ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Ranjith H Ashwath Column: ಸಮುದಾಯದ ನಾಯಕತ್ವಕ್ಕೆ ʼಕೈʼನಲ್ಲಿ ಪೈಪೋಟಿ !

ಯಾವುದೇ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆಯಿಂದ ಹಿಡಿದು, ಚುನಾವಣಾ ಪ್ರಚಾರದಲ್ಲಿ ಯಾರು ಭಾಗವಹಿಸಬೇಕು ಎನ್ನುವುದೂ ಸಹ ಬಹುತೇಕ ಸಮಯದಲ್ಲಿ ಇದೇ ಜಾತಿ-ಧರ್ಮದ ಮೇಲೆ ತೀರ್ಮಾನ ವಾಗುತ್ತದೆ. ಕೆಲ ದಿನಗಳ ಹಿಂದೆ ಮುಕ್ತಾಯಗೊಂಡ ಉಪಚುನಾವಣೆಯ ವಿಷಯದಲ್ಲಿಯೂ ಇದೇ ಜಾತಿ-ಧರ್ಮದ ವಿಷಯದಲ್ಲಿ ಶುರುವಾದ ಗದ್ದಲ, ಇದೀಗ ಆಡಳಿತಾ ರೂಢ ಕಾಂಗ್ರೆಸ್‌ನಲ್ಲಿ ಜ್ವಾಲೆ ಯಾಗಿ ಉರಿಯುತ್ತಿದೆ ಎಂದರೆ ತಪ್ಪಾಗುವುದಿಲ್ಲ.

Ranjith H Ashwath Column: ಸಮುದಾಯದ ನಾಯಕತ್ವಕ್ಕೆ ʼಕೈʼನಲ್ಲಿ ಪೈಪೋಟಿ !

-

ಅಶ್ವತ್ಥಕಟ್ಟೆ

ಸಲೀಂ ಅಹ್ಮದ್, ರಿಜ್ವಾನ್ ಅರ್ಷದ್ ಸೇರಿದಂತೆ ಹಲವು ಮುಸ್ಲಿಂ ನಾಯಕರು ಸುದ್ದಿಗೋಷ್ಠಿ ನಡೆಸಿ, ‘ತಮ್ಮ ಪಕ್ಷದ ಹಿರಿಯ ನಾಯಕರಿಂದಲೇ ಪಕ್ಷದ ಅಭ್ಯರ್ಥಿ ವಿರುದ್ಧ ಷಡ್ಯಂತ್ರ ನಡೆದಿದೆ’ ಎಂದು ಆರೋಪಿಸಿದರು. ಈ ಸುದ್ದಿಗೋಷ್ಠಿಯ ಬೆನ್ನಿಗೆ ಅಬ್ದುಲ್ ಜಬ್ಬರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಆಗಿತ್ತು. ಇದೀಗ ನಾಸೀರ್ ಅಹ್ಮದ್ ರಾಜೀನಾಮೆಯೂ ಖಚಿತವಾಗಿದೆ ಎಂದು ಕೇಳಿ ಬರುತ್ತಿದೆ.

ಪ್ರಜಾಪ್ರಭುತ್ವ ದೇಶವಾಗಿರುವ ಭಾರತದ ಸಂವಿಧಾನದ ಪೀಠಿಕೆಯಲ್ಲಿಯೇ ‘ಜಾತ್ಯತೀತ’ ದೇಶ ವೆಂದು ಒಪ್ಪಿಕೊಂಡಿದ್ದರೂ, ನಮ್ಮಲ್ಲಿ ಜಾತಿ ಮೀರಿ ಯೋಚಿಸಲು ಸಾಧ್ಯವೇ ಇಲ್ಲ ಎನ್ನುವ ಸ್ಥಿತಿ ಯಿದೆ. ದೇಶದಲ್ಲಿ ಪ್ರತಿ ಹೆಜ್ಜೆಯಿಡುವಾಗಲೂ, ಅದಕ್ಕೆ ಜಾತಿ ಅಥವಾ ಧರ್ಮದ ನೆರಳು ಬೀರು ವುದು ಸುಳ್ಳಲ್ಲ. ಅದರಲ್ಲಿಯೂ ರಾಜಕೀಯ ರಂಗದ, ಪ್ರವೇಶದಿಂದ ಹಿಡಿದು ನಿರ್ಗಮನ ದವರೆಗೆ ಈ ಲೆಕ್ಕಾಚಾರದಲ್ಲಿಯೇ ನಡೆಯುವುದು ನಿಶ್ಚಿತ.

ಜಾತಿ-ಧರ್ಮ ಮೀರಿದ ಆಲೋಚನೆಗಳಿರಬೇಕೆಂದು ಉದ್ದುದ್ದ ಭಾಷಣ ಮಾಡಿದರೂ, ಅಂತಿಮ ವಾಗಿ ‘ಇವ ಯಾವ ಜಾತಿ’ಯವನೆಂದೇ ಆಲೋಚನೆ ಮಾಡುವುದನ್ನು ನೋಡಿದ್ದೇವೆ.

ಯಾವುದೇ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆಯಿಂದ ಹಿಡಿದು, ಚುನಾವಣಾ ಪ್ರಚಾರದಲ್ಲಿ ಯಾರು ಭಾಗವಹಿಸಬೇಕು ಎನ್ನುವುದೂ ಸಹ ಬಹುತೇಕ ಸಮಯದಲ್ಲಿ ಇದೇ ಜಾತಿ-ಧರ್ಮದ ಮೇಲೆ ತೀರ್ಮಾನವಾಗುತ್ತದೆ. ಕೆಲ ದಿನಗಳ ಹಿಂದೆ ಮುಕ್ತಾಯಗೊಂಡ ಉಪಚುನಾವಣೆಯ ವಿಷಯದಲ್ಲಿಯೂ ಇದೇ ಜಾತಿ-ಧರ್ಮದ ವಿಷಯದಲ್ಲಿ ಶುರುವಾದ ಗದ್ದಲ, ಇದೀಗ ಆಡಳಿತಾ ರೂಢ ಕಾಂಗ್ರೆಸ್‌ನಲ್ಲಿ ಜ್ವಾಲೆಯಾಗಿ ಉರಿಯುತ್ತಿದೆ ಎಂದರೆ ತಪ್ಪಾಗುವುದಿಲ್ಲ.

ಅದರಲ್ಲಿಯೂ ಅನುಕಂಪದ ಆಧಾರದಲ್ಲಿ ‘ಸುಲಭ’ಕ್ಕೆ ಗೆಲ್ಲಬಹುದಾಗಿದ್ದ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಅಭ್ಯರ್ಥಿ ಆಯ್ಕೆ ವಿಷಯದಲ್ಲಿನ ಗೊಂದಲ, ಗಲಾಟೆ, ವಿವಾದದಿಂದ ಗೆಲ್ಲುವುದು ಸಾಧ್ಯವೇ? ಎನ್ನುವ ಆತಂಕಕ್ಕೆ ಕಾಂಗ್ರೆಸ್‌ನ್ನು ದೂಡುವ ಹಂತಕ್ಕೆ ಬಂದು ನಿಂತಿದೆ.

ಹಾಗೇ ನೋಡಿದರೆ, ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ಆಯ್ಕೆಯಾಗಿದ್ದ ಶಾಮನೂರು ಶಿವಶಂಕರಪ್ಪ ಅವರು ನಿಧನಗೊಂಡ ದಿನದಿಂದಲೂ ಈ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿಷಯದಲ್ಲಿ ಸಮಸ್ಯೆ ಯಾಗುತ್ತದೆ ಎನ್ನುವುದು ನಿರೀಕ್ಷಿಸಲಾಗಿತ್ತು.

ಇದನ್ನೂ ಓದಿ: Ranjith H Ashwath Column: ಒಳಯೇಟಿನ ಆತಂಕದಲ್ಲಿದೆಯೇ ಕಾಂಗ್ರೆಸ್‌ ?

ಏಕೆಂದರೆ, ಶಿವಶಂಕರಪ್ಪ ಬಳಿಕ ಈ ಕ್ಷೇತ್ರಕ್ಕೆ ಮುಸ್ಲಿಂರನ್ನು ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಮಾಡಬೇಕು, ಅದರಲ್ಲಿಯೂ ಅಬ್ದುಲ್ ಜಬ್ಬರ್ ಅವರನ್ನೇ ಮಾಡಬೇಕು ಎನ್ನುವ ಹಠ ಕಾಂಗ್ರೆಸ್‌ನ ಕೆಲ ಮುಸ್ಲಿಂ ನಾಯಕರು ಹಿಡಿದಿದ್ದರು. ಆದರೆ ಹಾಲಿ ಶಾಸಕರು ಮೃತಪಟ್ಟಾಗ ನಡೆಯುವ ಉಪಚುನಾವಣೆಗೆ ಅವರ ಕುಟುಂಬದ ಸದಸ್ಯರಿಗೆ ನೀಡಬೇಕು ಎನ್ನುವ ಅಲಿಖಿತ ನಿಯಮವನ್ನು ಕಾಂಗ್ರೆಸ್ ಮಾಡಿಕೊಂಡು ಬಂದಿರುವುದರಿಂದ ಹಾಗೂ ಎಸ್.ಎಸ್.ಮಲ್ಲಿಕಾರ್ಜುನ ತಮ್ಮ ತಂದೆಯ ಟಿಕೆಟ್ ಮಗನಿಗೆ ಸಿಗಬೇಕು ಎಂದು ಪಟ್ಟು ಹಿಡಿದಿದ್ದರಿಂದ ಗೊಂದಲ ಶುರುವಾಯಿತು.

ಆರಂಭದಲ್ಲಿ ಮುಸ್ಲಿಂ ನಾಯಕರೆಲ್ಲ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ಸಿಗಬೇಕೆಂದು ಹಠಕ್ಕೆ ಬಿದ್ದರೂ, ಸಮರ್ಥ್‌ಗೆ ಟಿಕೆಟ್ ನೀಡುತ್ತಿದ್ದಂತೆ ಜಮೀರ್ ಅಹ್ಮದ್, ನಾಸೀರ್ ಅಹ್ಮದ್ ಹಾಗೂ ಅಬ್ದುಲ್ ಜಬ್ಬರ್ ಹೊರತುಪಡಿಸಿ ಬಹುತೇಕ ಮುಸ್ಲಿಂ ನಾಯಕರು ಸಮರ್ಥ್ ಪರ ಪ್ರಚಾರಕ್ಕೆ ಇಳಿದಿದ್ದರು, ಇದೀಗ ಚುನಾವಣಾ ಮತದಾನವೂ ಮುಕ್ತಾಯವಾಗಿದೆ.

ಮತದಾನದ ಬಳಿಕ ಕಳೆದ ಶುಕ್ರವಾರ ಕೆಪಿಸಿಸಿ ಕಚೇರಿಯಲ್ಲಿ ಮುಸ್ಲಿಂ ನಾಯಕರಾದ ಸಲೀಂ ಅಹ್ಮದ್, ರಿಜ್ವಾನ್ ಅರ್ಷದ್, ಯಾಸೀರ್ ಪಠಾಣ್ ಸೇರಿದಂತೆ ಹಲವು ಮುಸ್ಲಿಂ ನಾಯಕರು ಸುದ್ದಿ ಗೋಷ್ಠಿ ನಡೆಸಿ, ‘ತಮ್ಮ ಪಕ್ಷದ ಹಿರಿಯ ನಾಯಕರಿಂದಲೇ ಪಕ್ಷದ ಅಭ್ಯರ್ಥಿ ವಿರುದ್ಧ ಷಡ್ಯಂತ್ರ ನಡೆದಿದೆ’ ಎಂದು ಆರೋಪಿಸಿದರು.

ಯಾವ ಹೆಸರನ್ನು ಪ್ರಸ್ತಾಪಿಸದಿದ್ದರೂ, ಈ ಆರೋಪ ನೇರವಾಗಿ ಸಚಿವ ಜಮೀರ್ ಅಹ್ಮದ್, ನಾಸೀರ್ ಅಹ್ಮದ್ ಹಾಗೂ ಅಬ್ದುಲ್ ಜಬ್ಬರ್ ವಿರುದ್ಧ ಮಾಡಿದ್ದು ಎನ್ನುವುದು ಸ್ಪಷ್ಟವಾಗಿದೆ. ಈ ಸುದ್ದಿಗೋಷ್ಠಿಯ ಬೆನ್ನಿಗೆ ಅಬ್ದುಲ್ ಜಬ್ಬರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಆಗಿತ್ತು. ಇದೀಗ ನಾಸೀರ್ ಅಹ್ಮದ್ ರಾಜೀನಾಮೆಯ ಕುರಿತು ಗುಸು-ಗುಸು ಕೇಳಿಬರುತ್ತಿದೆ. ಈ ಮೂಲಕ ಕಾಂಗ್ರೆಸ್ ಮುಸ್ಲಿಂ ನಾಯಕರಲ್ಲಿ ‘ಅಸಮಾಧಾನ’ ಬಹುದೊಡ್ಡ ಪ್ರಮಾಣದಲ್ಲಿ ಎನ್ನುವುದು ಸ್ಪಷ್ಟ.

congress-1_MP ok

ಮೇಲ್ನೋಟಕ್ಕೆ ದಾವಣಗೆರೆ ದಕ್ಷಿಣ ಕ್ಷೇತ್ರದ ವಿಷಯದಲ್ಲಿ ಶುರುವಾದ ಗೊಂದಲದ ನೆಪದಲ್ಲಿ ಕಾಂಗ್ರೆಸ್ ಮುಸ್ಲಿಂ ನಾಯಕರುಗಳ ನಡುವೆ ಕಿತ್ತಾಟ ಆರಂಭವಾಗಿದೆ. ಆದರೆ ಹಲವು ವರ್ಷಗಳಿಂದ ಕಾಂಗ್ರೆಸ್‌ನಲ್ಲಿ ಮುಸ್ಲಿಂ ನಾಯಕತ್ವವನ್ನು ಯಾರು ವಹಿಸಿಕೊಳ್ಳಬೇಕು ಎನ್ನುವ ವಿಷಯದಲ್ಲಿ ಈ ಕಿತ್ತಾಟ ಇದ್ದೇ ಇದೆ.

2018 ಲ್ಲಿ ಜಮೀರ್ ಅಹ್ಮದ್ ಜೆಡಿಎಸ್'ನಿಂದ ಕಾಂಗ್ರೆಸ್ ಬಂದಾಗಿನಿಂದ ಈ ಕಿತ್ತಾಟ ಶುರು ವಾಗಿದ್ದರೂ, ಬಹಿರಂಗವಾಗಲು ಶುರುವಾಗಿದ್ದು ಇತ್ತೀಚಿನ ವರ್ಷಗಳಲ್ಲಿ. ಈ ರೀತಿ ಸಮುದಾಯದ ನಾಯಕರಲ್ಲಿಯೇ, ಕಿತ್ತಾಟಕ್ಕೆ ಕಾರಣವೇನೆಂದು ನೋಡಿದರೆ ಸಿಗುವುದು ಮಾತ್ರ ‘ಮತಬ್ಯಾಂಕ್’ ರಾಜಕಾರಣ.

ಕರ್ನಾಟಕ ಮಾತ್ರವಲ್ಲದೇ ಇಡೀ ದೇಶದಲ್ಲಿ ಕಾಂಗ್ರೆಸ್'ನೊಂದಿಗೆ ಈಗಲೂ ಗಟ್ಟಿಯಾಗಿ ನಿಂತಿರುವ ಸಮುದಾಯದ ಪೈಕಿ ಮುಸ್ಲಿಮರು ಮೊದಲ ಪಂಕ್ತಿಯಲ್ಲಿ ನಿಲ್ಲುತ್ತಾರೆ. ದೇಶದಲ್ಲಿ ದಿನದಿಂದ ದಿನಕ್ಕೆ ಕಾಂಗ್ರೆಸ್ ನಂಬಿಕೆ ಕಳೆದುಕೊಳ್ಳುತ್ತಿದ್ದರೂ, ಕರ್ನಾಟಕದಲ್ಲಿ ಮುಸ್ಲಿಮರು ಈಗಲೂ ಅನಿವಾರ್ಯತೆಗೆ ಸಿಲುಕಿ ಕಾಂಗ್ರೆಸ್‌ನೊಂದಿಗಿದ್ದಾರೆ. ಆದರೆ ಮುಸ್ಲಿಮರಿಂದ ಈ ಪ್ರಮಾಣದ ಬೆಂಬಲ ದೊರೆಯುತ್ತಿದ್ದರೂ ಟಿಕೆಟ್ ನೀಡುವ ವಿಚಾರ ಮಾತ್ರ ಟಿಕೆಟ್ ನೀಡುವ ವಿಷಯದಲ್ಲಿ ಈಗಲೂ ಬಹುದೊಡ್ಡ ಸಂಖ್ಯೆಯಲ್ಲಿಲ್ಲ.

ಒಂಬತ್ತು ವಿಧಾನಸಭಾ ಸದಸ್ಯರು, ನಾಲ್ಕು ವಿಧಾನಪರಿಷತ್ ಸದಸ್ಯರನ್ನು ಆಡಳಿತಾರೂಢ ಕಾಂಗ್ರೆಸ್ ಹೊಂದಿದೆ. ಆದರೆ ರಾಜಕೀಯವಾಗಿ ನೋಡುವುದಾದರೆ ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಯನ್ನು ಹೊರತುಪಡಿಸಿದರೆ ಮುಸ್ಲಿಮರು ಪ್ರಮುಖ ಪಾತ್ರ ವಹಿಸುತ್ತಾರೆ.

ಜಾತಿ ಗಣತಿಯ ಪ್ರಕಾರ ರಾಜ್ಯದಲ್ಲಿ ಸುಮಾರು ಒಂದರಿಂದ 1.10 ಕೋಟಿ ಮುಸ್ಲಿಂ ಮತದಾರರಿzರೆ. ರಾಜ್ಯದ 40ರಿಂದ 45 ಕ್ಷೇತ್ರಗಳಲ್ಲಿ ನಿರ್ಣಾಯಕ ಪಾತ್ರವನ್ನು ಮುಸ್ಲಿಂ ಮತದಾರರು ವಹಿಸುತ್ತಾರೆ. ಆದರೆ ಇತರೆ ರಾಜ್ಯಗಳನ್ನು ಮೀರಿ, ಕರ್ನಾಟಕದಲ್ಲಿ ಮುಸ್ಲಿಂ ಮತಗಳು ಬಹುದೊಡ್ಡ ಪ್ರಮಾಣ ದಲ್ಲಿ ಹರಿದು ಹಂಚಿ ಹೋಗಲು ಅವಕಾಶವಿಲ್ಲ.

ಏಕೆಂದರೆ, ಬಿಜೆಪಿಯೊಂದಿಗೆ ಬಹು ಮುಸ್ಲಿಮರು ಕಾಣಿಸಿಕೊಳ್ಳುವುದಿಲ್ಲ. ಇನ್ನು ಈ ಹಿಂದೆ ಜೆಡಿಎಸ್ ಮುಸ್ಲಿಂ ಮತಗಳನ್ನು ಸೆಳೆಯುವ ಆತಂಕ ಕಾಂಗ್ರೆಸ್‌ಗಿತ್ತು. ಆದರೆ, ಬಿಜೆಪಿಯೊಂದಿಗೆ ಮೈತ್ರಿ ಮಾಡಿರುವ ಕಾರಣಕ್ಕೆ ಜೆಡಿಎಸ್ ಚಿಂತೆ ಕಾಂಗ್ರೆಸ್ ನಾಯಕರಿಗೆ ಇಲ್ಲವಾಗಿದೆ. ಓವೈಸಿ, ಎಸ್‌ಡಿಪಿಐಗೆ ರಾಜ್ಯ ರಾಜಕಾರಣದಲ್ಲಿ ಬಹುದೊಡ್ಡ ಅವಕಾಶ ಸದ್ಯದ ಮಟ್ಟಿಗಂತೂ ಇಲ್ಲವಾಗಿ ರುವುದರಿಂದ, ಮುಂದಿನ ಎರಡು ವಿಧಾನಸಭಾ ಚುನಾವಣೆವರೆಗಾದರೂ ಕಾಂಗ್ರೆಸ್‌ಗೆ ಮುಸ್ಲಿಂ ಮತ ವಿಭಜನೆಯ ಆತಂಕವಿಲ್ಲ.

ಇಷ್ಟೆಲ್ಲ ಅನುಕೂಲವಿದ್ದರೂ, ಕರ್ನಾಟಕ ಕಾಂಗ್ರೆಸ್‌ನಲ್ಲಿ ಈಗಲೂ ಮುಸ್ಲಿಂ ಸಮುದಾಯದ ವಿಷಯದಲ್ಲಿ ಬಹುದೊಡ್ಡ ಶೂನ್ಯತೆ ಸೃಷ್ಟಿಯಾಗಿದೆ ಎಂದರೆ ಸುಳ್ಳಲ್ಲ. ಜಾಫರ್ ಶರೀಫ್, ಅವರಿದ್ದಾಗ ಇಡೀ ಸಮುದಾಯದ ನಾಯ‌ಕತ್ವವನ್ನು ಅವರು ವಹಿಸಿಕೊಂಡಿದ್ದರು. ಸದ್ಯ ಕೆ. ರೆಹಮಾನ್ ಖಾನ್ ಅವರಿದ್ದರೂ, ವಯಸ್ಸಿನ ಕಾರಣಕ್ಕೆ ಈ ಹಿಂದಿನಂತೆ ಸಮುದಾಯವನ್ನು ಸಂಘಟಿಸಲು ಸಾಧ್ಯವಾಗುತ್ತಿಲ್ಲ. ಈ ನಡುವೆ ರೋಷನ್ ಬೇಗ್ ಅವರು ಸಮುದಾಯವನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಪಾತ್ರವಹಿಸುತ್ತಿದ್ದರು.

ಆದರೆ ಅವರು ಪಕ್ಷದಿಂದ ಅಂತರ ಕಾಯ್ದುಕೊಂಡ ಬಳಿಕ ಈ ಸ್ಥಾನವನ್ನು ಇನ್ಯಾರು ಏರಬೇಕು ಎನ್ನುವ ಪ್ರಶ್ನೆ ಬಂದಾಗಲೇ, ಎರಡನೇ ಹಾಗೂ ಮೂರನೇ ಹಂತದ ನಾಯಕರಲ್ಲಿ ಪೈಪೋಟಿ ಶುರುವಾಗಿರುವುದು. ಈ ಸ್ಥಾನವನ್ನು ಯಾರು ಪಡೆಯಲಿದ್ದಾರೆ ಎನ್ನುವುದಕ್ಕೆ ಹಲವು ವರ್ಷ ಗಳಿಂದ ಉತ್ತರ ಹುಡುಕುವ ಪ್ರಯತ್ನದಲ್ಲಿ ನಾಯಕರಿದ್ದಾರೆ.

ಕಾಂಗ್ರೆಸ್‌ನಲ್ಲಿ ಮುಸ್ಲಿಂ ನಾಯಕರಿಗೇನು ಕೊರತೆ ಇಲ್ಲ. ಆದರೆ ರಾಜ್ಯಾದ್ಯಂತ ಇಡೀ ಸಮುದಾಯ ವನ್ನು ತೆಗೆದುಕೊಂಡು ಹೋಗುವ ನಾಯಕ ಯಾರು ಎನ್ನುವ ಪ್ರಶ್ನೆ ಬಂದಾಗ ಸ್ಪಷ್ಟ ಉತ್ತರ ದೊರೆಯುತ್ತಿಲ್ಲ. ಈ ಹಿಂದೆ ಯು.ಟಿ.ಖಾದರ್ ಅವರನ್ನು ಮುನ್ನೆಲೆಗೆ ತರಲು ವಿಧಾನಸಭಾ ಪ್ರತಿಪಕ್ಷ ಉಪನಾಯಕರನ್ನಾಗಿ ಮಾಡಲಾಗಿತ್ತು. ಆದರೆ ಸಿಕ್ಕ ಅವಕಾಶವನ್ನು ಪೂರ್ಣ ಪ್ರಮಾಣದಲ್ಲಿ ಬಳಸಿ ಕೊಳ್ಳುವಲ್ಲಿ ಅವರು ಎಡವಿದರೂ ಎಂದರೆ ತಪ್ಪಾಗುವುದಿಲ್ಲ.

ಇನ್ನು ತನ್ವೀರ್ ಸೇಠ್ ಅವರನ್ನು ಕೆಪಿಸಿಸಿ ಕಾರ್ಯಾಧ್ಯಕ್ಷರನ್ನಾಗಿ ನೇಮಿಸಿ, ಸಂಘಟನೆಗೆ ಒತ್ತು ನೀಡುವ ಪ್ರಯತ್ನಕ್ಕೆ ಪಕ್ಷದ ಹೈಕಮಾಂಡ್ ಮುಂದಾಯಿತು. ಅವರು ಮೈಸೂರು ಜಿಲ್ಲೆಗೆ ಸೀಮಿತ ವಾದರು. ಈ ಎಲ್ಲದರ ನಡುವೆ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಜಮೀರ್ ಅಹ್ಮದ್, ಮುಸ್ಲಿಂ ಸಮುದಾಯದ ನಾಯಕತ್ವ ಪಡೆಯಲು ಹಲವು ರೀತಿ ಪ್ರಯತ್ನ ಮಾಡಿ, ಕೊಂಚ ಮಟ್ಟಿಗೆ ಯಶಸ್ವಿಯೂ ಆಗಿದ್ದಾರೆ.

ಆದರೀಗ ದಾವಣಗೆರೆ ದಕ್ಷಿಣ ಕ್ಷೇತ್ರದ ಬಂಡಾಯದ ಮೂಲಕ ಜಮೀರ್ ಅವರನ್ನು ಹಿಂದಿಕ್ಕಿ, ಸಮುದಾಯದ ನಾಯಕತ್ವವನ್ನು ಕ್ಲೇಮ್ ಮಾಡುವ, ಈ ಮೂಲಕ ಮುಂದಿನ ದಿನದಲ್ಲಿ ಸಚಿವ ಸಂಪುಟಕ್ಕೂ ‘ಸೇರ್ಪಡೆ’ಯಾಗುವ ಮುಂದಾಲೋಚನೆಯ ಫಲವೇ ರಿಜ್ವಾನ್ ಹಾಗೂ ಸಲೀಂ ಅಹ್ಮದ್ ಅವರ ಸುದ್ದಿಗೋಷ್ಠಿಯ ಬಹಿರಂಗ ಆರೋಪ ಎಂದರೆ ತಪ್ಪಾಗುವುದಿಲ್ಲ.

ಜಮೀರ್, ಅಬ್ದುಲ್ ಜಬ್ಬರ್ ಹಾಗೂ ನಾಸೀರ್ ಅಹ್ಮದ್ ಅವರ ಪರೋಕ್ಷ ಬಂಡಾಯವನ್ನೇ ಮುಂದಿಟ್ಟುಕೊಂಡು ಹೈಕಮಾಂಡ್‌ಗೆ ವರದಿ ಸಲ್ಲಿಸುವ ಕೆಲಸವನ್ನು ಈಗಾಗಲೇ ಮಾಡಲಾಗಿದೆ. ತಾವು ಹೇಳಿದವರಿಗೆ ಟಿಕೆಟ್ ನೀಡಲಿಲ್ಲವೆಂದು, ಕಾಂಗ್ರೆಸ್‌ನ ಪ್ರತಿಷ್ಠಿತ ಕ್ಷೇತ್ರದಲ್ಲಿಯೂ ಪಕ್ಷದ ಅಭ್ಯರ್ಥಿಯ ವಿರುದ್ಧವೇ ಕೆಲಸ ಮಾಡಿರುವುದು ಹೈಕಮಾಂಡ್‌ಗೂ ಇರುಸು-ಮುರುಸು ಉಂಟಾ ಗಿದೆ.

ಜಮೀರ್ ಅಹ್ಮದ್ ಪ್ರಚಾರಕ್ಕೆ ಹೋಗದೇ, ಬಂಡಾಯ ಅಭ್ಯರ್ಥಿಗೆ ಸಹಾಯವಾಗುವಂತೆ ನೋಡಿ ಕೊಂಡಿದ್ದರೆ, ಇನ್ನೊಂದೆಡೆ ರಿಜ್ವಾನ್ ಹಾಗೂ ಸಲೀಂ ಅಹ್ಮದ್ ಮೊಕ್ಕಾಂ ಹೂಡಿ ಕೆಲಸ ಮಾಡಿದ್ದಾರೆ. ಒಂದು ವೇಳೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಸೋತರೆ ಅದರ ನೇರ ಹೊಣೆ ಜಮೀರ್ ಹೋಗುವುದು ನಿಶ್ಚಿತ. ಗೆಲುವಾದರೆ ಶಾಮನೂರು ಕುಟುಂಬಕ್ಕೆ ಹೋಗುವುದು ಖಚಿತ.

ಆದ್ದರಿಂದ ಎರಡರಲ್ಲಿ ಏನೇ ಆದರೂ, ‘ನಮ್ಮ’ ಶ್ರಮವಿದೆ ಎನ್ನುವ ಸಂದೇಶವನ್ನು ರವಾನಿಸುವ ಪ್ರಯತ್ನ ಭಾಗವಾಗಿ ಸುದ್ದಿಗೋಷ್ಠಿ ನಡೆಸಿದ್ದಾರೆ ಎನ್ನುವುದು ಸ್ಪಷ್ಟ.

ಸುಲಭವಾಗಿ ಗೆಲ್ಲಬಹುದಾಗಿದ್ದ ಕ್ಷೇತ್ರದಲ್ಲಿ ಅಬ್ದುಲ್ ಜಬ್ಬರ್‌ಗೆ ಟಿಕೆಟ್ ನೀಡಲಿಲ್ಲ ಎನ್ನುವ ಕಾರಣಕ್ಕೆ ಜಮೀರ್ ನಡೆ ಹೈಕಮಾಂಡ್ ಕಣ್ಣನ್ನು ಕೆಂಪಾಗಿಸಿದೆ. ಏಕೆಂದರೆ, ದೇಶದೆಡೆ ಕಾಂಗ್ರೆಸ್ ನೆಲೆ ಕಳೆದುಕೊಳ್ಳುತ್ತಿದ್ದರೂ, ಪಕ್ಷ ಗಟ್ಟಿಯಾಗಿ ಕಾಣಿಸಿಕೊಳ್ಳಲು ಪ್ರಮುಖ ಕಾರಣ ಮುಸ್ಲಿಂ ಮತಬ್ಯಾಂಕ್.

ಬಿಜೆಪಿ ನಾಯಕರು ಅದೆಷ್ಟೋ ಸರ್ಕಸ್ ಮಾಡಿದರೂ, ಮುಸ್ಲಿಂ ಮತಗಳನ್ನು ಸೆಳೆಯಲು ಸಾಧ್ಯ ವಾಗುತ್ತಿಲ್ಲ. ಇನ್ನು ಎಸ್‌ಡಿಪಿಐ, ಓವೈಸಿಯಂತಹ ಪಕ್ಷಗಳು ಮುಸ್ಲಿಂ ಮತದಾರರನ್ನೇ ನೆಚ್ಚಿಕೊಂಡಿ ದ್ದರೂ, ಅವುಗಳ ವ್ಯಾಪ್ತಿ ದೊಡ್ಡ ಪ್ರಮಾಣದಲ್ಲಿಲ್ಲ. ಆದ್ದರಿಂದ ಈಗಲೂ ಮುಸ್ಲಿಮರಿಗೆ ರಾಷ್ಟ್ರ ರಾಜಕಾರಣ ಎಂದಾಗ ಕಾಂಗ್ರೆಸ್ ಮೊದಲ ಆಯ್ಕೆಯಾಗಿರುತ್ತದೆ.

ಈ ಕಾರಣಕ್ಕೆ ಕಾಂಗ್ರೆಸ್ ಸಾಧ್ಯವಾದಷ್ಟು ಮುಸ್ಲಿಂ ಮತಗಳನ್ನು ಕ್ರೋಢೀಕರಿಸುವ ಪ್ರಯತ್ನ ದಲ್ಲಿದ್ದಾರೆ. ಆದರೆ ಕರ್ನಾಟಕದಲ್ಲಿ ಮುಸ್ಲಿಂ ನಾಯಕನೆಂದು ಕ್ಲೇಮ್ ಮಾಡುತ್ತಿರುವ ಜಮೀರ್ ಸೇರಿದಂತೆ ಇತರೆ ನಾಯಕರೇ ವೈಯಕ್ತಿಕ ಪ್ರತಿಷ್ಠೆಗೆ ಬಿದ್ದು ನಡೆದುಕೊಂಡ ರೀತಿಯು ಸುರ್ಜೇವಾಲ ಸೇರಿದಂತೆ ಹಲವು ನಾಯಕರ ಅಕ್ಷೇಪಕ್ಕೆ ಕಾರಣವಾಗಿದೆ.

ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯ ಈ ರಾಜಕೀಯ ಮೇಲಾಟಗಳನ್ನು ಮುಂದಿಟ್ಟು ಕೊಂಡು, ಪಕ್ಷದಲ್ಲಿರುವ ಮುಸ್ಲಿಂ ಸಮುದಾಯದ ಎರಡನೇ ಹಂತದ ನಾಯಕರು ಈ ಸ್ಥಾನವನ್ನು ಅಲಂಕರಿಸಲು ಇನ್ನಿಲ್ಲದ ಕಸರತ್ತು ಆರಂಭಿಸಿದ್ದಾರೆ. ಆ ಕಾರಣಕ್ಕಾಗಿಯೇ ಉಪಸಮರದಲ್ಲಿ ಕಾಂಗ್ರೆಸ್ ಗೆದ್ದರೆ ಸಮರ್ಥ್‌ಗಿಂತ ಹೆಚ್ಚಾಗಿ, ಸಲೀಂ, ರಿಜ್ವಾನ್ʼಗೆ ಲಾಭ ಎನ್ನಲಾಗುತ್ತಿದೆ.

ಒಂದು ವೇಳೆ ಸೋತರೆ, ಸಮುದಾಯದ ಮೇಲೆ ಇರುವ ಹಿಡಿತ ತೋರಿಸುವಲ್ಲಿ ಜಮೀರ್ ಯಶಸ್ವಿ ಯಾದರೂ, ಹೈಕಮಾಂಡ್ ವಿರೋಧ ಕಟ್ಟಿಕೊಳ್ಳುವುದು ಖಚಿತ. ಸಮುದಾಯದ ಹಿಡಿತ ಸಾಧಿಸು ವುದಕ್ಕೆ ಬಹಿರಂಗ ಅಖಾಡಕ್ಕೆ ಇಳಿದಿರುವ ನಾಯಕರಲ್ಲಿ ಯಾರು ಮೇಲುಗೈ ಸಾಧಿಸಲಿದ್ದಾರೆ ಎನ್ನುವುದಕ್ಕೆ ಕಾಲವೇ ಉತ್ತರಿಸಬೇಕಿದೆ.