Dr Sadhanashree Column: ಶಿರಸ್ಸೆಂಬ ಹೊನ್ನ ಕಳಸದ ಕಾಳಜಿ

ನಮ್ಮ ದೇಹವನ್ನು ಒಂದು ಬಲಿಷ್ಠವಾದ ಮರಕ್ಕೆ ಹೋಲಿಸಿದರೆ ಅದರ ಸರ್ವೋನ್ನತ ಭಾಗದ ಲ್ಲಿರುವ ನಮ್ಮ ಶಿರಸ್ಸೇ ಆ ಮರದ ಬೇರುಗಳು. ಕೊಂಬೆಗಳಂತೆ ಇರುವುದು ಕೈಕಾಲು ಗಳು ಮತ್ತು ಮಧ್ಯಮ ಶರೀರ. ಮರದ ರೆಂಬೆಕೊಂಬೆಗಳು ಬಾಡಿ ಉದುರಿ ಹೋದರೆ ಮರದ ಅಸ್ತಿತ್ವಕ್ಕೆ ಭಯವಿಲ್ಲ

ಅಂಕಣಗಾರ್ತಿ ಸಾಧನಶ್ರೀ
Profile Ashok Nayak January 18, 2025

Source : Vishwavani Daily News Paper

ಸ್ವಾಸ್ಥ್ಯವೆಂಬ ಸ್ವಾತಂತ್ರ್ಯ

ಡಾ.ಸಾಧನಶ್ರೀ

‘ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನಿನ ಕಳಸವಯ್ಯಾ’ ಎಂದು ಬಸವಣ್ಣನವರು ನುಡಿದರೆ, ‘ಊರ್ಧ್ವಮೂಲಂ ಅಧಃ ಶಾಖಮ’ ಎಂಬುದು ಭಗವದ್ಗೀತೆಯ ಮಾತು. ಉಪವೇದವಾದ ಆಯುರ್ವೇದದ ಅಭಿಮತವೂ ಹೌದು.

ನಮ್ಮ ದೇಹವನ್ನು ಒಂದು ಬಲಿಷ್ಠವಾದ ಮರಕ್ಕೆ ಹೋಲಿಸಿದರೆ ಅದರ ಸರ್ವೋನ್ನತ ಭಾಗದಲ್ಲಿರುವ ನಮ್ಮ ಶಿರಸ್ಸೇ ಆ ಮರದ ಬೇರುಗಳು. ಕೊಂಬೆಗಳಂತೆ ಇರುವುದು ಕೈಕಾಲು ಗಳು ಮತ್ತು ಮಧ್ಯಮ ಶರೀರ. ಮರದ ರೆಂಬೆಕೊಂಬೆಗಳು ಬಾಡಿ ಉದುರಿ ಹೋದರೆ ಮರದ ಅಸ್ತಿತ್ವಕ್ಕೆ ಭಯವಿಲ್ಲ.

ಆದರೆ, ಮೂಲಕ್ಕೆ ಅಂದರೆ ಬೇರಿಗೆ ಆಘಾತವಾದರೆ ಇಡೀ ಮರದ ಅಸ್ತಿತ್ವವೇ ನಾಶವಾಗು ತ್ತದೆ. ಅಲ್ಲವೇ? ಅಂತೆಯೇ ನಮ್ಮ ದೇಹದ ಮೂಲವಾದ ನಮ್ಮ ಶಿರಸ್ಸು- ಸರ್ವ ಚೈತನ್ಯದ ಕೇಂದ್ರ ಸ್ಥಾನ! ಆಯುರ್ವೇದವು ಈ ಉತ್ತಮಾಂಗವನ್ನು ಪ್ರಾಣಾಯತನ ಎಂದು ಕರೆದಿದೆ. ಅಂದರೆ, ನಮ್ಮ ಪ್ರಾಣ ಇರುವ ಮನೆ ಇದು. ಪ್ರಾಣಾಯತನಕ್ಕೆ ಘಾತವಾದರೆ ಪ್ರಾಣಕ್ಕೆ ಘಾತ. ಪ್ರಾಣಾಯತನ ನಾಶವು ಪ್ರಾಣ ನಾಶಕ್ಕೆ ಕಾರಣವಾಗುವುದು.

ಸ್ನೇಹಿತರೆ, ಬಹಳ ಹಿಂದಿನ ರಾಜ ಮಹಾರಾಜರ ಕಾಲದ ಕಥೆಗಳಲ್ಲಿ ನಾವು ನೋಡಿದರೆ ‘ಸಾವಿರ ಹೋಳಾಗುವ ಭಯ ಇದ್ದದ್ದು ತಲೆಗೆ’, ಕಳ್ಳರ ‘ದೇಶದ್ರೋಹಿಗಳ ತಲೆಗೆ’ ಲಕ್ಷಾಂತರ ರುಪಾಯಿಗಳ ಬೆಲೆ. ಅಧಿಕಾರದ ಮದ ಮತ್ತು ಯಶಸ್ಸಿನ ಅಹಂಕಾರವು ‘ಏರುವುದು ತಲೆಗೇ’.

ಹೀಗೆ, ಭೀತಿ ಮತ್ತು ಅಪಮಾನಗಳಿಂದ ಮರುಗುವುದು, ಬಿರುದು ಬಹುಮಾನಗಳಿಂದ ‘ಮೆರೆಯುವುದು ತಲೆಯೇ’. ಹಾಗಾಗಿಯೇ, ಆಯುರ್ವೇದವು ತಲೆಯನ್ನು ‘ಉತ್ತಮ ಅಂಗ’ ಎಂದು ಸಂಬೋಧಿಸಿದೆ . ಇಷ್ಟೊಂದು ಬೆಲೆ ಕೊಡುವ ಈ ತಲೆಯೊಳಗೆ ಏನೇನಿದೆ ಎಂಬು ದನ್ನು ನಾವು ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡಲೇಬೇಕು.

ನಾನು ಆಗಲೇ ಹೇಳಿದ ಹಾಗೆ, ನಮ್ಮ ಶಿರಸ್ಸು ಸರ್ವ ಚೈತನ್ಯದ ಕೇಂದ್ರ ಸ್ಥಾನ. ಅಂತೆಯೇ, ಇದು ಪ್ರಾಣದ ಮನೆಯೂ ಹೌದು. ಶರೀರದ 107 ಮರ್ಮಗಳಲ್ಲಿ ಅಂದರೆ ಪ್ರಾಣ ಸ್ಥಾನಗಳಲ್ಲಿ ಮೂರು ಪ್ರಧಾನವಾದ ಮರ್ಮಗಳಿವೆ. ಅದರಲ್ಲಿ ಒಂದು ಶಿರಸ್ಸು. ನಮ್ಮ

ದೇಹದ ಕೇಂದ್ರ ಬಿಂದು. ಅಲ್ಲದೆ, ನಮ್ಮ ಶಿರಸ್ಸು ಕರ್ಣಾದಿ ಪಂಚೇಂದ್ರಿಯಗಳ ಸ್ಥಾನ - ಅಂದರೆ ನಮ್ಮ ಅಸ್ತಿತ್ವಕ್ಕೆ ಮತ್ತು ಬಾಹ್ಯ ವ್ಯವಹಾರಗಳಿಗೆ ಅತ್ಯವಶ್ಯಕವಾಗಿರುವ ಕಣ್ಣು, ಕಿವಿ, ಮೂಗು, ಬಾಯಿಗಳ ನಿವಾಸವೇ ಈ ಶಿರಸ್ಸು. ದೇಹದ 107 ಮರ್ಮ ಸ್ಥಾನಗಳಲ್ಲಿ ೩೭ ಮರ್ಮ ಸ್ಥಾನಗಳು ಈ ಶಿರಸ್ಸಿನ ಕಂಡುಬರುತ್ತದೆ.

ಶಿರಸ್ಸು ಪಂಚವಾತಗಳ ನಾಯಕನಾದ ಪ್ರಾಣವಾತದ ಮುಖ್ಯ ಕಾರ್ಯಾಲಯವಾಗಿರುವು ದರಿಂದ ಇಡೀ ಶರೀರದ ಪ್ರಾಣ ಸಂಚಾರವನ್ನು ನಿಯಂತ್ರಿಸುವ ಕೇಂದ್ರವಾಗಿದೆ.

ಎಲ್ಲರಿಗೂ ತಿಳಿದಿರುವ ಹಾಗೆ ಮೆದುಳು ಸ್ಥಿತವಾಗಿರುವುದೂ ಇಲ್ಲಿಯೇ. ಅಂತೆಯೇ, ಸೂರ್ಯನಿಂದ ಕಿರಣಗಳು ಪ್ರಸರಿಸುವಂತೆ, ಶರೀರದ ಪೋಷಣೆಯನ್ನು ಮಾಡುವ ಪ್ರಾಣವಾಹಿ ಸ್ರೋತಸ್ಸುಗಳು ಶಿರಸ್ಸಿನಿಂದ ಪ್ರವಹಿಸಿ ಇಡೀ ದೇಹಕ್ಕೆ ಪೋಷಣೆಯನ್ನು ನೀಡುತ್ತದೆ.

ಹಾಗಾಗಿ, ಆಯುರ್ವೇದವು ಆರೋಗ್ಯ ರಕ್ಷಣೆಯ ವಿಷಯದಲ್ಲಿ ಮುಖ್ಯ ಮರ್ಮ ಸ್ಥಾನ ವಾದ ಈ ಶಿರಸ್ಸಿನ ರಕ್ಷಣೆಗೆ ಅತ್ಯಂತ ಪ್ರಾಮುಖ್ಯತೆಯನ್ನು ನೀಡಿದೆ. ಬನ್ನಿ, ಈ ಲೇಖನ ದಲ್ಲಿ ಶಿರಸ್ಸಿನ ರಕ್ಷಣೆಯ ಆಯುರ್ವೇದೋಕ್ತ ಸಾಧನ ಉಪಾಯಗಳನ್ನ ತಿಳಿದು ಕೊಳ್ಳೋಣ. ಮರ್ಮ ಸ್ಥಾನವೆಂದರೆ ಜೀವಸ್ಥಾನ. ಮಾಂಸ, ಸೀರೆ, ಸ್ನಾಯು, ಅಸ್ಥಿ ಸಂಧಿಗಳು ಒಟ್ಟಾಗಿ ಸೇರುವ ಸ್ಥಾನಕ್ಕೆ ಮರ್ಮವೆಂದು ಹೆಸರು. ಶಿರಸ್ಸು ಒಂದು ಸದ್ಯೋಪ್ರಾಣಹರ ಮರ್ಮ. ಅಂದರೆ, ಈ ಸ್ಥಾನದಲ್ಲಿ ಪೆಟ್ಟು ಬಿದ್ದರೆ ತಕ್ಷಣವೇ ಜೀವನಾಶವಾಗುವುದು ಖಂಡಿತ.

ಆದ್ದರಿಂದ ಶಿರಸ್ಸಿನ ರಕ್ಷಣೆ- ಮರ್ಮ ಪರಿಪಾಲನೆಯನ್ನು ಪ್ರತಿಯೊಬ್ಬರೂ ತಿಳಿಯುವುದು ಮತ್ತು ಅನುಸರಿಸುವುದು ಅತ್ಯಗತ್ಯ. ಶಿರಸ್ಸಿನ ರಕ್ಷಣೆಯಲ್ಲಿ ನಾವು ತಿಳಿದುಕೊಳ್ಳಬೇಕಾದ ಮೊದಲ ವಿಚಾರವೆಂದರೆ ಶಿರೋಭಿಘಾತಕ್ಕೆ ಅಥವಾ ಶಿರಸ್ಸಿನ ಸ್ವಾಸ್ಥ್ಯ ಹಾಳಾಗಲು ಕಾರಣವಾದ ಮಾರಕ ಅಂಶಗಳು

೧. ಬಾಹ್ಯಭಿಘಾತ - ವಾಹನ ಅಪಘಾತ, ಶಸ್ತ್ರಗಳಿಂದ ಆಘಾತ, ಪೆಟ್ಟು ಇತ್ಯಾದಿ

೨. ವಾತಾದಿ ದೋಷಗಳಿಂದ ಆಘಾತ -ಇದಕ್ಕೆ ಕೆಲವು ಮುಖ್ಯ ಕಾರಣಗಳು ಹೀಗಿವೆ:

ಮಲ, ಮೂತ್ರ, ಸೀನು, ಅಳು ಮೊದಲಾದ ದೇಹದ ಸಹಜ ಪ್ರವೃತ್ತಿಗಳು ಬಂದಾಗ ಅವು ಗಳನ್ನು ನಿಗ್ರಹಿಸುವುದು ಅತಿಯಾದ ರಕ್ತಸ್ರಾವ ಶರೀರದ ಧಾತುಗಳ ಕ್ಷೀಣವಾಗುವಿಕೆ ಸಕಾಲದಲ್ಲಿ ನಿದ್ರಿಸದಿರುವುದು ಅಗ್ನಿಯಿಂದ ದಹನ, ಕ್ಷಾರ ಮತ್ತು ವಿಷಗಳ ಪ್ರಯೋಗ ಅನ್ಯ ಸದ್ಯೋ ಪ್ರಾಣಹರ ಮರ್ಮಗಳಿಗೆ ಅಭಿಘಾತ- ಶಿರಸ್ಸು-ಹೃದಯ- ಬಸ್ತಿ -ಇವು ನಮ್ಮ ಶರೀರದ ಮೂರು ಪ್ರಧಾನವಾದ ಮರ್ಮಗಳು.

ಇವುಗಳಲ್ಲಿ ಒಂದಕ್ಕೊಂದು ಆಂತರಿಕ ಜೋಡಣೆ ಮತ್ತು ಪರಸ್ಪರ ವ್ಯವಹಾರಗಳುಂಟು. ಒಂದಕ್ಕೆ ತೊಂದರೆಯಾದರೂ ಅದರ ಪರಿಣಾಮ ಮತ್ತೆರಡರ ಮೇಲೆ ಆಗುತ್ತದೆ. ತನ್ನ ಶಕ್ತಿ ಮೀರಿ ಮಾಡುವ ಕ್ರಮರಹಿತ ವ್ಯಾಯಾಮ ತಲೆಯ ಮೇಲೆ ಅತಿಯಾದ ಭಾರ ಹೊರು ವುದು ಇಂದ್ರಿಯಗಳ ಅತಿಯಾದ ಲಾಲನೆ ಅಥವಾ ಪೀಡನೆ ಲೋಭ, ಶೋಕ, ಭಯ, ಕ್ರೋಧಾದಿಗಳ ನಿಗ್ರಹ ಮಾಡದಿರುವುದು.

ರಾಗ ದ್ವೇಷಗಳಲ್ಲಿ ಅನುರಕ್ತನಾಗುವುದು ಪ್ರಾಣಿ ಹಿಂಸೆ, ಪರರ ಹಿಂಸೆ, ಭಯೋತ್ಪಾದಕ ಚಿಂತನೆ, ಅಸೂಯೆ, ಶಾಸ್ತ್ರ ವಿರೋಧ ಚಿಂತನೆ ಗಳಿಂದ ಆಗುವ ಆಘಾತ ಆಹಾರದಲ್ಲಿ ಖಾರ, ಒಗರು ಮತ್ತು ಕಹಿ ರಸಗಳ ಅತಿಯಾದ ಸೇವನೆ ಜಿಡ್ಡಿನ ಅಂಶವಿರದ ರೂಕ್ಷಾ ಹಾರದ ಸೇವನೆ ಶೀತ ವೀರ್ಯವುಳ್ಳ ದ್ರವ್ಯಗಳ ಅತಿಯಾದ ಸೇವನೆ ಒಣಗಿದ ಮಾಂಸ, ತರಕಾರಿಗಳು, ಉದ್ದು, ಅವರೇಕಾಳು, ಬಟಾಣಿಗಳ ಕ್ರಮ ಮೀರಿದ ಸೇವನೆ ಅತಿಯಾದ ಉಪವಾಸ ಮತ್ತು ಮೇಲಿಂದ ಮೇಲೆ ಹಸಿವನ್ನು ಗಮನಿಸದೆ ತಿನ್ನುವುದು ಕ್ರಮ ತಪ್ಪಿದ ಸ್ತ್ರೀಸಂಗ ಹಿತ ಮತ್ತು ಅಹಿತ ಆಹಾರಗಳ ಮಿಶ್ರ ಸೇವನೆ ಬೀಸುವ ಎದುರು ಗಾಳಿ ಸೇವನೆ ಬಾಯಾರಿಕೆಯನ್ನು ಗಮನಿಸದೆ ಅತಿಯಾದ ಜಲಪಾನ ಅತಿಯಾದ ಮದ್ಯಪಾನ ಮೇಲೆ ಹೇಳಿದ ಈ ಕಾರಣಗಳಲ್ಲಿ ಪದೇ ಪದೇ ನಮ್ಮನ್ನು ನಾವು ತೊಡಗಿಸಿಕೊಂಡರೆ ಶಿರೋಭಿ ಘಾತವಾಗಿ ಘೋರತರವಾದ ರೋಗಗಳು ಉಂಟಾಗುವುವು.

ಉದಾಹರಣೆಗೆ- ಮಾನ್ಯಾಸ್ತಂಭ, ಅರ್ದಿತ, ಕಣ್ಣುಗಳ ವಿಕೃತಿ, ತಲೆಯಲ್ಲಿ ನೋವು, ಚೇಷ್ಟಾ ನಾಶ, ಅಪಸ್ಮಾರ, ಕೆಮ್ಮು, ಉಬ್ಬುಸ, ಮಾತು ನಿಲ್ಲುವುದು, ಕಿವಿಯ ತೊಂದರೆ, ಸಂಜ್ಞೆ ನಾಶ, ಮೂರ್ಛಾ ರೋಗ ಇತ್ಯಾದಿ. ಶಿರೋಭಿಘಾತಕ್ಕೆ ಇರುವ ಕಾರಣಗಳನ್ನು ವರ್ಜಿಸು ವುದು ಶಿರಸ್ಸಿನ ರಕ್ಷಣೆಯ ಮೊದಲನೆಯ ವಿಧಾನ. ಇದರ ಜೊತೆಗೆ, ಶಿರಸ್ಸಿನ ಪೋಷಣೆ ಮತ್ತು ಬಲವರ್ಧನೆಯಿಂದ ಮರ್ಮ ಪರಿಪಾಲನೆ ಮಾಡುವುದು ಮತ್ತೊಂದು ವಿಧಾನ.

ವಾಹನ ಚಲಿಸುವಾಗ ಕಡ್ಡಾಯವಾಗಿ ಶಿರಸ್ಸನ್ನು ಎದುರು ಗಾಳಿಯಿಂದ ಮತ್ತು ಅಪಘಾತ ದಿಂದ ರಕ್ಷಿಸಿಕೊಳ್ಳಲು ಹೆಲ್ಮೆಟ್ ಅನ್ನು ಧರಿಸುವುದು ಉತ್ತಮ ರಕ್ಷಣಾ ವಿಧಾನ. ಮಳೆ ಯಲ್ಲಿ ಮತ್ತು ಬಿಸಿಲಲ್ಲಿ ಹೋಗುವಾಗ ಸದಾ ಛತ್ರಿ ಧಾರಣೆ ಮಾಡುವುದು. ‘ನಿತ್ಯಂ ಸ್ನೇಹಾರ್ದ್ರ ಶಿರಸಃ’ ಅಂತ ಹೇಳುತ್ತದೆ ಆಯುರ್ವೇದ. ಅಂದರೆ, ಪ್ರತಿನಿತ್ಯ ಶಿರಸ್ಸಿಗೆ ವಿವಿಧ ರೀತಿಯಲ್ಲಿ (ಅಭ್ಯಂಗ, ಸೇಕ, ಪಿಚು, ಬಸ್ತಿ) ತೈಲವನ್ನು ಹಾಕುವುದರಿಂದ ರೋಗಗಳು ಉಂಟಾಗುವುದಿಲ್ಲ ಮತ್ತು ಪ್ರಾಣ ಸಂರಕ್ಷಣೆಯೂ ಆಗುತ್ತದೆ.

ಇದರ ಜೊತೆಗೆ ಶಿರಸ್ಸಿಗೆ ಸಂತೃಪ್ತಿ, ಇಂದ್ರಿಯಗಳಿಗೆ ಸಂತರ್ಪಣ ಮತ್ತು ಬಲ ಲಭಿಸುವುದು. ಜೊತೆಗೆ ತಲೆನೋವು, ತಾರುಣ್ಯದಲ್ಲಿ ಕೂದಲು ಉದುರುವಿಕೆ, ಕೂದಲು ಬೆಳ್ಳಗಾಗುವುದು ಮುಂತಾದ ಸಮಸ್ಯೆಗಳು ಕಾಡುವುದಿಲ್ಲ. ನಿದ್ರೆಯೂ ಸಹ ತೃಪ್ತಿಕರವಾಗಿ ಬರುತ್ತದೆ ಮತ್ತು ಮುಖದ ಚರ್ಮದ ಕಾಂತಿ ಹೆಚ್ಚುತ್ತದೆ.

ಅಂತೆಯೇ, ಶರೀರಕ್ಕೆ ಅಭ್ಯಂಗ ಮಾಡಬೇಕು. ಪ್ರತಿನಿತ್ಯ ಖಾಲಿ ಹೊಟ್ಟೆಯಲ್ಲಿ ನಮ್ಮ ದೇಹಕ್ಕೆ ಎಣ್ಣೆ ಹಚ್ಚಿ ಸ್ನಾನ ಮಾಡುವುದರಿಂದ ಶರೀರಕ್ಕೆ ಪೆಟ್ಟಾದರೂ ಅದರಿಂದ ಮರ್ಮಾಭಿಘಾತವಾಗುವ ತೀವ್ರತೆಯನ್ನು ಕಡಿಮೆ ಮಾಡಬಹುದು. ಇದರಿಂದ ವಾತವನ್ನು ಸಂತುಲನದಲ್ಲಿ ಇಟ್ಟು ಧಾತುಗಳನ್ನು ಪೋಷಿಸಬಹುದು. ಮುಪ್ಪನ್ನು ಮುಂದೂಡಿ ಸದಾ ಲವಲವಿಕೆಯಿಂದ ಇರಬಹುದು.

ಪ್ರತಿನಿತ್ಯ ಮಲಗುವ ಮುನ್ನ ಎರಡೂ ಪಾದಗಳಿಗೆ ಎಣ್ಣೆಯನ್ನು ಸವರಿಕೊಳ್ಳುವುದರಿಂದ ನಯನಕ್ಕೆ ಪೋಷಣೆ ದೊರಕುವುದು ಮತ್ತು ಇಂದ್ರಿಯಗಳ ಕಾರ್ಯದಕ್ಷತೆ ಹೆಚ್ಚುವುದು. ಪ್ರತಿನಿತ್ಯ ನಸ್ಯದ ಅಭ್ಯಾಸ. ಶಿರಸ್ಸಿಗೆ ಮೂಗು ದ್ವಾರದಂತೆ. ಮೂಗಿನ ಮೂಲಕ ಪ್ರತಿನಿತ್ಯ ಕೆಲವು ಹನಿ ಎಣ್ಣೆಯನ್ನು ಹಾಕಿಕೊಳ್ಳುವುದರಿಂದ ಶಿರಸ್ಸಿಗೆ ಬಲ, ಇಂದ್ರಿಯಗಳಿಗೆ ಪಟು ತ್ವ, ಕುತ್ತಿಗೆಯ ಮೇಲ್ಭಾಗದ ರೋಗಗಳ ಪ್ರತಿರೋಧ ಉಂಟಾಗುವುದು. ಜೊತೆಗೆ ಇದು ಕೂದಲು ಉದುರುವ, ಬಿಳುಯಾಗುವ ಸಮಸ್ಯೆಯನ್ನು ತಡೆಯುತ್ತದೆ.

ತಲೆನೋವು, ದವಡೆ ಬಿಗಿತ, ನೆಗಡಿ ಮುಂತಾದ ತೊಂದರೆಗಳನ್ನು ಬಾರದಂತೆ ಕಾಪಾಡು ತ್ತದೆ. ಮುಖದ ಸೌಂದರ್ಯವನ್ನು ಹೆಚ್ಚಿಸುತ್ತದೆ. ಸುಖವಾದ ನಿzಯನ್ನೂ ನೀಡುತ್ತದೆ.

ಪ್ರತಿನಿತ್ಯ ಕರ್ಣಪೂರಣ ಮಾಡುವುದು. ಕಿವಿಗೆ ಬೆಚ್ಚಗಿನ ಎಣ್ಣೆಯನ್ನು ಸ್ನಾನದ ಮೊದಲು ಹಾಕುವುದು ಕೂಡ ಶಿರಸ್ಸಿನ ರಕ್ಷಣೆಗೆ ಇರುವ ಉಪಾಯಗಳಲ್ಲಿ ಒಂದು.ಈ ಅಭ್ಯಾಸವು ಕಿವಿಯ ಅತಿ ಸೂಕ್ಷ್ಮ ಭಾಗಗಳನ್ನು ಅಬ್ಬರದ, ಕರ್ಕಶವಾದ ಶಬ್ದಗಳಿಂದ ಹಾನಿಯಾಗುವು ದನ್ನು ತಡೆಯುತ್ತದೆ ಅಲ್ಲದೆ ಕಿವಿ ನೋವು, ಕತ್ತು ನೋವು, ದವಡೆ ನೋವನ್ನು ಸಹ ತಡೆಯುತ್ತದೆ.

ಇದರ ಜೊತೆಗ, ಕಣ್ಣಿಗೆ ತುಪ್ಪದ ಮೇಲ್ಭಾಗದ ತಿಳಿಯನ್ನು ಒಂದೆರಡು ಹನಿಯಂತೆ ಹಾಕು ವುದರಿಂದ ಕಣ್ಣಿನ ರಕ್ಷಣೆಯಾಗಿ ತನ್ಮೂಲಕ ಶಿರಸ್ಸು ಬಲಗೊಳ್ಳುತ್ತದೆ. ತಲೆಯ ಮೇಲೆ ಅತಿಯಾದ ಬಿಸಿ ನೀರಿನ ಸ್ನಾನದಿಂದ ಸುಸ್ತು, ತಲೆಸುತ್ತು, ಕಣ್ಣು ಕೂದಲುಗಳಿಗೆ ಅಪಾಯ. ಇದರಿಂದ ಶಿರಸ್ಸು ದುರ್ಬಲಗೊಳ್ಳುತ್ತದೆ. ಆದ್ದರಿಂದಲೇ ಸದಾ ತಲೆಗೆ ತಣ್ಣೀ ರನ್ನು ಬಳಸಿ ನಂತರ ಬಿಸಿ ನೀರನ್ನು ಕತ್ತಿನ ಕೆಳಭಾಗದ ಶರೀರಕ್ಕೆ ಸ್ನಾನ ಮಾಡಲು ಉಪ ಯೋಗಿಸಿದರೆ ನೋವುಗಳು ಶಮನವಾಗಿ, ಬಲ ಬರುತ್ತದೆ.

ರಾತ್ರಿ ಮಲಗುವ ಮುನ್ನ ಅತಿಯಾದ ನೀರು ಸೇವನೆ, ಶೀತ ಪದಾರ್ಥಗಳ ಸೇವನೆ, ಮೊಸರಿನ ಸೇವನೆ ಮತ್ತು ಹಣ್ಣಿನ ಸೇವನೆಯು ನೇರವಾಗಿ ಶಿರಸ್ಸಿನ ದೋಷಗಳ ವಿಕೃತಿ ಯನ್ನು ಉಂಟುಮಾಡಿ ರೋಗಗಳಿಗೆ ಎಡೆ ಮಾಡಿಕೊಡುತ್ತದೆ ಆದ್ದರಿಂದ ಸಂಜೆ ಬೇಗ ಊಟ ಮುಗಿಸಿ, ಊಟವಾದ ನಂತರ ಮಲಗುವ ತನಕ ಏನನ್ನೂ ಸೇವಿಸದೆ ಇರುವುದು ಶಿರಸ್ಸನ್ನು ಕಾಪಾಡುತ್ತದೆ.

ಇಂದ್ರಿಯಗಳ ಸಂಯಮವೂ ಶಿರೋರಕ್ಷಕ. ಅತಿಯಾಗಿ ಟಿವಿ, ಮೊಬೈಲ್, ಲ್ಯಾಪ್ಟಾಪ್‌ಗಳ ಬಳಕೆ, ‌ಅಬ್ಬರದ ಶಬ್ದ ಕೇಳುವುದು, ನಾಲಿಗೆ ಚಾಪಲ್ಯ, ತೀವ್ರವಾದ ಗಂಧವನ್ನು ಸದಾ ಸೇವಿಸುವುದು ಇತ್ಯಾದಿ ಸಲ್ಲದು. ಧ್ಯಾನ ಮತ್ತು ಪ್ರಾಣಾಯಾಮಗಳ ನಿತ್ಯ ಅಭ್ಯಾಸದಿಂದ ಶಿರಸ್ಸಿನ ಆಂತರಿಕ ಸಂತುಲನವನ್ನು ಕಾಪಾಡಿಕೊಳ್ಳಬಹುದು.

ಔಷಧಿಯ ಧೂಮಪಾನ - ಔಷಧ ದ್ರವ್ಯ ಮತ್ತು ತುಪ್ಪಗಳಿಂದ ತಯಾರಾದ ಧೂಮ ವರ್ತಿಯಿಂದ ಧೂಮಸೇವನೆ ಮಾಡುವುದು. ಇದರಿಂದ ವಾತ ಹಾಗೂ ಕಫ ದೋಷ ಗಳಿಂದ ಆಗುವ ಶಿರೋರೋಗಗಳನ್ನು ನಿವಾರಿಸಿ ಶಿರೋ ಕಪಾಲಕ್ಕೆ ಬಲವನ್ನು ನೀಡುತ್ತದೆ. ಕವಲ ಗ್ರಹ - ನಿತ್ಯವೂ ತೈಲಗಳಿಂದ ಹಲ್ಲುಜ್ಜಿದ ನಂತರ ಬಾಯಿ ಮುಕ್ಕಳಿಸುವುದು ಇಂದ್ರಿಯಗಳ ಸಾಮರ್ಥ್ಯವನ್ನು ಮತ್ತು ಶಿರಸ್ಸಿಗೆ ಬಲವನ್ನು ಎರೆಯುತ್ತದೆ.

ಬಸ್ತಿ ಕರ್ಮವೆಂಬ ಪಂಚಕರ್ಮ ಚಿಕಿತ್ಸೆ. ಮರ್ಮವನ್ನು ವಿಶೇಷವಾಗಿ ವಾತ ದೋಷದಿಂದ ರಕ್ಷಿಸಬೇಕು. ಏಕೆಂದರೆ, ವಾತವೇ ದೋಷಗಳ ಮೂಲಕರ್ತೃ. ವಾತವನ್ನು ಸಾಮ್ಯತೆಯಲ್ಲಿ ಇಡುವುದು ಬಸ್ತಿ ಕರ್ಮದಿಂದ ಸಾಧ್ಯ. ಮರ್ಮಗಳ ಪರಿಪಾಲನೆಯಲ್ಲಿ ಬಸ್ತಿ ಕರ್ಮಕ್ಕೆ ಸಮನಾದ ಚಿಕಿತ್ಸೆ ಮತ್ತೊಂದಿಲ್ಲ ಎಂಬುದು ಆಯುರ್ವೇದದ ಉಪಾಯ.

ಚಿಂತೆ, ಶೋಕ, ಭಯ, ಲೋಭ ಮತ್ತು ಅಸೂಯೆಗಳಿಂದ ಶಿರಸ್ಸಿನ ರೋಗಗಳು ಉತ್ಪತ್ತಿ ಯಾಗುತ್ತದೆ. ಆದ್ದರಿಂದ ಅರಿಷಡ್ವರ್ಗಗಳು ನಮ್ಮನ್ನು ಹಾಳು ಮಾಡದಂತೆ ‘ಸದ್ವೃತ್ತ’ ವೆಂಬ ಒಳ್ಳೆಯ ನಡುವಳಿಕೆಗಳ ಅಭ್ಯಾಸವನ್ನು ನಾವೆಲ್ಲರೂ ಮಾಡಬೇಕು. ಸ್ನೇಹ ಶೀಲತೆ, ಸಮಯಶೀಲತೆ, ಹಾಸ್ಯ ಮನೋಭಾವ, ಸಂತೃಪ್ತಿ, ತಾಳ್ಮೆ, ಕರುಣೆ ಮತ್ತು ಸಮಾಜದ ಸೌಖ್ಯವನ್ನು ಕಾಪಾಡುವಂತಹ ಪ್ರವೃತ್ತಿಯನ್ನು ಸದಾ ಅನುಸರಿಸಬೇಕು.

ಒಟ್ಟಾರೆ, ಹಿತಮಿತವಾದ ಭೋಜನ, ಸಕಾಲದಲ್ಲಿ ನಿದ್ರೆ, ಊಟದಲ್ಲಿ ಒಳ್ಳೆಯ ಜಡ್ಡಿನ ಉಪಯೋಗ, ನಿತ್ಯ ವ್ಯಾಯಾಮ, ಋತುವಿಗೆ ಅನುಗುಣವಾಗಿ ಶರೀರ ಶೋಧನೆ, ವಿವೇಚನೆ ಯಿಂದ ಕೂಡಿದ ನಡುವಳಿಕೆಗಳು, ಸಾತ್ವಿಕ ವಿಚಾರಗಳು ಶಿರಸ್ಸಿಗೆ ದೇಹದ ಒಳಗಿನ ದೋಷ ಗಳಿಂದ ಮತ್ತು ಬಾಹ್ಯ ಅಭಿಘಾತಗಳಿಂದ ರಕ್ಷಣೆಗಿರುವ ಸೂತ್ರಗಳು.

ಆರೋಗ್ಯಭಾಗ್ಯವನು ಮನಕೆ ತನುಗೆಂತಂತೆ ಹಾರಯಿಸುವೊಡೆ ಹಲವು ಸರಳ ನೀತಿಗಳ |

ಧಾರಯಿಸು ನೆನಸಿನಲಿ ನುಡಿಯಲ್ಲಿ ನಡತೆಯಲಿ ಪಾರಾಗು ಸುಳಿಯಿಂದ ಮಂಕುತಿಮ್ಮ ||

ಇದನ್ನೂ ಓದಿ: Jagadeesh Maane Column: ಅದು ಭವ್ಯ ಕಾಲವಾಗಿತ್ತು...

Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

robbery case shooting
1:49 PM January 16, 2025

Murder Case: ಸೆಕ್ಯೂರಿಟಿ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ ಮಾಡಿ 93 ಲಕ್ಷ ರೂ. ದರೋಡೆ

BBK 11 Mid week Elimination (1)
9:12 PM January 15, 2025

BBK 11: ಇಂದೇ ನಡೆಯಲಿದೆ ಮಿಡ್ ವೀಕ್ ಎಲಿಮಿನೇಷನ್: ಔಟ್ ಆದ ಸ್ಪರ್ಧಿ ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?

Naga Sadhus
11:15 PM January 18, 2025

Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ

Chaithra Kundapura remuneration (1)
7:13 AM January 16, 2025

BBK 11: ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರಗೆ ಸಿಕ್ಕ ಹಣ ಎಷ್ಟು ಗೊತ್ತೇ?

Honnamaradi jatre
5:53 PM January 15, 2025

Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು

Eshwara Khandre
6:54 PM January 16, 2025

Bidar ATM Robbery: ಬೀದರ್ ಎಟಿಎಂ ದರೋಡೆ ಪ್ರಕರಣ; ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ಖಂಡ್ರೆ ಸೂಚನೆ