Karthik Krishna Column: ಜೀವಿತಾವಧಿ ಒಂದೇ ವರ್ಷ !
ಆಶ್ಚರ್ಯಕರವಾದ ಇನ್ನೊಂದು ಸಂಗತಿಯೆಂದರೆ, ಈ ಊಸರವಳ್ಳಿಗಳು ತಮ್ಮ ಜೀವಿತಾವಧಿಯ ಬಹುಪಾಲು, ಅಂದರೆ ಬರೋಬ್ಬರಿ 8 ರಿಂದ 9 ತಿಂಗಳುಗಳನ್ನು ಭೂಮಿಯೊಳಗೆ ಮೊಟ್ಟೆಯೊಳಗೆಯೇ ಕಳೆಯುತ್ತವೆ. ಮೊಟ್ಟೆಯಿಂದ ಹೊರ ಬಂದ ಕೂಡಲೇ ಬೇಟೆ ಶುರು ಇವುಗಳು, ಬಕಾಸುರನಂತೆ ತಿಂದು, ಕೇವಲ ಎರಡು ತಿಂಗಳಿನಲ್ಲಿ ಐದು ಪಟ್ಟು ಬೆಳೆಯುತ್ತವೆ!
-
ಭೂಮಿಯಲ್ಲಿನ ನಾಲ್ಕು ಕಾಲಿನ ಕಶೇರುಕಗಳ ಪೈಕಿ ಇಷ್ಟು ಕಡಿಮೆ ಅವಧಿಯ ಜೀವನಚಕ್ರ ಬೇರಾವ ಜೀವಿಗೂ ಇಲ್ಲ!
ಕಾರ್ತಿಕ್ ಕೃಷ್ಣ
ಮಡಗಾಸ್ಕರ್ ದ್ವೀಪದಲ್ಲಿ ಮಾತ್ರ ಕಂಡುಬರುವ ‘ಲ್ಯಾಬೋರ್ಡ್ಸ್ ಊಸರವಳ್ಳಿ’ ಪ್ರಾಣಿ ಪ್ರಪಂಚದ ವಿಶಿಷ್ಟ ಮತ್ತು ಅಚ್ಚರಿಯ ಜೀವಿಗಳಲ್ಲಿ ಒಂದು. ಈ ಊಸರವಳ್ಳಿಯು ತನ್ನ ಬಣ್ಣ ಬದಲಾಯಿಸುವ ಸಾಮರ್ಥ್ಯಕ್ಕಿಂತ ಹೆಚ್ಚಾಗಿ, ಪ್ರಕೃತಿಗೆ ಸವಾಲೆಸೆಯುವಂತಹ ತನ್ನ ಅತ್ಯಂತ ಅಲ್ಪಾವಧಿಯ ಮತ್ತು ವಿಲಕ್ಷಣವಾದ ಜೀವನ ಚಕ್ರದಿಂದಾಗಿ ವಿಜ್ಞಾನಿಗಳ ಗಮನ ಸೆಳೆದಿದೆ. ಭೂಮಿಯ ಮೇಲಿರುವ ನಾಲ್ಕು ಕಾಲಿನ ಮತ್ತು ಬೆನ್ನೆಲುಬುಳ್ಳ ಜೀವಿಗಳಲ್ಲೇ ಅತ್ಯಂತ ಕಡಿಮೆ ಜೀವಿತಾವಧಿ ಹೊಂದಿರುವ ಪ್ರಾಣಿ ಎಂಬ ಹೆಗ್ಗಳಿಕೆ ಇದರದ್ದು. ಇದರ ಇಡೀ ಜೀವನ ಒಂದು ವರ್ಷಕ್ಕೆ ಮಾತ್ರ!
ಆಶ್ಚರ್ಯಕರವಾದ ಇನ್ನೊಂದು ಸಂಗತಿಯೆಂದರೆ, ಈ ಊಸರವಳ್ಳಿಗಳು ತಮ್ಮ ಜೀವಿತಾವಧಿಯ ಬಹುಪಾಲು, ಅಂದರೆ ಬರೋಬ್ಬರಿ 8 ರಿಂದ 9 ತಿಂಗಳುಗಳನ್ನು ಭೂಮಿಯೊಳಗೆ ಮೊಟ್ಟೆಯೊಳಗೆ ಯೇ ಕಳೆಯುತ್ತವೆ. ಮೊಟ್ಟೆಯಿಂದ ಹೊರ ಬಂದ ಕೂಡಲೇ ಬೇಟೆ ಶುರು ಇವುಗಳು, ಬಕಾಸುರನಂತೆ ತಿಂದು, ಕೇವಲ ಎರಡು ತಿಂಗಳಿನಲ್ಲಿ ಐದು ಪಟ್ಟು ಬೆಳೆಯುತ್ತವೆ!
ಇದನ್ನೂ ಓದಿ: Narayana Yaji Column: ಉತ್ತರ ಕನ್ನಡದಿಂದ ವಿಶ್ವವೇದಿಕೆಗೆ !
ಮಡಗಾಸ್ಕರ್ ಅರಣ್ಯಗಳಲ್ಲಿ ನವೆಂಬರ್ ತಿಂಗಳಿನಲ್ಲಿ ಮೊದಲ ಮಳೆ ಬೀಳುತ್ತಿದ್ದಂತೆ, ಈ ಎಲ್ಲಾ ಊಸರವಳ್ಳಿಗಳು ಒಂದೇ ಬಾರಿಗೆ ಮೊಟ್ಟೆ ಯೊಡೆದು ಹೊರಬರುತ್ತವೆ. ಹೊರಬಂದ 60 ದಿನಗಳಲ್ಲಿ ಇವು ವೇಗವಾಗಿ ಬೆಳೆದು ಪ್ರಬು ದ್ಧಾವಸ್ಥೆಗೆ ತಲುಪುತ್ತವೆ. ಗಂಡು ಊಸರವಳ್ಳಿಗಳು ತಮ್ಮ ಮೂಗಿನ ಮೇಲಿರುವ ಕೋಡಿನಂತಹ ರಚನೆ ಮತ್ತು ಹಸಿರು-ಬಿಳಿ ಬಣ್ಣದ ಪಟ್ಟೆಗಳಿಂದ ಗಮನ ಸೆಳೆದರೆ, ಹೆಣ್ಣು ಊಸರವಳ್ಳಿ ಗಳು ಎದ್ದುಕಾಣುವ ಬಣ್ಣಗಳನ್ನು ಹೊಂದಿರುತ್ತವೆ. ಬೇಗನೆ ಸಂಗಾತಿಯನ್ನು ಹುಡುಕಿ, ಒಂದೆರಡು ತಿಂಗಳುಗಳಲ್ಲಿ ಸಂತಾನೋತ್ಪತ್ತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತವೆ.
ನಂತರ ಹೆಣ್ಣು ಊಸರವಳಿ ಗಳು ‘ಮರಳಿ ಮಣ್ಣಿಗೆ’ ಸಾಗಿ, ಮೊಟ್ಟೆಗಳನ್ನು ಇಡುತ್ತವೆ. ಇದಾದ ಕೆಲವೇ ದಿನಗಳಲ್ಲಿ, ಅಂದರೆ ಫೆಬ್ರವರಿ ಅಥವಾ ಮಾರ್ಚ್ ಹೊತ್ತಿಗೆ ಮಡಗಾಸ್ಕರ್‌ನಲ್ಲಿ ಬೇಸಿಗೆ ಪ್ರಾರಂಭವಾಗು ತ್ತದೆ. ಆ ವೇಳೆಗೆ ವಯಸ್ಕ ಊಸರವಳ್ಳಿಗಳೆಲ್ಲವೂ ಸಾವನ್ನಪು ತ್ತವೆ. ಅಂದರೆ, ಬೇಸಿಗೆಯ ಕಠಿಣ ಸಮಯದಲ್ಲಿ ಇಡೀ ಪ್ರಭೇದವು ಕೇವಲ ಮಣ್ಣಿನೊಳಗಿನ ಮೊಟ್ಟೆ ಗಳ ರೂಪ ದಲ್ಲಿ ಮಾತ್ರ ಜೀವಂತವಾಗಿರುತ್ತದೆ!
ಈ ವಿಲಕ್ಷಣವಾದ ಜೀವನ ಶೈಲಿಯು ಮಡಗಾಸ್ಕರ್‌ನ ಬೇಸಿಗೆಯಿಂದ ಪಾರಾಗಲು ಪ್ರಕೃತಿಯೇ ರೂಪಿ ಸಿದ ಒಂದು ಅದ್ಭುತ ತಂತ್ರ. ಹೀಗೆ, ಬದುಕುವ ಕೇವಲ 4-5 ತಿಂಗಳುಗಳಲ್ಲಿ ಇಡೀ ಜೀವನದ ಘಟ್ಟಗಳನ್ನು ಅತಿ ವೇಗವಾಗಿ ಅನುಭವಿಸಿ ಮುಗಿಸುವ ಲ್ಯಾಬೋರ್ಡ್ಸ್ ಊಸರ ವಳ್ಳಿಯ ಬದುಕು ಬಹು ವಿಚಿತ್ರ ಎನಿಸಿದೆ. ಅರಣ್ಯ ನಾಶ ಮತ್ತು ಹವಾಮಾನ ಬದಲಾವಣೆಯಂತಹ ಕಾರಣ ಗಳಿಂದಾಗಿ ಈ ಅಪರೂಪದ ಪ್ರಭೇದವು ಇಂದು ಅಪಾಯದಲ್ಲಿದೆ.