ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಪತ್ನಿಯ ಕಾಟಕ್ಕೆ ಬೇಸತ್ತು ವಿಚ್ಛೇದನ; ಹಾಲಲ್ಲಿ ಸ್ನಾನ ಮಾಡಿ ಸಂಭ್ರಮಿಸಿದ ಪತಿ!

ವಿಚ್ಛೇದನದ ಬಳಿಕ ಕೊರಗುವವರು ಎಷ್ಟೋ ಮಂದಿ ಇದ್ದಾರೆ. ಇಲ್ಲೊಬ್ಬ ವ್ಯಕ್ತಿ ಪತ್ನಿಯಿಂದ ಬೇರ್ಪಟ್ಟ ಬಳಿಕ 40 ಲೀಟರ್ ಹಾಲಿನಲ್ಲಿ ಸ್ನಾನ ಮಾಡಿ ಸಂಭ್ರಮಿಸಿದ್ದಾನೆ. ನಲ್ಬಾರಿ ಜಿಲ್ಲೆಯ ನಿವಾಸಿ ಮಾಣಿಕ್ ಅಲಿ, ತನ್ನ ಹೆಂಡತಿಯಿಂದ ಕಾನೂನುಬದ್ಧವಾಗಿ ಬೇರ್ಪಟ್ಟ ನಂತರ ಹಾಲಿನ ಸ್ನಾನ ಮಾಡಿದ್ದಾರೆ.

ಪತ್ನಿಯಿಂದ ಡಿವೋರ್ಸ್‌; ಹಾಲಲ್ಲಿ ಸ್ನಾನ ಮಾಡಿ ಸಂಭ್ರಮಿಸಿದ ಪತಿ!

Profile Vishakha Bhat Jul 13, 2025 5:16 PM

ದಿಸ್ಪುರ್‌: ವಿಚ್ಛೇದನದ ಬಳಿಕ ಕೊರಗುವವರು ಎಷ್ಟೋ ಮಂದಿ ಇದ್ದಾರೆ. ಇಲ್ಲೊಬ್ಬ ವ್ಯಕ್ತಿ ಪತ್ನಿಯಿಂದ ಬೇರ್ಪಟ್ಟ ಬಳಿಕ 40 ಲೀಟರ್ ಹಾಲಿನಲ್ಲಿ ಸ್ನಾನ ಮಾಡಿ ಸಂಭ್ರಮಿಸಿದ್ದಾನೆ. ಈ ಘಟನೆ ಅಸ್ಸಾಂನ ನಲ್ಬರಿ ಜಿಲ್ಲೆಯ ಬಾರ್ಲಿಯಾಪರ್‌ನಲ್ಲಿ ನಡೆದಿದೆ. ನಲ್ಬಾರಿ ಜಿಲ್ಲೆಯ ನಿವಾಸಿ ಮಾಣಿಕ್ ಅಲಿ, ತನ್ನ ಹೆಂಡತಿಯಿಂದ ಕಾನೂನುಬದ್ಧವಾಗಿ ಬೇರ್ಪಟ್ಟ ನಂತರ ಹಾಲಿನ ಸ್ನಾನ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Viral Video) ವೈರಲ್‌ ಆಗಿದೆ.

ಈಗ ವೈರಲ್ ಆಗಿರುವ ವೀಡಿಯೊದಲ್ಲಿ, ಅಲಿ ನಾನು ಈಗ ಸ್ವತಂತ್ರʼ ಎಂದು ಹೇಳಿಕೊಂಡಿದ್ದಾನೆ. ಕಾನೂನಿನ ಮೂಲಕ ಪತ್ನಿಯಿಂದ ವಿಚ್ಛೇದನ ಪಡೆದಿರುವೆ. ನಾನು ಇಂದಿನಿಂದ ನಾನು ಸ್ವತಂತ್ರ. ಶುದ್ಧೀಕರಣ ಮತ್ತು ಬಿಡುಗಡೆಯ ಸಾಂಕೇತಿಕವಾಗಿ 40 ಲೀಟರ್ ಹಾಲು ತಂದು ಸ್ನಾನ ಮಾಡುತ್ತಿದ್ದೇನೆ” ಎಂದು ಹೇಳಿಕೊಂಡಿದ್ದಾನೆ. "ಅವಳು ತನ್ನ ಪ್ರೇಮಿಯೊಂದಿಗೆ ಓಡಿಹೋಗುತ್ತಲೇ ಇದ್ದಳು. ನಮ್ಮ ಕುಟುಂಬದ ಶಾಂತಿಗಾಗಿ ನಾನು ಮೌನವಾಗಿದ್ದೆ ಎಂದು ಆತ ಹೇಳಿದ್ದಾನೆ.



ಆಕೆಯ ವರ್ತನೆಗೆ ನಾನು ಬೇಸತ್ತು ಹೋಗಿದ್ದೆ. ಈ ಕುರಿತು ಆಕೆಯೊಂದಿಗೆ ಹಲವು ಬಾರಿ ಮಾತನಾಡಿದ್ದೆ. ಆದರೆ ಆಕೆ ಯಾವುದನ್ನೂ ತಿದ್ದಿಕೊಳ್ಳಲಿಲ್ಲ. ಹೀಗಾಗಿ ಇಬ್ಬರ ಪರಸ್ಪರ ಒಪ್ಪಿಗೆಯ ಮೇರೆಗೆ ಈ ನಿರ್ಧಾರಕ್ಕೆ ಬಂದಿದ್ದೇವೆ ಎಂದು ಹೇಳಿದ್ದಾನೆ. ವಿಚ್ಛೇದನ ಅಂತಿಮಗೊಂಡಿದೆ ಎಂದು ನನ್ನ ವಕೀಲರು ನಿನ್ನೆ ನನಗೆ ತಿಳಿಸಿದರು. ಹಾಗಾಗಿ, ಇಂದು ನಾನು ನನ್ನ ಸ್ವಾತಂತ್ರ್ಯವನ್ನು ಆಚರಿಸಲು ಹಾಲಿನಲ್ಲಿ ಸ್ನಾನ ಮಾಡುತ್ತಿದ್ದೇನೆ ಎಂದು ಆತ ಹೇಳಿದ್ದಾನೆ. ವರದಿಗಳ ಪ್ರಕಾರ ಈ ಹಿಂದೆ ಆತನ ಮಡದಿ ಎರಡು ಬಾರಿ ಬೇರೊಬ್ಬರ ಜೊತೆ ಓಡಿ ಹೋಗಿದ್ದಳು.

ಇತ್ತೀಚೆಗೆ ತಮಿಳುನಾಡಿನ ತಿರುಪ್ಪೂರಿನಲ್ಲಿ 27 ವರ್ಷದ ಮಹಿಳೆಯೊಬ್ಬರು ವರದಕ್ಷಿಣೆ ಕಿರುಕುಳದಿಂದ (Dowry Case) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತಳನ್ನು ರಿಧನ್ಯಾ ಎಂದು ಗುರುತಿಸಲಾಗಿದ್ದು, ಈಕೆಯ ತಂದೆ ಅಣ್ಣಾದೊರೈ ಗಾರ್ಮೆಂಟ್ ಕಂಪನಿಯ ಮಾಲೀಕತ್ವವನ್ನು ಹೊಂದಿದ್ದಾರೆ. ರಿಧನ್ಯಾ ಈ ವರ್ಷದ ಏಪ್ರಿಲ್‌ನಲ್ಲಿ 28 ವರ್ಷದ ಕವಿನ್‌ಕುಮಾರ್ ಅವರನ್ನು ವಿವಾಹವಾಗಿದ್ದರು. ಮದುವೆಯ ಸಂದರ್ಭದಲ್ಲಿ 100 ಪೌಂಡ್ (800 ಗ್ರಾಂ) ಚಿನ್ನಾಭರಣ ಮತ್ತು 70 ಲಕ್ಷ ರೂ. ಮೌಲ್ಯದ ವೋಲ್ವೋ ಕಾರನ್ನು ವರದಕ್ಷಿಣೆಯಾಗಿ ನೀಡಲಾಗಿತ್ತು.

ಈ ಸುದ್ದಿಯನ್ನೂ ಓದಿ: Tumkur Murder Case: ತುಮಕೂರಲ್ಲಿ ಭೀಕರ ಹತ್ಯೆ; ಚಾಕುವಿನಿಂದ 20ಕ್ಕೂ ಹೆಚ್ಚು ಬಾರಿ ಇರಿದು ಪತ್ನಿಯನ್ನೇ ಕೊಲೆಗೈದ ಪತಿ!

ರಿಧನ್ಯ ಮೊಂಡಿಪಾಳ್ಯಂನಲ್ಲಿರುವ ದೇವಸ್ಥಾನಕ್ಕೆ ಹೋಗುತ್ತಿರುವುದಾಗಿ ಹೇಳಿ ಮನೆಯಿಂದ ಹೊರಟಿದ್ದಳು. ದಾರಿಯಲ್ಲಿ ಆಕೆ ಕಾರು ನಿಲ್ಲಿಸಿ ಕೀಟನಾಶಕ ಮಾತ್ರೆಗಳನ್ನು ಸೇವಿಸಿದ್ದಾಳೆ. ಪ್ರದೇಶದಲ್ಲಿ ದೀರ್ಘಕಾಲ ನಿಂತಿದ್ದ ಕಾರನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ಪರಿಶೀಲಿಸಿದಾಗ ಮೃತಪಟ್ಟಿರುವುದು ಕಂಡುಬಂದಿದೆ.