ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishweshwar Bhat Column: ಒಂದು ತಮಾಷೆಯ ಪ್ರಸಂಗ

ಅವಳ ಧ್ವನಿಯಲ್ಲಿ ಆತಂಕವಿರಲಿಲ್ಲ, ಬದಲಿಗೆ ಒಂದು ಆಕರ್ಷಕ ಆಫರ್ ಇತ್ತು. ಆಕೆ ಹೀಗೆ ಘೋಷಿಸಿದಳು- “ಗಮನಿಸಿ ಪ್ರಯಾಣಿಕರೇ, ಇದೇಗೆ ಸಂಭವಿಸಿತು ಎಂದು ನಮಗೆ ಗೊತ್ತಿಲ್ಲ. ಆದರೆ ನಮ್ಮ ವಿಮಾನದಲ್ಲಿ ಒಂದು ಸಣ್ಣ ಸಮಸ್ಯೆಯಾಗಿದೆ. ನಮ್ಮಲ್ಲಿ 200 ಪ್ರಯಾಣಿಕ ರಿದ್ದಾರೆ, ಆದರೆ ಊಟವಿರುವುದು 100 ಜನರಿಗೆ ಮಾತ್ರ. ನಮ್ಮ ಬಳಿ ಊಟದ ಕೊರತೆ ಯಿದೆ".

Vishweshwar Bhat Column: ಒಂದು ತಮಾಷೆಯ ಪ್ರಸಂಗ

-

ಸಂಪಾದಕರ ಸದ್ಯಶೋಧನೆ

ವಿಮಾನ ಪ್ರಯಾಣ ಎಂದರೆ ಕೆಲವರಿಗೆ ಸಂಭ್ರಮ, ಇನ್ನು ಕೆಲವರಿಗೆ ಆತಂಕ. ಆದರೆ ದೀರ್ಘಾವಧಿಯ ಪ್ರಯಾಣದಲ್ಲಿ ಎಲ್ಲರಿಗೂ ಸಮಾನವಾಗಿ ಕಾಡುವ ಒಂದು ವಿಷಯ ವೆಂದರೆ ಅದು ‘ಹಸಿವು’. ಅದರಲ್ಲೂ ಗಂಟೆಗಟ್ಟಲೆ ಆಕಾಶದಲ್ಲಿ ಹಾರುವಾಗ, ವಿಮಾನ ಯಾನ ಸಂಸ್ಥೆಗಳು ನೀಡುವ ಊಟದ ಮೇಲೆ ಪ್ರಯಾಣಿಕರಿಗೆ ಎಲ್ಲಿಲ್ಲದ ನಿರೀಕ್ಷೆ ಇರುತ್ತದೆ.

ಹೆಲ್ಸಿಂಕಿಯಿಂದ ಟೊರೊಂಟೊಗೆ ಹೊರಟಿದ್ದ ವಿಮಾನವೊಂದರಲ್ಲಿ ನಡೆದ ಈ ಪ್ರಸಂಗ, ಬಿಕ್ಕಟ್ಟಿನ ಸಮಯವನ್ನು ಹೇಗೆ ಹಾಸ್ಯವಾಗಿ ಮತ್ತು ಲಾಭದಾಯಕವಾಗಿ ಬದಲಾಯಿಸ ಬಹುದು ಎಂಬುದಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ. ಅದು ಫಿನ್‌ಲ್ಯಾಂಡ್‌ನ ಹೆಲ್ಸಿಂಕಿ ಯಿಂದ ಕೆನಡಾದ ಟೊರೊಂಟೊಗೆ ಹೊರಟಿದ್ದ ಅಂತಾರಾಷ್ಟ್ರೀಯ ವಿಮಾನ. ಸುಮಾರು ೮ ರಿಂದ ೯ ಗಂಟೆಗಳ ದೀರ್ಘ ಪ್ರಯಾಣ.

ವಿಮಾನದಲ್ಲಿ ಒಟ್ಟು 200 ಪ್ರಯಾಣಿಕರಿದ್ದರು. ವಿಮಾನ ಟೇಕಾಫ್ ಆಗಿ ಆಕಾಶದಲ್ಲಿ ಹಾರಲು ಆರಂಭಿಸಿತು. ಎಲ್ಲವೂ ಸರಿಯಾಗಿಯೇ ಇದೆ ಎಂದುಕೊಳ್ಳುವಷ್ಟರಲ್ಲಿ, ವಿಮಾನದ ಅಡುಗೆ ವಿಭಾಗದಲ್ಲಿ ಸಿಬ್ಬಂದಿಗಳಿಗೆ ಒಂದು ಆಘಾತಕಾರಿ ಸತ್ಯ ತಿಳಿದು‌ ಬಂತು.

ಇದನ್ನೂ ಓದಿ: ‌Vishweshwar Bhat Column: ಮಂಜುಗಡ್ಡೆ ಅಡಿಯಲ್ಲಿ ಏರ್‌ಬಸ್

ವಿಮಾನದಲ್ಲಿ 200 ಪ್ರಯಾಣಿಕರಿದ್ದರೂ, ಕ್ಯಾಟರಿಂಗ್ ವಿಭಾಗದವರು ಮಾಡಿದ ಭಾರಿ ಎಡವಟ್ಟಿನಿಂದಾಗಿ 100 ಊಟದ ಪ್ಯಾಕೆಟ್‌ಗಳು ಮಾತ್ರ ಲೋಡ್ ಆಗಿದ್ದವು! ಅಂದರೆ, ಅರ್ಧದಷ್ಟು ಜನರಿಗೆ ಊಟವೇ ಇರಲಿಲ್ಲ. ಇದು ಸಾಮಾನ್ಯ ವಿಷಯವಾಗಿರಲಿಲ್ಲ. ದೀರ್ಘ ಪ್ರಯಾಣದಲ್ಲಿ ಹಸಿದ ಪ್ರಯಾಣಿಕರಿಗೆ ಊಟ ಇಲ್ಲ ಎಂದು ಹೇಳುವುದು ಸಿಂಹದ ಗುಹೆಗೆ ಹೋಗಿ ಅದನ್ನು ಕೆಣಕಿದಂತೆ. ಹಸಿದ ಮನುಷ್ಯ ಕೋಪಗೊಳ್ಳುವುದು ಸಹಜ.

ಪ್ರಯಾಣಿಕರು ಗಲಾಟೆ ಮಾಡಬಹುದು, ವಿಮಾನಯಾನ ಸಂಸ್ಥೆಯ ವಿರುದ್ಧ ದೂರು ನೀಡಬಹುದು ಅಥವಾ ಪರಿಸ್ಥಿತಿ ವಿಕೋಪಕ್ಕೆ ಹೋಗಬಹುದು ಎಂಬ ಭಯ ಸಿಬ್ಬಂದಿ ಗಳನ್ನು ಕಾಡತೊಡಗಿತು. ಈ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ, ಏನು ಮಾಡುವುದೆಂದು ತೋಚ ದೇ ಸಿಬ್ಬಂದಿ ಕಂಗಾಲಾಗಿದ್ದರು.

ಆಗ ಒಬ್ಬ ಅನುಭವಿ ಮತ್ತು ಚುರುಕು ಬುದ್ಧಿಯ ಗಗನಸಖಿ ಮುಂದೆ ಬಂದಳು. ಸಮಸ್ಯೆ ಯನ್ನು ನೇರವಾಗಿ ಹೇಳಿ ಬೈಗುಳ ತಿನ್ನುವ ಬದಲು, ಮನುಷ್ಯರ ಸಹಜ ದೌರ್ಬಲ್ಯ ಮತ್ತು ಆಸೆಯನ್ನು ಬಳಸಿಕೊಂಡು ಈ ಸಮಸ್ಯೆಯನ್ನು ಬಗೆಹರಿಸಲು ನಿರ್ಧರಿಸಿದಳು. ಅವಳು ಒಂದು ಅದ್ಭುತವಾದ ಯೋಜನೆಯನ್ನು ರೂಪಿಸಿದಳು. ವಿಮಾನ ಹಾರಾಟ ಆರಂಭಿಸಿ ಸುಮಾರು ಅರ್ಧ ಗಂಟೆಯಾಗಿತ್ತು. ಆ ಗಗನಸಖಿ ಮೈಕ್ ತೆಗೆದುಕೊಂಡು ಪ್ರಯಾಣಿಕರನ್ನು ಉದ್ದೇಶಿಸಿ ಮಾತನಾಡಲು ಶುರು ಮಾಡಿದಳು.

ಅವಳ ಧ್ವನಿಯಲ್ಲಿ ಆತಂಕವಿರಲಿಲ್ಲ, ಬದಲಿಗೆ ಒಂದು ಆಕರ್ಷಕ ಆಫರ್ ಇತ್ತು. ಆಕೆ ಹೀಗೆ ಘೋಷಿಸಿದಳು- “ಗಮನಿಸಿ ಪ್ರಯಾಣಿಕರೇ, ಇದೇಗೆ ಸಂಭವಿಸಿತು ಎಂದು ನಮಗೆ ಗೊತ್ತಿಲ್ಲ. ಆದರೆ ನಮ್ಮ ವಿಮಾನದಲ್ಲಿ ಒಂದು ಸಣ್ಣ ಸಮಸ್ಯೆಯಾಗಿದೆ. ನಮ್ಮಲ್ಲಿ 200 ಪ್ರಯಾಣಿಕ ರಿದ್ದಾರೆ, ಆದರೆ ಊಟವಿರುವುದು 100 ಜನರಿಗೆ ಮಾತ್ರ. ನಮ್ಮ ಬಳಿ ಊಟದ ಕೊರತೆ ಯಿದೆ". ಇದನ್ನು ಕೇಳಿ ಪ್ರಯಾಣಿಕರು ಮುಖಮುಖ ನೋಡಿಕೊಳ್ಳಲು ಆರಂಭಿಸಿದರು. ಆದರೆ ಗಗನಸಖಿ ಮಾತು ಮುಂದುವರಿಸಿ, ತನ್ನ ಮಾಸ್ಟರ್ ಸ್ಟ್ರೋಕ್ ಅನ್ನು ಪ್ರಯೋಗಿಸಿ ದಳು- “ಹಾಗಾಗಿ, ನಮ್ಮದೊಂದು ವಿನಂತಿ ಮತ್ತು ಆಫರ್ ಇದೆ. ನಿಮ್ಮಲ್ಲಿ ಯಾರಾದರೂ ದಯೆ ತೋರಿ, ತಮ್ಮ ಸಹಪ್ರಯಾಣಿಕರಿಗಾಗಿ ತಮ್ಮ ಊಟವನ್ನು ತ್ಯಾಗ ಮಾಡಲು ಸಿದ್ಧರಿದ್ದರೆ, ಅಂಥ ‘ತ್ಯಾಗಜೀವಿ’ಗಳಿಗೆ ಈ ಸಂಪೂರ್ಣ ಪ್ರಯಾಣದ ಅವಧಿಯಲ್ಲಿ ನಮ್ಮ ಕಡೆಯಿಂದ ಅನಿಯಮಿತವಾಗಿ ಉಚಿತ ವೈನ್ ನೀಡಲಾಗುವುದು! ನೀವು ಎಷ್ಟು ಬೇಕಾದರೂ ಕುಡಿಯಬಹುದು".

ಈ ಘೋಷಣೆ ಕೇಳಿದ ತಕ್ಷಣ ವಿಮಾನದ ವಾತಾವರಣವೇ ಬದಲಾಯಿತು. ಪ್ರಯಾಣಿಕರ ಮನಸ್ಸಿನಲ್ಲಿದ್ದ ಹಸಿವು ಮಾಯವಾಗಿ, ಅದರ ಜಾಗದಲ್ಲಿ ‘ಉಚಿತ ವೈನ್’ನ ಆಸೆ ಚಿಗುರೊ ಡೆಯಿತು. ಪ್ರಯಾಣಿಕರು ಹೀಗೆ ಲೆಕ್ಕಾ ಚಾರ ಹಾಕಲು ಶುರುಮಾಡಿದರು- ‘ವಿಮಾನದ ಊಟ ಹೇಗೂ ಸಾಧಾರಣವಾಗಿರುತ್ತದೆ, ಅದರ ಬೆಲೆ ಹೆಚ್ಚೆಂದರೆ ಹತ್ತು ಡಾಲರ್ ಇರಬಹುದು. ಆದರೆ ಹೆಲ್ಸಿಂಕಿಯಿಂದ ಟೊರೊಂಟೊ ತಲುಪಲು ಇನ್ನೂ 6-7 ಗಂಟೆಗಳಿವೆ. ಅಷ್ಟು ಹೊತ್ತು ಉಚಿತವಾಗಿ, ನಮಗಿಷ್ಟ ಬಂದಷ್ಟು ದುಬಾರಿ ವೈನ್ ಕುಡಿಯುವ ಅವಕಾಶ ಸಿಗುವುದು ಅಪರೂಪದಲ್ಲಿ ಅಪರೂಪ....’. ಮುಂದಿನ ೬ ಗಂಟೆಗಳ ಕಾಲ ವಿಮಾನದಲ್ಲಿ ಹಬ್ಬದ ವಾತಾವರಣವಿತ್ತು.

ಸಿಬ್ಬಂದಿಗಳು ಅಂದುಕೊಂಡಂತೆ ಯಾರು ಕೂಡ ಊಟ ಕೇಳಲಿಲ್ಲ, ಬದಲಿಗೆ ಎಲ್ಲರೂ ವೈನ್ ಗ್ಲಾಸ್ ಹಿಡಿದು ಚಿಲ್ ಮಾಡುತ್ತಿದ್ದರು. ಸಮಸ್ಯೆಯಾಗಬೇಕಿದ್ದ ಸನ್ನಿವೇಶ ಒಂದು ಪಾರ್ಟಿಯಂತೆ ಬದಲಾಗಿತ್ತು.