ಇದು ಸದ್ಯಶೋಧನೆಯಲ್ಲ, ಚಿನ್ನದ ಶೋಧನೆ!
ಓದುಗರಿಗೆ ಈ ಕ್ಷಣಕ್ಕೆ ಬೇಕಾದುದನ್ನು ಮತ್ತು ಉಪಯೋಗಕ್ಕೆ ಬರುವಂತಹುದನ್ನು ಸಂಪಾದಕ ರಾದವರು ಶೋಧಿಸಿ ಕೊಡುವುದೇ ಸಂಪಾದಕರ ಸದ್ಯ ಶೋಧನೆ. ಒಂದು ಟನ್ ಮಣ್ಣನ್ನು ಶೋಧಿಸಿ ದರೆ ಒಂದು ಗ್ರಾಂ ಚಿನ್ನವನ್ನು ಪಡೆಯಲು ಸಾಧ್ಯ. ಹಾಗೆಯೇ ಇಲ್ಲಿ ಲೇಖಕರು ಚಿನ್ನದ ಗಣಿಯಲ್ಲಿನ ಕಾರ್ಮಿಕನ ರೀತಿ ಕೆಲಸ ಮಾಡಿದ್ದಾರೆ. ಎಲ್ಲರಿಗೂ ಗೊತ್ತಿಲ್ಲದ ಸಂಗತಿಗಳನ್ನೇ ಶೋಧಿಸಿ ತೆಗೆಯ ಬೇಕಾದಾಗ ಹೆಚ್ಚೆಚ್ಚು ಓದಬೇಕಾಗುತ್ತದೆ.
-
ಶ್ರೀನಿವಾಸಮೂರ್ತಿ ಎನ್ ಸುಂಡ್ರಹಳ್ಳಿ
ಇದರಲ್ಲಿ ರಾಜಕಾರಣವಿದೆ. ವಿಜ್ಞಾನವಿದೆ. ತತ್ವಜ್ಞಾನವಿದೆ. ಜ್ಞಾನಿಗಳಿದ್ದಾರೆ. ಅಜ್ಞಾನಿ ಗಳೂ ಇದ್ದಾರೆ. ದಾನಿಗಳಿದ್ದಾರೆ. ಪ್ರಧಾನಿ ಗಳಿದ್ದಾರೆ. ಯಾರಿಗೂ ಅರಿವಿರದ ಅಪರೂಪದ ವ್ಯಕ್ತಿತ್ವಗಳಿವೆ. ಆಟವಿದೆ. ಬದುಕಿನ ಪಾಠವಿದೆ. ಸಿದ್ಧಾಂತಗಳಿವೆ. ರಾದ್ಧಾಂತಗಳೂ ಇವೆ.
ಶೋಧನೆ ಎಂದರೆ ಜೊಳ್ಳುಗಳ ನಡುವೆ ಗಟ್ಟಿಯನ್ನು ಪಡೆಯುವುದು, ಅನುಪಯುಕ್ತವಾದವುಗಳ ನಡುವೆ ಉಪಯುಕ್ತವಾದುದನ್ನು ಅನ್ವೇಷಿಸುವುದು, ಸುಳ್ಳುಗಳ ಸುತ್ತಮುತ್ತಲಲ್ಲಿ ಸತ್ಯವನ್ನು ಹುಡುಕುವುದು. ಈಗಾಗಲೇ ಇರುವುದರಲ್ಲಿ ಬೆಸ್ಟ್ ಅನ್ನಿಸುವುದನ್ನು ಪತ್ತೆ ಹಚ್ಚುವುದೇ ಶೋಧನೆ. ಹೊಸತನ್ನು ಹುಟ್ಟು ಹಾಕಿದರೆ ಸಂಶೋಧನೆ. ಹುಟ್ಟು ಹಾಕಿರುವುದರಲ್ಲಿಯೇ ಅತ್ಯುತ್ತಮವಾದು ದನ್ನು ಹುಡುಕಿದರೆ ಶೋಧನೆ. ಸಂಶೋಧನೆಗಿಂತ ಶೋಧನೆಯೇ ಹೆಚ್ಚು ಶ್ರಮ ಮತ್ತು ತಾಳ್ಮೆಯನ್ನು ಕೇಳುತ್ತದೆ. ನಾನಿಲ್ಲಿ ಹೇಳಹೊರಟಿರುವುದು ವಿಶ್ವೇಶ್ವರ ಭಟ್ಟರ ‘ಸಂಪಾದಕರ ಸದ್ಯಶೋಧನೆ’ ಕುರಿತು.
ಓದುಗರಿಗೆ ಈ ಕ್ಷಣಕ್ಕೆ ಬೇಕಾದುದನ್ನು ಮತ್ತು ಉಪಯೋಗಕ್ಕೆ ಬರುವಂತಹುದನ್ನು ಸಂಪಾದಕ ರಾದವರು ಶೋಧಿಸಿ ಕೊಡುವುದೇ ಸಂಪಾದಕರ ಸದ್ಯ ಶೋಧನೆ. ಒಂದು ಟನ್ ಮಣ್ಣನ್ನು ಶೋಧಿಸಿ ದರೆ ಒಂದು ಗ್ರಾಂ ಚಿನ್ನವನ್ನು ಪಡೆಯಲು ಸಾಧ್ಯ. ಹಾಗೆಯೇ ಇಲ್ಲಿ ಲೇಖಕರು ಚಿನ್ನದ ಗಣಿಯಲ್ಲಿನ ಕಾರ್ಮಿಕನ ರೀತಿ ಕೆಲಸ ಮಾಡಿದ್ದಾರೆ. ಎಲ್ಲರಿಗೂ ಗೊತ್ತಿಲ್ಲದ ಸಂಗತಿಗಳನ್ನೇ ಶೋಧಿಸಿ ತೆಗೆಯ ಬೇಕಾದಾಗ ಹೆಚ್ಚೆಚ್ಚು ಓದಬೇಕಾಗುತ್ತದೆ.
ಇದನ್ನೂ ಓದಿ: Vishweshwar Bhat Column: ಇಂಗ್ಲಿಷ್ ಬಾರದಿದ್ದರೇನಂತೆ, ಸ್ವಂತಿಕೆಯನ್ನೇ ಬ್ರ್ಯಾಂಡ್ ಮಾಡಿ ಗೆದ್ದ ಕಪಿಲ್ ಶರ್ಮ
ನೂರಾರು ಪುಟಗಳ ಪುಸ್ತಕದ ಯಾವುದೋ ಒಂದು ಪುಟದಲ್ಲಿ ಓದುಗರಿಗೆ ಬೇಕಾದಂತಹ ಅಮೂಲ್ಯ ಹಾಗೂ ಅಪರೂಪದ ಮಾಹಿತಿ ಇರುತ್ತದೆ. ಅದನ್ನು ಪಡೆಯಬೇಕೆಂದರೆ ಅಷ್ಟೂ ಪುಟಗಳನ್ನು ಓದಲೇಬೇಕಾಗುತ್ತದೆ. ಓದುಗನ ಮುಂದಿಡುವ ಮೊದಲು ಎಚ್ಚರಿಕೆಯಿಂದ ಸತ್ಯಾ ಸತ್ಯತೆಯನ್ನು ಪರಾಮರ್ಶಿಸಬೇಕಾಗುತ್ತದೆ.
ಈ ಎಲ್ಲವುಗಳನ್ನೂ ಅತೀವ ಆಸಕ್ತಿಯಿಂದ ಪಾಲಿಸಿ, ಶೋಧಿಸಿ ಗಟ್ಟಿಯ ರೂಪದಲ್ಲಿ ಕೊಟ್ಟಿರು ವುದೇ ‘ಸಂಪಾದಕರ ಸದ್ಯಶೋಧನೆ’. ಇಲ್ಲಿ ಲೇಖಕರು ದೇಶ ಸುತ್ತು, ಕೋಶ ಓದು ಎಂಬ ನಾಣ್ಣುಡಿಯಂತೆ, ಸಾವಿರಾರು ಪುಸ್ತಕಗಳನ್ನು ಓದಿ, ನೂರಾರು ದೇಶ-ವಿದೇಶಗಳನ್ನು ಸುತ್ತಿ, ಹತ್ತಾರು ರದ್ದಿ ಅಂಗಡಿಗಳನ್ನು ಎಡತಾಕಿ, ಆಲೋಚನೆಗಳನ್ನು, ಮಾಹಿತಿಗಳನ್ನು, ಸಂಶೋಧನಾ ಬರಹಗಳನ್ನು ಚಿನ್ನವನ್ನು ಶೋಧಿಸಿದ ರೀತಿಯಲ್ಲಿಯೇ ಶೋಧಿಸಿದ್ದಾರೆ.
ಹಾಗಾಗಿಯೇ ಇದರಲ್ಲಿರುವ ಪ್ರತಿ ಬರಹವೂ ಕೂಡ ಚಿನ್ನದಷ್ಟೇ ಅಮೂಲ್ಯ ಮತ್ತು ಚಿನ್ನದಷ್ಟೇ ಮೌಲ್ಯ. ಮೊರಾರ್ಜಿ ದೇಸಾಯಿಯವರ ಜಿಪುಣತನ, ಗೋರೆಯವರ ಬದುಕು, ಖಾದ್ರಿ ಶಾಮಣ್ಣ ರವರು ತಾನು ಎಮ್ಮೆಲ್ಸಿ ಆಗಲು ರಾಮಕೃಷ್ಣ ಹೆಗಡೆಯವರಿಗೆ ಹೇಗೆಲ್ಲಾ ಬಕೆಟ್ ಹಿಡಿದರು ಮತ್ತು ಅದನ್ನು ಸಾಧ್ಯವಾಗಿಸಿಕೊಂಡರು ಎಂಬ ಹಲವು ಕುತೂಹಲಕಾರಿ ಸಂಗತಿಗಳು ಇಲ್ಲಿವೆ.
ಪ್ರಪಂಚದ ಭೂ ಬಂಧಿತ ದೇಶಗಳ ಬಗ್ಗೆ ಬರೆಯುತ್ತಾ 44 ಲ್ಯಾಂಡ್ ಲಾಕ್ಡ್ ದೇಶಗಳಲ್ಲಿ 32 ದೇಶ ಗಳು ಅಭಿವೃದ್ಧಿ ಹೊಂದುತ್ತಿವೆ ಎಂದು ವಿಶ್ವಸಂಸ್ಥೆ ಹೇಳಿರುವ ಮಾಹಿತಿಯನ್ನು ನೀಡುವ ಮೂಲಕ ಭೂ ಬಂಧಿತವಾಗಿರುವುದು ದೇಶಗಳ ಅಭಿವೃದ್ಧಿಗೆ ಹೇಗೆ ಪೂರಕ ಎಂಬ ಸಂಕ್ಷಿಪ್ತ ಮಾಹಿತಿ ನೀಡುತ್ತಾರೆ. ‘-ಟೋಗಳು ಕಥೆ ಹೇಳುವುದಿಲ್ಲ, ಇಡೀ ಇತಿಹಾಸವನ್ನು ನೆನಪಿಸುತ್ತವೆ’ ಎಂಬ ಮಾತಿದೆ.
9 ಕೆಜಿ ತೂಕದ ಕ್ಯಾಮೆರಾವನ್ನು ಹಿಡಿದು, ಕೆಂಪು ಕೋಟೆಯಲ್ಲಿ ಹಾರಿಸಿದ ಮೊದಲ ಧ್ವಜಾ ರೋಹಣ, ಕೊನೆಯ ವೈಸ್‌ರಾಯ್ ಲಾರ್ಡ್ ಮೌಂಟ್ ಬ್ಯಾಟನ್‌ರ ನಿರ್ಗಮನ, ಮಹಾತ್ಮ ಗಾಂಧಿ, ನೆಹರು, ಲಾಲ್ ಬಹದ್ದೂರ್ ಶಾಸ್ತ್ರೀ ಇವರ ಅಂತ್ಯಕ್ರಿಯೆಗಳನ್ನು ಸೇರಿದಂತೆ ರಾಣಿ ಎಲಿಜಬೆತ್ ಮತ್ತು ಅಮೇರಿಕಾ ಅಧ್ಯಕ್ಷ ಐಸೆನ್ ಹೋವರ್ ಭಾರತ ಭೇಟಿಯನ್ನು ಸೆರೆ ಹಿಡಿದ ಭಾರತದ ಮೊದಲ ಮಹಿಳಾ ಫೋಟೋ ಜರ್ನಲಿಸ್ಟ್ ಮತ್ತು ಇದಕ್ಕಾಗಿ ಪದ್ಮವಿಭೂಷಣ ಪ್ರಶಸ್ತಿ ಪಡೆದ ಹೊಮಾಯಿ ವ್ಯಾರಾವಾಲಾರ ಬಗ್ಗೆ ಅದ್ಭುತವಾಗಿ ದಾಖಲಿಸಿದ್ದಾರೆ.
ಕೆಂಪು ಕೋಟೆಯನ್ನು ರಾಜಧಾನಿಯಾಗಿಸಿಕೊಂಡು ಆಳಿದ್ದು, ಉರುಳಿಸಿದ್ದು, ಪುನರ್‌ನಿರ್ಮಿಸಿದ್ದು, ಅಲ್ಲಿ ಸಾರ್ವಜನಿಕ ವಿಚಾರಣೆ ನಡೆದದ್ದು, ಬ್ರಿಟಿಷರನ್ನು ವಿರೋಧಿಸುವ ತಾಣವಾಗಿ ಬಳಸಿ ಕೊಂಡಿದ್ದು ಎಲ್ಲವನ್ನು ಸ್ವಾರಸ್ಯವಾಗಿ ಕಟ್ಟಿಕೊಡುತ್ತಾರೆ. ರಷ್ಯಾದ ಕ್ರೆಮ್ಲಿನ್ ಅರಮನೆಯಲ್ಲಿ ಪುಟಿನ್ ಆಯೋಜಿಸಿದ್ದ ಗಣ್ಯರ ಔತಣ ಕೂಟದಲ್ಲಿ ಎ.ಪಿ.ಜೆ ಅಬ್ದುಲ್ ಕಲಾಂ ಅವರಿಗೆ ಒಗ್ಗದ ಒಗ್ಗರಣೆ ಘಾಟಿಗೆ ಸೀನುಗಳು ಸಿಡಿದಾಗ, ಪುಟಿನ್‌ಗೆ ಮುಜುಗರವಾಗದಂತೆ ಕಲಾಂ ಹೇಗೆ ನಿಭಾಯಿಸಿ ದರು ಎಂಬುದನ್ನು ಸ್ವತಃ ಸಾಕ್ಷಿಯಾಗಿದ್ದ ಲೇಖಕರು ಬಹಳ ಸ್ವಾರಸ್ಯವಾಗಿ ಕಟ್ಟಿಕೊಡುತ್ತಾರೆ.
ಆಟದಲ್ಲಿ ನಿರ್ಣಯಗಳು ವಿರುದ್ಧವಾಗಿ ಬಂದಾಗ ಪಂದ್ಯ ವನ್ನು ಬಹಿಷ್ಕರಿಸಿದ ಉದಾಹರಣೆಗಳಿವೆ. ಆದರೆ ಬಹಿಷ್ಕರಿಸುವುದಲ್ಲ ಪರಿಹಾರ, ಬದಲಿಗೆ ನಿರ್ಣಯಗಳ ವಿರುದ್ಧ ಪ್ರತಿಭಟಿಸಬೇಕು. ಹೇಗೆ ಪ್ರತಿಭಟಿಸಬೇಕು ಎಂಬುದನ್ನು 4 ಎಸೆತಗಳಿಗೆ 92 ರನ್ ನೀಡುವ ಮೂಲಕ ಸೋಲನ್ನು ತಾವಾ ಗಿಯೇ ಒಪ್ಪಿಕೊಂಡ ಬಾಂಗ್ಲಾದ ದೇಶೀಯ ಪಂದ್ಯವೊಂದರ ಬಗ್ಗೆ ಬರೆದು ಅಂಪೈರ್ ವಿರುದ್ಧ ಆಟಗಾರರು ಪ್ರತಿಭಟಿಸಿದ ರೀತಿಯನ್ನು ಸ್ವಾರಸ್ಯವಾಗಿ ಶೋಧಿಸಿ ಕೊಡುತ್ತಾರೆ.
ಹಾಸ್ಯ ಕಾರ್ಯಕ್ರಮದಲ್ಲಿಯೂ ಯಡಿಯೂರಪ್ಪನವರ ಗಂಭೀರ ವದನ, ಸಾವಿನ ಮನೆಯಲ್ಲಿಯೂ ಸದಾನಂದ ಗೌಡರ ನಗುವದನಗಳ ಬಗ್ಗೆ ಸ್ವಾರಸ್ಯವಾಗಿ ಬರೆಯುತ್ತಾ, ಎಲ್ಲಿ ನಗಬೇಕು, ಎಲ್ಲಿ ನಗಬಾರದು ಎಂಬುದು ಗೊತ್ತಿಲ್ಲದೇ ಹೋದರೆ ಅಧಿಕಾರವನ್ನು ಕಳೆದುಕೊಳ್ಳಬೇಕಾಗುತ್ತದೆ ಎಂಬ ಸಂದೇಶವನ್ನು ಜರ್ಮನಿಯಲ್ಲಿ ಅಂಜೆಲಾ ಮಾರ್ಕೆಲ್‌ರ ಉತ್ತರಾಧಿಕಾರಿಯಾಗಿ ಅಧಿಕಾರಕ್ಕೆ ಬರಬೇಕಿದ್ದ ಅವಕಾಶವನ್ನು ಕಳೆದುಕೊಂಡ ಆರ್ಮಿನ್ ಲಾಷೆಟ್‌ರ ಉದಾಹರಣೆಯೊಂದಿಗೆ ಹೇಳುತ್ತಾರೆ.
ಹಾಗೆಯೇ ಕಚೇರಿಯಲ್ಲಿನ ವಸ್ತ್ರ ಸಂಹಿತೆ ಮತ್ತು ಸಮಯ ಪ್ರಜ್ಞೆ ಕಟ್ಟು ನಿಟ್ಟಾಗಿ ಜಾರಿಗೆ ಬರಬೇಕೆಂದರೆ ನಿಯಮಗಳನ್ನು ಬಲವಂತವಾಗಿ ಹೇರಲೇಬೇಕಿಲ್ಲ, ಮೂರು ಜನ ಯುವತಿಯ ರನ್ನು ನೇಮಿಸಿಕೊಂಡರೆ ಸಾಕು ಎಂಬ ನಗ್ನ ಸತ್ಯದ ಬಗ್ಗೆಯೂ ಶೋಧಿಸುತ್ತಾರೆ. ಪಿ.ವಿ ನರಸಿಂಹ ರಾವ್ ಅವರಿಗಿದ್ದ ಸಂಸ್ಕೃತ ಪಾಂಡಿತ್ಯ ಮತ್ತು ಅವರು ವಿಚಾರ ಸಂಕಿರಣಗಳಲ್ಲಿ ಮಾಡುತ್ತಿದ್ದ ಉಪನ್ಯಾಸ, ಮನಮೋಹನ್ ಸಿಂಗ್ ವಿತ್ತ ಸಚಿವರಾಗಲು ಯಾರು ಕಾರಣ? ಸಂಜಯ್‌ಗಾಂಧಿಯ ಸಾವಿಗೆ ಇಂದಿರಾಗಾಂಧಿ ಹಿಮಾಚಲ ಪ್ರದೇಶದ ಚಾಮುಂಡಿ ದೇವಸ್ಥಾನದ ಭೇಟಿಯನ್ನು ತಪ್ಪಿಸಿ ಕೊಂಡಿದ್ದೇ ಕಾರಣವಾ? ಈ ವಿಚಾರಗಳನ್ನು ಸೂಕ್ಷ್ಮವಾಗಿ ವಿವರಿಸುತ್ತಾರೆ.
ಫೇಸ್‌ಬುಕ್ ಜಗತ್ತನ್ನು ಆವರಿಸಿಕೊಂಡಿರುವ ಬಗ್ಗೆ ಅಂಕಿ ಅಂಶಗಳನ್ನು ನೀಡುತ್ತಾರೆ. ಫೇಸ್‌ಬುಕ್‌ನ ವಿವಿಧ ಆಯಾಮಗಳ ಕುರಿತು ಜಗತ್ತಿನಾದ್ಯಂತ 12000 ಕ್ಕಿಂತ ಹೆಚ್ಚು ಸಂಶೋಧನಾ ಪ್ರಬಂಧಗಳು ಸಲ್ಲಿಕೆಯಾಗಿವೆ ಎಂಬುದನ್ನು ಶೋಫೇಸುತ್ತಾರೆ. ಅ.ರಾ ಮಿತ್ರರ ಹೆಸರನ್ನು ಬರೆಯುವಾಗ ವರದಿ ಗಾರರು ಮಾಡಿದ ತಪ್ಪಿಗೆ ಪ್ರತಿಕ್ರಿಯಿಸುತ್ತಾ, ಅವರ ಹುಟ್ಟೂರಾದ ಮಂಡ್ಯ ಜಿಲ್ಲೆಯ ಅಕ್ಕಿ ಹೆಬ್ಬಾಳು, ಅ.ರಾ ಮಿತ್ರ, ಎ ಎಸ್ ಮೂರ್ತಿ, ಅ.ರಾ ಶೇಷಗಿರಿ, ಅ.ರಾ ಚಂದ್ರ ಹೀಗೆ ಎಷ್ಟೆಲ್ಲಾ ದೊಡ್ಡ ವ್ಯಕ್ತಿಗಳಿಗೆ, ಆ ಎಂಬ ಪುಟ್ಟ ಗ್ರಾಮ ಜನ್ಮ ಕೊಟ್ಟಿದೆ ಎಂದು ಹಳ್ಳಿಯ ಬಗ್ಗೆ ಹೆಮ್ಮೆ ಮೂಡಿಸುತ್ತಾರೆ.
ಪಾರ್ಕರ್ ಪೆನ್ ನಡೆದು ಬಂದ ಹಾದಿ, ಫ್ರಾಂಕ್ ಫರ್ಟ್‌ನ ಪುಸ್ತಕ ಮೇಳ, ನೆದರ್‌ಲ್ಯಾಂಡಿನಲ್ಲಿ ಸಾಮಾನ್ಯ ಜನ ಸೇರಿದಂತೆ ಪ್ರಧಾನಿ ಕೂಡ ಕಚೇರಿಗೆ ಹೋಗಲು ಸೈಕಲ್ ಬಳಸುವುದನ್ನು ಮತ್ತು ಅದರಿಂದಾಗುವ ಅನುಕೂಲಗಳ ಬಗ್ಗೆ ಹೇಳುತ್ತಾರೆ. ಮುಂದುವರೆದು ಮನೆಯಿಂದ ಕಚೇರಿಗೆ ಹೋಗಿ ಬರಲು ಸೇರಿದಂತೆ ಎಲ್ಲೆಡೆಗಳಲ್ಲೂ ಸೈಕಲ್‌ಗಳನ್ನು ಉಪಯೋಗಿಸುವವರಿಗೆ ಉಡುಗೊರೆ ಗಳನ್ನು ಕೊಡುವ ಮೂಲಕ ವಾಯು ಮಾಲಿನ್ಯವನ್ನು ನಿಯಂತ್ರಿಸಲು, ಇಟಲಿಯ ಬೊಲೊನ್ಯಾ ನಗರ ತೆಗದುಕೊಂಡಿರುವ ಉಪಕ್ರಮಗಳನ್ನು ಬರೆದು ನಮ್ಮಲ್ಲಿಯೂ ಸಾಧ್ಯವೇ ಎಂಬ ಪ್ರಶ್ನೆಯನ್ನು ಹುಟ್ಟಿಸುತ್ತಾರೆ.
ಅರುಣ್ ಶೌರಿರವರ ಮೇಜಿನ ಮೇಲೆ ಏನೇನೆಲ್ಲಾ ವಸ್ತುಗಳಿವೆ? ಯಾಕಾಗಿ ಇವೆ! ಪಿವಿ ನರಸಿಂಹ ರಾವ್ ನಿಧನರಾದಾಗ ಅವರ ಪಾರ್ಥಿವ ಶರೀರವನ್ನು ದೆಹಲಿಯಲ್ಲಿ ಅಂತ್ಯಕ್ರಿಯೆ ಮಾಡುವುದಿರಲಿ, ಅಖಿಲ ಭಾರತ ಕಾಂಗ್ರೆಸ್ ಕಚೇರಿಯಲ್ಲಿ ಸಾರ್ವಜನಿಕರ ದರ್ಶನಕ್ಕೂ ಜಾಗ ಕೊಡದ ದುರಂತ, ಬೆಂಗಳೂರು ನಗರವೊಂದರಲ್ಲಿಯೇ ಪ್ರತಿ ವರ್ಷ ಸುಮಾರು 400 ಕೋಟಿ ರೂಪಾಯಿ ಮೌಲ್ಯದ ಆಹಾರ ತಿಪ್ಪೆಗೆ ಸೇರುವ ಬೇಸರ, ಇವೇ ಮೊದಲಾದ ಅಪರೂಪದ ಚಿನ್ನದ ಬಿಸ್ಕತ್‌ಗಳನ್ನು ಶೋಧಿಸಿ ಸಂಪಾದಕರ ಸದ್ಯಶೋಧನೆಯೆಂಬ ಲಾಕರ್‌ನಲ್ಲಿಟ್ಟಿ ದ್ದಾರೆ. ಇದರಲ್ಲಿ ರಾಜಕಾರಣವಿದೆ. ವಿಜ್ಞಾನವಿದೆ.
ತತ್ವಜ್ಞಾನ ವಿದೆ. ಜ್ಞಾನಿಗಳಿದ್ದಾರೆ. ಅಜ್ಞಾನಿಗಳೂ ಇದ್ದಾರೆ. ದಾನಿಗಳಿದ್ದಾರೆ. ಪ್ರಧಾನಿಗಳಿದ್ದಾರೆ. ಯಾರಿಗೂ ಅರಿವಿರದ ಅಪರೂಪದ ವ್ಯಕ್ತಿತ್ವಗಳಿವೆ. ಆಟವಿದೆ. ಬದುಕಿನ ಪಾಠವಿದೆ. ಸಿದ್ಧಾಂತ ಗಳಿವೆ. ರಾದ್ಧಾಂತಗಳೂ ಇವೆ. ಓದುತ್ತಾ ಇದ್ದರೆ ಆದಿ-ಅಂತ್ಯವಿಲ್ಲದ ಆಂತರಿಕ್ಷ ಯಾನ ಮಾಡಿದಂತೆ ಭಾಸವಾ ಗುತ್ತದೆ. ಎಲ್ಲಾ ವರ್ಗ ದವರೂ ಓದಲೇಬೇಕಾದ ಮತ್ತು ಎಲ್ಲರ ಸಂಗ್ರಹದಲ್ಲಿರಲೇ ಬೇಕಾದ ಪುಸ್ತಕ ಸಂಪಾದಕರ ಸದ್ಯಶೋಧನೆ.