ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Metro, BMTC in profit: ಸರಕಾರದ ಬೊಕ್ಕಸ ತುಂಬಿದ ಸಂಭ್ರಮ

Metro, BMTC in profit: ಸರಕಾರದ ಬೊಕ್ಕಸ ತುಂಬಿದ ಸಂಭ್ರಮ

Metro, BMTC in profit: ಸರಕಾರದ ಬೊಕ್ಕಸ ತುಂಬಿದ ಸಂಭ್ರಮ

-

Ashok Nayak Ashok Nayak Jan 2, 2025 11:47 AM
ವರ್ಷಾಂತ್ಯಕ್ಕೆ 308 ಕೋಟಿ ರು. ಮದ್ಯ ವಹಿವಾಟು
2 ಕೋಟಿ ದಾಟಿದ ಮೆಟ್ರೋ ಆದಾಯ
ಬೆಂಗಳೂರು: ಹೊಸ ವರ್ಷಕ್ಕೆ ರಾಜ್ಯದಲ್ಲಿ ಮದ್ಯದ ಕಿಕ್ಕೇರಿದ್ದು, ಮಂಗಳವಾರ ಒಂದೇ ದಿನ 308 ಕೋಟಿ ರು. ಮದ್ಯ ವಹಿವಾಟು ನಡೆದಿದೆ. ಇದರಿಂದ ಸರಕಾರದ ಬೊಕ್ಕಸಕ್ಕೆ ಕೋಟ್ಯಂತರ ರುಪಾಯಿ ಆದಾಯ ಹರಿದು ಬಂದಿದೆ.
250 ಕೋಟಿ ರು. ಮೌಲ್ಯದ 483705 ಬಾಕ್ಸ್ ಇಂಡಿಯನ್ ಮೇಡ್ ಲಿಕರ್(ಐಎಂಎಲ್) ಮದ್ಯ ಮಾರಾಟವಾಗಿದೆ. 57.75 ಕೋಟಿ ರು. ಮೌಲ್ಯದ 292339 ಲಕ್ಷ ಬೀಯರ್ ಮಾರಾಟವಾಗಿದೆ. ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಮದ್ಯ ಮಾರಾಟದಲ್ಲಿ ಗಣನೀಯವಾಗಿ ಹೆಚ್ಚಳವಾಗಿದೆ.
ಡಿ.೨೭ ರಂದು ಬರೋಬ್ಬರಿ ೪೦೮.೫೮ ಕೋಟಿ ರುಪಾಯಿ ಮದ್ಯ ಮಾರಾಟವಾಗಿತ್ತು. ಐಎಂಎಲ್ ೬,೨೨,೦೬೨ ಲಕ್ಷ ಬಾಕ್ಸ್ ಮಾರಾಟದಿಂದ ೩೨೭,೫೦ ಕೋಟಿ ರುಪಾಯಿ ಆದಾಯ ಸಂಗ್ರಹವಾಗಿತ್ತು. ಬಿಯರ್ ೪,೦೪,೯೯೮ ಲಕ್ಷ ಬಾಕ್ಸ್ಮಾರಾಟದಿಂದ ೮೦,೫೮ ಕೋಟಿ ರುಪಾಯಿ ಆದಾಯ‌ ಗಳಿಕೆಯಾಗಿತ್ತು. ಐಎಂಎಲ್, ಬಿಯರ್ ಸೇರಿ ಒಟ್ಟು ೧೦,೨೭,೦೬೦ ಲಕ್ಷ ಬಾಕ್ಸ್ ಮದ್ಯ ಮಾರಾಟದಿಂದ ೪೦೮.೫೦ ಕೋಟಿ ರುಪಾಯಿ ಆದಾಯ ಹರಿದುಬಂದಿತ್ತು
ಮೆಟ್ರೋ, ಬಿಎಂಟಿಸಿಗೆ ಭರ್ಜರಿ ಲಾಭನೂತನ ವರ್ಷದ ಸಂಭ್ರಮಾಚರಣೆ ಹಿನ್ನಲೆಯಲ್ಲಿ ವಿಶೇಷ ಬಸ್ ಹಾಗೂ ಹೆಚ್ಚುವರಿ ಮೆಟ್ರೋ‌ ಸೇವೆ ಕಲ್ಪಿಸಿದ್ದ ಬಿಎಂಟಿಸಿ ಹಾಗೂ ನಮ್ಮ ಮೆಟ್ರೋಗೆ ಭರ್ಜರಿ ಲಾಭ ಬಂದಿದೆ. ಮಂಗಳವಾರ ಒಂದೇ ದಿನ ೫ ಲಕ್ಷ ಜನರು ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸಿದ್ದು, ಬಿಎಂಟಿಸಿಗೆ ಬರೋಬ್ಬರಿ ೫,೪೮,೮೯,೨೫೪ ಕೋಟಿ ರು. ಆದಾಯ ಹರಿದುಬಂದಿದೆ. ಇನ್ನು ಮೆಟ್ರೋಗೆ ಎಂ ಜಿ ರೋಡ್, ಚರ್ಚ್ ಸ್ಟ್ರೀಟ್ ಸೇರಿದಂತೆ ನಗರದ ವಿವಿಧ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸಂಚಾರ ನಡೆಸಿದ್ದು, ೨ ಕೋಟಿ ೫೨ ಲಕ್ಷ ಆದಾಯ ಸಂಗ್ರಹವಾಗಿದೆ.
ಇದನ್ನೂ ಓದಿ: viral news bmtc bus