ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vishweshwar Bhat Column: ನಿಕ್ಸನ್‌ ನಿಧನನಾದಾಗ ಬಂದ ಟೀಕೆ

ಅಮೆರಿಕದ ಮಾಜಿ ಅಧ್ಯಕ್ಷ ರಿಚರ್ಡ್ ನಿಕ್ಸನ್ ನಿಧನರಾದಾಗ, ಥಾಂಪ್ಸನ್ ಕೆಟ್ಟದಾಗಿ ಬರೆದಿದ್ದನ್ನು ಪ್ರಸ್ತಾಪಿಸಿದ್ದೆ. ಇಡೀ ಅಮೆರಿಕದ ಮುಖ್ಯವಾಹಿನಿ ಪತ್ರಕರ್ತರು ಮತ್ತು ರಾಜಕೀಯ ನಾಯಕರು ನಿಕ್ಸನ್ ಬಗ್ಗೆ ಹೊಗಳಿ ಬರೆದಿದ್ದರು. ವಾಟರ್‌ಗೇಟ್ ಹಗರಣದ ಕಳಂಕವನ್ನೆಲ್ಲ ಬದಿಗಿಟ್ಟು, ‘ಅವರೊಬ್ಬ ಶ್ರೇಷ್ಠ ಮುತ್ಸದ್ದಿ, ವಿದೇಶಾಂಗ ನೀತಿಯ ಚಾಣಾಕ್ಷ’ ಎಂದು ಗುಣಗಾನ ಮಾಡಿದ್ದರು. ಆದರೆ, ‘ರೋಲಿಂಗ್ ಸ್ಟೋನ್’ ಪತ್ರಿಕೆ ಯಲ್ಲಿ ಹಂಟರ್ ಥಾಂಪ್ಸನ್ He Was a Crook ಎಂಬ ಶೀರ್ಷಿಕೆ ಯಡಿಯಲ್ಲಿ ಇಡೀ ದೇಶದ ಸಭ್ಯತೆಯ ಮುಖಕ್ಕೆ ಬಲವಾದ ಕಪಾಳಮೋಕ್ಷ ಮಾಡಿದ್ದ.

Vishweshwar Bhat Column: ನಿಕ್ಸನ್‌ ನಿಧನನಾದಾಗ ಬಂದ ಟೀಕೆ

-

ಸಂಪಾದಕರ ಸದ್ಯಶೋಧನೆ

ಮೊನ್ನೆ ನಾನು ವಿಲಕ್ಷಣ ಪತ್ರಕರ್ತ ಹಂಟರ್ ಎಸ್.ಥಾಂಪ್ಸನ್ ಬಗ್ಗೆ ಬರೆದಿದ್ದೆ. ಅಮೆರಿಕದ ಮಾಜಿ ಅಧ್ಯಕ್ಷ ರಿಚರ್ಡ್ ನಿಕ್ಸನ್ ನಿಧನರಾದಾಗ, ಥಾಂಪ್ಸನ್ ಕೆಟ್ಟದಾಗಿ ಬರೆದಿದ್ದನ್ನು ಪ್ರಸ್ತಾಪಿಸಿದ್ದೆ. ಇಡೀ ಅಮೆರಿಕದ ಮುಖ್ಯವಾಹಿನಿ ಪತ್ರಕರ್ತರು ಮತ್ತು ರಾಜಕೀಯ ನಾಯಕರು ನಿಕ್ಸನ್ ಬಗ್ಗೆ ಹೊಗಳಿ ಬರೆದಿದ್ದರು. ವಾಟರ್‌ಗೇಟ್ ಹಗರಣದ ಕಳಂಕವನ್ನೆಲ್ಲ ಬದಿಗಿಟ್ಟು, ‘ಅವರೊಬ್ಬ ಶ್ರೇಷ್ಠ ಮುತ್ಸದ್ದಿ, ವಿದೇಶಾಂಗ ನೀತಿಯ ಚಾಣಾಕ್ಷ’ ಎಂದು ಗುಣಗಾನ ಮಾಡಿದ್ದರು. ಆದರೆ, ‘ರೋಲಿಂಗ್ ಸ್ಟೋನ್’ ಪತ್ರಿಕೆ ಯಲ್ಲಿ ಹಂಟರ್ ಥಾಂಪ್ಸನ್ He Was a Crook ಎಂಬ ಶೀರ್ಷಿಕೆ ಯಡಿಯಲ್ಲಿ ಇಡೀ ದೇಶದ ಸಭ್ಯತೆಯ ಮುಖಕ್ಕೆ ಬಲವಾದ ಕಪಾಳಮೋಕ್ಷ ಮಾಡಿದ್ದ.

ಸತ್ತ ವ್ಯಕ್ತಿಯ ಬಗ್ಗೆ ಒಳ್ಳೆಯದನ್ನೇ ಆಡಬೇಕೆಂಬ ನಿಯಮವನ್ನು ಕಾಲಕಸ ಮಾಡಿ, ಪತ್ರಿಕೋದ್ಯಮ ದ ಇತಿಹಾಸದ ಅತ್ಯಂತ ಕ್ರೂರ, ಕಟು ಹಾಗೂ ಪ್ರಾಮಾಣಿಕ ಆಕ್ರೋಶದ ದಾಖಲೆಯನ್ನು ಸೃಷ್ಟಿಸಿದ್ದ. ಲೇಖನದ ಆರಂಭಿಕ ವಾಕ್ಯಗಳೇ ಓದುಗರಲ್ಲಿ ನಡುಕ ಹುಟ್ಟಿಸುವಂತಿದ್ದವು.

‘ರಿಚರ್ಡ್ ನಿಕ್ಸನ್ ಹೋಗಿಬಿಟ್ಟಿದ್ದಾನೆ. ಅವನು ಒಬ್ಬ ಸುಳ್ಳುಗಾರ. ಕಳ್ಳನಂತೆ ಬದುಕಿದ. ನಾಯಿಯಂತೆ ಸತ್ತ’ ಎಂದು ಬರೆದಿದ್ದ. ‘ಅವನ ಶವವನ್ನು ಸಮುದ್ರದಲ್ಲಿ ಮುಳುಗಿಸಬೇಕು, ಆದರೆ ಆ ವಿಷಕಾರಿ ದೇಹವನ್ನು ತಿಂದು ಶಾರ್ಕ್‌ಗಳು ಸತ್ತು ಹೋಗಬಹುದು. ಆದ್ದರಿಂದ ಆಳವಾದ ಹಳ್ಳ ತೋಡಿ ಮಣ್ಣು ಮಾಡಿ, ಅದರ ಮೇಲೆ ದೊಡ್ಡ ಕಾಂಕ್ರೀಟ್ ಬ್ಲಾಕ್ ಮುಚ್ಚಿ ಸೀಲ್ ಮಾಡಬೇಕು, ಇಲ್ಲದಿದ್ದರೆ ಜೀವ ತಳೆದು ಎದ್ದುಬರುತ್ತಾನೆ’ ಎಂದು ಬರೆದಿದ್ದ.

ಇದನ್ನೂ ಓದಿ: Vishweshwar Bhat Column: ಹಂಟರ್‌ ಎಸ್.‌ ಥಾಂಪ್ಸನ್‌ ನೆನಪು

ಯಾವುದೇ ಲೇಖಕ ಸಾರ್ವಜನಿಕವಾಗಿ ಬಳಸಲು ಕನಸಲ್ಲೂ ಯೋಚಿಸದ ಕಟು ಭಾಷೆ ಅದಾಗಿತ್ತು. ಥಾಂಪ್ಸನ್ ಪ್ರಕಾರ, ನಿಕ್ಸನ್ ಕೇವಲ ಕೆಟ್ಟ ಅಧ್ಯಕ್ಷನಾಗಿರಲಿಲ್ಲ. ಆತ ಅಮೆರಿಕನ್ ಆತ್ಮಕ್ಕೆ ತಗುಲಿದ ಅತ್ಯಂತ ಅಪಾಯಕಾರಿ ಕ್ಯಾನ್ಸರ್ ಆಗಿದ್ದ. ವಾಟರ್ ಗೇಟ್ ಹಗರಣದಲ್ಲಿ ತನ್ನ ಅಧಿಕಾರ ಉಳಿಸಿಕೊಳ್ಳಲು ಸಿಐಎ, ಎಫ್‌ʼಬಿಐ ಮತ್ತು ತೆರಿಗೆ ಇಲಾಖೆಗಳನ್ನು ದುರುಪಯೋಗ ಪಡಿಸಿಕೊಂಡಿದ್ದನ್ನು, ರಾಜಕೀಯ ವಿರೋಧಿಗಳ ಗೂಢಚಾರಿಕೆ ಮಾಡಿಸಿದ್ದನ್ನು ಥಾಂಪ್ಸನ್ ಕ್ಷಮಿ ಸಲು ಸಿದ್ಧನಿರಲಿಲ್ಲ.

ನಿಕ್ಸನ್ ಜಾರಿಗೆ ತಂದ ಕಪಟ ನೀತಿಗಳು ಅಮೆರಿಕದ ಪ್ರಜಾಪ್ರಭುತ್ವದ ಮೇಲಿದ್ದ ಜನರ ನಂಬಿಕೆ ಯನ್ನೇ ಹೇಗೆ ನಾಶಮಾಡಿದವು ಎಂದು ಜರಿದಿದ್ದ. ‘ಆತನಿಗೆ ಗೆಲುವು ಮತ್ತು ಸೇಡು ಬಿಟ್ಟರೆ ಬೇರೆ ಯಾವುದೇ ನೈತಿಕ ದಿಕ್ಸೂಚಿ ಇರಲಿಲ್ಲ’ ಎಂಬುದು ಥಾಂಪ್ಸನ್ ಆಕ್ರೋಶದ ಸಾರಾಂಶ ವಾಗಿತ್ತು. ಈ ಲೇಖನದ ಅತ್ಯಂತ ಪ್ರಸಿದ್ಧ ಮತ್ತು ಇತಿಹಾಸದಲ್ಲಿ ಉಳಿದ ಸಾಲುಗಳಲ್ಲಿ ಒಂದೆಂದರೆ- ‘ನಿಕ್ಸನ್ ಎಷ್ಟರಮಟ್ಟಿಗೆ ಮೋಸಗಾರ ನಾಗಿದ್ದನೆಂದರೆ, ಆತ ಮಲಗುವ ಮುನ್ನ ಬಾಗಿಲು ಹಾಕಿದರೂ ಕೀಲಿಯನ್ನು ಕಿಟಕಿಯ ಮೂಲಕ ಹೊರಗೆ ಎಸೆಯುತ್ತಿದ್ದ’.

ಅಂದರೆ, ಆತನ ಸ್ವಭಾವದ ವಂಚನೆ ರಕ್ತಗತವಾಗಿತ್ತು ಎಂದು ವರ್ಣಿಸಿದ್ದ. ನಿಕ್ಸನ್ ಮುಖದಲ್ಲಿ ಸದಾ ಇರುತ್ತಿದ್ದ ನಕಲಿ ನಗು, ಪಶ್ಚಾತ್ತಾಪವಿಲ್ಲದ ಕಣ್ಣುಗಳು ಮತ್ತು ಪ್ರತಿ ಮಾತಿನ ಹಿಂದಿನ ಹುಸಿ ನಡೆವಳಿಕೆ ಯನ್ನು ಥಾಂಪ್ಸನ್ ಬಯಲು ಮಾಡಿದದ್ದ. ನಿಕ್ಸನ್ ಅಧಿಕಾರದ ದಾಹಕ್ಕಾಗಿ ಅಮೆರಿಕನ್ ಯುವಕರ ಭವಿಷ್ಯವನ್ನೇ ಆಟವಾಡಿಸಿದ ರಾಕ್ಷಸ ಎಂದು ಕರೆದಿದ್ದ. ವಿಯೆಟ್ನಾಂ ಯುದ್ಧದಲ್ಲಿ ನಿಕ್ಸನ್ ಮತ್ತು ಹೆನ್ರಿ ಕಿಸ್ಸಿಂಜರ್ ಆಡಿದ ರಕ್ತದ ಆಟವನ್ನು ಥಾಂಪ್ಸನ್ ಅತ್ಯಂತ ನಿರ್ದಯವಾಗಿ ಪ್ರಸ್ತಾಪಿಸಿದ್ದ.

ಚುನಾವಣೆ ಗೆಲ್ಲಲು ಶಾಂತಿ ಮಾತುಕತೆ ಉದ್ದೇಶಪೂರ್ವಕ ತಡಮಾಡಿದ್ದು ಮತ್ತು ಕಾಂಬೋಡಿಯಾ ಮೇಲೆ ರಹಸ್ಯವಾಗಿ ಬಾಂಬ್ ದಾಳಿ ನಡೆಸಿ ಲಕ್ಷಾಂತರ ಅಮಾಯಕರನ್ನು ಕೊಂದಿದ್ದನ್ನು ನೆನಪಿಸಿದ್ದ. ಅಮೆರಿಕದ ಯುವ ಸೈನಿಕರು ಮೃತದೇಹದ ಚೀಲಗಳಲ್ಲಿ ವಾಪಸ್ ಬರುತ್ತಿದ್ದಾಗ, ನಿಕ್ಸನ್ ಶ್ವೇತಭವನದಲ್ಲಿ ಕುಳಿತು ತನ್ನ ಕಳ್ಳ ಹೆಜ್ಜೆಗಳನ್ನು ಮುಚ್ಚಿ ಹಾಕಲು ಸಂಚು ರೂಪಿಸುತ್ತಿದ್ದ ಎಂದು ಬರೆಯುತ್ತಾ, ನಿಕ್ಸನ್ ಒಬ್ಬ ಯುದ್ಧಾಪರಾಧಿ ಎಂದು ನೇರವಾಗಿ ಆರೋಪಿಸಿದ್ದ.

ಥಾಂಪ್ಸನ್ ಸಿಟ್ಟು ಕೇವಲ ನಿಕ್ಸನ್ ಮೇಲೆ ಮಾತ್ರವಲ್ಲ, ಆತನ ಶವ ಸಂಸ್ಕಾರದಲ್ಲಿ ಭಾಗವಹಿಸಿ ಕಣ್ಣೀರು ಸುರಿಸುತ್ತಿದ್ದ ಇತರೆ ಅಧ್ಯಕ್ಷರು ಮತ್ತು ರಾಜಕಾರಣಿಗಳ ಮೇಲೂ ಹರಿದಿತ್ತು. ಬಿಲ್ ಕ್ಲಿಂಟನ್, ಜೆರಾಲ್ಡ್ ಫೋರ್ಡ್, ಜಿಮ್ಮಿ ಕಾರ್ಟರ್, ಜಾರ್ಜ್ ಬುಷ್ ಮುಂತಾದ ನಾಯಕರು ನಿಕ್ಸನ್‌ ನನ್ನು ಒಬ್ಬ ‘ಶ್ರೇಷ್ಠ ರಾಜನೀತಿಜ್ಞ’ ಎಂದು ಹೊಗಳುತ್ತಿದ್ದುದನ್ನು ನೋಡಿ ಥಾಂಪ್ಸನ್ ಉರಿದು ಹೋಗಿದ್ದ. ಈ ನಾಯಕರನ್ನು ‘ಬೆನ್ನೆಲುಬಿಲ್ಲದ ಗುಲಾಮರು’ ಮತ್ತು ‘ಕೃತಕ ಸಭ್ಯತೆಯ ಹುಸಿ ನಾಯಕರು’ ಎಂದು ಛೇಡಿಸಿದ್ದ