Roopa Gururaj Column: ಜ್ಞಾನದ ಅಪಾತ್ರದಾನ ಆಗಬಾರದು
“ಅಜ್ಞಾನಿಗಳ ಕೈಯಲ್ಲಿ ಶಕ್ತಿಶಾಲಿ ಅಸ್ತ್ರಗಳ ಜ್ಞಾನವನ್ನು ಕೊಡಬಾರದು, ಕೊಟ್ಟರೆ ಹುಚ್ಚರ ಕೈಗೆ ಕಲ್ಲು ಕೊಟ್ಟ ಹಾಗೆ, ಅವರು ಅದನ್ನು ಎಲ್ಲಿಗೆ ಬೇಕಾದರೂ ಎಸೆಯಬಹುದು; ಅಜ್ಞಾನಿಗಳಿಗೆ ದೊಡ್ಡ ದೊಡ್ಡ ಶಸಾಸಗಳ ಜ್ಞಾನವನ್ನು ಕೊಟ್ಟರೆ, ಅವರು ಕೋಪದ ಭರದಲ್ಲಿ ಸರ್ವನಾಶವನ್ನೇ ಮಾಡಬಹುದು" ಎಂಬುದು ಹಿಂದಿನ ಜ್ಞಾನಿಗಳ ಅಭಿಪ್ರಾಯವಾಗಿತ್ತು.


ಅಪಾತ್ರರಿಗೆ ಜ್ಞಾನವನ್ನಾಗಲೀ ಕೊಡುಗೆಯನ್ನಾಗಲೀ ನೀಡುವುದು, ಮಂಗನ ಕೈಗೆ ಮಾಣಿಕ್ಯವನ್ನು ಕೊಟ್ಟಂತೆ. ಎಲ್ಲರಿಗೂ ಎಲ್ಲವನ್ನೂ ಕೊಡದೆ, ಅವರ ಮಿತಿಗಳನ್ನು ನೋಡಿ ಕೊಡಬೇಕು. ಇಂಥ ಸೂಕ್ಷ್ಮ ವಿಷಯಗಳನ್ನು ಶ್ರೀಕೃಷ್ಣನು ವಿಚಾರಮಾಡಿ ತಿಳಿಸಿದ್ದಾನೆ. ಎಲ್ಲಾ ನಿಟ್ಟಿನಲ್ಲೂ ಸಾಮರ್ಥ್ಯ ವಿರುವುದನ್ನು ಖಚಿತಪಡಿಸಿ ಕೊಂಡೇ ಅವನು ಅರ್ಜುನನಿಗೆ ಭಗವದ್ಗೀತೆಯನ್ನು ಉಪದೇಶಿಸಿದ್ದು. ಗುರು ದ್ರೋಣಾಚಾರ್ಯರು ಏಕಲವ್ಯನಿಗೆ ವಿದ್ಯೆ ಕೊಡಲಿಲ್ಲ. ದ್ರೋಣರು ಕೇಳಿದ ಗುರು ದಕ್ಷಿಣೆ ಯನ್ನು ಕೊಟ್ಟು ಲೋಕದ ದೃಷ್ಟಿಯಲ್ಲಿ ‘ಅಪ್ರತಿಮ ಶಿಷ್ಯ’ ಎನಿಸಿಕೊಂಡವನು ಏಕಲವ್ಯ. ‘ಶಿಷ್ಯನ ಅಮಾಯಕತೆಯನ್ನು ಬಳಸಿಕೊಂಡ ಸ್ವಾರ್ಥಿ- ಗುರು ದ್ರೋಣಾಚಾರ್ಯರು’ ಎನ್ನುತ್ತಾರೆ ಕೆಲವರು. ಆದರೆ ದ್ರೋಣರು ದೂರದೃಷ್ಟಿ ಉಳ್ಳವರಾಗಿದ್ದರು.
“ಅಜ್ಞಾನಿಗಳ ಕೈಯಲ್ಲಿ ಶಕ್ತಿಶಾಲಿ ಅಸ್ತ್ರಗಳ ಜ್ಞಾನವನ್ನು ಕೊಡಬಾರದು, ಕೊಟ್ಟರೆ ಹುಚ್ಚರ ಕೈಗೆ ಕಲ್ಲು ಕೊಟ್ಟ ಹಾಗೆ, ಅವರು ಅದನ್ನು ಎಲ್ಲಿಗೆ ಬೇಕಾದರೂ ಎಸೆಯಬಹುದು; ಅಜ್ಞಾನಿಗಳಿಗೆ ದೊಡ್ಡ ದೊಡ್ಡ ಶಸ್ತ್ರಾಸ್ತ್ರಗಳ ಜ್ಞಾನವನ್ನು ಕೊಟ್ಟರೆ, ಅವರು ಕೋಪದ ಭರದಲ್ಲಿ ಸರ್ವನಾಶ ವನ್ನೇ ಮಾಡಬಹುದು" ಎಂಬುದು ಹಿಂದಿನ ಜ್ಞಾನಿಗಳ ಅಭಿಪ್ರಾಯವಾಗಿತ್ತು.
ಇದನ್ನೂ ಓದಿ: Roopa Gururaj Column: ಬೇಸ್ತು ಬಿದ್ದ ವ್ಯಾಪಾರಿ
“ಶಸ್ತ್ರಾಸ್ತ್ರಗಳ ಜ್ಞಾನವನ್ನು ದಕ್ಕಿಸಿಕೊಂಡ ಏಕಲವ್ಯನು ಸರಿಯಾದ ಮಾರ್ಗದಲ್ಲಿ ಹೋದರೆ ಸರಿ; ಆದರೆ ದ್ವೇಷಕ್ಕಾಗಿ ಅಡ್ಡದಾರಿ ಹಿಡಿದರೆ ಅದರ ಪರಿಣಾಮ ಎದುರಿಸುವುದು ಕಷ್ಟ" ಎಂದು ಯೋಚಿಸಿದ ದ್ರೋಣರು ಏಕಲವ್ಯನ ಹೆಬ್ಬೆರಳನ್ನು ಗುರುದಕ್ಷಿಣೆಯಾಗಿ ಪಡೆದರು. ಇದರ ಪರಿಣಾ ಮವು ಮುಂದೆ ಅರ್ಥವಾಗುತ್ತದೆ. ಮಗಧದ ದೊರೆ ಜರಾಸಂಧನು ದುಷ್ಟರಾದ ಶಿಶುಪಾಲ, ಕಾಲ ಯವನ ಇವರುಗಳ ಜತೆಗೂಡಿ ಮಥುರೆಯ ಮೇಲೆ ಪದೇಪದೆ ದಾಳಿಮಾಡಿ ನಾಶಕ್ಕೆ ಯತ್ನಿಸುತ್ತಾನೆ.
ತಕ್ಕ ಸಮಯಕ್ಕಾಗಿ ಕಾದಿದ್ದ ಕೃಷ್ನನು, ಅರ್ಜುನ ಮತ್ತು ಭೀಮನೊಂದಿಗೆ ಬ್ರಾಹ್ಮಣರ ವೇಷದಲ್ಲಿ ಹೋಗಿ, ಜರಾಸಂಧನು ಭೀಮನೊಂದಿಗೆ ಮಲ್ಲಯುದ್ಧ ಮಾಡುವಂತೆ ಉಪಾಯ ಮಾಡಿ, ಸಾಕಷ್ಟು ಸೆಣಸಾಡಿದ ಮೇಲೆ ಜರಾಸಂಧನ ದೇಹವನ್ನು ಸೀಳಿ ಭಾಗಮಾಡಿ, ಬೇರೆ ಬೇರೆ ದಿಕ್ಕಿಗೆ ಎಸೆಯುವಂತೆ ಮಾಡಿ ಅವನ ಸಂಹಾರ ಮಾಡಿಸುತ್ತಾನೆ.
ಆನಂತರ ಯುಧಿಷ್ಠಿರ ರಾಜಸೂಯಯಾಗ ಮಾಡುತ್ತಾನೆ. ಜರಾಸಂಧನ ಸಾವಿನ ಪ್ರತೀಕಾರಕ್ಕಾಗಿ ಏಕಲವ್ಯನು ಯಾದವರ ಮೇಲೆ ಕೆಂಡಾಮಂಡಲ ದ್ವೇಷ ಕಟ್ಟಿಕೊಳ್ಳುತ್ತಾನೆ. ಕಾರಣ, ಜರಾಸಂಧನ ಸೇನೆಯಲ್ಲಿ ಏಕಲವ್ಯನ ತಂದೆ, ಬೇಡರ ನಾಯಕ ‘ನಿಷಾದ’ ಇದ್ದನು. ಮುಂದೆ ಏಕಲವ್ಯನು ಆ ಸೇನೆ ಯನ್ನೇ ಸೇರಿದ್ದ. ಸೇಡು ತೀರಿಸಿಕೊಳ್ಳಲು ಆತ ದ್ವಾರಕೆಯ ಮೇಲೆ ದಾಳಿ ಮಾಡುತ್ತಾನೆ.
ಅದಾಗಲೇ ಕೃಷ್ಣನ ಮುಂದಾಲೋಚನೆಯಿಂದಾಗಿ ಏಕಲವ್ಯನ ಹೆಬ್ಬೆರಳನ್ನು ಗುರುದಕ್ಷಿಣೆಯಾಗಿ ದ್ರೋಣರು ತೆಗೆದುಕೊಂಡಿದ್ದರಿಂದ, ಅವನ ಅಸಾಮಾನ್ಯ ಬಿಲ್ವಿದ್ಯೆಗೆ ತಡೆಯುಂಟಾಗಿ, ಯಾದವರ ಮೇಲೆ ದಾಳಿ ಮಾಡಿದಾಗ ಕೃಷ್ಣನಿಂದ ಹತನಾದನೆಂದು ಕೆಲವರು ಹೇಳಿದರೆ, ಮತ್ತೆ ಕೆಲವರು ಕುರುಕ್ಷೇತ್ರ ಯುದ್ಧದಲ್ಲಿ ದುರ್ಯೋಧನನ ಜತೆಗೂಡಿ ಪಾಂಡವರ ವಿರುದ್ಧ ಯುದ್ಧ ಮಾಡಿ ಹತ ನಾದನೆಂದು ಹೇಳುತ್ತಾರೆ.
ಒಟ್ಟಾರೆ ಹೇಳುವುದಾದರೆ, ಧರ್ಮದ ಅರಿವಿಲ್ಲದವರಿಗೆ, ಯುಕ್ತಾಯುಕ್ತ ಜ್ಞಾನವಿಲ್ಲದವರಿಗೆ ದೊಡ್ಡ ದೊಡ್ಡ ಶಸಾಸಗಳ ಜ್ಞಾನವನ್ನು ನೀಡಿದರೆ, ಅದರ ಪರಿಣಾಮವನ್ನು ಎದುರಿಸುವುದು ಅಸಾಧ್ಯ ಎಂಬುದು ಅಂದಿನ ಜ್ಞಾನಿಗಳಿಗೆ ತಿಳಿದಿತ್ತು. ಹೀಗಾಗಿ ಸಂದರ್ಭಾನುಸಾರ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳುತ್ತಿದ್ದರು.
ಜ್ಞಾನವನ್ನು ಕೊಡುವುದಕ್ಕೂ ಪಡೆಯುವುದಕ್ಕೂ ಅದರದೇ ಆದ ನಿಯಮಗಳಿದ್ದು ಅವನ್ನು ಅನುಸರಿಸಿದರೆ ಧರ್ಮಸಂಸ್ಥಾಪನೆ, ಲೋಕೋದ್ಧಾರ ಸಾಧ್ಯ ಎಂಬ ಅಭಿಪ್ರಾಯ ಅವರಿಗಿತ್ತು. ಇಂದಿ ನ ದಿನಗಳಲ್ಲಿ ಯುವಜನರಿಗೆ ಅಪಾರ ಜ್ಞಾನವಿದೆ, ಆದರೆ ಅವರಲ್ಲಿ ಕೆಲವರಿಗೆ ಅದನ್ನು ಸರಿಯಾದ ದಿಕ್ಕಿನಲ್ಲಿ ತೊಡಗಿಸುವ/ಬಳಸಿಕೊಳ್ಳುವ ಸಂಸ್ಕಾರವಿಲ್ಲ. ಆದ್ದರಿಂದಲೇ, ಹಾಸ್ಯದ ಹೆಸರಿನಲ್ಲಿ ತಂದೆ-ತಾಯಿಗಳ ಗೌರವಕ್ಕೆ ಚ್ಯುತಿ ಬರುವಂತೆ ಮಾತನಾಡುವ, ವಾಕ್ ಸ್ವಾತಂತ್ರ್ಯದ ಹೆಸರಿನಲ್ಲಿ ಅನಗತ್ಯವಾಗಿ ಉದ್ಧಟತನ ಮೆರೆಯುವ ಅನೇಕ ವಿದ್ಯಾವಂತರನ್ನಿಂದು ನಾವು ನೋಡುತ್ತಿದ್ದೇವೆ.
ಉದ್ಧಟತನಕ್ಕೆ ಸರಿಯಾದ ಶಾಸ್ತಿ ಆಗಲೇ ಬೇಕು. ಏಕೆಂದರೆ, ತಪ್ಪು ಒಂದಾದರೂ ನೂರಾದರೂ ತಪ್ಪೇ! ಅದರಲ್ಲೂ ವಿದ್ಯಾವಂತರು ಮಾಡಿದ ತಪ್ಪಿಗೆ ದಾಕ್ಷಿಣ್ಯ ತೋರಬಾರದು, ಅವರಿಗೆ ತಕ್ಕ ಶಿಕ್ಷೆ ವಿಽಸಿ ಬುದ್ಧಿ ಕಲಿಸಬೇಕು.