ಕರ್ನಾಟಕ ಬಜೆಟ್​ ವಿದೇಶ ಮಹಿಳಾ ದಿನಾಚರಣೆ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಮುಂದಿನ ಜನ್ಮದಲ್ಲಿ ಸಿಗೋಣ; ವರನಿಗೆ ಮೆಸೇಜ್‌ ಮಾಡಿ ಮದುವೆ ತೊರೆದು ನಾಪತ್ತೆಯಾದ ವಧು

ಉತ್ತರ ಪ್ರದೇಶದಲ್ಲಿ ವಿಚಿತ್ರ ಘಟನೆ ನಡೆದಿದ್ದು, ಮದುವೆ ಹಿಂದಿನ ದಿನ ಮದುವೆ ಮನೆಯಿಂದ ವಧುವೇ ನಾಪತ್ತೆಯಾಗಿದ್ದಾಳೆ. ಹೌದು ಪ್ರೇಮ ವಿವಾಹವಾಗಬೇಕಿದ್ದ ಆಕೆ ತನ್ನ ಭಾವಿ ಪತಿಗೆ ಮುಂದಿನ ಜನ್ಮದಲ್ಲಿ ಸಿಗೋಣ ಎಂಬ ವಾಟ್ಸಾಪ್‌ ಸಂದೇಶವನ್ನು ಕಳುಹಿಸಿ ನಿಗೂಢವಾಗಿ ನಾಪತ್ತೆಯಾಗಿದ್ದಾಳೆ.

ವರನಿಗೆ ಮೆಸೇಜ್‌ ಮಾಡಿ ಮದುವೆ ಹಿಂದಿನ ದಿನ ನಾಪತ್ತೆಯಾದ ವಧು

ನಾಪತ್ತೆಯಾದ ಯುವತಿ

Profile Vishakha Bhat Mar 11, 2025 4:13 PM

ಲಖನೌ: ಉತ್ತರ ಪ್ರದೇಶದಲ್ಲಿ ಕುಶಿನಗರದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಮದುವೆಯಾಗ ಬೇಕಾದ ವಧುವೆ ಮದುವೆ ತೆರದು ಓಡಿ (Viral News) ಹೋಗಿದ್ದಾಳೆ. ಮದುವೆ ಹಿಂದಿನ ದಿನ ಮದುವೆ ಮನೆಯಿಂದ ವಧುವೇ ನಾಪತ್ತೆಯಾಗಿದ್ದಾಳೆ. ಹೌದು ಪ್ರೇಮ ವಿವಾಹವಾಗಬೇಕಿದ್ದ ಆಕೆ ತನ್ನ ಭಾವಿ ಪತಿಗೆ ಮುಂದಿನ ಜನ್ಮದಲ್ಲಿ ಸಿಗೋಣ ಎಂಬ ವಾಟ್ಸಾಪ್‌ ಸಂದೇಶವನ್ನು ಕಳುಹಿಸಿ ನಿಗೂಢವಾಗಿ ನಾಪತ್ತೆಯಾಗಿದ್ದಾಳೆ. ಸದ್ಯ ಈ ಸುದ್ದಿ ಎಲ್ಲೆಡೆ ವೈರಲ್‌ ಆಗಿದೆ.ಉತ್ತರ ಪ್ರದೇಶದ ಖಡ್ಡಾ ಎಂಬಲ್ಲಿನ ಹಳ್ಳಿಯ ಹುಡುಗಿ ಪುಷ್ಪಾ ಮತ್ತು ನೆಬುವಾ ನೌರಂಗಿಯಾ ಪೊಲೀಸ್ ಠಾಣೆ ಪ್ರದೇಶದ ಮುಖೇಶ್ ಕಳೆದ 5 ವರ್ಷಗಳಿಂದ ಪ್ರೀತಿಸುತ್ತಿದ್ದರು.

ಮೊದ ಮೊದಲು ಮನೆಯವರು ವಿರೋಧಿಸಿದರೂ ಇವರಿಬ್ಬರೂ ಎರಡೂ ಕುಟುಂಬವನ್ನು ಒಪ್ಪಿಸಿ ಮದುವೆಗೆ ಸಜ್ಜಾಗಿದ್ದರು. ಇವರಿಬ್ಬರ ಮದುವೆ ಮಾರ್ಚ್‌ 6 ಕ್ಕೆ ನಿಗದಿಯಾಗಿತ್ತು. ಮದುವೆಗೆ ಎಲ್ಲಾ ರೀತಿಯ ಶಾಸ್ತ್ರಗಳು ನಡೆಯುತ್ತಿದ್ದವು. ಮದುವೆಯ ಸಿದ್ಧತೆಗಳ ನಡುವೆಯೇ, ಪುಷ್ಪಾ ವರ ಮುಖೇಶ್‌ಗೆ ʼನಾನು ಮುಂದಿನ ಜನ್ಮದಲ್ಲಿ ಭೇಟಿಯಾಗುತ್ತೇನೆʼ ಎಂಬ ವಾಟ್ಸಾಪ್‌ ಸಂದೇಶವನ್ನು ಕಳುಹಿಸುತ್ತಾಳೆ. ಈ ಮೆಸೇಜ್‌ ನೋಡಿ ಮುಖೇಶ್‌ ಶಾಕ್‌ ಆಗಿದ್ದು, ಇದಾದ ಸ್ಪಲ್ಪ ಹೊತ್ತಿನ ಬಳಿಕ ವಧು ನಾಪತ್ತೆಯಾಗಿದ್ದಾಳೆ ಎಂದು ತಿಳಿದು ಬಂದಿದೆ.

ವಧು ಸುದ್ದಿ ತಿಳಿದ ಮುಖೇಶ್ ಅವರ ತಾಯಿ ಖಡ್ಡಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ತನ್ನ ಭಾವಿ ಸೊಸೆಯನ್ನು ಹುಡುಕುವಂತೆ ಪೊಲೀಸರನ್ನು ವಿನಂತಿಸಿದ್ದಾರೆ. 12ನೇ ತರಗತಿ ಪದವೀಧರನಾದ ಮುಖೇಶ್, ನಾಸಿಕ್‌ನಲ್ಲಿ ಪೀಠೋಪಕರಣ ವ್ಯವಹಾರದಲ್ಲಿ ಕೆಲಸ ಮಾಡುತ್ತಿದ್ದ. 10 ನೇ ತರಗತಿಯವರೆಗೆ ಶಿಕ್ಷಣ ಪೂರ್ಣಗೊಳಿಸಿದ್ದ ಪುಷ್ಪಾ, ನಾಲ್ವರು ಸಹೋದರಿಯರು ಮತ್ತು ಒಬ್ಬ ಸಹೋದರನನ್ನು ಹೊಂದಿದ್ದಾಳೆ. ಆಕೆಯ ಅಕ್ಕನ ವಿವಾಹವು ಮುಖೇಶ್ ಅವರ ಗ್ರಾಮದಲ್ಲಿ ನಡೆದಿತ್ತು, ಆ ಸಮಯದಲ್ಲಿ ಪುಷ್ಪಾ ಮತ್ತು ಮುಖೇಶ್ ಪ್ರೀತಿಯಲ್ಲಿ ಬಿದ್ದಿದ್ದರು.

ಈ ಸುದ್ದಿಯನ್ನೂ ಓದಿ: Israeli hostages: ಹಮಾಸ್‌ ಬಂಡುಕೋರರ ಹಣೆಗೆ ಮುತ್ತಿಟ್ಟು ಗುಡ್‌ಬೈ ಹೇಳಿದ ಇಸ್ರೇಲ್‌ ಒತ್ತೆಯಾಳು- ಈ ವಿಡಿಯೊ ಫುಲ್‌ ವೈರಲ್‌

ಮನೆಯವರನ್ನು ಒಪ್ಪಿಸಿ 8 ತಿಂಗಳ ಹಿಂದೆಯೇ ಮದುವೆ ನಿಶ್ಚಯಿಸಿದ್ದರು. ಆದರೆ ವರದಕ್ಷಿಣೆ ವಿಚಾರದಲ್ಲಿ ಎರಡೂ ಕುಟುಂಬದ ನಡುವೆ ಒಂದಷ್ಟು ಮನಸ್ತಾಪ ಏರ್ಪಟ್ಟಿತ್ತು. ಹುಡುಗನ ಮನೆಯವರು ವರದಕ್ಷಿಣೆ ಬೇಡಿಕೆ ಹೆಚ್ಚಿಸಿದ್ದರಿಂದ ಎರಡು ತಿಂಗಳ ಹಿಂದೆ ಮದುವೆ ರದ್ದಾಗಿತ್ತು. ಆದರೆ ನಂತರ ಹುಡುಗಿಯ ಕುಟುಂಬವು ರಾಜಿ ಸಂದಾನ ಮಾಡಿ ನಂತರ ಪುನಃ ಮದುವೆ ನಿಶ್ಚಯಿಸಿದ್ದರು, ಮದುವೆ ಮಾರ್ಚ್‌ 6 ಕ್ಕೆ ನಿಗದಿಯಾಗಿತ್ತು. ಆದ್ರೆ ಮದುವೆ ಸಂಭ್ರಮದಲ್ಲಿದ್ದ ಸಂದರ್ಭದಲ್ಲಿಯೇ ವಧು ನಾಪತ್ತೆಯಾಗಿದ್ದಾಳೆ. ವರದಕ್ಷಿಣೆ ವಿಚಾರವಾಗಿ ಪುಷ್ಪಾ ಸಾಕಷ್ಟು ನೊಂದಿದ್ದಳು ಎನ್ನಲಾಗಿದೆ. ಸದ್ಯ ಆಕೆಗಾಗಿ ಎಲ್ಲಡೆ ಹುಡುಕಾಟ ನಡೆಯುತ್ತಿದೆ.