ಬಾಯಾರಿದಾಗ ಯಾವ ನೀರು ಉತ್ತಮ ?
ಕುಡಿಯುವ ನೀರನ್ನು ಸಂಪೂರ್ಣ ಶುದ್ಧ ಮಾಡುವ ಆಧುನಿಕ ‘ಆರ್‌ಓ’ (ರಿವರ್ಸ್ ಆಸ್ಮೋಸಿಸ್) ಯಂತ್ರಗಳಿಗೆ ಹಲವರು ಮೊರೆ ಹೋಗಿದ್ದೇವೆ. ಬಟನ್ ಒತ್ತಿದ ತಕ್ಷಣ ನೀರು ಸಿಗುತ್ತದೆ ನಿಜ. ಆದರೆ ಅತಿ ಶುದ್ಧವಾದ ನೀರು ಯಾವಾಗಲೂ ಆರೋಗ್ಯಕರವೇ? ಶುದ್ಧತೆಯ ಭರದಲ್ಲಿ ನೀರಿನಲ್ಲಿರುವ ನೈಸರ್ಗಿಕ ಜೀವಸತ್ವಗಳನ್ನೇ ನಾವು ಕೊಲ್ಲುತ್ತಿದ್ದೇವಾ? ಬನ್ನಿ, ಸಾಮಾನ್ಯ ತಪ್ಪು ಕಲ್ಪನೆಗಳನ್ನು ಬದಿಗಿಟ್ಟು ವೈದ್ಯಕೀಯ ಸತ್ಯಗಳನ್ನು ಅರಿಯೋಣ.
-
ಡಾ.ಶಶಿಕಿರಣ್ ಉಮಾಕಾಂತ್, ಉಡುಪಿ
ಕುಡಿಯುವ ನೀರನ್ನು ಸಂಪೂರ್ಣ ಶುದ್ಧ ಮಾಡುವ ಆಧುನಿಕ ‘ಆರ್‌ಓ’ (ರಿವರ್ಸ್ ಆಸ್ಮೋಸಿಸ್) ಯಂತ್ರಗಳಿಗೆ ಹಲವರು ಮೊರೆ ಹೋಗಿದ್ದೇವೆ. ಬಟನ್ ಒತ್ತಿದ ತಕ್ಷಣ ನೀರು ಸಿಗುತ್ತದೆ ನಿಜ. ಆದರೆ ಅತಿ ಶುದ್ಧವಾದ ನೀರು ಯಾವಾಗಲೂ ಆರೋಗ್ಯಕರವೇ? ಶುದ್ಧತೆ ಯ ಭರದಲ್ಲಿ ನೀರಿನಲ್ಲಿರುವ ನೈಸರ್ಗಿಕ ಜೀವಸತ್ವಗಳನ್ನೇ ನಾವು ಕೊಲ್ಲುತ್ತಿದ್ದೇ ವಾ? ಬನ್ನಿ, ಸಾಮಾನ್ಯ ತಪ್ಪು ಕಲ್ಪನೆಗಳನ್ನು ಬದಿಗಿಟ್ಟು ವೈದ್ಯಕೀಯ ಸತ್ಯಗಳನ್ನು ಅರಿಯೋಣ.
ಟಿಡಿಎಸ್ ಎಂದರೇನು?
ನೀರಿನಲ್ಲಿ ಕರಗಿರುವ ಖನಿಜಗಳು ಮತ್ತು ಲವಣಗಳ ಒಟ್ಟು ಪ್ರಮಾಣವೇ ಟಿಡಿಎಸ್ (ಟೋಟಲ್ ಡಿಸಾಲ್‌ವ್ಡ್ ಸಾಲಿಡ್ಸ್). ಸುಮಾರು 200 ರೂಪಾಯಿಗೆ ಸಿಗುವ ಒಂದು ಸಣ್ಣ ‘ಟಿಡಿಎಸ್ ಮೀಟರ್’ ಸಹಾಯದಿಂದ ನಿಮ್ಮ ಮನೆಯ ನಲ್ಲಿಯ ನೀರಿನ ಟಿಡಿಎಸ್ ಎಷ್ಟಿದೆ ಎಂದು ನೀವೇ ಪರೀಕ್ಷಿಸಬಹುದು. ಈ ಸಂಖ್ಯೆ ನಿಮಗೆ ವಾಸ್ತವವಾಗಿ ಯಾವ ಯಂತ್ರ ಬೇಕು ಎಂದು ನಿರ್ಧರಿಸಲು ಸಹಾಯ ಮಾಡುತ್ತದೆ. ಕಲ್ಮಶಗಳ ಜೊತೆಗೆ ಖನಿಜಗಳ ಕಳ್ಳ!
ಆರ್‌ಓ ತಂತ್ರಜ್ಞಾನ ನೀರನ್ನು ಅತ್ಯಂತ ಸೂಕ್ಷ್ಮವಾದ ಫಿಲ್ಟರ್ ಮೂಲಕ ಹಾಯಿಸಿ, ಕಲ್ಮಶ ಗಳನ್ನು ತೆಗೆಯುತ್ತದೆ. ಇದು ಎಷ್ಟೊಂದು ಪ್ರಬಲವೆಂದರೆ, ಕಲ್ಮಶಗಳ ಜೊತೆಗೆ ನಮ್ಮ ಹೃದಯ ಮತ್ತು ಮೂಳೆಗಳಿಗೆ ಅತ್ಯವಶ್ಯಕವಾದ ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಂ ನಂತಹ ನೈಸರ್ಗಿಕ ಖನಿಜಗಳನ್ನೂ ಇದು ತೆಗೆದುಹಾಕುತ್ತದೆ!
ಇದನ್ನೂ ಓದಿ: Health Tips: ಬ್ರೇಕ್‌ಫಾಸ್ಟ್ ಸ್ಕಿಪ್ ಮಾಡ್ತಿದ್ದೀರಾ? ಈ ಆರೋಗ್ಯ ಸಮಸ್ಯೆ ಕಾಡಬಹುದು ಎಚ್ಚರ!
ದೀರ್ಘಕಾಲದವರೆಗೆ ಇಂತಹ ‘ಡಿ-ಮಿನರಲೈಸ್ಡ್’ (ಖನಿಜ ರಹಿತ) ನೀರನ್ನು ಕುಡಿಯುವು ದರಿಂದ ಸುಸ್ತು, ಸ್ನಾಯು ಸೆಳೆತ ಅಥವಾ ಕ್ರ್ಯಾಂಪ್ ಉಂಟಾಗಬಹುದು.
ಪರಿಹಾರ
ನಿಮ್ಮ ಮನೆಯಲ್ಲಿ ಈಗಾಗಲೇ ಆರ್‌ಓ ಯಂತ್ರವಿದ್ದರೆ ಅದನ್ನು ಬಿಸಾಡಬೇಡಿ! ಯಂತ್ರದ ಒಳಗಿರುವ ಟಿಡಿಎಸ್ ಅಡ್ಜಸ್ಟರ್ ಅನ್ನು 50 ರಿಂದ 150ಕ್ಕೆ ಸೆಟ್ ಮಾಡಲು ನಿಮ್ಮ ಸರ್ವೀಸ್ ಟೆಕ್ನಿಷಿಯನ್ ಗೆ ತಿಳಿಸಿ. (ಅನೇಕರು ಇದು ಸೊನ್ನೆ ಇರಬೇಕು ಎಂದು ತಪ್ಪು ತಿಳಿದುಕೊಂಡಿರುತ್ತಾರೆ). ಹೀಗೆ ಮಾಡುವುದರಿಂದ ಆರ್‌ಓ ಯಂತ್ರವೇ ನೀರಿಗೆ ಸ್ವಲ್ಪ ಖನಿಜಗಳನ್ನು ವಾಪಸ್ ಸೇರಿಸುತ್ತದೆ.
ನಿಜಕ್ಕೂ ಆರ್‌ಓ ಯಂತ್ರದ ಅಗತ್ಯವಿದೆಯೇ?
ನಿಮ್ಮ ಮನೆಯ ನಲ್ಲಿಯ ನೀರಿನ ಟಿಡಿಎಸ್ ಪರಿಶೀಲಿಸಿ, ಆಮೇಲೆ ಈ ನಿರ್ಧಾರ ತೆಗೆದು ಕೊಳ್ಳಿ: ಟಿಡಿಎಸ್ 300ಕ್ಕಿಂತ ಕಡಿಮೆ ಇದ್ದರೆ, ನಿಮಗೆ ದುಬಾರಿ ಆರ್‌ಓ ಯಂತ್ರದ ಅಗತ್ಯವೇ ಇಲ್ಲ. ಕೇವಲ ಅಲ್ಟ್ರಾವಯೋಲೆಟ್ (ಯುವಿ) ಪ್ಯೂರಿಫೈಯರ್ ಸಾಕು. ಇದು ಕ್ರಿಮಿಗಳನ್ನು ಕೊಲ್ಲುತ್ತದೆ, ಆದರೆ ಖನಿಜಗಳನ್ನು ಹಾಗೇ ಉಳಿಸುತ್ತದೆ. ನಗರ ಪ್ರದೇಶದ ಮುನ್ಸಿಪಲ್ ನೀರಿಗೆ ಸಾಮಾನ್ಯವಾಗಿ ಇದುವೇ ಸೂಕ್ತ.
ಟಿಡಿಎಸ್ 300-500 ಇದ್ದರೆ:
ಅಲ್ಟ್ರಾ ವಯೋಲೆಟ್ ಪ್ಯೂರಿಫೈಯರ್ ಜೊತೆಗೆ ಒಂದು ಸೆಡಿಮೆಂಟ್ ಫಿಲ್ಟರ್ ಸಾಕು. ನೀರು ಉಪ್ಪಾಗಿದ್ದರೆ ಮಾತ್ರ ಆರ್‌ಓ ಬಗ್ಗೆ ಯೋಚಿಸಿ. ಟಿಡಿಎಸ್ 500ಕ್ಕಿಂತ ಹೆಚ್ಚಿದ್ದರೆ: ಆರ್‌ಓ ಯಂತ್ರ ಕಡ್ಡಾಯವಾಗಿ ಬೇಕು (ಉದಾಹರಣೆಗೆ: ಒಣ ಪ್ರದೇಶದ ಬೋರ್‌ವೆಲ್ ನೀರು). ನೀರಿನಲ್ಲಿ ಆರ್ಸೆನಿಕ್, ಫ್ಲೋರೈಡ್ ಅಥವಾ ಸೀಸದ ಅಂಶ ಇದ್ದರೆ, ಟಿಡಿಎಸ್ ಎಷ್ಟೇ ಇದ್ದರೂ ಆರ್‌ಓ ಬಳಸಲೇಬೇಕು.
ಪ್ಲಾಸ್ಟಿಕ್ ಕ್ಯಾನ್ ನೀರಿನ ಅಪಾಯ!
ನಗರಗಳಲ್ಲಿ ನೀಲಿ ಬಣ್ಣದ 20 ಲೀಟರ್ ಪ್ಲಾಸ್ಟಿಕ್ ಕ್ಯಾನ್‌ಗಳ ಬಳಕೆ ಸಾಮಾನ್ಯ. ಇದು ಆರೋಗ್ಯಕರವಲ್ಲ. ಏಕೆಂದರೆ, ಒಂದೇ ಕ್ಯಾನ್ ಅನ್ನು ಸಾವಿರಾರು ಬಾರಿ ಬಳಸುತ್ತಾರೆ, ಮತ್ತು ಇವುಗಳನ್ನು ಸುಡುಬಿಸಿಲಿನಲ್ಲಿ ಸಾಗಿಸುತ್ತಾರೆ. ಬಿಸಿಲಿಗೆ ಪ್ಲಾಸ್ಟಿಕ್ ಕರಗಿ, ‘ಮೈಕ್ರೋ ಪ್ಲಾಸ್ಟಿಕ್’ ಮತ್ತು ರಾಸಾಯನಿಕಗಳು ನೇರವಾಗಿ ನೀರಿಗೆ ಸೇರುತ್ತವೆ.
ಕುದಿಸಿ ಆರಿಸಿದ ನೀರು
ಕ್ರಿಮಿಗಳನ್ನು ನಾಶಮಾಡಲು ನೀರನ್ನು ಕುದಿಸುವುದೇ ಅತ್ಯುತ್ತಮ ವಿಧಾನ. ಕನಿಷ್ಠ ಪಕ್ಷ 1 ನಿಮಿಷವಾದರೂ ನೀರನ್ನು ಚೆನ್ನಾಗಿ ಕುದಿಸಬೇಕು. ರಾತ್ರಿ 5-6 ಲೀಟರ್ ನೀರನ್ನು ಕುದಿಸಿ, ಸ್ಟೀಲ್ ಪಾತ್ರೆಯಲ್ಲಿ ಮುಚ್ಚಿಟ್ಟರೆ ಬೆಳಿಗ್ಗೆಗೆ ಸುರಕ್ಷಿತ ಮತ್ತು ಖನಿಜಯುಕ್ತ ನೀರು ಸಿದ್ಧ! (ನೆನಪಿರಲಿ, ಕುದಿಸಿದ ನೀರಿನ ಜೀವಿತಾವಧಿ 24 ಗಂಟೆ ಮಾತ್ರ. ಪ್ರತಿದಿನ ಹೊಸ ನೀರು ಕಾಯಿಸುವುದು ಒಳ್ಳೆಯದು). ಆದರೆ ರಾಸಾಯನಿಕ ಬೆರೆತಿದ್ದ ನೀರಿದ್ದರೆ ಬರೀ ಕುದಿಸು ವುದು ಸಾಕಾಗುವುದಿಲ್ಲ.
ತಾಮ್ರದ ಪಾತ್ರೆ: ಕನಿಷ್ಠ 8 ಗಂಟೆ ನೀರಿಟ್ಟು, ಪಾತ್ರೆಯನ್ನು ಪ್ರತಿದಿನ ನಿಂಬೆ/ಹುಣಸೆ ಯಿಂದ ಉಜ್ಜಿ ತೊಳೆದರೆ ಮಾತ್ರ ಬಳಸಿ. ಇಲ್ಲವಾದರೆ ತಾಮ್ರದ ಅಂಶವೇ ಅತಿಯಾಗಿ ಹೊಟ್ಟೆ ಸೇರಿ ವಿಷವಾಗಬಹುದು. ಹುಳಿ ಪದಾರ್ಥಗಳನ್ನು ಇದರಲ್ಲಿ ಹಾಕಿಡಲೇಬಾರದು.
ನೀರನ್ನು ತಂಪಾಗಿಡಲು ಮಣ್ಣಿನ ಮಡಕೆ ಉತ್ತಮ, ಆದರೆ ಒಳಗೆ ಬ್ಯಾಕ್ಟೀರಿಯಾ ಅಥವಾ ಇತರ ಕ್ರಿಮಿಗಳು ಬೆಳೆಯದಂತೆ 1-2 ವಾರಗಳಿಗೊಮ್ಮೆ ಉಜ್ಜಿ ತೊಳೆದು ಬಿಸಿಲಿನಲ್ಲಿ ಒಣಗಿಸ ಬೇಕು. ಬಿಸಿಲಿನಲ್ಲಿಟ್ಟ, ಗೀರು ಬಿದ್ದ 20 ಲೀಟರ್ ಪ್ಲಾಸ್ಟಿಕ್ ಕ್ಯಾನ್‌ಗಳಿಂದ ಪ್ರತಿನಿತ್ಯ ನೀರು ಕುಡಿಯುವುದು ಅಪಾಯಕಾರಿಯಾಗಬಹುದು.
ನೀರಿನಲ್ಲಿ ನೀರಿನಲ್ಲಿ ಆರ್ಸೆನಿಕ್‌ನಂತಹ ಕೆಮಿಕಲ್‌ಗಳಿದ್ದರೆ, ಅದರಿಂದ ಅನ್ನ, ಬೇಳೆ ಬೇಯಿಸಬೇಡಿ. ಕುದಿಸಿದರೆ ರಾಸಾಯನಿಕಗಳು ಹೋಗುವುದಿಲ್ಲ, ಬದಲಿಗೆ ಇನ್ನಷ್ಟು ಸಾಂದ್ರವಾಗುತ್ತವೆ. ಅಂತಹ ಪರಿಸ್ಥಿತಿಯಲ್ಲಿ ಅಡುಗೆಗೂ ಆರ್‌ಓ ನೀರನ್ನೇ ಬಳಸಿ.
ಆಧುನಿಕ ತಂತ್ರಜ್ಞಾನ ಎಂದ ಕೂಡಲೇ ಅದು ಆರೋಗ್ಯಕರ ಇರಲೇಬೇಕು ಎಂದು ಕಣ್ಮುಚ್ಚಿ ನಂಬಬೇಡಿ. ನಿಮ್ಮ ಮನೆಯ ನಲ್ಲಿಯ ನೀರಿನ ಟಿಡಿಎಸ್ ಕಡಿಮೆಯಿದ್ದರೆ, ದುಬಾರಿ ಆರ್‌ಓ ಯಂತ್ರಗಳಿಗಿಂತ ಹಳೆಯ ಶೈಲಿಯ ಕುದಿಸಿದ ನೀರು ಅಥವಾ ಅಲ್ಟ್ರಾ ವಯೊಲೆಟ್ ಫಿಲ್ಟರ್ ನೂರು ಪಟ್ಟು ಶ್ರೇಷ್ಠ. ಪ್ಲಾಸ್ಟಿಕ್ ಕ್ಯಾನ್‌ಗಳನ್ನು ದೂರವಿಡಿ, ನೀರನ್ನು ಜವಾಬ್ದಾರಿಯಿಂದ ಸ್ಟೀಲ್ ಅಥವಾ ಮಣ್ಣಿನ ಮಡಿಕೆಯಲ್ಲಿ ಶೇಖರಿಸಿಟ್ಟು ಕೊಂಡು ಕುಡಿಯಿರಿ.
ನೀರಿನ ಸುರಕ್ಷಿತೆಯ ಚೆಕ್‌ಲಿಸ್ಟ್
ಕುದಿಸಿ ಆರಿಸಿದ ನೀರು: ಕನಿಷ್ಠ 1 ನಿಮಿಷ ಚೆನ್ನಾಗಿ ಕುದಿಸಿದ ನೀರಿಗೆ ಸರಿಸಾಟಿ ಯಾವುದೂ ಇಲ್ಲ.
ಸ್ಟೀಲ್ , ಗಾಜಿನ ಪಾತ್ರೆ: ಯಾವುದೇ ರಾಸಾಯನಿಕ ಬಿಟ್ಟುಕೊಡದ, ನಿರ್ವಹಣೆಗೆ ಸುಲಭ ವಾದ ಇವು ನೀರು ಶೇಖರಿಸಿಡಲು ಅತ್ಯುತ್ತಮ.
ಅಲ್ಟ್ರಾವಯೋಲೆಟ್ ಪ್ಯೂರಿಫೈಯರ್: ಟಿಡಿಎಸ್ 300ಕ್ಕಿಂತ ಕಡಿಮೆ ಇರುವ ನೀರಿಗೆ ಇದುವೇ ಶ್ರೇಷ್ಠ.
ಆರ್‌ಓ ಯಂತ್ರಗಳು: ನೀರಿನಲ್ಲಿ ಹಾನಿಕಾರಕ ರಾಸಾಯನಿಕಗಳಿದ್ದರೆ ಅಥವಾ ಟಿಡಿಎಸ್ 500ಕ್ಕಿಂತ ಹೆಚ್ಚಿದ್ದರೆ ಮಾತ್ರ ಬಳಸಿ. ಅದರ ಟಿಡಿಎಸ್ ಅನ್ನು 50-150ಗೆ ಸೆಟ್ ಮಾಡಿಸಿ.