ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

EOS-05: 36000 ಕಿಲೋಮೀಟರ್ ಎತ್ತರದ ಭೂಸ್ಥಿರ ಕಕ್ಷೆಯಲ್ಲಿ ಇಒಎಸ್-೦5 ಕಣ್ಣು: ಯಾರೂ ಏರದ ಎತ್ತರ ತಲುಪಿದ ಇಸ್ರೋ

ಇಸ್ರೋ ಜಿಎಸ್‌ಎಲ್‌ವಿ-17 ನೌಕೆಯ ಮೂಲಕ ಇಒಎಸ್-05 ಉಪಗ್ರಹವನ್ನು ಯಶಸ್ವಿಯಾಗಿ ಬಾಹ್ಯಾಕಾಶಕ್ಕೆ ಕಳುಹಿಸುವುದರೊಂದಿಗೆ ಭಾರತದ ಬಾಹ್ಯಾಕಾಶ ಕ್ಷೇತ್ರವು ದೊಡ್ಡ ಗೆಲುವು ಸಾಧಿಸಿದೆ. ʼNaughty Boy’ ಎಂದೇ ಕರೆಯಲ್ಪಡುವ ಈ ಜಿಎಸ್‌ಎಲ್‌ವಿ ನೌಕೆಯು ನಡೆಸಿದ ಉಡಾವಣೆಯು ಹಲವು ಹೊಸ ಮೈಲಿಗಲ್ಲುಗಳಿಗೆ ಸಾಕ್ಷಿಯಾಗಿದೆ.

ಯಾರೂ ಏರದ ಎತ್ತರ ತಲುಪಿದ ಇಸ್ರೋ!

-

Profile
Ashok Nayak Sep 7, 2026 10:27 PM

ಬೆಂಗಳೂರು: ಇಸ್ರೋ ಜಿಎಸ್‌ಎಲ್‌ವಿ-17 ನೌಕೆಯ ಮೂಲಕ ಇಒಎಸ್-05 ಉಪಗ್ರಹವನ್ನು ಯಶಸ್ವಿಯಾಗಿ ಬಾಹ್ಯಾಕಾಶಕ್ಕೆ ಕಳುಹಿಸುವುದರೊಂದಿಗೆ ಭಾರತದ ಬಾಹ್ಯಾಕಾಶ ಕ್ಷೇತ್ರವು ದೊಡ್ಡ ಗೆಲುವು ಸಾಧಿಸಿದೆ. ʼNaughty Boy’ ಎಂದೇ ಕರೆಯಲ್ಪಡುವ ಈ ಜಿಎಸ್‌ಎಲ್‌ವಿ ನೌಕೆಯು ಶುಕ್ರವಾರ ನಡೆಸಿದ ಉಡಾವಣೆಯು ಹಲವು ಹೊಸ ಮೈಲಿಗಲ್ಲುಗಳಿಗೆ ಸಾಕ್ಷಿಯಾಗಿದೆ. ಇಒಎಸ್-05 ಉಪಗ್ರಹವು ಜಿಎಸ್ ಎಲ್‌ವಿ-17 ನೌಕೆ ಹೊತ್ತೊಯ್ದ ಅತ್ಯಂತ ಭಾರವಾದ ಉಪಗ್ರಹವಾಗಿದೆ.

ಇದು ತನ್ನ ನಿಗದಿತ ಕಕ್ಷೆಯನ್ನು ತಲುಪಿದ ಬಳಿಕ, ಭೂಸ್ಥಿರ ಕಕ್ಷೆಯಿಂದ ಕಾರ್ಯನಿರ್ವಹಿಸುವ ಭಾರತದ ಮೊದಲ ಪ್ರತ್ಯೇಕ ಇಮೇಜಿಂಗ್ ಉಪಗ್ರಹ ಎಂಬ ಹಿರಿಮೆಗೆ ಪಾತ್ರವಾಗಲಿದೆ. ಇಸ್ರೋ ಅಧ್ಯಕ್ಷ ವಿ. ನಾರಾಯಣನ್ ಅವರು ಇದನ್ನು ಐತಿಹಾಸಿಕ ಸಾಧನೆ’ ಎಂದಿದ್ದಾರೆ.

ಯೋಜನೆ ಇಷ್ಟೊಂದು ಮಹತ್ವದ್ದು ಯಾಕೆ?

1. ಅತಿ ಎತ್ತರದ ಕಕ್ಷೆಗೆ ಭಾರತದ ಮೊದಲ ಅರ್ಥ್ ಇಮೇಜಿಂಗ್ ಉಪಗ್ರಹ ಹೆಚ್ಚಿನ ಭೂ-ಪರಿಶೀಲನಾ (ಅರ್ಥ್ ಅಬ್ಸರ್ವೇಶನ್) ಉಪಗ್ರಹಗಳು ಭೂಮಿಯಿಂದ ಕೆಲವೇ ನೂರು ಕಿಲೋ ಮೀಟರ್ ಎತ್ತರದ ಕೆಳಮಟ್ಟದ ಕಕ್ಷೆಯಲ್ಲಿ ಕಾರ್ಯನಿರ್ವಹಿಸುತ್ತವೆ. ಆದರೆ ಇಒಎಸ್-05 ಉಪಗ್ರಹ ತನ್ನದೇ ಆದ ಇಂಧನ ವ್ಯವಸ್ಥೆಯನ್ನು ಬಳಸಿ ಭೂಮಿಯಿಂದ ಸುಮಾರು 36000 ಕಿಲೋಮೀಟರ್ ಎತ್ತರದ ಕಕ್ಷೆಯನ್ನು ತಲುಪಲಿದೆ. ಅಷ್ಟು ಎತ್ತರದಲ್ಲಿ ಉಪಗ್ರಹದ ವೇಗ ಮತ್ತು ಭೂಮಿಯ ಭ್ರಮಣೆಯ ವೇಗ ಒಂದೇ ಆಗಿರುತ್ತದೆ. ಇದರಿಂದ ಉಪಗ್ರಹವು ಒಂದೇ ಪ್ರದೇಶದ ಮೇಲಿದ್ದು ಕೊಂಡು ನಿರಂತರವಾಗಿ ನಿಗಾ ಇಡಲು ಸಾಧ್ಯವಾಗುತ್ತದೆ.

ಇದನ್ನೂ ಓದಿ: GSLV-F17 ಯಶಸ್ವಿ ಉಡಾವಣೆ: EOS-05 'ಆಕಾಶದಲ್ಲಿ ಭಾರತದ ಕಣ್ಣು'!

ಉಪಗ್ರಹಕ್ಕೆ ನಿರಂತರವಾಗಿ ವಿಶಾಲ ಪ್ರದೇಶದ ಮೇಲೆ ಕಣ್ಣಿಡಲು ಇದು ದೊಡ್ಡ ಅನುಕೂಲ. ಬೆಳೆಗಳ ಸ್ಥಿತಿಗತಿ, ವಿಕೋಪ ನಿರ್ವಹಣೆ, ಚಂಡಮಾರುತ, ಮೇಘಸ್ಫೋಟ ಹಾಗೂ ಗುಡುಗು- ಸಿಡಿಲು ಸಹಿತ ಮಳೆಯ ಮುನ್ಸೂಚನೆಯನ್ನು ಕ್ಷಣಕ್ಷಣಕ್ಕೂ ಪಡೆದುಕೊಳ್ಳಲು ಈ ಯೋಜನೆ ನೆರವಾಗಲಿದೆ.

2. ಜಿಎಸ್‌ಎಲ್‌ವಿ ಹೊತ್ತೊಯ್ದ ಅತಿ ಭಾರದ ಉಪಗ್ರಹ

ಇಸ್ರೋ ಅಧ್ಯಕ್ಷ ನಾರಾಯಣನ್ ಅವರ ಪ್ರಕಾರ, 2367 ಕೆಜಿ ತೂಕದ ಇಒಎಸ್-05 ಉಪಗ್ರಹವು ಜಿಎಸ್‌ಎಲ್‌ವಿ ರಾಕೆಟ್ ಇದುವರೆಗೆ ಹೊತ್ತೊಯ್ದ ಅತ್ಯಂತ ಭಾರವಾದ ಉಪಗ್ರಹ.

51.7 ಮೀಟರ್ ಎತ್ತರದ ಜಿಎಸ್‌ಎಲ್‌ವಿ ಎಫ್-17 ಮೂರು ಹಂತಗಳ ರಾಕೆಟ್ ಆಗಿದ್ದು, 420.5 ಟನ್ ತೂಕ ಹೊಂದಿದೆ. ಇದರ ಮೂರನೇ ಹಂತದಲ್ಲಿ ಕ್ರಯೋಜೆನಿಕ್ ಎಂಜಿನ್ ಬಳಸಲಾಗಿದ್ದು, ಇದು ಸುಮಾರು 2250 ಕೆಜಿ ತೂಕವನ್ನು ಕಕ್ಷೆಗೆ ತಲುಪಿಸುವ ಸಾಮರ್ಥ್ಯ ಹೊಂದಿದೆ. ‌

ಶುಕ್ರವಾರದ ಉಡಾವಣೆಯಲ್ಲಿ ಈ ರಾಕೆಟ್ ಉಪಗ್ರಹವನ್ನು ಸುಮಾರು 29934 ಕಿಲೋಮೀಟರ್ ಎತ್ತರಕ್ಕೆ ತಲುಪಿಸುವ ನಿರೀಕ್ಷೆಯಿತ್ತು, ಆದರೆ ಅದು ಸುಮಾರು 31000 ಕಿಲೋಮೀಟರ್ ಎತ್ತರಕ್ಕೆ ತಲುಪಿಸಿದೆ ಎಂದು ನಾರಾಯಣನ್ ಹೇಳಿದ್ದಾರೆ. ಇಒಎಸ್-05 ಉಪಗ್ರಹದ ಅವಧಿ ಕನಿಷ್ಠ ಏಳು ವರ್ಷಗಳಾಗಿದ್ದು, ಇದು ಒಂಬತ್ತು ವರ್ಷಗಳಿ ಗಿಂತಲೂ ಹೆಚ್ಚು ಕಾಲ ಕಾರ್ಯನಿರ್ವಹಿಸುವ ನಂಬಿಕೆಯಿದೆ ಎಂದು ನಾರಾಯಣನ್ ತಿಳಿಸಿದ್ದಾರೆ.

೩. ಕೃಷಿ, ವಿಕೋಪ ನಿರ್ವಹಣೆಗೆ ಉಪಯುಕ್ತ

ಇಒಎಸ್-05 ಅತ್ಯಾಧುನಿಕ ಭೂ-ಪರಿಶೀಲನಾ ಉಪಗ್ರಹವಾಗಿದ್ದು, ದೃಶ್ಯ, ಇನ್ ಫ್ರಾರೆಡ್, ಮಲ್ಟಿಸ್ಪೆಕ್ಟ್ರಲ್ ಮತ್ತು ಹೈಪರ್ ಸ್ಪೆಕ್ಟ್ರಲ್ ತರಂಗಾಂತರ ಗಳಲ್ಲಿ ಚಿತ್ರಗಳನ್ನು ಸೆರೆ ಹಿಡಿಯುವ ಸಾಮರ್ಥ್ಯ ಹೊಂದಿದೆ. ವಿವಿಧ ತರಂಗಾಂತರಗಳು ಭೂಮಿಯ ಮೇಲ್ಮೈ ಮತ್ತು ವಾತಾವರಣದ ಬೇರೆ ಬೇರೆ ಮಾಹಿತಿಯನ್ನು ನೀಡಬಲ್ಲವು ಎಂಬುದು ಇಲ್ಲಿ ಪ್ರಮುಖ ವಿಷಯ.

ವಿಕೋಪ ನಿರ್ವಹಣೆ ಮಾತ್ರವಲ್ಲದೆ, ಕೃಷಿ, ಅರಣ್ಯ ಸಂಪತ್ತು ಮತ್ತು ಜಲಮೂಲಗಳ ಮೇಲ್ವಿಚಾ ರಣೆಗೆ ಈ ಉಪಗ್ರಹ ನೀಡುವ ಚಿತ್ರಗಳು ಉಪಯುಕ್ತವಾಗಲಿವೆ. ಭೂಸ್ಥಿರ ಕಕ್ಷೆಯಿಂದ ವಿಶಾಲ ಪ್ರದೇಶಗಳ ಮೇಲೆ ನಿರಂತರವಾಗಿ ಕಣ್ಣಿಡಬಲ್ಲ ಇದರ ಸಾಮರ್ಥ್ಯವು ಕ್ಷಿಪ್ರವಾಗಿ ಸಂಭವಿಸುವ ನೈಸರ್ಗಿಕ ವಿಕೋಪಗಳ ಸಮಯದಲ್ಲಿ ಹೆಚ್ಚು ನೆರವಾಗಲಿದೆ. ಈ ಯೋಜನೆಯಲ್ಲಿ ಭಾಗಿಯಾದ ಹಿರಿಯ ವಿeನಿಯೊಬ್ಬರು ಈ ಉಪಗ್ರಹವನ್ನು ‘ಆಕಾಶದಲ್ಲಿರುವ ಕಣ್ಣು’ ಎಂದು ಕರೆದಿದ್ದಾರೆ. ಆದರೆ ಇಸ್ರೋ ಅಧ್ಯಕ್ಷ ನಾ ರಾಯಣನ್ ಅವರು ಇದನ್ನು ‘ ಗೂಢಚಾರ ಉಪಗ್ರಹ’ ಎಂದು ನೋಡಬಾರದು ಎಂದು ಸ್ಪಷ್ಟಪಡಿಸಿದ್ದಾರೆ.

4. 2021ರ ವೈಫಲ್ಯದ ಬಳಿಕ ದೊರೆತ ಯಶಸ್ಸು

2021ರ ಆಗಸ್ಟ್ 12ರಂದು ನಡೆದ ಜಿಎಸ್ ಎಲ್‌ವಿ-ಎಫ್ 10/ಇಒಎಸ್-03 ಯೋಜನೆ ವಿಫಲವಾಗಿತ್ತು. ಶ್ರೀಹರಿಕೋಟಾದಿಂದ ಉಡಾವಣೆಯಾದ ಬಳಿಕ ಕ್ರಯೋಜೆನಿಕ್ ಹಂತವು ಸರಿಯಾಗಿ ಚಾಲನೆಗೊಳ್ಳದ ಕಾರಣ ಆ ಯೋಜನೆ ಕೈಕೊಟ್ಟಿತ್ತು. ಜನವರಿ 12ರಂದು 16 ಉಪಗ್ರಹಗಳನ್ನು ಹೊತ್ತೊಯ್ದಿದ್ದ ಪಿಎಸ್ ಎಲ್‌ವಿ- ಇ62 ಯೋಜನೆಯು, ರಾಕೆಟ್‌ನ ಮೂರನೇ ಹಂತದಲ್ಲಾದ ತಾಂತ್ರಿಕ ದೋಷದಿಂದಾಗಿ ಉಪಗ್ರಹಗಳನ್ನು ನಿಗದಿತ ಕಕ್ಷೆಗೆ ತಲುಪಿ ಸಲು ವಿಫಲವಾಗಿತ್ತು.

ಶುಕ್ರವಾರದ ಈ ಯಶಸ್ಸು, ಮುಂಬರುವ ಸಾಲು ಸಾಲು ಉಡಾವಣೆಗಳ ಹೊಸ್ತಿಲಲ್ಲಿರುವ ಇಸ್ರೋಗೆ ಹೊಸ ಉತ್ಸಾಹ ತುಂಬಿದೆ. ಇಒಎಸ್-05 ಮತ್ತು ಜಿಎಸ್‌ಎಲ್‌ವಿ- ಎಫ್ 17 ಯೋಜನೆಯ ಯಶಸ್ಸು ಕೇವಲ ಮತ್ತೊಂದು ಉಪಗ್ರಹದ ಉಡಾವಣೆ ಮಾತ್ರವಲ್ಲ. ಇದು ಜಿಎಸ್‌ಎಲ್‌ವಿ ರಾಕೆಟ್ ಮತ್ತು ಅದರ ಕ್ರಯೋಜೆನಿಕ್ ಇಂಧನ ವ್ಯವಸ್ಥೆಯ ಕಾರ್ಯಕ್ಷಮತೆ ಹಾಗೂ ನಂಬಿಕೆಯನ್ನು ಹೆಚ್ಚಿಸುವಲ್ಲಿ ಇಸ್ರೋ ಸಾಧಿಸಿದ ಪ್ರಗತಿಯನ್ನು ತೋರಿಸುತ್ತದೆ.

5.ಭೂ ದತ್ತಾಂಶದಲ್ಲಿ ಸಾಮರ್ಥ್ಯ ವೃದ್ಧಿ

ಇಒಎಸ್-05 ಯೋಜನೆಯ ಅತ್ಯಂತ ದೊಡ್ಡ ಮಹತ್ವ ವಿರುವುದು ರಾಷ್ಟ್ರೀಯ ಅಗತ್ಯಗಳಿಗೆ ಬೇಕಾದ ಉನ್ನತ ಮಟ್ಟದ ಡೇಟಾವನ್ನು ದೇಶೀಯ ವಾಗಿಯೇ ಸತತವಾಗಿ ಒದಗಿಸುವ ಸಾಮರ್ಥ್ಯ ದಲ್ಲಿ. ಈ ಉಪಗ್ರಹವು ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆಗೆ ಬಂದ ನಂತರ, ಭೂಸ್ಥಿರ ಕಕ್ಷೆಯಿಂದ ದೇಶಕ್ಕೆ ಅಗತ್ಯವಿರುವ ಅತ್ಯಂತ ಪ್ರಮುಖ ಹಾಗೂ ಕಾರ್ಯತಂತ್ರದ ದತ್ತಾಂಶ ಒದಗಿಸುವ ಭಾರತದ ಮೊದಲ ಪ್ರತ್ಯೇಕ ಚಿತ್ರೀಕರಣ ಉಪಗ್ರಹವಾಗಲಿದೆ ಎಂದು ನಾರಾಯಣನ್ ತಿಳಿಸಿದ್ದಾರೆ.

6) ಮುಂದಿನ ಹೆಜ್ಜೆ ಏನು?

ಮುಂದಿನ ಪ್ರಮುಖ ಯೋಜನೆಗಳಲ್ಲಿ ಭಾರತದ ಮೊದಲ ಮಾನವಸಹಿತ ಬಾಹ್ಯಾಕಾಶ ಯೋಜನೆ ಯಾದ ‘ಗಗನ್‌ಯಾನ ’ ಪ್ರಮುಖವಾದುದು. ಗಗನ್‌ಯಾನ್ ಯೋಜನೆಗಾಗಿ ಈಗಾಗಲೇ ಸುಮಾರು 8000 ಪರೀಕ್ಷೆಗಳನ್ನು ಪೂರ್ಣಗೊಳಿಸಲಾಗಿದೆ. ಮಾನವನ ಸುರಕ್ಷತೆಗೆ ಮೊದಲ ಆದ್ಯತೆ ನೀಡ ಬೇಕಿರುವುದರಿಂದ ಇದು ಅತ್ಯಂತ ಸಂಕೀರ್ಣವಾದ ತಂತ್ರಜ್ಞಾನ ಆಧಾರಿತ ಯೋಜನೆಯಾಗಿದೆ ಎಂದು ನಾರಾಯಣನ್ ವಿವರಿಸಿದ್ದಾರೆ. ಗಗನ್‌ಯಾನ್ ಯೋಜನೆಯ ಭಾಗವಾಗಿ ಮಾನವರನ್ನು ಕಳುಹಿಸುವ ಮುನ್ನ ಮೂರು ಮಾನವರಹಿತ ಬಾಹ್ಯಾಕಾಶ ಯೋಜನೆಗಳನ್ನು ನಡೆಸಲು ಇಸ್ರೋ ಯೋಜಿಸಿದ್ದು, ಮೊದಲ ಮಾನವರಹಿತ ಗಗನ್ ಯಾನ್ ಉಡಾವಣೆಗೆ ಈ ವರ್ಷವೇ ಸಿದ್ಧತೆ ನಡೆಯುತ್ತಿದೆ.