ಮೊಬೈಲ್‌ ಗೀಳು, ಬದುಕು ಹಾಳು

ಮೊಬೈಲ್‌ ಗೀಳು, ಬದುಕು ಹಾಳು

image-a244c56f-8905-4668-b75f-db74a72e4708.jpg
Profile Vishwavani News December 5, 2022
image-683c0b55-9e0e-47f8-be9d-e7216b7b71a7.jpg
ರಾಘವೇಂದ್ರ ಜೋಯಿಸ್ ಇಂದಿನ ಮೊಬೈಲ್ ಮತ್ತು ಸ್ಮಾರ್ಟ್ ಫೋನ್‌ಗಳನ್ನು ಒಳ್ಳೆಯದಕ್ಕೆ ಮಾತ್ರ ಉಪಯೋಗಿಸುವ ವಿವೇಚನೆಯನ್ನು ಇಟ್ಟು ಕೊಳ್ಳುವುದು ಅಗತ್ಯ. ತಪ್ಪಿದಲ್ಲಿ ಮಕ್ಕಳ ಬದುಕು ಹಾಳು, ದೊಡ್ಡವರ ದಿನಚರಿಯೂ ಹಾಳು. ಇವತ್ತು ಚಿಕ್ಕ ಮಗುವಿನಿಂದ ಹಿಡಿದು ಹಿರಿಯ ನಾಗರಿಕರವರೆಗೂ ಎಲ್ಲರೂ ಮೊಬೈಲ್ ಉಪಯೋಗಿಸುವವರೇ ಆಗಿದ್ದಾರೆ. ತಪ್ಪೇನಿಲ್ಲ. ಆದರೆ ಯಾರಿಗೆ, ಯಾವಾಗ, ಎಷ್ಟು ಅದು ಉಪಯೋಗ ಇದೆಯೋ ಅಷ್ಟೇ ಉಪಯೋಗಿಸಿದರೆ ಅದರಿಂದ ಏನೂ ತೊಂದರೆ ಇಲ್ಲ. ಸಾಮಾನ್ಯವಾಗಿ ೧೮ ವಯಸ್ಸಿ ನವರೆಗೆ ಮಕ್ಕಳಿಗೆ ಮೊಬೈಲ್ ಅವಶ್ಯಕತೆಯೇ ಇರಲ್ಲ. ಕರೋನದ ಹಾವಳಿ ಮುಗಿದ ನಂತರ ಯಾವ ಶಾಲೆಯಲ್ಲೂ ಆನ್ ಲೈನ್ ತರಗತಿಗಳು ನಡೆಯುತ್ತಿಲ್ಲ. ಶಾಲೆಯವರು ಏನಾದರೂ ಮಕ್ಕಳ ಬಗ್ಗೆ ಪಾಲಕರಿಗೆ ತಿಳಿಸುವುದಾದರೆ ಪಾಲಕರ ಮೊಬೈಲ್ ಗೆ ಮೆಸೇಜ್ ಕಳಿಸಬಹುದು.ಇತ್ತೀಚೆಗೆ ಬೆಂಗಳೂರಿನ ಕೆಲವು ಶಾಲೆಗಳಲ್ಲಿ ಹೈಸ್ಕೂಲ್ ಮಕ್ಕಳು ದಾರಿ ತಪ್ಪುತ್ತಿzರೆ ಎನ್ನುವ ಆತಂಕಕಾರಿ ವಿಷಯವು ಮುದ್ರಣ ಮಾದ್ಯಮದಲ್ಲಿ ದೊಡ್ಡ ಸುದ್ದಿಯಾಗಿತ್ತು. ಇದಕ್ಕೆ ಬಹುತೇಕ ಕಾರಣ ಎರಡು. ಒಂದನೆಯದು ಮಕ್ಕಳಿಗೆ ಮೊಬೈಲ್ ಕೊಡಿಸಿದ್ದು. ಎರಡನೆಯದು ಅವರು ಏನು ಮಾಡುತ್ತಾ ಇzರೆ ಎಂದು ಪಾಲಕರು ಹೆಚ್ಚು ಗಮನ ಹರಿಸಿದೆ ಇದ್ದದ್ದು ಮತ್ತು ಯಾವುದು ತಪ್ಪು ಯಾವುದು ಸರಿ ಎಂದು ಅವಶ್ಯಕತೆಯಿರುವ ಮಾಹಿತಿ ನೀಡದೇ, ಮಕ್ಕಳಲ್ಲಿ ಕೆಲವು ವಿಷಯಗಳಲ್ಲಿ ಅನಗತ್ಯ ಕುತುಹಲ ಮೂಡು ವಂತೆ ಮಾಡಿದ್ದು. ಆದ್ದರಿಂದ ೧೮ ವರ್ಷಗಳ ಒಳಗಿನ ಮಕ್ಕಳಿಗೆ ಅವರಿಗೇ ಅಂತ ಒಂದು ಮೊಬೈಲ್ ಕೊಟ್ಟು ಕಳಿಸುವುದು ಸಮಂಜಸವಲ್ಲ. ತೀರ ಅವರಿಗೆ ಶಿಕ್ಷಣಕ್ಕೆ ಸಂಬಂಧಪಟ್ಟ ಮಾಹಿತಿ ಪಡೆಯಲು ಅವಶ್ಯಕತೆ ಇದೆ ಎಂದೆನಿಸಿದರೆ ಪಾಲಕರ ಸಮಕ್ಷಮ ಮೊಬೈಲ್ ಉಪಯೋಗ ಮಾಡಲು ಅನುವು ಮಾಡಿಕೊಡುವುದು ಒಳ್ಳೆಯದು. ಇಲ್ಲದಿದ್ದರೆ ಯಾವುದು ಸರಿ, ಯಾವುದು ತಪ್ಪು ಎಂದು ವಿವೇಚಿಸುವ ಶಕ್ತಿ ಕಡಿಮೆಯಿರುವ ವಯಸ್ಸಿನಲ್ಲಿ ಅವರಿಗೇ ಅಂತ ಒಂದು ಮೊಬೈಲ್ ಕೊಡಿಸುವುದು ಹೆಚ್ಚು ಸೂಕ್ತ ಅಲ್ಲ. ಕಾಲೇಜ್‌ಗೆ ಹೋಗುವ ವಿದ್ಯಾರ್ಥಿಗಳು ಕೂಡ ವಿವೇಚನೆಯಿಂದ ಮೊಬೈಲ್ ಬಳಸಬೇಕು. ಅನಗತ್ಯವಾದ ಗೇಮ್ಸಗಳು, ವ್ಯಾಟ್ಸಪ್ ಮೆಸೇಜ, ಅಶ್ಲೀಲ ಮೆಸೇಜ್‌ಗಳನ್ನು ಕಳಿಸುವ ಕಡೆ ಗಮನ ಹರಿಸದೇ, ತಾವು ಮಾಡುತ್ತಿರುವ ಕೋರ್ಸ್ ಸಂಬಂಧಿಸಿದಂತೆ ಮಾಹಿತಿ ಗಳನ್ನು, ಮುಂದಿನ ಉನ್ನತ ಶಿಕ್ಷಣದ ಮಾಹಿತಿಗಳನ್ನು, ಉದ್ಯೋಗಕ್ಕೆ ಸಂಬಂಽಸಿದ ಮಾಹಿತಿಯನ್ನು ಪಡೆದು ಕೊಳ್ಳುವುದಕ್ಕೆ, ಅಗತ್ಯವಿದ್ದಷ್ಟು ವ್ಯಾಟ್ಸಾಪ್ ಮೆಸೇಜ್ ಕಳಿಸಿವುದಕ್ಕೆ ಉಪಯೋಗಿಸಿದರೆ ಒಳ್ಳೆಯದು. ಸುಮ್ಮ ಸುಮ್ಮನೆ ಪಾರ್ವರ್ಡ್! ದೊಡ್ಡವರೂ ಕೂಡ ಬಂದಿರುವ ಎಲ್ಲಾ ಮೆಸೇಜ್ ಗಳನ್ನು ಅದರ ಸತ್ಯಾಸತ್ಯತೆ ಬಗ್ಗೆ ವಿವೇಚಿಸದೆ ಹಾಗೇ ಬಂದದೆ ಬೇರೆಯವರಿಗೆ ಫಾರ್ವರ್ಡ್ ಮಾಡಬಾರದು. ಇದರಿಂದಾಗಿ ಸುಳ್ಳು ಸುದ್ದಿಗಳನ್ನು ಹಬ್ಬಿಸಿದಂತಾಗುತ್ತದೆ. ಉತ್ತರಾಖಂಡದಲ್ಲಿ ಚಿರತೆ ಓಡುತ್ತಿ ರುವ ದೃಶ್ಯವನ್ನು, ಬೆಂಗಳೂರನ ತುರಹಳ್ಳಿ ಅರಣ್ಯದ ಚಿರತೆ ಎಂದು ಇತ್ತೀಚೆಗೆ ಸಾವಿರಾರು ಜನರು ಫಾರ್ವರ್ಡ್ ಮಾಡಿದರು. ಇದರಿಂದ, ಬೆಂಗಳೂರಿನಲ್ಲಿ ಚಿರತೆಗಳು ಮನುಷ್ಯರ ಮೇಲೆ ಆಕ್ರಮಣ ಮಾಡುತ್ತಿವೆ ಎಂಬ ತಪ್ಪು ಸುದ್ದಿಯನ್ನು ಪಾರ್ವರ್ಡ್ ಮಾಡಿದಂತಾಗುತ್ತದೆ. ಆ ಮೂಲಕ ಜನರಲ್ಲಿ ಅನವಶ್ಯಕ ಭಯವನ್ನೂ ಉತ್ಪಾದಿಸಿದಂತಾಗುತ್ತದೆ. ಫಾರ್ವರ್ಡ್ ಮಾಡುವ ಮುಂಚೆ, ಸತ್ಯಾಸತ್ಯತೆಯನ್ನು ಗಮನಿಸಿ, ಸತ್ಯ ಎನಿಸಿದಾಗ ಮಾತ್ರ ಪಾರ್ವರ್ಡ್ ಮಾಡುವುದು ಅಗತ್ಯ. ಜತೆಗೆ ಅನಗತ್ಯವಾಗಿ ಮೊಬೈಲ್ ಬಳಕೆ ಕಡಿಮೆ ಮಾಡಬೇಕು. ಒಂದು ಮೊಬೈಲ್ ಇದ್ದರೆ ಸಾಕು. ಅದರಿಂದ ಬಹಳಷ್ಟು ಸದುಪಯೋಗ ಪಡೆದುಕೊಳ್ಳಬಹುದು. ಫೋಟೋ ತೆಗೆಯಲು, ವ್ಯಾಟ್ಸಪ್ ಮೆಸೇಜ್ ಮಾಡಲು, ಗೂಗಲ್ನಲ್ಲಿ ಸರ್ಚ್ ಮಾಡಿ ಶಿಕ್ಷಣಕ್ಕೆ, ಉದ್ಯೋಗಕ್ಕೆ,ವ್ಯಾಪಾರಕ್ಕೆ, ಸಂಬಂಧಿಸಿದ ಎಲ್ಲಾ ಅಗತ್ಯ ಮಾಹಿತಿ ಕಲೆ ಹಾಕಲು, ಕಂಪನಿಗಳಲ್ಲಿ ಮೀಟಿಂಗ್ ನೆಡೆಸಲು, ಸಾಮಾನ್ಯ ಜ್ಞಾನ ಹೆಚ್ಚಿಸಿಕೊಳ್ಳಲು, ಬ್ಯಾಂಕ್ ಅಕೌಂಟ್ ಮನೆಯಲ್ಲಿ ಕುಳಿತು ಓಪನ್ ಮಾಡಲು, ಎಲ್ಲಾ ಬ್ಯಾಂಕ್ ವ್ಯವಹಾರವನ್ನು ಮನೆಯ ಕುಳಿತು ನಡೆಸಲು, ಟಿಕೆಟ್ ಬುಕ್ ಮಾಡಲು, ಮಿತವಾಗಿ ಒಳ್ಳೆಯ ಸಿನಿಮಾ ನೋಡಲು, ಉತ್ತಮವಾದ ಸಂಗೀತ ಕೇಳಲು....ಹೀಗೆ ಹತ್ತು ಹಲವು ಉಪಯೋಗವನ್ನು ನಾವು ಮೊಬೈಲ್ ನಿಂದ ಪಡೆದುಕೊಳ್ಳಬಹುದು. ಇದೇ ಮೊಬೈಲ್ ಅನ್ನು ಬೇಡದೇ ಇರುವ ಅಶ್ಲೀಲ ಮೆಸೇಜ್ ನೋಡಲು, ಕಳಿಸಲು, ಗೇಮ್ಸ ಆಡಲು, ಅನಗತ್ಯ ವ್ಯಾಟ್ಸಪ್ ಮೆಸೇಜ್ ಮಾಡಲು, ಕೂಡ ಬಳಸಬಹುದು. ಆದರೆ ಅದರಿಂದ ಲಾಭಕ್ಕಿಂತ ಹಾನಿಯೇ ಹೆಚ್ಚು. ಇದನ್ನು ಮನೋವಿಜ್ಞಾನಿಗಳು ಅಧ್ಯಯನ ಮಾಡಿ ಖಚಿತಪಡಿಸಿದ್ದಾರೆ. ಅತಿಯಾದ ಮೊಬೈಲ್ ಗೀಳು ಹಾಗೂ ಬೇಡದೆ ಇದ್ದಿದ್ದಕ್ಕೆ ಇಂಟರ್ನೆಟ್‌ನ್ನು ಜಾಸ್ತಿ ಉಪಯೋಗಿಸುವುದರಿಂದ ಖಂಡಿತಾ ಬದುಕು ಹಾಳಾಗಿ ಹೋಗುವುದರಲ್ಲಿ ಸಂಶಯವಿಲ್ಲ. ಇದರಿಂದ ಮಾನಸಿಕ ಒತ್ತಡ, ದ್ರೃಷ್ಟಿ ದೋಷ, ತಲೆನೋವು ಮೊದಲಾದ ಆರೋಗ್ಯ ಸಮಸ್ಯೆಯನ್ನೂ ಎದುರಿಸಬೇಕಾಗುತ್ತದೆ.
Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

robbery case shooting
1:49 PM January 16, 2025

Murder Case: ಸೆಕ್ಯೂರಿಟಿ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ ಮಾಡಿ 93 ಲಕ್ಷ ರೂ. ದರೋಡೆ

BBK 11 Mid week Elimination (1)
9:12 PM January 15, 2025

BBK 11: ಇಂದೇ ನಡೆಯಲಿದೆ ಮಿಡ್ ವೀಕ್ ಎಲಿಮಿನೇಷನ್: ಔಟ್ ಆದ ಸ್ಪರ್ಧಿ ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?

Naga Sadhus
11:15 PM January 18, 2025

Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ

Chaithra Kundapura remuneration (1)
7:13 AM January 16, 2025

BBK 11: ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರಗೆ ಸಿಕ್ಕ ಹಣ ಎಷ್ಟು ಗೊತ್ತೇ?

Honnamaradi jatre
5:53 PM January 15, 2025

Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು

Eshwara Khandre
6:54 PM January 16, 2025

Bidar ATM Robbery: ಬೀದರ್ ಎಟಿಎಂ ದರೋಡೆ ಪ್ರಕರಣ; ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ಖಂಡ್ರೆ ಸೂಚನೆ