ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಅಟಲ್ ಸುರಂಗದೊಳಗೆ ಇದೆಂಥಾ ಮೋಜು ಮಸ್ತಿ; ಜೈಲಿಗೆ ಹಾಕಿ ಎಂದು ಕಿಡಿಕಾರಿದ ನೆಟ್ಟಿಗರು!

ಮನಾಲಿಯ ಪ್ರಸಿದ್ಧ ಅಟಲ್ ಸುರಂಗದೊಳಗೆ ಜನರ ಗುಂಪೊಂದು ನೃತ್ಯ ಮಾಡಿದ್ದ ಆಘಾತಕಾರಿ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ವಿಡಿಯೊದಲ್ಲಿದ್ದ ಪುರುಷರ ಗುಂಪನ್ನು ಬಹುಶಃ ನೆರೆಯ ರಾಜ್ಯಗಳ ಪ್ರಯಾಣಿಕರು ಎನ್ನಲಾಗಿದೆ. ಇವರ ವಿರುದ್ಧ ಕ್ರಮ ಕೈಗೊಳ್ಳುವಂತೆ ನೆಟ್ಟಿಗರು ಕರೆ ನೀಡಿದ್ದಾರೆ.

ಅಟಲ್ ಸುರಂಗಕ್ಕೆ 'ಅಟಲ್ ಕ್ಲಬ್' ಎಂದು ನೆಟ್ಟಿಗರು ಕರೆದಿದ್ಯಾಕೆ....?

Profile pavithra Mar 25, 2025 10:23 AM

ನವದೆಹಲಿ: ಮನಾಲಿಯ ಪ್ರಸಿದ್ಧ ಅಟಲ್ ಸುರಂಗದೊಳಗೆ ಪ್ರತಿಬಾರಿ ಒಂದಲ್ಲ ಒಂದು ಘಟನೆ ನಡೆಯುತ್ತಿರುತ್ತದೆ. ಇಂತಹ ಹಲವು ವಿಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಕಾಣಿಸಿಕೊಂಡಿವೆ. ಇದೀಗ ಜನರ ಗುಂಪೊಂದು ಅಲ್ಲಿ ನೃತ್ಯ ಮಾಡಿದ್ದ ಆಘಾತಕಾರಿ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದೆ. ವಿಡಿಯೊದಲ್ಲಿದ್ದ ಪುರುಷರ ಗುಂಪನ್ನು ಬಹುಶಃ ನೆರೆಯ ರಾಜ್ಯಗಳ ಪ್ರಯಾಣಿಕರು ಎನ್ನಲಾಗಿದೆ. ಇವರು ಅಟಲ್ ಸುರಂಗದೊಳಗೆ ಜೋರಾಗಿ ಸಂಗೀತ ಹಾಕಿಕೊಂಡು ಡ್ಯಾನ್ಸ್‌ ಹಾಗೂ ಪುಶ್‍ಅಪ್‍ಗಳನ್ನು ಮಾಡಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದ್ದು,ಈ ವೈರಲ್ ವಿಡಿಯೊಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆಗಳು ಬಂದಿವೆ.

ಈ ವಿಡಿಯೊಗೆ ಪ್ರತಿಕ್ರಿಯಿಸಿದ ನೆಟ್ಟಿಗರೊಬ್ಬರು, ಅಟಲ್ ಸುರಂಗಕ್ಕೆ "ಅಟಲ್ ಕ್ಲಬ್" ಎಂದು ಕಾಮೆಂಟ್ ಮಾಡಿದ್ದಾರೆ. “ನಾವು ಹಿಮಾಚಲದ ಆರ್ಥಿಕತೆಯನ್ನು ನಡೆಸುತ್ತೇವೆ" ಎಂದು ಮತ್ತೊಬ್ಬ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಕೆಲವರು ಸುರಂಗದೊಳಗೆ ಡ್ಯಾನ್ಸ್‌ ಮಾಡುತ್ತಿದ್ದವರ ವಿರುದ್ಧ ಕ್ರಮಕ್ಕೆ ಕರೆ ನೀಡಿದ್ದಾರೆ. "ಇಂತಹ ಭಯಾನಕ, ಭಾರತೀಯರನ್ನು ವಿದೇಶದಲ್ಲಿ ಕೊಳಕು ಮತ್ತು ಉಪದ್ರವವೆಂದು ಪರಿಗಣಿಸುವುದರಲ್ಲಿ ಆಶ್ಚರ್ಯವಿಲ್ಲ. ಇವರು ತಮ್ಮ ಸ್ವಂತ ದೇಶದ ಬಗ್ಗೆಯೂ ಕಾಳಜಿ ವಹಿಸುವುದಿಲ್ಲ, ಅಂತಹ ಅದ್ಭುತ ಮೂಲಸೌಕರ್ಯಗಳನ್ನು ಈ ಮೂರ್ಖರು ಅತಿರೇಕದ ನಡವಳಿಕೆಗೆ ಬಳಸುತ್ತಾರೆ. ಅವರನ್ನು ಗುರುತಿಸಿ ಜೈಲಿಗೆ ಹಾಕಿ” ಎಂದು ನೆಟ್ಟಿಗರೊಬ್ಬರು ಕಿಡಿಕಾರಿದ್ದಾರೆ.

ಯುವಕರು ಸುರಂಗದೊಳಗೆ ಡ್ಯಾನ್ಸ್‌ ಮಾಡಿದ ವಿಡಿಯೊ ಇಲ್ಲಿದೆ ನೋಡಿ...



"ಅಟಲ್ ಸುರಂಗ- ಒಂದು ಎಂಜಿನಿಯರಿಂಗ್ ಅದ್ಭುತ! ಇದನ್ನು ನಿರ್ಮಿಸುವಾಗ, ಭಾರತ ಮತ್ತು ವಿದೇಶಗಳ ಉನ್ನತ ಎಂಜಿನಿಯರ್‌ಗಳು ಸಹ ಈ ಸುರಂಗವು ಒಂದು ದಿನ 'ಅತ್ಯಂತ ಸುಸಂಸ್ಕೃತ' ಜನರಿಗೆ ನೈಟ್ ಕ್ಲಬ್ ಆಗಿ ಮಾರ್ಪಾಡಾಗುತ್ತದೆ ಎಂದು ಊಹಿಸಿರಲಿಲ್ಲ” ಎಂದು ಮತ್ತೊಬ್ಬ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಸುರಂಗದಲ್ಲಿ ಛಾಯಾಗ್ರಹಣವನ್ನು ನಿಷೇಧಿಸಿರುವುದರಿಂದ ವಿಡಿಯೊವನ್ನು ರೆಕಾರ್ಡ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ವ್ಯಕ್ತಿಯು ಕಾನೂನನ್ನು ಉಲ್ಲಂಘಿಸಿದ್ದಾನೆ ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ.

ಮನಾಲಿ ಅಟಲ್ ಸುರಂಗದೊಳಗೆ ಇಂತಹ ಘಟನೆ ನಡೆಯುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಅಟಲ್ ಸುರಂಗದೊಳಗೆ ನಡು ರಸ್ತೆಯಲ್ಲಿ ಪ್ರವಾಸಿಗರ ಗುಂಪೊಂದು ನೃತ್ಯ ಮಾಡಿದ್ದು, ಇದರಿಂದ ಬಾರೀ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇದಕ್ಕೆ ಸಂಬಂಧಪಟ್ಟ ವಿಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಹೀಗಾಗಿ ಸಂಚಾರ ಅವ್ಯವಸ್ಥೆಗೆ ಕಾರಣವಾದ ಹತ್ತು ಪ್ರವಾಸಿಗರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಕುಲ್ಲು ಪೊಲೀಸರು ಪ್ರವಾಸಿಗರಿಗೆ ಸೇರಿದ ಮೂರು ವಾಹನಗಳನ್ನು ಸಹ ವಶಪಡಿಸಿಕೊಂಡಿದ್ದರು. ದೆಹಲಿಯ 19 ರಿಂದ 25 ವರ್ಷದೊಳಗಿನ ಏಳು ಪ್ರವಾಸಿಗರನ್ನು ಮತ್ತು ಚಾಲಕನನ್ನು ಪೊಲೀಸರು ಬಂಧಿಸಿದ್ದರು.

ಈ ಸುದ್ದಿಯನ್ನೂ ಓದಿ:Reels Craze: ಮತ್ತೊಂದು ರೀಲ್ಸ್‌ ಕ್ರೇಜ್‌; ಎಲ್‍ಪಿಜಿ ಸಿಲಿಂಡರ್ ಲೀಕ್ ಮಾಡಿ ವಿಡಿಯೊ ಮಾಡಿದ ಜೋಡಿ

ಅಟಲ್‌ ಸುರಂಗದೊಳಗೆ ಇದೆಂಥಾ ಪುಂಡಾಟ!

ಇತ್ತೀಚೆಗಷ್ಟೇ ಹಿಮಾಚಲ ಪ್ರದೇಶದ ಮನಾಲಿಯ ಅಟಲ್ ಸುರಂಗದೊಳಗೆ ರೀಲ್ಸ್‌ ತಯಾರಿಸಲು ಇಬ್ಬರು ಬೈಕ್ ಸವಾರರು ತುರ್ತು ಅಗ್ನಿಶಾಮಕವನ್ನು ದುರುಪಯೋಗಪಡಿಸಿಕೊಂಡಿರುವ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಜೀವಕ್ಕೆ ಅಪಾಯವನ್ನುಂಟುಮಾಡುವ, ವಾಹನ ಸಂಚಾರದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಮತ್ತು ಸುರಂಗ ಕಾರ್ಯಾಚರಣೆಗೆ ಅಡ್ಡಿಪಡಿಸುವ ಅಜಾಗರೂಕ ಕ್ರಮಗಳಿಗಾಗಿ ಹಿಮಾಚಲ ಪ್ರದೇಶ ಪೊಲೀಸರು ದುಷ್ಕರ್ಮಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.