ಎಸ್ಪಿ ಕಚೇರಿಯಲ್ಲಿ ಮಹಿಳೆಯರ ಹೈಡ್ರಾಮಾ: ಸಾರ್ವಜನಿಕ ಸಭೆಯಲ್ಲೇ ಜುಟ್ಟು ಹಿಡಿದು ಜಗಳವಾಡಿದ ಮಹಿಳೆಯರು
Viral Video: ಸೂಪರಿಂಡೆಂಟ್ ಆಫ್ ಪೊಲೀಸ್ ಕಚೇರಿಯಲ್ಲಿ ಸಾರ್ವಜನಿಕ ವಿಚಾರಣೆಯ ಸಮಯ ದಲ್ಲಿ ಇಬ್ಬರು ಮಹಿಳೆಯರು ಗಲಾಟೆ ಮಾಡಿರುವ ಘಟನೆಯೊಂದು ಕಂಡು ಬಂದಿದೆ. ಪೊಲೀಸರ ಎದುರಿನಲ್ಲಿಯೇ ಮಹಿಳೆಯರು ಮರಾಮಾರಿಯಾಗಿ ಹೊಡೆದುಕೊಂಡಿದ್ದಾರೆ. ಈ ಭೀಕರ ಘಟನೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಮಹಿಳೆಯರ ವರ್ತನೆ ವಿರುದ್ಧ ಕಿಡಿಕಾರಿದ್ದಾರೆ...
ಸಾರ್ವಜನಿಕ ಸಭೆಯಲ್ಲೇ ಇಬ್ಬರು ಮಹಿಳೆಯರ ಮಾರಾಮಾರಿ ಜಗಳ -
ಜಬಲ್‌ಪುರ,ಜೂ.17: ಮಧ್ಯಪ್ರದೇಶದ ಜಬಲ್‌ಪುರದಲ್ಲಿ ಅಘಾತಕಾರಿ ಘಟನೆಯೊಂದು ಕಂಡು ಬಂದಿದೆ. ಇಲ್ಲಿನ ಸೂಪರಿಂಡೆಂಟ್ ಆಫ್ ಪೊಲೀಸ್ ಕಚೇರಿಯಲ್ಲಿ ಸಾರ್ವಜನಿಕ ವಿಚಾರಣೆಯ ಸಮಯದಲ್ಲಿ ಇಬ್ಬರು ಮಹಿಳೆಯರು ಗಲಾಟೆ ಮಾಡಿರುವ ಘಟನೆಯೊಂದು ಕಂಡು ಬಂದಿದೆ. ಪೊಲೀಸರ ಎದುರಿನಲ್ಲಿಯೇ ಮಹಿಳೆಯರು ಮರಾಮಾರಿಯಾಗಿ ಹೊಡೆದುಕೊಂಡಿದ್ದಾರೆ. ಈ ಭೀಕರ ಘಟನೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗುತ್ತಿದ್ದಂತೆ ನೆಟ್ಟಿಗರು ಮಹಿಳೆಯರ ವರ್ತನೆ ವಿರುದ್ಧ ಕಿಡಿಕಾರಿದ್ದಾರೆ.
ಮಾಹಿತಿಯ ಪ್ರಕಾರ, ಜಬಲ್ಪುರದ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಕಚೇರಿಯೊಳಗೆ ಜಗಳ ನಡೆದಿದ್ದು ಸಾರ್ವಜನಿಕ ಕುಂದುಕೊರತೆ ವಿಚಾರಣೆಯ ಸಮಯದಲ್ಲಿ ಅವ್ಯವಸ್ಥೆ ಉಂಟಾಯಿತು. ಎಸ್ಪಿ ಕಚೇರಿಯೊಳಗೆ ಇಬ್ಬರು ಮಹಿಳೆಯರು ಪರಸ್ಪರ ಕೂದಲು ಹಿಡಿದು ಹೊಡೆದಾಡಿಕೊಂಡಿದ್ದು ಘಟನೆಯಲ್ಲಿ ಒಬ್ಬ ಮಹಿಳೆಗೆ ತೀವ್ರ ರಕ್ತಸ್ರಾವವಾಗಿದೆ. ಘಟನೆಯ ಈ ವೀಡಿಯೊ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿದ್ದು, ಇಬ್ಬರು ಮಹಿಳೆಯರು ಪರಸ್ಪರ ಹಲ್ಲೆ ನಡೆಸುತ್ತಿರುವುದನ್ನು ತೋರಿಸಿದೆ.
ವಿಡಿಯೋ ನೋಡಿ:
#WATCH | 2 Women Punch, Kick And Pull Each Other’s Hair Inside #Jabalpur SP Office During Public Hearing; Both Detained#MadhyaPradesh #MPNews #IndiaNews pic.twitter.com/7iCvzPJGen
— Free Press Madhya Pradesh (@FreePressMP) June 16, 2026
ಮಂಗಳವಾರ ಎಸ್‌ಪಿ ಕಚೇರಿಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕಾರ ಮಾಡುವ ಕಾರ್ಯಕ್ರಮ ನಡೆದಿತ್ತು. ಈ ವೇಳೆ ಇಬ್ಬರು ಮಹಿಳೆಯರ ನಡುವೆ ಆರಂಭವಾದ ವಾಗ್ವಾದವು ಕ್ಷಣಾರ್ಧದಲ್ಲಿ ಭೀಕರತೆ ಪಡೆದಿದೆ. ಮಹಿಳೆಯರು ಪರಸ್ಪರ ಕೂದಲು ಎಳೆದು, ಗುದ್ದಿಕೊಂಡು, ಒಬ್ಬರಿಗೊಬ್ಬರು ಒದ್ದುಕೊಂಡಿದ್ದಾರೆ. ಪೊಲೀಸರು ಮತ್ತು ಅಲ್ಲಿದ್ದ ಸಾರ್ವಜನಿಕರು ಮಧ್ಯಪ್ರವೇಶಿಸಿ ಇಬ್ಬರನ್ನೂ ಬಿಡಿಸುವಷ್ಟರಲ್ಲಿ, ಒಬ್ಬ ಮಹಿಳೆಯ ತಲೆಗೆ ತೀವ್ರ ಪೆಟ್ಟಾಗಿ ರಕ್ತ ಬರಲು ಆರಂಭಿಸಿತ್ತು.
Viral Video: 14 ಗಂಟೆಗೂ ಹೆಚ್ಚು ಕೆಲಸ ಮಾಡಿದ ಬ್ಲಿಂಕ್‌ಇಟ್ ಡೆಲಿವರಿ ಬಾಯ್; ಆತನ ಆದಾಯ ಎಷ್ಟು?
ಘರ್ಷಣೆಯ ಸಮಯದಲ್ಲಿ, ಜನರು ತಮ್ಮ ಫೋನ್‌ಗಳನ್ನು ಹೊರತೆಗೆದು ಇಡೀ ಘಟನೆಯನ್ನು ರೆಕಾರ್ಡ್ ಮಾಡಿದ್ದಾರೆ. ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿ ಮಧ್ಯಪ್ರವೇಶಿಸಿ ಅವರನ್ನು ಬೇರ್ಪ ಡಿಸಿದ್ದು ಇಬ್ಬರೂ ಮಹಿಳೆಯರನ್ನು ವಿಚಾರಣೆಗಾಗಿ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಗೆ ಕರೆದೊಯ್ದರು. ಗಾಯಗೊಂಡ ಮಹಿಳೆಯು, ವಿದ್ಯಾ ರಾಯ್‌ಕ್ವಾರ್ ಎಂಬಾಕೆಯ ವಿರುದ್ಧ ದೂರು ನೀಡಲು ಎಸ್‌ಪಿ ಕಚೇರಿಗೆ ಬಂದಿದ್ದರು ಎನ್ನಲಾಗಿದೆ.