Viral Video: ನಿಯತ್ತು ಅಂದ್ರೆ ಇದಪ್ಪಾ! ಮನೆಯವರನ್ನು ನಾಗರಹಾವಿನಿಂದ ಕಾಪಾಡಿದ ಶ್ವಾನ- ಈ ವಿಡಿಯೊ ನೋಡಿ
ಮನೆಯ ಹಿತ್ತಲಿಗೆ ಬಂದ ನಾಗರಹಾವಿನ ಮೇಲೆ ರಾಟ್‍ವೀಲರ್ ದಾಳಿ ಮಾಡಿ ಅದನ್ನು ಎರಡು ತುಂಡಾಗಿ ಕತ್ತರಿಸಿ ಹಾಕಿದ ಘಟನೆಯೊಂದು ನಡೆದಿದೆ. ಈ ದೃಶ‍್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.


ನವದೆಹಲಿ: ಬೇಸಿಗೆ ಕಾಲ ಶುರುವಾದ್ದರಿಂದ ಹಾವುಗಳು ಹುತ್ತದಿಂದ ಹೊರಬಂದು ಮನೆಯ ಹಿತ್ತಲಿನಲ್ಲಿ, ತಂಪು ಪ್ರದೇಶದಲ್ಲಿ ಓಡಾಡುತ್ತಿರುತ್ತವೆ. ಹೀಗೆ ಮನೆಯ ಹಿತ್ತಲಿಗೆ ಬಂದ ನಾಗರಹಾವಿನ ಮೇಲೆ ರಾಟ್‍ವೀಲರ್ ಭೀಕರವಾಗಿ ದಾಳಿ ಮಾಡಿ ಅದನ್ನು ಎರಡು ತುಂಡಾಗಿ ಕತ್ತರಿಸಿ ಹಾಕಿದೆ. ನಾಯಿ ಮಾಲೀಕ ಈ ಘಟನೆಯನ್ನು ವಿಡಿಯೊ ಮಾಡಿದ್ದು, ನಂತರ ಅದನ್ನು ತನ್ನ ಸೋಶಿಯಲ್ ಮಿಡಿಯಾ ಪೇಜ್‍ನಲ್ಲಿ ಹಂಚಿಕೊಂಡಿದ್ದಾನೆ. ಇದೀಗ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ. ಈ ವಿಡಿಯೊ ನೋಡಿ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ. ವೈರಲ್ ವಿಡಿಯೊದಲ್ಲಿ ಸಾಕು ನಾಯಿ ಮತ್ತು ಹಾವಿನ ನಡುವಿನ ಭೀಕರ ಹೋರಾಟದ ದೃಶ್ಯ ಸೆರೆಯಾಗಿತ್ತು. ರಾಟ್‍ವೀಲರ್ ಹಿತ್ತಲಿನಲ್ಲಿ ಹೆಡೆ ಎತ್ತಿ ನಿಂತಿದ್ದ ನಾಗರಹಾವನ್ನು ನೋಡಿದ ತಕ್ಷಣ ಅದರ ಬಳಿ ಹೋಗಿ ಅದರ ಮೇಲೆ ದಾಳಿ ಮಾಡಿದೆ. ಹಾವನ್ನು ಬಾಯಲ್ಲಿ ಕಚ್ಚಿ ಅದನ್ನು ಎರಡು ತುಂಡಾಗಿ ಕತ್ತರಿಸಿ ಹಾಕಿದೆ. ಕೊನೆಗೆ ಅದರ ತಲೆಯ ಭಾಗವನ್ನು ಮತ್ತೆ ಎಳೆದಾಡಿದೆ. ಕೊನೆಗೆ ಆ ಹಾವು ಅಲ್ಲೇ ಪ್ರಾಣಬಿಟ್ಟಿದೆ.
ಹಾವಿನ ಜೊತೆ ಸೆಣಸಾಡಿದ ಶ್ವಾನದ ವಿಡಿಯೊ ಇಲ್ಲಿದೆ:
ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡ ತಕ್ಷಣ ವೈರಲ್ ಆಗಿದ್ದು, 57 ಮಿಲಿಯನ್ ವ್ಯೂವ್ಸ್ ಮತ್ತು ಸುಮಾರು 2 ಮಿಲಿಯನ್ ಲೈಕ್‍ಗಳನ್ನು ಗಳಿಸಿದೆ. ಕೆಲವರು ಧೈರ್ಯಶಾಲಿಯಾದ ನಾಯಿಯು ಮನೆಯ ಸದಸ್ಯರ ಸುರಕ್ಷತೆಗಾಗಿ ಮಾಡಿದ ಕಾರ್ಯಕ್ಕಾಗಿ ಅದನ್ನು ಹೊಗಳಿದರೆ, ಇತರರು ನಾಗರಹಾವಿನ ಜೊತೆ ನಾಯಿ ನಡೆದುಕೊಂಡ ಕ್ರೂರ ವರ್ತನೆಯನ್ನು ಖಂಡಿಸಿದ್ದಾರೆ. ನೀವು ವಿಡಿಯೊ ಮಾಡುವ ಬದಲು ನಾಯಿಯನ್ನು ತಡೆಯಬೇಕಿತ್ತು ಎಂದು ಒಬ್ಬರು ವಿಡಿಯೊಗೆ ಕಾಮೆಂಟ್ ಮಾಡಿದರೆ, "ನಾಗರಹಾವು ಜನರಿಗೆ ಹೆಚ್ಚಾಗಿ ಕಚ್ಚುವುದಿಲ್ಲ. ಆದ್ದರಿಂದ ನೀವು ನಾಗರಹಾವನ್ನು ಕಾಪಾಡಿ, ಅದನ್ನು ಕೊಲ್ಲಬೇಡಿ “ ಎಂದು ಇನ್ನೊಬ್ಬರು ಹೇಳಿದ್ದಾರೆ. ಇತರರು, "ಎಂತಹ ಧೈರ್ಯಶಾಲಿ ನಾಯಿ, ನಾಯಿಗಳನ್ನು ಈ ರೀತಿ ಬೆಳೆಸಬೇಕು" ಎಂದು ಹೊಗಳಿದ್ದಾರೆ.
ರಾಟ್‍ವೀಲರ್ ಮತ್ತು ನಾಗರಹಾವಿನ ನಡುವೆ ಕಾಳಗ ನಡೆದಿದ್ದು ಇದೇ ಮೊದಲಲ್ಲ. ಈ ಹಿಂದೆ ರಾಟ್‍ವೀಲರ್ ತನ್ನನ್ನು ಸಾಕಿದ ತನ್ನ ಕುಟುಂಬ ಸದಸ್ಯರ ಜೀವವನ್ನು ನಾಗರಹಾವಿನಿಂದ ರಕ್ಷಿಸಿದ ನಂತರ ಪ್ರಾಣ ಕಳೆದುಕೊಂಡ ಘಟನೆಯೊಂದು ನಡೆದಿತ್ತು. ನಾಯಿಯು ಬೊಗಳುವುದನ್ನು ಕೇಳಿದ ಮನೆಯ ಮಾಲೀಕ ಎಚ್ಚರಗೊಂಡು ಮನೆಯಿಂದ ಹೊರಗೆ ಬಂದಾಗ, ಮನೆಯ ಮೆಟ್ಟಿಲುಗಳ ಮೇಲೆ ದೊಡ್ಡ ನಾಗರಹಾವನ್ನು ನೋಡಿದ್ದಾರೆ. ಹಾವನ್ನು ನೋಡಿ ಬೆಚ್ಚಿಬಿದ್ದ ಕುಟುಂಬವು ಹಾವು ರಕ್ಷಕ ರಾಜನ್ ಪೆರುಂಬಿಲಾವು ಅವನನ್ನು ಕರೆಸಿ ಹಾವನ್ನು ಹಿಡಿದಿದ್ದಾರೆ. ಅಷ್ಟೊತ್ತಿಗಾಗಲೇ ರಾಟ್‍ವೀಲರ್ ಹಾವಿನ ಜೊತೆ ಸೆಣಸಾಡಿ ಅದರಿಂದ ಕಚ್ಚಿಸಿಕೊಂಡು ಪ್ರಾಣ ಕಳೆದುಕೊಂಡಿತ್ತು.
ಈ ಸುದ್ದಿಯನ್ನೂ ಓದಿ:Viral Video: ತಲೆಗೆ ಹಾವು ಕಚ್ಚಿಯೂ ಅಪಾಯದಿಂದ ಪಾರಾದ ಯುವಕ; ವಿಡಿಯೊ ಇಲ್ಲಿದೆ
ಇತ್ತೀಚೆಗೆ ವ್ಯಕ್ತಿಯೊಬ್ಬ ಫೋನ್‍ನಲ್ಲಿ ಮಾತನಾಡುತ್ತಿರುವಾಗ ವಿಷಕಾರಿ ಹಾವೊಂದು ಬೇಲಿಯಿಂದ ಮೇಲೆ ಹತ್ತಿ ಬಂದು ವ್ಯಕ್ತಿಯ ತಲೆಗೆ ಕಚ್ಚಿದೆ. ಆದರೆ ಆತ ತಲೆಗೆ ಟೋಪಿ ಧರಿಸಿದ್ದರಿಂದ ಅಪಾಯದಿಂದ ಪಾರಾಗಿದ್ದಾರೆ. ಹಾವಿನ ಹಲ್ಲಿಗೆ ಆ ಟೋಪಿ ಸಿಲುಕಿಕೊಂಡಿದೆ. ಇದರಿಂದ ಆ ವ್ಯಕ್ತಿಗೆ ಯಾವುದೇ ಹಾನಿಯಾಗಲಿಲ್ಲ. ಟೋಪಿ ತನ್ನ ತಲೆಯಿಂದ ಹೊರಬಂದ ಕೂಡಲೇ ವ್ಯಕ್ತಿಗೆ ಪರಿಸ್ಥಿತಿಯ ಅರಿವಾಗಿದೆ. ಮೊದಲಿಗೆ ಯಾರೋ ತಮಾಷೆಯಾಗಿ ತನ್ನ ಟೋಪಿಯನ್ನು ತೆಗೆದಿರಬಹುದು ಎಂದುಕೊಂಡ ಆತ ಹಿಂತಿರುಗಿ ನೋಡಿದಾಗ ಹಾವನ್ನು ಕಂಡು ಹೌಹಾರಿದ್ದಾನೆ.