Ravi Hunj Column: ಅಷ್ಟಕ್ಕೂ, ಲಿಂಗಾಯತ ಮತ್ತು ಇಸ್ಲಾಂ ಧರ್ಮ ಒಂದೇನಾ ? ಏನಿದರ ಹಕೀಕತ್ ?
ಲಿಂಗಾಯತವು ಸ್ಥಾವರಗಳ, ಮೂರ್ತಿಗಳ ಗೊಡವೆ ಬೇಡ ಎಂದರೆ ಇಸ್ಲಾಂ ಸಹ ಮೂರ್ತಿಪೂಜೆ ಯನ್ನು ಅಲ್ಲಗಳೆಯುತ್ತದೆ. ಅವರಲ್ಲಿ ಜಕಾತ್ ಇದೆ, ನಮ್ಮಲ್ಲಿ ದಾಸೋಹವಿದೆ. ಅವರಂತೆಯೇ ನಾವು ಸಹ ಮಣ್ಣು ಮಾಡುವ ಶವಸಂಸ್ಕಾರ ಹೊಂದಿದ್ದೇವೆ. ಅವರಲ್ಲೂ ಆಹಾರ ನಿಯಮಗಳಿವೆ. ನಮ್ಮಲ್ಲೂ ಸಮುದ್ರದ ಉಪ್ಪು ತಿನ್ನಬಾರದು ಎಂಬುದಲ್ಲದೇ ಹಲವಾರು ಆಹಾರ ನಿಯಮಗಳಿವೆ.


ಬಸವ ಮಂಟಪ
ರವಿ ಹಂಜ್
ಚೆನ್ನಬಸವಣ್ಣನ ‘ಕರಣ ಹಸಿಗೆ’ ಮುಂತಾದ ವಚನೇತರ ಸಾಹಿತ್ಯವನ್ನು ಅರ್ಥ ಮಾಡಿ ಕೊಳ್ಳುವ ಶಕ್ತಿ ಇಲ್ಲದೆ ಅದನ್ನು ತಿರಸ್ಕರಿಸಿ ಮುಂದೆ ಚೆನ್ನಬಸವಣ್ಣ, ಅಲ್ಲಮಪ್ರಭು, ಮಹಾ ದೇವಿಯರನ್ನು ಬಹಿಷ್ಕರಿಸಲಿರುವ ನವಲಿಂಗಾಯತದ ಧುರೀಣರಿಗೆ ಮೊದಲು ಬಸವಣ್ಣನ ಒಂದು ವಚನದಲ್ಲಿ ಮುಸ್ಲಿಮರ ಪರೋಕ್ಷ ಉಖವಿದೆ ಎಂಬ ಅರಿವಿದ್ದಂತಿಲ್ಲ. ಈ ವಚನ ವನ್ನು ಓದಿದರೆ ಬಸವಣ್ಣನಿಗೆ ಇಸ್ಲಾಂ ಬಗ್ಗೆ ಯಾವ ಅಭಿಪ್ರಾಯವಿದ್ದಿತು ಎಂದು ಮೇಲ್ನೋಟಕ್ಕೆ ಕಂಡುಬರುತ್ತದೆ.
ಲಿಂಗಾಯತ ಧರ್ಮ ಮತ್ತು ಇಸ್ಲಾಂ ಧರ್ಮ ಒಂದೇ ಇದ್ದಂತೆ! ಲಿಂಗಾಯತವೂ ಇಸ್ಲಾಮಿನಂತೆ ಬಹುದೇವತಾ ಆರಾಧನೆಯನ್ನು ಆಲ್ಲಗಳೆಯುತ್ತದೆ. ಇಷ್ಟಲಿಂಗ ಪೂಜೆಯನ್ನು ನಿಷ್ಠೆಯಿಂದ ಮಾಡಬೇಕು ಎಂದು ಬಸವಣ್ಣ ಹೇಳಿದ್ದರೆ, ಮೊಹಮ್ಮದ್ ಪೈಗಂಬರ್ ಅವರೂ ‘ಅಹು ಒಬ್ಬನನ್ನೇ ಧ್ಯಾನಿಸು’ ಎಂದು ಹೇಳಿದ್ದಾರೆ.
ಲಿಂಗಾಯತವು ಸ್ಥಾವರಗಳ, ಮೂರ್ತಿಗಳ ಗೊಡವೆ ಬೇಡ ಎಂದರೆ ಇಸ್ಲಾಂ ಸಹ ಮೂರ್ತಿಪೂಜೆ ಯನ್ನು ಅಲ್ಲಗಳೆಯುತ್ತದೆ. ಅವರಲ್ಲಿ ಜಕಾತ್ ಇದೆ, ನಮ್ಮಲ್ಲಿ ದಾಸೋಹವಿದೆ. ಅವರಂತೆಯೇ ನಾವು ಸಹ ಮಣ್ಣು ಮಾಡುವ ಶವಸಂಸ್ಕಾರ ಹೊಂದಿದ್ದೇವೆ. ಅವರಲ್ಲೂ ಆಹಾರ ನಿಯಮಗಳಿವೆ. ನಮ್ಮಲ್ಲೂ ಸಮುದ್ರದ ಉಪ್ಪು ತಿನ್ನಬಾರದು ಎಂಬುದಲ್ಲದೇ ಹಲವಾರು ಆಹಾರ ನಿಯಮಗಳಿವೆ.
ಅವರ ಗುಂಬಜ್ ರೀತಿಯಲ್ಲಿಯೇ ನಮ್ಮ ಕರಡಿಗೆಯ ಆಕಾರವಿರುವುದು. ಬಿಜಾಪುರ ಸುಲ್ತಾನನಿಗೆ ಲಿಂಗಾಯತರು ಸಹಕಾರ ನೀಡಿದ ಕಾರಣವೇ ಅವನು ವಿಜಯನಗರದ ಅರಸರನ್ನು ಸೋಲಿಸಿ ಅಲ್ಲಿಂದ ಲೂಟಿ ಮಾಡಿ ತಂದ ಬೆಳ್ಳಿಯಲ್ಲಿ ಲಿಂಗಾಯತರಿಗೆ ಬೆಳ್ಳಿ ಕರಡಿಗೆಗಳನ್ನು ಮಾಡಿಸಿಕೊಟ್ಟ. ಅದಕ್ಕೆ ಪ್ರತಿಯಾಗಿ ಲಿಂಗಾಯತರು ಶಿವಲಿಂಗದ ಆಕಾರದಲ್ಲಿದ್ದ ಲಿಂಗಕ್ಕೆ ಕಂತೆ ಕಟ್ಟಿಸಿ ಲಿಂಗಾಕಾರವನ್ನು ನಿರಾಕಾರ ಮಾಡಿದರು" ಇತ್ಯಾದಿಯಾಗಿ ಅಂತೆಕಂತೆಗಳ ಸಂಶೋಧನೆಗಳ ವ್ಯಾಖ್ಯಾನವನ್ನು ಈಗ ಲಿಂಗಾಹತ ಸಂಶೋಧಿಗರು ಮಂಡಿಸಿ ಮುಸ್ಲಿಂ ಬಾಂಧವರನ್ನು ಒಳಗೊಳ್ಳುವ ಪ್ರಕ್ರಿಯೆಯನ್ನು ಆರಂಭಿಸಿದ್ದಾರೆ.

ಕೆಲವು ತಿಂಗಳುಗಳ ಹಿಂದೆ “ಲಿಂಗಾಯತ ಧರ್ಮ ಮತ್ತು ಇಸ್ಲಾಂ ಧರ್ಮ ಒಂದೇ" ಎಂದು ಜಾತಿಪೀಠಿ ಪಂಡಿತಶ್ರೀಗಳು ಇದಕ್ಕೆ ಪೀಠಿಕೆ ಹಾಕಿದ್ದರೆ ಈಗ ಲಿಂಗಾಹತಿಗಳ ವಕ್ತಾರ ಪಾಟೀಲ ಎನ್ನುವವರು ಇದನ್ನು ವರ್ಣಮಯ ಭಾಷೆಯಲ್ಲಿ ಚಿತ್ರೀಕರಿಸಿ ಪ್ರಸಾರ ಮಾಡುತ್ತಿದ್ದಾರೆ.
ಇವರು ನವ್ಯ ಲಿಂಗಾಯತ ಪ್ರತ್ಯೇಕ ಧರ್ಮ ಪ್ರಣೀತ ಲಿಂಗಾಹತ ಭಂಜಕ ನೀತಿಗೆ ಬದ್ಧರಾಗಿ ಹೀಗೆ ಹೇಳಿದ್ದಾರೆಯೇ ಹೊರತು ಯಾವುದೇ ಆಳ ಅಧ್ಯಯನದಿಂದಲ್ಲ. ಏಕೆಂದರೆ ಇವರ ಮತ್ತು ಲಿಂಗಾಹತ ಪ್ರತ್ಯೇಕ ಧರ್ಮ ಎನ್ನುವವರ ಗೊಂದಲಗಳ ಇಬ್ಬಗೆಯನ್ನು ಜಗತ್ತು ಆಗಲೇ ಬಲ್ಲದು. “ಉರುಳುತ್ತಿರುವವನಿಗೆ ಹುಲ್ಲುಕಡ್ಡಿಯೂ ಆಸರೆ" ಎಂಬಂತೆ ಇವರು ಸಂತಾಪ ಗಿಟ್ಟಿಸಲೋ, ಬೆಂಬಲ ಕೋರಿಯೋ ಒಟ್ಟಾರೆ ಈಗ ಮುಸ್ಲಿಮರ ಹಿಂದೆ ಬಿದ್ದಿzರೆ. ಅವರಂತೆಯೇ ತಾವು ಕೂಡ ಲಿಂಗಾಹತಿಗಳು ಎಂಬ “ಕಣ್ಣರಿಯದಿದ್ದರೂ ಕರುಳರಿಯದೇ" ಎಂಬ ಕರುಳ ಕರೆ ಇದಾಗಿರಲೂಬಹುದು.
ಚೆನ್ನಬಸವಣ್ಣನ ‘ಕರಣ ಹಸಿಗೆ’ ಮುಂತಾದ ವಚನೇತರ ಸಾಹಿತ್ಯವನ್ನು ಅರ್ಥಮಾಡಿಕೊಳ್ಳುವ ಶಕ್ತಿ ಇಲ್ಲದೆ ಅದನ್ನು ತಿರಸ್ಕರಿಸಿ ಮುಂದೆ ಚೆನ್ನಬಸವಣ್ಣ, ಅಲ್ಲಮಪ್ರಭು, ಮಹಾದೇವಿಯರನ್ನು ಬಹಿಷ್ಕರಿಸಲಿರುವ ನವಲಿಂಗಾಯತದ ಧುರೀಣರಿಗೆ ಮೊದಲು ಬಸವಣ್ಣನ ಒಂದು ವಚನದಲ್ಲಿ ಮುಸ್ಲಿಮರ ಪರೋಕ್ಷ ಉಲ್ಲೇಖವಿದೆ ಎಂಬ ಅರಿವಿದ್ದಂತಿಲ್ಲ. ಈ ವಚನವನ್ನು ಓದಿದರೆ ಬಸವಣ್ಣ ನಿಗೆ ಇಸ್ಲಾಂ ಬಗ್ಗೆ ಯಾವ ಅಭಿಪ್ರಾಯವಿದ್ದಿತು ಎಂದು ಮೇಲ್ನೋಟಕ್ಕೆ ಕಂಡುಬರುತ್ತದೆ.
ಇದನ್ನೂ ಓದಿ: Ravi Hunj Column: ಪಿನಿಯಲ್ ಗ್ರಂಥಿಯ ಸ್ರವಿಕೆ ಯಾನೆ ʼಸ್ಖಲನʼದ ಮೇಲೊಂದು ನೋಟ..!
ಮೊದಲಿಗೆ ಬಸವಣ್ಣನ ವಚನವನ್ನು ಕಂಡುಕೊಂಡು ನಂತರ ಚೆನ್ನಬಸವಣ್ಣನ ಕಾಲಜ್ಞಾನ ವಚನವನ್ನು ಪರಾಂಬರಿಸೋಣ: “ಗಾಂಧಾರಿ ಮಾಂಧಾರಿಯೆಂಬ ಅಹೋರಾತ್ರಿಯಲ್ಲಿ ಲಿಂಗವ ಪೂಜಿಸಬೇಕು. ಊರ ಕೋಳಿ ಕೂಗದ ಮುನ್ನ, ಕಾಡ ನವಿಲು ಒದರದ ಮುನ್ನ, ಲಿಂಗವ ಪೂಜಿಸಬೇಕು. ‘ಗೋವುಗಳ ಕೊಲುವ ಪಾಪಿಯ ದನಿಯ ಕೇಳದ ಮುನ್ನ’, ತುಂಬಿ ಮುಟ್ಟಿ ಪುಷ್ಪ ನಿರ್ಮಾಲ್ಯವಾಗದ ಮುನ್ನ ಲಿಂಗವ ಪೂಜಿಸಬೇಕು.
ಅದೆಂತೆಂದಡೆ ‘ಯೋ ಲಿಂಗಮರ್ಧರಾತ್ರಾ ತು ಶುಚಿರ್ಭೂತ್ವಾ ಪ್ರಪೂಜಯೇತ್ ಅಗ್ನಿಷ್ಟೋಮ ಸಹಸ್ರಸ್ಯ ಧರ್ಮಸ್ಯ ಲಭತೇ ಫಲಂ’ ಎಂದುದಾಗಿ, ಶುದ್ಧಾಂತಃಕರಣನಾಗಿ ಶಿವಪೂಜೆಯ ಮಾಡಬೇಕು, ಆತಂಗೆ ಅಗ್ನಿಷ್ಟೋಮ ಸಹಸ್ರ-ಲವಹುದು. ತನ್ನೊಡನೆ ಮಲಗಿರ್ದ ಸತಿಯನೆಬ್ಬಿಸದೆ ಶಿವಲಿಂಗಕ್ಕೆರೆವ ಸದ್ಭಕ್ತನ ಶ್ರೀಪಾದವ ತೋರಿ ಬದುಕಿಸಯ್ಯಾ, ಕೂಡಲಸಂಗಮದೇವಾ".
ಇಲ್ಲಿ ಬಸವಣ್ಣ ಸ್ಪಷ್ಟವಾಗಿ, ‘ಗೋವುಗಳ ಕೊಲುವ ಪಾಪಿಯ ದನಿಯ ಕೇಳದ ಮುನ್ನ’ ಎಂದು ಯಾವ ಅರ್ಥದಲ್ಲಿ ಹೇಳಿದ್ದಾನೆ ಎಂಬ ಕನಿಷ್ಠ ಸಾಮಾನ್ಯ eನವೂ ಇಲ್ಲದೆ ಒಬ್ಬರು ಸ್ವಾಮಿಗಳೆನಿಸಿ ‘ಮತ್ತೆ ಕಲ್ಯಾಣ’ ಎಂದು ನಿತ್ಯಕಲ್ಯಾಣ ಮಾಡುತ್ತಿದ್ದರೆ, ಇನ್ನೋರ್ವ ಭೀಷಣಶೂರ ಸಂಶೋಧಕ ನೆನಿಸಿದ್ದಾರೆ! ಇವರ ವಚನ ವ್ಯಾಖ್ಯಾನದ ನಿಜದರ್ಶನ ಹೀಗೆ ಅದಷ್ಟಕ್ಕೆ ಅದೇ ಅನಾವರಣ ವಾಗುತ್ತಿದೆ.
ಇರಲಿ, ಇಸ್ಲಾಂ ಖಲಿಂದರರೂ ವೀರಶೈವ ಸತ್ಪುರುಷರ ಭಕ್ತರೇ ಆಗಿದ್ದರು ಎಂದು ‘ಚೆನ್ನಬಸವ ಪುರಾಣ’ ಹೇಳುತ್ತದೆ. ಅದು ರಾಜಾಡಳಿತದ ರಾಜಸೂತ್ರವಾಗಿ ಇತ್ತೇ ಹೊರತು ಇನ್ಯಾವ ಧರ್ಮ ಸಾಮ್ಯತೆಯಿಂದಲ್ಲ ಎಂದು ಬಸವಣ್ಣನ ವಚನ ಮತ್ತು ಚೆನ್ನಬಸವಣ್ಣನ ಕಾಲeನ ವಚನಗಳು ಹೇಳುತ್ತವೆ: “ವರಖಲಿಂದರರೇಳುನೂರ್ವರ್ಗೆ ಗುರುವಾಗಿ| ಹರುಷದಿಂ ಮಖ್ಯಕ್ಕೆ ಪೋಗಿ ಮಹಿಮೆಯ ತೋರಿ| ತುರುಕಾಣ್ಯದೊಳಾನ್ಯವೃಷ್ಟಿದೋಷಮ್ ಬಂದು ಪಸರಿಸೆ ಪವಾಡದಿಂದೆ || ವರುಷಮಂ ಸುರಿಸಿ ಸುರಿತಾಳನಿಂ ಪೂಜೆಯಂ| ಪಿರಿದಾಗಿ ಕೈಕೊಂಡು ಘನತರದ ಕೀರ್ತಿಯಂ| ಧರಿಸಲೆಂದಿತ್ತ ಮಳೆಯ ಮಶನೆಂದೆಂಬ ನಾಮವನಾಂತನು......" ಮೇಲಿನ ಚರಣವು ವಿರುಪಾಕ್ಷ ಪಂಡಿತ ವಿರಚಿತ ‘ಚೆನ್ನಬಸವ ಪುರಾಣ’ದ ಒಂದನೇ ಕಾಂಡದ ಮೊದಲನೇ ಸಂಧಿಯಲ್ಲಿ ಬರುತ್ತದೆ.
ಈ ಪುರಾಣದ ಪ್ರಕಾರ ಶಿವನು ಮಹಾಶರಣರಿಗೆ ಗುರುವೆನಿಸಿ ಲೋಕಸಂಚಾರಿಯಾಗಿ ಪವಾಡ ಗಳನ್ನು ಮೆರೆಯುತ್ತ ಮಕ್ಕೆಗೆ (ಮಕ್ಕಾ) ಹೋಗಿ ತುರುಕಾಣ್ಯದಲ್ಲಿ (ಅರೇಬಿಯಾ) ಉಂಟಾಗಿದ್ದ ಅನಾವೃಷ್ಟಿಯನ್ನು ನೀಗಿಸಿ ಮಳೆಯ ಸುರಿಸಿ ಅಲ್ಲಿನ ಸುರಿತಾಳನಿಗೆ (ಸುಲ್ತಾನನಿಗೆ) ಲಿಂಗದೀಕ್ಷೆ ಕೊಟ್ಟು ಅವನಿಂದ ಪೂಜೆಯನ್ನು ಕೈಕೊಂಡು ‘ಮಳೆಯ ಮಶ’ ಎಂಬ ಹೆಸರು ಪಡೆದನು.
ಹೀಗೆ ಶೈವವು ಖುದ್ದು ಶಿವನ ಮುಖಾಂತರವೇ ಮಕ್ಕಾ ತಲುಪಿದೆ. ಇದಿಷ್ಟು ಪುರಾಣ ಕಥನವಾದ ಕಾರಣ ವೈeನಿಕ ಸಂಶೋಧಕರು ಈ ಕುರಿತು ಏನು ಹೇಳಿzರೆ? “ಅಲ್ಲಮ ಎಂದರೆ ಅಹುವಿನ ಮಾ ಯಾನೆ ಅಮ್ಮಾ ಎಂದರ್ಥ! ಇಸ್ಲಾಮಿನ ತಾಯಿ ನಮ್ಮದೇ ಶೈವ ಪಂಥ! ಪಶುಪಾಲಕ ಅಲೆಮಾರಿಗಳ ಇಸ್ಲಾಮಿನ ಅನೇಕ ಆಚರಣೆಗಳು ನಮ್ಮ ಪಶುಪಾಲಕ ಶೈವ ಮೂಲದ ಆಚರಣೆಗಳಿಂದ ಪ್ರಭಾವಿತಗೊಂಡಿವೆ. ಹಾಗಾಗಿಯೇ ಶೈವಕ್ಕೂ ಇಸ್ಲಾಮಿಗೂ ಅವಿನಾಭಾವ ಸಂಬಂಧವಿದೆ" ಎಂದು ಎಲ್.ಬಸವರಾಜು ಸೇರಿದಂತೆ ಕೆಲವು ಸಂಶೋಧಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆದರೆ ಹನ್ನೊಂದನೇ ಶತಮಾನದ ‘ಹುಟ್ಟಿನಿಂದ ಜಾತಿ’ನೀತಿಯ ನಂತರದ ಪಲ್ಲಟದ ಲಿಂಗಾಯತರ ಆಹಾರ ಪದ್ಧತಿ ಮತ್ತು ಜಾತಿಪದ್ಧತಿಯ ಬಿಸಿಯಪ್ಪುಗೆಯ ಭೀಕರ ಭಿನ್ನತೆಯ ಕಾರಣ ಈ ಸಂಶೋಧನಾ ಅಭಿಪ್ರಾಯವನ್ನು ಮೌನವಾಗಿಸಿ ಈ ಹಿನ್ನೆಲೆಯ ಸಂಶೋಧನೆಗಳು ಮುಂದುವರಿಯದಂತೆ ಮಾಡಲಾಯಿತು. ಈ ಮೌನವಾಗಿಸುವ ಕ್ರಮದಲ್ಲಿ ಎರಡೂ ಮತಗಳ ಆಚರಣೆಯಲ್ಲಿರುವ ಸಾಮ್ಯತೆಯನ್ನು ಇತಿಹಾಸದುದ್ದಕ್ಕೂ ಇರಾನಿನಿಂದ ಶ್ರೀಲಂಕಾವರೆಗಿನ ಏಷ್ಯಾ ಭಾಗದ ಎ ಮತಧರ್ಮಗಳಲ್ಲಿಯೂ ಕಾಣಬಹುದಾಗಿದೆ.
ಪುರಾಣದ ಶಿವನು ಮಕ್ಕಾದಲ್ಲಿ ತೋರಿದ ಪವಾಡ ನಿಜವೇ? ಏನಾದರೂ ಐತಿಹ್ಯದ ಕುರುಹು ಇದೆಯೇ? ಅಬ್ರಹಾಂನಿಗೆ ದೇವರು ಕೊಟ್ಟ ಕಲ್ಲೇ ಕಾಬಾದಲ್ಲಿರುವ ಕಲ್ಲು ಎನ್ನುವ ವಾದದೊಂದಿಗೆ ಇತರೆ ಅನೇಕ ವಾದಗಳು ಕಾಬಾ ಕಪ್ಪು ಶಿಲೆಯ ಕುರಿತಿವೆ. ಕ್ರಿ.ಶ.1853ರಲ್ಲಿ ಇದನ್ನು ನೋಡಿದ್ದ ರಿಚರ್ಡ್ ಬರ್ಟನ್, “ಅಂಡಾಕೃತಿ ಆಕಾರದ ಕಪ್ಪನೆಯ ಲೋಹಮಿಶ್ರಿತದಂತಿದ್ದ ಈ ಕಲ್ಲನ್ನು ದುಂಡನೆಯ ಲೋಹದ ಪೀಠದ ಮಧ್ಯದಲ್ಲಿ ಎರಡು ಇಂಚುಗಳಷ್ಟು ಹುಗಿದಿರಿಸಲಾಗಿತ್ತು" ಎಂದಿದ್ದಾನೆ.
ಅಂದರೆ ಶಿವಲಿಂಗವು ದುಂಡಾಕೃತಿಯ ಪೀಠದಲ್ಲಿರುತ್ತದಲ್ಲ ಹಾಗೆ. ಈಗ ಇದನ್ನು ಕಾಬಾ ಕಟ್ಟಡದಲ್ಲಿ ಹುದುಗಿಸಿ ಒಂದು ಕಿಂಡಿಯ ಮೂಲಕ ಮಾತ್ರ ನೋಡಬಹುದು ಮತ್ತು ಮುಟ್ಟ ಬಹುದು ಎನ್ನಲಾಗಿದೆ. ಒಟ್ಟಾರೆ ಇದು ಪವಿತ್ರ ಪೂಜಾರ್ಹ ವಸ್ತು. ಇದನ್ನು ಮುಸ್ಲಿಮೇತರರು ನೋಡಲಾಗದು.
ಹಾಗಾಗಿ ಇದು ಶಿವಲಿಂಗವೋ, ಆಕಾಶದಿಂದ ಉದುರಿದ ಉಲ್ಕೆಯ ತುಂಡೋ, ಮತ್ತೊಂದೋ ಸದ್ಯಕ್ಕೆ ಯಾವುದೇ ಪ್ರಯೋಗಕ್ಕಾಗಲಿ ಸಂಶೋಧನೆಗಾಗಲಿ ಲಭ್ಯವಿರದ ವಸ್ತು! ಈ ಪವಿತ್ರ ಕಪ್ಪು ಶಿಲೆಯೇ ನಮ್ಮ ಶಿವಲಿಂಗ ಎಂದು ಹಿಂದೂ ಪಂಡಿತರು ವಾದಿಸುತ್ತಾರೆ. ಅದನ್ನು ಸಾಬೀತು ಪಡಿಸಲು ಯಾವುದೇ ಅವಕಾಶವಿರಲಿ, ಮುಸ್ಲಿಮೇತರರು ಅದನ್ನು ನೋಡುವುದೂ ಸಾಧ್ಯವಿರದ ಕಾರಣ ಇದು ಅನಿರ್ಧರಿತ ಅಂಶ.
ಹರಪ್ಪಾ ಮೊಹೆಂಜೋದಾರೋ ನಾಗರಿಕತೆಯಲ್ಲಿ ಸಿಕ್ಕಿದ್ದ ಧರಿಸಬಹುದಾದ ಶಿವಲಿಂಗಗಳು ಆಗಲೇ ಜಾರಿಯಿದ್ದ ವೀರಶೈವದ ಪ್ರತೀಕ! ಇಂಥ ಸಾಕ್ಷಿಯ ಪ್ರಾಚೀನತೆ, ಪರಂಪರೆಯನ್ನು ಧಿಕ್ಕರಿಸಿ ಕೇವಲ ವೈಯಕ್ತಿಕ ಲಾಭಕ್ಕೆ, ರಾಜಕಾರಣಿಗಳ ಭಿಕ್ಷೆಗೆ ಹನ್ನೆರಡನೇ ಶತಮಾನದ ಸಂಕಥನ ಕಟ್ಟುವ ನಿತ್ಯಕಲ್ಯಾಣಿಗಳ ರೋದನೆ ಯಾವ ಮಟ್ಟಕ್ಕೆ ಕುಸಿದಿದೆ ಎಂಬುದು ಇಪ್ಪತ್ತೊಂದನೇ ಶತಮಾನದ ಗಾಂಪಾದ್ಬುತ ವಿಸ್ಮಯ ಎಂದಷ್ಟೇ ಶರಣಾಗಬಹುದು!
ಅದೇನೇ ಆದರೂ ಈ ಎ ವಾದ, ಕಥನ, ಸಂಕಥನ, ಪುರಾಣಗಳಾಚೆಯ ಸತ್ಯವೇನೆಂದರೆ, ಕಾಬಾ ಕಲ್ಲು ಶಿವಲಿಂಗವೆನ್ನುತ್ತ ಅದಕ್ಕೆ ಕಬಾಲೀಶ್ವರನೆಂದು ಕರೆದು ಹಕ್ಕೊತ್ತಾಯ ಮಂಡಿಸುವ ಹಿಂದೂಗಳು, ಮೂರ್ತಿಪೂಜೆ ಖಂಡಿಸಿದರೂ ಕಾಬಾ ಕಲ್ಲು ಪೂಜಿಸುತ್ತಾರೆನ್ನುವ ಮುಸ್ಲಿಮರು, ಶಿವಸ್ವರೂಪ ಲಿಂಗವನ್ನು ಅಂಗದ ಮೇಲೆ ಧರಿಸಿ ಶಿವಲಿಂಗಗಳನ್ನು ಪೂಜಿಸುತ್ತಾ ನಾವು ನಿರೀಶ್ವರವಾದಿಗಳು ಎನ್ನುವ ಲಿಂಗಾಯತರೆಲ್ಲರೂ ಶತಶತಮಾನಗಳಿಂದ ಪಂಥಶ್ರೇಷ್ಠತೆಗೆ ಬಡಿದಾಡಿದ/ದಾಡುತ್ತಿರುವ ಒಂದೇ ಬಳ್ಳಿಯ ಹೂಗಳು! ಏಕೆಂದರೆ ಎಲ್ಲರೂ ಒಂದೊಮ್ಮೆಯ ಪ್ರಕೃತಿ ಆರಾಧನೆಯ ಹಿನ್ನೆಲೆಯ ವಿಶಾಲ ಸಿಂಧೂ ನಾಗರಿಕತೆಯ ನಾಗರಿಕರೇ ಆಗಿದ್ದರು.
ಶತಶತಮಾನಗಳ ಪಂಥಶ್ರೇಷ್ಠತೆಯ ವ್ಯಸನವೇ ಇಂದಿನ ಇಪ್ಪತ್ತೊಂದನೇ ಶತಮಾನದಲ್ಲಿಯೂ ಮುಂದುವರಿದಿರುವುದು ಮಾತ್ರ ಮಾನವಧರ್ಮದ ವಿಪರ್ಯಾಸ. ಆದರೆ ‘ಕಾರ್ಯವಾಸಿ ಕತ್ತೆ ಕಾಲು ಹಿಡಿ’ ಎಂಬಂತೆ ಈ ಉರುಳುವ ಬಂಡೆಗಳು ಆಸರೆಗಾಗಿ ಚಡಪಡಿಸುತ್ತಿರುವುದು ಅವರ ದುರಿತ ಕಾಲದ ದುರಂತ. ಹೀಗೆ ಸದ್ಯಕ್ಕೆ ಲಿಂಗಾಹತಿಗಳು ಶ್ರೇಷ್ಠತೆಯ ಊದುವಿಕೆಯನ್ನು ಬಿಟ್ಟು ಪ್ರತ್ಯೇಕತೆಯ ಬಾರಿಸುವಿಕೆಗೆ ಪಲ್ಲಟಗೊಂಡಿದ್ದಾರಷ್ಟೇ.
ಇನ್ನು ಚೆನ್ನಬಸವಣ್ಣನ ಕಾಲeನ ವಚನವೊಂದು ಹೀಗಿದೆ: “ಪಂಚಾಶತ್ ಕೋಟಿ ಭೂಮಂಡಲದ ಮಧ್ಯದಲ್ಲಿ ಪೃಥ್ವಿಗೆ ಕೈಲಾಸಮಪ್ಪ ಶ್ರೀಶೈಲದ ಮಲ್ಲಿಕಾರ್ಜುನ ದೇವರ ಮೂಡಲ ಬಾಗಿಲು ಮುಚ್ಚೀತು. ಮನುಷ್ಯರ ರಕ್ತ ಬಿದ್ದೀತು. ಸುರೆಯ ಗಡಿಗೆ ಮಾರೀತು. ವೇಶಿಯರ ಗುಡಿಸಲು ಕಟ್ಟೀತು. ಅಲ್ಲಿ ನಾನಾ ವಿಕಾರಂಗಳಾದಾವು. ಎಪ್ಪತ್ತೇಳು ದುರ್ಗಗಳು ಅಪವರ್ಗವಾದಾರು. ವಿರೂಪಾಕ್ಷ ಕೆಟ್ಟು ಮೂವತ್ತೆರಡು ಕೊಟ್ಟವಾದಾವು. ಮನ್ಮಥಕೊಂಡ ಹೂಳೀತು.
ಯವನರ ಬಲವೆದ್ದೀತು. ಶಂಭು ತ್ರಿಪುರಾಂತಕದೇವರ ಮುಂದಣ ಅನುಭವಮಂಟಪದಲ್ಲಿ ಕಪಿಲೆಯ ಬಾಣಸವ ಮಾಡ್ಕಾರು. ನಂದಿಕಂಭ ಮುರಿದಾರು. ಅಲ್ಲಿ ಗೋರಿಯನ್ನಿಕ್ಕಿ ಲಕ್ಷದ ಮೇಲೆ ತೊಂಬತ್ತಾರು ಸಾವಿರ ಕುದುರೆ ಕಮ್ಮಟದಲ್ಲಿ ಮಡಿದೀತು. ಆ ಬಲ ಆರಾದೀತು. ಆರು ಮೂರಾದೀತು.
ಮೂರು ಎರಡಾದೀತು. ಎರಡು ಒಂದಾದೀತು. ಭಕ್ತರು ಜಂಗಮದ ಕೈಸೇವೆಯ ಮಾಡಿಸಿ ಕೊಂಡಾರು. ನಿಜಭಕ್ತಿಯ ಮರೆತಾರು. ದಾಕ್ಷಿಣ್ಯ ಭಕ್ತಿಯ ಮಾಡ್ಯಾರು. ಕ್ರಿಯೆಗಳಂ ಬಿಟ್ಟಾರು. ಅನೇಕ ನೇಮಂಗಳಂ ಮಾಡ್ಯಾರು ಪ್ರಸಾದವಂ ಮರೆತಾರು. ಮನೆಯ ಹಿರಿಯರಂ ಮರೆತಾರು. ಜಂಗಮರ ನಿಂದ್ಯವಂ ಮಾಡ್ಯಾರು. ಮತ್ತೆ ಜಂಗಮದ ಪ್ರಸಾದವಂ ಕೊಂಡಾರು. ಭಸಿತ ರುದ್ರಾಕ್ಷಿಯಂ ತೊಟ್ಟಾರು.
ವಿಷಯಂಗಳೊಳಗೆ ಮುಳುಗಾಡ್ಯಾರು. ಹದಿನೆಂಟು ಜಾತಿ ಒಂದಾಗಿ ಉಂಡಾರು. ಕುಲಕ್ಕೆ ಹೋರಾಡ್ಯಾರು. ಅನೃತವ ನುಡಿದಾರು. ಅನೃತಕ್ಕೆ ಗುದ್ದಾಡ್ಯಾರು. ನಮ್ಮ ಶರಣರ ಹಿಂದೆ ಹಲವು ದೂರನಾಡ್ಯಾರು. ನಮ್ಮ ಪುರಾತರ ಶರಣರು ಬೀಜಕ್ಕೊಬ್ಬ ರುಳಿದಾರು.
ಷಡುದರುಶನ ಕೆಟ್ಟಾವು..". ಚೆನ್ನಬಸವಣ್ಣನ ಕಾಲeನ ಭವಿಷ್ಯದಂತೆಯೇ ಲಿಂಗಾಹತಿಗಳ ವ್ಯವಹಾರ ನಡೆಯುತ್ತಿದೆ. ಕಲ್ಯಾಣದ ಅನುಭವ ಮಂಟಪದಲ್ಲಿ ಗೋರಿಯನ್ನಿಕ್ಕಿ ಕಪಿಲೆಯ ಬಾಣಸವನ್ನು ಮಾಡುತ್ತಿದ್ದಾರೆ. ಲಿಂಗಾಹತಿಗಳು ಅನೃತವ ನುಡಿಯುತ್ತಿzರೆ. ಅನೃತಕ್ಕೆ ಗುದ್ದಾಡುತ್ತಿದ್ದಾರೆ. ಜಂಗಮರ ನಿಂದನೆ ಮಾಡುತ್ತಿದ್ದಾರೆ.
ಶರಣರ ಹುಟ್ಟನ್ನು ಹಿಡಿದು ನಿಂದೆಯಾಡಿzರೆ. (ಎಂ.ಎಂ.ಕಲಬುರ್ಗಿಯವರು ಚೆನ್ನಬಸವಣ್ಣನ ಹುಟ್ಟಿನ ಬಗ್ಗೆ ಆಡಿದ ಮಾತು, ಮತ್ತು ಅಲ್ಲಮ ಅಕ್ಕಮಹಾದೇವಿಯವರ ಬಗ್ಗೆ ಆಡಿದ ಗುಸುಗುಸು ಮಾತು). ಹೀಗೆ ಇಡೀ ಚೆನ್ನಬಸವಣ್ಣನ ಕಾಲeನ ವಚನವು ಭವಿಷ್ಯದಲ್ಲಿ ಸತ್ಯವಾಗಿ ಅನಾವರಣಗೊಂಡಿದೆ.
“ನಮ್ಮ ಪುರಾತರ ಶರಣರು ಬೀಜಕ್ಕೊಬ್ಬರುಳಿದಾರು" ಎಂಬ ಮಾತಿನಂತೆ ಸದ್ಯಕ್ಕೆ ಗಟ್ಟಿಯಾಗಿ ಮಾತನಾಡುವ ಒಬ್ಬ ಪುರಾತನರ ವಿಶ್ಲೇಷಕ ದೇಶಾಂತರ ತೆರಳಿ ಮರುದೀಕ್ಷೆ ಪಡೆದು ‘ವಿಶ್ವವಾಣಿ ಯಾಗಿ ದನಿಯೆತ್ತಿದ್ದಾನೆ ಎಂಬುದು ಸದ್ಯದ ವರ್ತಮಾನವಾಗುತ್ತಿರುವ ಚೆನ್ನಬಸವಣ್ಣನ ಕಾಲ ಜ್ಞಾನವೇ ಏನೋ!
ಮುಂದೆ ಇದೇ ಚೆನ್ನಬಸವಣ್ಣನ ಕಾಲಜ್ಞಾನ ವಚನದಂತೆಯೇ ಲಿಂಗಾಹತಿಗಳ ಸಂಕಥನ ನೆಗೆದು ಬಿದ್ದು ಸತ್ಯನಿಷ್ಠೆಯ ವೀರಶೈವವು ವಿಜೃಂಭಿಸಲಿದೆ. ಅನುಮಾನವಿದ್ದವರು ಚೆನ್ನ ಬಸವಣ್ಣನ ಕಾಲಜ್ಞಾನ ವಚನವನ್ನು ಪರಾಂಬರಿಸಬಹುದು. ಆದರೆ ಅದನ್ನು ಅರ್ಥೈಸಿ ಹೇಳುವುದು ಕೋಡಿ ಮಠದ ಹೊತ್ತಿಗೆ ನೋಡಿ ಅರ್ಥೈಸುವಷ್ಟೇ ಕಠಿಣ ಪರಿಶ್ರಮದ ಸಾಧನೆ ಎಂದಷ್ಟೇ ಸದ್ಯಕ್ಕೆ ಹೇಳಬಹುದು.
(ಲೇಖಕರು ಶಿಕಾಗೊ ನಿವಾಸಿ ಮತ್ತು ಸಾಹಿತಿ)