ಬೆಂಗಳೂರಿನಲ್ಲಿ ಸಂಬಳದ ಅರ್ಧದಷ್ಟು ಖರ್ಚಾದರೂ ಜನ ಸಿಟಿ ಬಿಟ್ಟು ಹೋಗಲ್ಲ ಯಾಕೆ? ಬಿಹಾರಿ ಯುವಕನ ಗಮನ ಸೆಳೆದ ವಿಡಿಯೊ!
Viral News: ಬೆಂಗಳೂರು ನಗರಕ್ಕೆ ತೆರಳುವ ಅನೇಕ ಜನರು ಮೂಲತಃ ಯೋಜಿಸಿದ್ದಕ್ಕಿಂತ ಹೆಚ್ಚು ಕಾಲ ಉಳಿಯುತ್ತಾರೆ. ಈ ಬಗ್ಗೆ ಇತ್ತೀಚೆಗೆ ಬಿಹಾರದ ವ್ಯಕ್ತಿಯೊಬ್ಬರು ಅನುಭವ ಶೇರ್ ಮಾಡಿದ್ದು ದೈನಂದಿನ ಸಮಸ್ಯೆಗಳ ಹೊರತಾಗಿಯೂ ಬೆಂಗಳೂರು ಜನರನ್ನು ಏಕೆ ಹಿಡಿದಿಟ್ಟುಕೊಳ್ಳುತ್ತದೆ ಎಂಬುದರ ಕುರಿತು ತಮ್ಮ ಆಲೋಚನೆಗಳನ್ನು ಹಂಚಿಕೊಂಡಿದ್ದಾರೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ
ಜನರನ್ನು ಆಕರ್ಷಿಸುವ ಬೆಂಗಳೂರಿನ ಬಗ್ಗೆ ಯುವಕ ಹೇಳಿದ್ದೇನು? -
ಬೆಂಗಳೂರು,ಮೇ 31: ಬೆಂಗಳೂರು ಅಂದಾಗ ಇಲ್ಲಿನ ಟ್ರಾಫಿಕ್, ಜೀವನ ಶೈಲಿ ಬಹಳಷ್ಟು ದುಬಾರಿ. ಇಲ್ಲಿನ ಬಿಡುವಿಲ್ಲದ ಜೀವನ ಶೈಲಿಗಂತೂ ಜನ ಬೇಸತ್ತು ಹೋಗಿದ್ದಾರೆ. ಆದರೂ ಸಹ ಬೆಂಗಳೂರಿಗೆ ಕಾಲಿಟ್ಟವರು ವರ್ಷಗಳೇ ಕಳೆದರೂ ಇಲ್ಲಿಂದ ಹೋಗಲು ಇಚ್ಚಿಸುವುದಿಲ್ಲ. ಬೆಂಗಳೂರು ನಗರಕ್ಕೆ ತೆರಳುವ ಅನೇಕ ಜನರು ಮೂಲತಃ ಯೋಜಿಸಿದ್ದಕ್ಕಿಂತ ಹೆಚ್ಚು ಕಾಲ ಉಳಿಯುತ್ತಾರೆ. ಈ ಬಗ್ಗೆ ಇತ್ತೀಚೆಗೆ ಬಿಹಾರದ ವ್ಯಕ್ತಿಯೊಬ್ಬರು ಅನುಭವ ಶೇರ್ ಮಾಡಿದ್ದು ದೈನಂದಿನ ಸಮಸ್ಯೆಗಳ ಹೊರತಾಗಿಯೂ ಬೆಂಗಳೂರು ಜನರನ್ನು ಏಕೆ ಹಿಡಿದಿಟ್ಟುಕೊಳ್ಳುತ್ತದೆ ಎಂಬುದರ ಕುರಿತು ತಮ್ಮ ಆಲೋಚನೆಗಳನ್ನು ಹಂಚಿಕೊಂಡಿದ್ದಾರೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ (Viral News) ಆಗಿದೆ.
ಬೆಂಗಳೂರು ಅನ್ನೋದು ಟ್ರಾಫಿಕ್, ಹೆಚ್ಚುತ್ತಿರುವ ಬಾಡಿಗೆ ಮತ್ತು ಬ್ಯುಸಿ ಜೀವನಶೈಲಿಗೆ ಹೆಸರುವಾಸಿಯಾಗಿದೆ. ಹಾಗಿದ್ದರೂ, ನಗರಕ್ಕೆ ತೆರಳುವ ಅನೇಕ ಜನರು ಇಲ್ಲಿಯೇ ಇದ್ದು ಬಿಡಲು ಬಯಸುತ್ತಾರೆ. ಇದೀಗ ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಅಂಕಿತಾ ಎಂಬುವವರು ಹಂಚಿಕೊಂಡಿರುವ ವಿಡಿಯೋವೊಂದು ನೆಟ್ಟಿಗರ ಗಮನ ಸೆಳೆದಿದ್ದು ಹೆಚ್ಚಿನವರು ಪ್ರತಿಕ್ರಿಯೆ ನೀಡುತ್ತಿದ್ದಾರೆ.
ವಿಡಿಯೋ ನೋಡಿ:
ಇದು ಬೆಂಗಳೂರು, ಜನರು ಇಲ್ಲಿಗೆ ಬರುತ್ತಾರೆ, ಆದರೆ ಬಂದ ನಂತರ ಅವರು ಈ ಸ್ಥಳವನ್ನು ಬಿಡಲು ಬಯಸುವುದಿಲ್ಲ. ಅವರು ಒಂಟಿತನವನ್ನು ಅನುಭವಿಸುತ್ತಿದ್ದರೂ, ಆತಂಕವನ್ನು ಅನುಭವಿ ಸುತ್ತಿದ್ದರೂ, ಅವರು ಟ್ರಾಫಿಕ್ ಅನ್ನು ಎದುರಿಸಬೇಕಾಗಿದ್ದರೂ ಸಹ, ಅವರು ಇನ್ನೂ ಇಲ್ಲಿಯೇ ಇರಲು ಬಯಸುತ್ತಾರೆ. ನಮ್ಮ ಸಂಬಳದ ಅರ್ಧಕ್ಕಿಂತ ಹೆಚ್ಚು ಈ ದೊಡ್ಡ ಅಪಾರ್ಟ್‌ಮೆಂಟ್‌ಗಳ ಬಾಡಿಗೆಗೆ ಹೋದರೂ ಸಹ, ಬೆಂಗಳೂರಿನ ಅದ್ಭುತ ಹವಾ ಮಾನವೂ ನಮ್ಮನ್ನು ಬೇರೆಲ್ಲೂ ಹೋಗಲು ಬಿಡುವುದಿಲ್ಲ ಎಂದು ಹೇಳಿದ್ದಾರೆ.
ಭಾರತದಾದ್ಯಂತ ಅನೇಕ ಪ್ರಮುಖ ನಗರಗಳಲ್ಲಿ ಉದ್ಯೋಗಾವ ಕಾಶಗಳು ಇದ್ದರೂ, ಬೆಂಗಳೂರಿನ ಆಹ್ಲಾದಕರ ವಾತಾವರಣ ಅನೇಕ ಜನರನ್ನು ಹೊರಹೋಗದಂತೆ ಮಾಡುತ್ತದೆ ಎಂದಿದ್ದಾರೆ.ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ, ಬೆಂಗಳೂರು ನಿವಾಸಿಗಳು ಮತ್ತು ಐಟಿ ಉದ್ಯೋಗಿಗಳು ಕಮೆಂಟ್‌ಗಳ ಮೂಲಕ ಪರ-ವಿರೋಧದ ಚರ್ಚೆ ಮಾಡಿದ್ದಾರೆ.
ಒಬ್ಬ ಬಳಕೆದಾರರು "ಇದು ನಿಜ" ಎಂದು ಬರೆದಿದ್ದಾರೆ. ಮತ್ತೊಬ್ಬ ಬಳಕೆದಾರರು, "ದುಬಾರಿ ವೆಚ್ಚವಿದ್ದರೂ ಇಲ್ಲಿನ ಲೈಪ್ ಸ್ಟೈಲ್ ಗೆ ನಾವು ಒಗ್ಗಿಕೊಂಡಿರುತ್ತೇವೆ" ಹೀಗಾಗಿ ಇಲ್ಲಿ ಹೆಚ್ಚಿನವರು ಇರಲು ಬಯಸುತ್ತಾರೆ ಎಂದು ಬರೆದೆದಿದ್ದಾರೆ.