವ ಮೊದಲು ವ್ಯಕ್ತಿಯು ತನ್ನ ಫೋನ್ ಅನ್ನು ವರನ ತಲೆಯ ಸುತ್ತಲೂ ತಿರುಗಿಸಿದ್ದಾನೆ. ಈ ಘಟನೆ ಬಿಹಾರದಲ್ಲಿ ನಡೆದಿತ್ತು. ಈ ವಿಡಿಯೊಗೆ ಅನೇಕರು ಕಾಮೆಂಟ್ ವಿಭಾಗದಲ್ಲಿ ನಗುವ ಎಮೋಜಿಗಳನ್ನು ಪೋಸ್ಟ್ ಮಾಡಿದ್ದರು.

ಈ ಸುದ್ದಿಯನ್ನೂ ಓದಿ:Viral Video: ಸ್ಕೂಟಿಯ ಮೇಲೆ ಈ ಗೂಳಿಗೆ ಇದೆಂಥಾ ಕೋಪ! ಈ ವಿಡಿಯೊ ನೋಡಿದ್ರೆ ಬೆಚ್ಚಿ ಬೀಳ್ತೀರಾ?

"ಯುಪಿಐ ಜೀವನವನ್ನು ಸುಲಭಗೊಳಿಸಿದೆ" ಎಂದು ಒಬ್ಬರು ಬರೆದರೆ, ಇನ್ನೊಬ್ಬರು "ಸಂಕ್ಷಿಪ್ತವಾಗಿ ಡಿಜಿಟಲ್ ಇಂಡಿಯಾ" ಎಂದು ಕಾಮೆಂಟ್ ಮಾಡಿದ್ದಾರೆ. "ನಾನು ಈ ಡಿಜಿಟಲ್ ಸಂಸ್ಕೃತಿಯನ್ನು ಪ್ರೀತಿಸುತ್ತೇನೆ" ಎಂದು ನೆಟ್ಟಿಗರೊಬ್ಬರು ಹೇಳಿದ್ದರು.