ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Gururaj Gantihole Column: ಪರ್ಷಿಯಾದಿಂದ ಇರಾನ್:‌ ತೈಲ, ರಾಜಕೀಯ ಮತ್ತು ಶಕ್ತಿಯ ಪಯಣ

ಒಂಟೆ ವ್ಯಾಪಾರ, ಖರ್ಜೂರ ಕೃಷಿ, ಸಣ್ಣ ಪ್ರಮಾಣದ ವ್ಯಾಪಾರ ಸೇರಿದಂತೆ ಇತರೆ ಸಣ್ಣ ಆದಾಯ ಮೂಲಗಳೇ ಬದುಕಿನ ಆಧಾರವಾಗಿದ್ದವು. ಮರುಭೂಮಿ ಜೀವನ, ನೀರಿನ ಕೊರತೆ, ಆರೋಗ್ಯ ಮತ್ತು ಶಿಕ್ಷಣ ಇಲ್ಲದಂತಿತ್ತು. ರಾಜಾ ಇಬ್ನ್ ಸೌದ್ ಕಾಲದಲ್ಲಿ ರಾಷ್ಟ್ರ ಏಕೀಕರಣ ನಡೆದರೂ ಹಣದ ಕೊರತೆ ತೀವ್ರವಾಗಿತ್ತು. ಅಬುಧಾಬಿಯಲ್ಲಿ 1958ರಲ್ಲಿ ತೈಲ ಕಂಡು ಬಂದಿತು, 1962ರಲ್ಲಿ ರಫ್ತು ಆರಂಭ ಗೊಂಡಿತು.

ಪರ್ಷಿಯಾದಿಂದ ಇರಾನ್:‌ ತೈಲ, ರಾಜಕೀಯ ಮತ್ತು ಶಕ್ತಿಯ ಪಯಣ

-

ಗಂಟಾಘೋಷ

ತೈಲ ದೊರಕುವ ಪೂರ್ವದಲ್ಲಿ ಮಧ್ಯ ಪೂರ್ವದ ತೈಲ ರಾಷ್ಟ್ರಗಳು ಸಂಪೂರ್ಣ ವಿಭಿನ್ನ ಸಾಮಾ ಜಿಕ, ಆರ್ಥಿಕ ವಾಸ್ತವಿಕತೆಯಲ್ಲಿ ಬದುಕುತ್ತಿದ್ದರು. ಇಂದಿನ ಐಶ್ವರ್ಯ, ಗಗನಚುಂಬಿ ಕಟ್ಟಡಗಳು, ಪೆಟ್ರೋ ಡಾಲರ್ ಶಕ್ತಿ ಇವು ೨೦ನೇ ಶತಮಾನದ ಮಧ್ಯ ಭಾಗದ ನಂತರದ ಬೆಳವಣಿಗೆಗಳು.

1970ರ ದಶಕದ ನಂತರ, ವಿಶೇಷವಾಗಿ 1974ರ ಅಮೆರಿಕ- ಸೌದಿ ಒಪ್ಪಂದದ ಬಳಿಕ Petrodollar ವ್ಯವಸ್ಥೆ ಬಲಪಟ್ಟಿತು. ತೈಲವನ್ನು ಅಮೆರಿಕನ್ ಡಾಲರ್‌ನಲ್ಲಿ ವ್ಯಾಪಾರ ಮಾಡುವ ವ್ಯವಸ್ಥೆ ಬಲಪಡಿಸಲಾಯಿತು. ಇದರಿಂದ ಜಗತ್ತಿನ ಅನೇಕ ರಾಷ್ಟ್ರಗಳು ಡಾಲರ್ ಮೇಲೆ ಹೆಚ್ಚು ಅವಲಂಬಿತ ವಾಗುತ್ತಾ, ಅಮೆರಿಕದ ಆರ್ಥಿಕ ಪ್ರಭಾವ ಹೆಚ್ಚಾಯಿತು.

ಪ್ರಮುಖ ತೈಲ ರಾಷ್ಟ್ರಗಳಾದ ಇರಾನ್, ಸೌದಿ ಅರೇಬಿಯಾ, ಯುಎಇ, ಕತಾರ್, ಕುವೈತ್, ಇರಾಕ್ ತೈಲ ಯುಗದ ಪೂರ್ವದಲ್ಲಿ ಅವರ ಸ್ಥಿತಿ ಹೇಗಿತ್ತು ಎಂಬುದನ್ನು ಗಮನಿಸಿದಾಗ, ಆಧುನಿಕ ಜಗತ್ತಿನ ರಾಜಕೀಯ ಹಾಗೂ ವಾಣಿಜ್ಯ ಶಕ್ತಿ-ಸಾಮರ್ಥ್ಯಗಳ ಪರಿಚಯವಾಗುತ್ತದೆ.

ಆರ್ಥಿಕ ಪರಿವರ್ತನೆಗೆ ಮೊದಲು, ಈ ಪ್ರದೇಶವು ಮರುಭೂಮಿ ಮತ್ತು ಅರೆ ಶುಷ್ಕ ಭೂಭಾಗ ವಾಗಿತ್ತು. ಕೃಷಿಗೆ ನೀರಿನ ಕೊರತೆ, ಓಯಸಿಸ್ ಆಧಾರಿತ ಜೀವನ, ವ್ಯಾಪಾರ ಕಾರವಾನ್ ಮಾರ್ಗಗಳು, ಮುತ್ತುಗಳ ಮೇಲೆ ಮಾರಾಟ ಹಿಡಿತ (Pearl Diving) ಮುಂತಾದವು ಮುಖ್ಯ ಜೀವನಾ ಧಾರವಾಗಿ ದ್ದವು. ಧಾರ್ಮಿಕ ಕೇಂದ್ರಗಳ ಪ್ರಾಮುಖ್ಯತೆ ಹೆಚ್ಚು ಜೊತೆಗೆ ಜನಸಂಖ್ಯೆ ಕಡಿಮೆ, ಮೂಲ ಸೌಕರ್ಯ ದುರ್ದಶೆ ಮತ್ತು ಸೀಮಿತ ಶಿಕ್ಷಣ ಸೇರಿದಂತೆ ಅಂದಿನ ಕಾಲದಲ್ಲಿ ಈ ರಾಷ್ಟ್ರಗಳ ಜಿಡಿಪಿ ಅತ್ಯಂತ ಕಡಿಮೆ ಮಟ್ಟದಲ್ಲಿತ್ತು.

ಇರಾನ್ (ಪರ್ಷಿಯಾ) ತೈಲ ದೊರೆಯುವ ಮೊದಲಿನ ರಾಜಕೀಯ ಸ್ಥಿತಿ ಗಮನಿಸಿದಾಗ, ಕಾಜಾರ್ ವಂಶದ ಆಡಳಿತ ಹೊಂದಿದ್ದು, ಕೇಂದ್ರ ಆಡಳಿತವು ದುರ್ಬಲವಾಗಿತ್ತು. ಬ್ರಿಟನ್ ಮತ್ತು ರಷ್ಯಾ ಪ್ರಭಾವ ಸಹ ಕಾಣಬಹುದಾಗಿತ್ತು.

ಆರ್ಥಿಕತೆ ವಿಚಾರದಲ್ಲಿ, ಕೃಷಿ (ಗೋಧಿ, ಜೋಳ), ಹತ್ತಿ ಮತ್ತು ಹಾಸಿಗೆ (Persian carpets), ಸಿಲ್ಕ್ ಮಾರ್ಗ ವ್ಯಾಪಾರ, ತೆರಿಗೆ ಆಧಾರಿತ ರಾಜಶಕ್ತಿ ಮೇಲೆ ಅವಲಂಬಿತವಾಗಿತ್ತು. ಸಾಮಾಜಿಕವಾಗಿ ಜಮೀನ್ದಾರಿ ವ್ಯವಸ್ಥೆ, ಧಾರ್ಮಿಕ ಉಲೇಮಾ ಪ್ರಭಾವ, ಗ್ರಾಮೀಣ ಬಡತನ ಬಹುತೇಕವಾಗಿತ್ತು. ‌

ಇದನ್ನೂ ಓದಿ: Gururaj Gantihole Column: ಲೆಕ್ಕ ಪರಿಶೋಧಕ ಸಿಎಜಿ: ಜನರ ಹಣದ ಮೌನ ಕಾವಲುಗಾರ !

1908ರಲ್ಲಿ ಮಸ್ಜಿದ್-ಇ-ಸುಲೇಮಾನ್ ಪ್ರದೇಶದಲ್ಲಿ ತೈಲ ಪತ್ತೆಯಾಗುವ ಪೂರ್ವದಲ್ಲಿ ಇರಾನ್ ಆರ್ಥಿಕವಾಗಿ ಹಿಂದುಳಿದ, ಬಾಹ್ಯ ಶಕ್ತಿಗಳ ಪ್ರಭಾವದಲ್ಲಿದ್ದ ರಾಷ್ಟ್ರವಾಗಿತ್ತು. 1938ರಲ್ಲಿ ದಮ್ಮಾಮ್ ಪ್ರದೇಶದಲ್ಲಿ ತೈಲ ಕಂಡುಬಂದಿತು. ಸೌದಿ ಸಂಪೂರ್ಣವಾಗಿ ಹಜ್ ಆದಾಯ ಮತ್ತು ವ್ಯಾಪಾರಕ್ಕೆ ಅವಲಂಬಿತವಾಗಿತ್ತು.

ಒಂಟೆ ವ್ಯಾಪಾರ, ಖರ್ಜೂರ ಕೃಷಿ, ಸಣ್ಣ ಪ್ರಮಾಣದ ವ್ಯಾಪಾರ ಸೇರಿದಂತೆ ಇತರೆ ಸಣ್ಣ ಆದಾಯ ಮೂಲಗಳೇ ಬದುಕಿನ ಆಧಾರವಾಗಿದ್ದವು. ಮರುಭೂಮಿ ಜೀವನ, ನೀರಿನ ಕೊರತೆ, ಆರೋಗ್ಯ ಮತ್ತು ಶಿಕ್ಷಣ ಇಲ್ಲದಂತಿತ್ತು. ರಾಜಾ ಇಬ್ನ್ ಸೌದ್ ಕಾಲದಲ್ಲಿ ರಾಷ್ಟ್ರ ಏಕೀಕರಣ ನಡೆದರೂ ಹಣದ ಕೊರತೆ ತೀವ್ರವಾಗಿತ್ತು. ಅಬುಧಾಬಿಯಲ್ಲಿ 1958ರಲ್ಲಿ ತೈಲ ಕಂಡು ಬಂದಿತು, 1962ರಲ್ಲಿ ರಫ್ತು ಆರಂಭಗೊಂಡಿತು.

ಮುಂಚೆ, ಸಣ್ಣ ಮೀನುಗಾರಿಕೆ ಗ್ರಾಮಗಳು, ಮುತ್ತು ಹಿಡಿತ ಮುಖ್ಯ ಆದಾಯವಾಗಿ, ಬ್ರಿಟಿಷರ ರಕ್ಷಣಾ ಒಪ್ಪಂದದ ಅಡಿಯಲ್ಲಿ ನಡೆಯುತ್ತಿತ್ತು. ದುಬೈ ಮತ್ತು ಅಬುಧಾಬಿ ಇಂದಿನಂತಿರದೆ ಮಣ್ಣಿನ ಮನೆಗಳನ್ನು, ವಿದ್ಯುತ್ ಇಲ್ಲದ ಹಳ್ಳಿ ಪ್ರದೇಶಗಳನ್ನು ಹೊಂದಿತ್ತು. 1930ರ ಮಹಾಮಂದಿ ಹಾಗೂ ಜಪಾನಿನ ಕೃತಕ ಮುತ್ತು ಉತ್ಪಾದನೆಯ ಪರಿಣಾಮವಾಗಿ ಕತಾರ್ ತೀವ್ರ ಆರ್ಥಿಕ ಸಂಕಷ್ಟ ಕ್ಕೆ ಸಿಲುಕಿತು.

ತೈಲ ದೊರೆಯುವ ಮೊದಲು ಬಹುತೇಕ ಬಡತನ ಹೊಂದಿದ್ದ ದೇಶವಾಗಿತ್ತು. ಸಮುದ್ರ ವ್ಯಾಪಾರ, ಮುತ್ತು ಉದ್ಯಮ, ಸಣ್ಣ ವ್ಯಾಪಾರಿ ಸಮಾಜವನ್ನೇ ನಂಬಿಕೊಂಡಿದ್ದ ಕುವೈತ್ ದೇಶವು ಕಾಲಾಂತರ ದಲ್ಲಿ ಮುತ್ತು ಉದ್ಯಮ ಕುಸಿತದಿಂದ ದಾರಿದ್ರ್ಯ ಹೆಚ್ಚಾಯಿತು. ಇತರೆ ದೇಶಗಳಿಗೆ ಹೋಲಿಸಿದಲ್ಲಿ ಇರಾಕ್ ಸ್ಥಿತಿ ಸ್ವಲ್ಪ ವಿಭಿನ್ನವೆಂದೇ ಹೇಳಬಹುದು. ಮೆಸೆಪೊಟೇಮಿಯಾ ಕೃಷಿ ಪರಂಪರೆ, ಟೈಗ್ರಿಸ್ ಮತ್ತು ಯೂಫ್ರೇಟಿಸ್ ನದಿ ಆಧಾರಿತ ನಾಗರಿಕತೆಯ ಬಹುದೊಡ್ಡ ಇತಿಹಾಸ, ಒಟ್ಟೊಮಾನ್ ಸಾಮ್ರಾಜ್ಯದ ಭಾಗವಾಗಿದ್ದ ಈ ದೇಶವು ನಿರಂತರ ರಾಜಕೀಯ ಅಸ್ಥಿರತೆ ಅನುಭವಿಸಿತು ಮತ್ತು ಬ್ರಿಟಿಷ್ ಅವಧಿಯಲ್ಲಿ ಈ ದೇಶದ ಆರ್ಥಿಕ ಬೆಳವಣಿಗೆಯನ್ನು ತಡೆಹಿಡಿಯಲಾಗಿತ್ತು.

ಈ ಎಲ್ಲ ರಾಷ್ಟ್ರಗಳಲ್ಲಿ ತೈಲ ಸಿಕ್ಕ ಬಳಿಕ, ಜಾಗತಿಕ ತೈಲ ಕ್ರಾಂತಿಯೇ ನಡೆಯಿತೆನ್ನಬಹುದು. ತೈಲ ಸಂಪತ್ತು ಪ್ರಮುಖ ಕಾರಣವಾದರೂ, ಆಡಳಿತ ವ್ಯವಸ್ಥೆ ಮತ್ತು ಜಾಗತಿಕ ಹೂಡಿಕೆಗಳೂ ಮಹತ್ವದ ಪಾತ್ರವಹಿಸಿದ್ದವು.

1960ರಲ್ಲಿ OPEC ಸ್ಥಾಪನೆಯಾದ ನಂತರ, ತೈಲ ಉತ್ಪಾದಕ ರಾಷ್ಟ್ರಗಳು ಒಟ್ಟಾಗಿ ಜಾಗತಿಕ ಮಾರು ಕಟ್ಟೆಯಲ್ಲಿ ತಮ್ಮ ಪ್ರಭಾವವನ್ನು ಹೆಚ್ಚಿಸಿಕೊಳ್ಳಲು ಪ್ರಾರಂಭಿಸಿದವು. ಆದರೆ ತೈಲ ಸಂಪತ್ತು ಎಲ್ಲ ದೇಶಗಳಿಗೆ ಸಮಾನವಾಗಿ ಜನಕಲ್ಯಾಣ ತಂದುಕೊಡಲಿಲ್ಲ; ಕೆಲವೊಮ್ಮೆ ಇದು ’resource curse’ (ಸಂಪನ್ಮೂಲವೇ ಶಾಪ) ರೂಪದಲ್ಲಿ ರಾಜಕೀಯ ನಿಯಂತ್ರಣ ಮತ್ತು ಅಸಮಾನತೆಯನ್ನು ಹೆಚ್ಚಿಸಿತು.

ಕೆಲವು ರಾಷ್ಟ್ರಗಳಲ್ಲಿ (ಉದಾ: ಇರಾಕ್, ಇರಾನ್) ತೈಲ ಸಂಪತ್ತು ರಾಜಕೀಯ ಅಸ್ಥಿರತೆ ಮತ್ತು ವಿದೇಶಿ ಹಸ್ತಕ್ಷೇಪಕ್ಕೆ ಕಾರಣವಾಯಿತು. 1973ರಲ್ಲಿ ನಡೆದ ’1973 ಆಯಿಲ್ ಕ್ರೈಸಿಸ್’ ಸಮಯದಲ್ಲಿ ಅರಬ್ ರಾಷ್ಟ್ರಗಳು ಪಾಶ್ಚಾತ್ಯ ದೇಶಗಳಿಗೆ ತೈಲ ನಿರ್ಬಂಧ ಹೇರಿದ ಪರಿಣಾಮ, ಜಾಗತಿಕ ಆರ್ಥಿಕತೆ ಯ ಮೇಲೆ ಭಾರೀ ಪರಿಣಾಮ ಬೀರಿತು. ತೈಲ ಪತ್ತೆಯಾಗುವ ಪೂರ್ವದಲ್ಲಿ ಇರಾನ್ ಕೃಷಿ ಆಧಾರಿತ, ವಿದೇಶಿ ಪ್ರಭಾವಿತವಾಗಿತ್ತು.

ಸೌದಿ - ಮರುಭೂಮಿ ಧಾರ್ಮಿಕ, ಆರ್ಥಿಕತೆ ಹೊಂದಿತ್ತು. ಯುಎಇ / ಕತಾರ್ / ಕುವೈತ್ ಮುತ್ತು ಗಳ ವಹಿವಾಟು ಸಮಾಜ ಹೊಂದಿದ್ದವು. ಇರಾಕ್ ದೇಶವು ಕೃಷಿ ಮತ್ತು ಸಾಮ್ರಾಜ್ಯ ಪರಂಪರೆ ಹೊಂದಿತ್ತು. ತೈಲ ಸಿಕ್ಕ ನಂತರ ಸಂಪತ್ತು, ಶಕ್ತಿ-ಸಾಮರ್ಥ್ಯ ಹೆಚ್ಚಾಗಿದ್ದಲ್ಲದೇ ಯುದ್ಧ, ಜಗತ್ತಿನ ರಾಜಕೀಯ ಪೈಪೋಟಿಯಿಂದಾಗಿ ಜಾಗತಿಕ ಮಟ್ಟದಲ್ಲಿ ಈ ಪುಟ್ಟ ರಾಷ್ಟ್ರಗಳು ಗುರುತಿಸ ಲ್ಪಟ್ಟವು.

ಇರಾನ್‌ನ ಪುರಾತನ ಇತಿಹಾಸ, ಪರ್ಷಿಯಾ ಎಂಬುದು ಇರಾನ್ ಆಗಿ ಬದಲಾಯಿತು. ಇಸ್ಲಾಮಿನ ಪ್ರವೇಶ ಮತ್ತು ಶರಿಯಾ ಸಂಪ್ರದಾಯದ ಪರಿಣಾಮಗಳು, ತೈಲದ ಅನ್ವೇಷಣೆ ಮತ್ತು ಆರ್ಥಿಕ ರಾಜಕೀಯದಂಥ ಬದಲಾವಣೆಗಳು ಅಲ್ಲಿ ಕಂಡುಬಂದವು. ಇರಾನ್ ಜಲಮಾರ್ಗ ಮತ್ತು ಅದರ ಜಾಗತಿಕ ಪ್ರಾಮುಖ್ಯತೆ, ಇತರೆ ದೇಶಗಳು ಮತ್ತು ಇರಾನ್‌ನೊಂದಿಗೆ ಹೊಂದಿರುವ ಸಂಬಂಧಗಳು ಸದ್ಯದ ಅಂತರ ರಾಷ್ಟ್ರ ರಾಜಕೀಯ, ತೈಲ, ಯುದ್ಧ ಹಾಗೂ ರಾಜಕೀಯ ರೆಜಿಮ್ ಬದಲಾಯಿಸು ವಂತಹ ಚರ್ಚೆಯ ವಿಚಾರದಲ್ಲಿ ಮುಂಚೂಣಿಯಲ್ಲಿದೆ ಎಂಬುದು ಸ್ಪಷ್ಟವಾಗುತ್ತದೆ.

ಇರಾನ್ /ಪರ್ಷಿಯಾ ಪಶ್ಚಿಮ ಏಷ್ಯಾದಲ್ಲಿನ ಹಳೆಯ ನಾಗರಿಕತೆಯಾಗಿದ್ದು, ಕ್ರಿಸ್ತಪೂರ್ವ 7ನೇ ಶತಮಾ ನದಲ್ಲಿ ಮೆಡಿಯನ್ ಸಾಮ್ರಾಜ್ಯದಿಂದ ಪ್ರಾರಂಭವಾಗಿತ್ತು. ಸೈರಸ್ ಮಹಾನದ ಅಕಿಮೆನಿಡ್ ಸಾಮ್ರಾಜ್ಯವು ಸುಮಾರು ಕ್ರಿಸ್ತಪೂರ್ವ 550ರಲ್ಲಿ ಸ್ಥಾಪಿತವಾಗಿತ್ತು. ಪರ್ಷಿಯಾ ಎಂಬ ಪದ ಗ್ರೀಕ್ ಭಾಷೆಯಿಂದ ಬಂದಿದ್ದು, ಇದು ಪರ್ಷಾ (Parsa) ಪ್ರದೇಶದ ಹೆಸರಾಗಿತ್ತು. 1935ರ ಪ್ರಾರಂಭದಲ್ಲಿ ರೆಝಾ ಶಾ ಪಹ್ಲವಿ ಪರ್ಶಿಯಾ ದೇಶವನ್ನು ಇರಾನ್ ಎಂದು ಪರಿವರ್ತಿಸಲು ಚಾಲನೆ ನೀಡಿದರು,

ಅದೇ ವರ್ಷ ಮಾರ್ಚ್ 21ರಂದು ಇರಾನ್ ಎಂದು ಅಧಿಕೃತವಾಗಿ ಬದಲಾಯಿತು. ಪುರಾತನ ಕಾಲದಿಂದ ಪರ್ಶಿಯಾದೇ ಆ ಪ್ರದೇಶಕ್ಕೆ ಮೂಲ ಹೆಸರು ಎಂದು ಬಳಸಲ್ಪಟ್ಟರೂ, 20ನೇ ಶತಮಾನದಲ್ಲಿ ರಾಜಕೀಯ, ಭಾಷಾ -ಸಾಂಸ್ಕೃತಿಕ ಕಾರಣಗಳಿಂದ ಇರಾನ್ ಅಧಿಕೃತ ಹೆಸರು ಆಯಿತು. ಇಸ್ಲಾಮಿನ ಪ್ರವೇಶ ಮತ್ತು ಶೆರಿಯಾ ಬಗ್ಗೆ ಗಮನಿಸಿದಾಗ, 7ನೇ ಶತಮಾನದಲ್ಲಿ ರಾಶಿದೂನ್ ಖಲೀಫತ್ ನಿಂದ ಪರ್ಷಿಯಾ ಮೇಲೆ ಆಕ್ರಮಣ ನಡೆಯಿತು.

ಝೋ ರಾಷ್ಟ್ರಿಯನ್ ಧರ್ಮದಿಂದ ಇಸ್ಲಾಂ ಧರ್ಮಕ್ಕೆ ಕ್ರಮೇಣ ಬದಲಾಯಿಸಲಾಯಿತು. ಝೋ ರಾಷ್ಟ್ರಿಯನ್ ಬೆಂಬಲಿಗರು, ಇಸ್ಲಾಮಿಕ್ ಬೆಂಬಲಿಗರ ನಡುವೆ ನಡೆಯುತ್ತಿದ್ದ ಘರ್ಷಣೆಗಳು ನಂತರ ದಲ್ಲಿ ರಾಜಕೀಯ ರೂಪ ಪಡೆದುಕೊಂಡವು.ಇಸ್ಲಾಮೀಕರಣದ ಪ್ರಕ್ರಿಯೆ ಕೆಲವೊಮ್ಮೆ ಸಂಘರ್ಷ ಮತ್ತು ಪ್ರತಿರೋಧಕ್ಕೂ ಕಾರಣವಾಯಿತು ಎಂದು ಕೆಲವು ಇತಿಹಾಸಕಾರರು ಹೇಳಲಾಗುತ್ತಿದ್ದರೂ, ಕಾಲೋನಿಯಲ್ ಗಡಿಗಳು ( Britain, France), ತೈಲ ನಿಯಂತ್ರಣ, ಶೀತಲ ಯುದ್ಧ, ರಾಜಕೀಯ, ಸ್ಥಳೀಯ ಅಧಿಕಾರ ಹೋರಾಟಗಳು ಪ್ರಮುಖವಾಗಿ ತೈಲ ವ್ಯಾಪಾರ-ಸಾಗಾಣಿಕೆ ಮತ್ತು ಬಂದರು ಮೇಲಿನ ಹಿಡಿತ ಸಾಧಿಸಲು ಅಮೆರಿಕ ಸೇರಿದಂತೆ ಪ್ರಮುಖ ರಾಷ್ಟ್ರಗಳು ತಮ್ಮ ಹಿತಾಸಕ್ತಿಗಳನ್ನು ಕಾಪಾಡಲು ಈ ಪ್ರದೇಶದಲ್ಲಿ ಪ್ರಭಾವ ಬೀರುವ ಪ್ರಯತ್ನ ಮಾಡುತ್ತಿವೆ ಎಂದು ಕೆಲ ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ.

ಜಿಯೋ-ಪಾಲಿಟಿಕ್ಸ್‌ನಲ್ಲಿ ಅಮೆರಿಕ, ಇರಾನ್, ಸೌದಿ ಅರೇಬಿಯಾ ಸೇರಿದಂತೆ ಎಲ್ಲರಿಗೂ ತಮ್ಮದೇ ಹಿತಾಸಕ್ತಿಗಳಿವೆ. ಇದೇ ಸಂದರ್ಭದಲ್ಲಿ ಚೀನಾ ಮಧ್ಯಪೂರ್ವದಲ್ಲಿ ತನ್ನ ಪ್ರಭಾವವನ್ನು ವೇಗವಾಗಿ ವಿಸ್ತರಿಸುತ್ತಿದೆ. ತೈಲ ಆಮದು, ಹೂಡಿಕೆಗಳು ಮತ್ತು ಬೆಲ್ಟ್ ಆಂಡ್ ರೋಡ್ ಮೂಲಕ, ಈ ಪ್ರದೇಶ ದಲ್ಲಿ ಆರ್ಥಿಕ ಮತ್ತು ರಾಜತಾಂತ್ರಿಕ ಶಕ್ತಿಯಾಗಿ ಹೊರಹೊಮ್ಮುತ್ತಿದೆ.

1901ರಲ್ಲಿ ಡಾರ್ಸಿ ಒಪ್ಪಂದ ದ್ವಾರಾ ಪರ್ಶಿಯಾದ (ಇಂದಿನ ಇರಾನ್) ಉಳಿದ ಪ್ರದೇಶಗಳಲ್ಲಿ ತೈಲದ ಅನ್ವೇಷಣೆಗೆ ನಿರ್ಧರಿಸಿದಾಗ, ಇಲ್ಲಿ ಪ್ರವೇಶ ಹಕ್ಕುಗಳು ಬ್ರಿಟಿಷ್ ನಿರ್ಧಾರಕಾರರಿಗೆ ದೊರೆತವು. 1908ರಲ್ಲಿ ಪರ್ಶಿಯಾದ ಮಸ್ಜಿದ್ ಸುಲೇಮಾನ್ ಪ್ರದೇಶದಲ್ಲಿ ತೈಲ ವ್ಯಾಪಕ ಪ್ರಮಾಣ ದಲ್ಲಿ ಕಂಡುಬಂದು, ಇದು ಮುಂದಿನ ಆಂಗ್ಲ- ಪರ್ಷಿಯನ್ ಕಂಪನಿ ವ್ಯವಹಾರಕ್ಕೆ ಮುನ್ನುಡಿ ಬರೆಯಿತು.

ತೈಲ ವಾಣಿಜ್ಯವು ಆರ್ಥಿಕವಾಗಿ ಇರಾನ್ ಅನ್ನು ಜಾಗತಿಕವಾಗಿ ಪ್ರಮುಖ ಶಕ್ತಿ ಸಂಪನ್ಮೂಲ ರಾಷ್ಟ್ರವಾಗಿ ಪರಿಗಣಿಸಿತು. ಇದು ಬ್ರಿಟನ್, ರಷ್ಯಾ ಮುಂತಾದ ದೇಶಗಳ ಹೂಡಿಕೆ ಮತ್ತು ಹಸ್ತಕ್ಷೇಪ ಕ್ಕೆ ಕಾರಣವಾಯಿತು. ಬಳಿಕ, 20ನೇ ಶತಮಾನದಲ್ಲಿ ನೈಸರ್ಗಿಕ ಸಂಪನ್ಮೂಲಗಳ ಮೇಲೆ ನಿಯಂತ್ರಣ ನಡೆದಂತೆ, ರಾಜಕೀಯ ಸವಾಲುಗಳು ಏರಿಕೆಯಾಗಿದವು.

ರಾಜಕೀಯ ಉತ್ತರಾಧಿಕಾರ ವಿವಾದದಿಂದ ಆರಂಭವಾದ ಪರ್ಷಿಯಾದ ಇಸ್ಲಾಮೀಕರಣ, ನಂತರ ಮತ್ತಷ್ಟು ಬಲಗೊಂಡಿತು. 16ನೇ ಶತಮಾನದಲ್ಲಿ ಸಫಾವಿಡ್ ವಂಶ ಇರಾನ್ ಅನ್ನು ಶಿಯಾ ರಾಷ್ಟ್ರ ವನ್ನಾಗಿ ಘೋಷಿಸಿದುದು ಇಂದಿನ ಮಧ್ಯಪೂರ್ವ ರಾಜಕೀಯದ ಮೂಲ ಕಾರಣಗಳಲ್ಲಿ ಒಂದಾ ಗಿದೆ. ಮೊಸಾದೆಘ್ ತೈಲ ಉದ್ಯಮವನ್ನು ರಾಷ್ಟ್ರೀಯೀಕರಣ ಮಾಡಲು ಯತ್ನಿಸಿದ ಕಾರಣ ಪಾಶ್ಚಾತ್ಯ ರಾಷ್ಟ್ರಗಳ ಹಸ್ತಕ್ಷೇಪ ಹೆಚ್ಚಾಯಿತು.

1953ರಲ್ಲಿ ಅಮೆರಿಕ - ಬ್ರಿಟನ್ ಬೆಂಬಲಿತ ಪ್ರಧಾನಿ ಮೊಸಾದೆಘ್ ಅಽಕಾರ ಕಳೆದುಕೊಂಡದ್ದು, ಇಂದಿನ ಇರಾನ್ ಹಾಗೂ ಪಶ್ಚಿಮ ಸಂಬಂಧಗಳ ತೀವ್ರತೆಗೆ ಕಾರಣವಾಗಿದೆ. ಮುಂದೆ, 1979ರ ಸ್ಲಾಮಿಕ್ ಕ್ರಾಂತಿ ಇರಾನ್ ಅನ್ನು ಧರ್ಮಾಧಿಷ್ಠಿತ ಗಣರಾಜ್ಯವಾಗಿ ಪರಿವರ್ತಿಸಿತು.

ಸೌದಿ, ಅರಬ್ ಮತ್ತು ಗಲ್ಫ್ ರಾಷ್ಟ್ರಗಳು ಸುನ್ನಿ ಪರವಾಗಿದ್ದರೆ,‌ ಇರಾನ್, ಇರಾಕ್, ಲೆಬನಾನ್ (ಹೆಜ್ಬು), ಸಿರಿಯಾ (ಅಲವೈಟ್) ದೇಶಗಳು ಶಿಯಾ ಪರವಾಗಿರುವುದರಿಂದ ಇಲ್ಲಿ ಧರ್ಮಕ್ಕಿಂತ ಶಕ್ತಿ ಪ್ರಾಬಲ್ಯ ತೋರಿಸಲು ನಡೆಯುವ ಹೋರಾಟವೆಂದೇ ಅಂತಾರಾಷ್ಟ್ರೀಯ ರಾಜಕೀಯದಲ್ಲಿ ಗುರುತಿಸಲ್ಪಟ್ಟಿದೆ.

ಮಧ್ಯ ಪೂರ್ವ ಇಂದು ಕೇವಲ ಧಾರ್ಮಿಕ ಸಂಘರ್ಷವಲ್ಲ - ಅದು, ಎನರ್ಜಿ ರಾಜಕೀಯ, ಸಾಗಣೆ ಮಾರ್ಗ ನಿಯಂತ್ರಣ, ಅಣುಶಕ್ತಿ ಸಮತೋಲನ, ಧಾರ್ಮಿಕ ಸಂಘರ್ಷ ಕಾರಣವಾಗಿದ್ದರೂ, ಇಂದಿನ ಸಂಘರ್ಷದಲ್ಲಿ ಅಂತರಾಷ್ಟ್ರೀಯ ರಾಜಕೀಯ ಮತ್ತು ತೈಲಶಕ್ತಿಯ ಹಿತಾಸಕ್ತಿಗಳು ಪ್ರಮುಖವಾಗಿವೆ.

ಹಾರ್ಮುಜ್ ಮತ್ತು ಬಾಬ್ ಅಲ್-ಮಂದಬ್- ಇವು‌ ಮಧ್ಯ ಪೂರ್ವದ ಹೃದಯದ ಧಮನಿಗಳು. ಧಾರ್ಮಿಕ ವಿಚಾರವನ್ನು ಬದಿಗಿಟ್ಟು ನೋಡಿದಾಗ, ಜಾಗತಿಕ ಮಟ್ಟದಲ್ಲಿ ರಾಜಕೀಯ, ವ್ಯಾಪಾರಿಕ ದೃವೀಕರಣ ಮಾಡುವಷ್ಟು ಸಾಮರ್ಥ್ಯವನ್ನು ಇರಾನ್ ಜಲಮಾರ್ಗ ಹೊಂದಿದೆ.

ಜಗತ್ತಿನ ಅತ್ಯಂತ ಪ್ರಮುಖ ಎನರ್ಜಿ ಮಾರ್ಗಗಳಲ್ಲಿ ಒಂದಾಗಿರುವ, ಪರ್ಷಿಯನ್ ಗಲ್ಫ್ ಮತ್ತು ಅರೇಬಿಯನ್ ಸಮುದ್ರವನ್ನು‌ ಸಂಪರ್ಕಿ ಸುವ ಸುಮಾರು 33 ಕಿಮೀ ಅಗಲವಿರುವ ಈ ಜಲಮಾರ್ಗ ಅತ್ಯಂತ ಪ್ರಮುಖ ವಾಗಿದೆ. ಪ್ರತಿದಿನ ಸುಮಾರು 1720 ಮಿಲಿಯನ್ ಬ್ಯಾರಲ್ ತೈಲ (ಜಾಗತಿಕ ಸರಬರಾಜಿನ ಸುಮಾರು 20%) ಈ ಮಾರ್ಗ ದಿಂದ ಸಾಗುತ್ತದೆ.

ಇದು ತೈಲ ಹಾಗೂ ಲಿಕ್ವಿಫೈಡ್ ನ್ಯಾಚುರಲ್ ಗ್ಯಾಸ್ (LNG)ಗಳಿಗೆ ಅತ್ಯಂತ ಪ್ರಮುಖ ಮಾರ್ಗ ವಾಗಿದೆ. ಸೌದಿ ಅರೇಬಿಯಾ, ಯುಎಇ, ಕತಾರ್ ತೈಲ ರಫ್ತು ಇದೇ ಮಾರ್ಗ ಬಳಕೆಯಾಗುತ್ತದೆ. ಇರಾನ್ ಪ್ರಾಕೃತಿಕ ಅನಿಲ ಸಂಪತ್ತಿನಲ್ಲಿ ಪ್ರಮುಖವಾದರೂ, LNG ರಫ್ತಿನಲ್ಲಿ ಕತಾರ್ ಮುಂಚೂಣಿ ಯಲ್ಲಿದೆ.

ಹಾರ್ಮುಜ್‌ನ ಜಲಮಾರ್ಗದ ಮೇಲಿನ ನಿಯಂತ್ರಣ ಇರಾನ್‌ಗೆ ವಿಶ್ವ ರಾಜಕೀಯ ರಂಗದಲ್ಲಿ ದೊಡ್ಡ ಶಕ್ತಿ ನೀಡುತ್ತದೆ. ಇಂದಿನ ದಿನಗಳಲ್ಲಿ Iran Nuclear Issue ಪ್ರಮುಖ ಜಾಗತಿಕ ವಿವಾದ ವಾಗಿದೆ. ಇರಾನ್ ತನ್ನ ಅಣು ಕಾರ್ಯಕ್ರಮವನ್ನು ಶಾಂತಿಯುತವೆಂದು ಹೇಳುತ್ತಿದ್ದರೂ, ಪಾಶ್ಚಾತ್ಯ ರಾಷ್ಟ್ರಗಳು ಭದ್ರತಾ ಅಪಾಯವಾಗಿ ಪರಿಗಣಿಸುತ್ತಿವೆ.

ಕೆಲವು ವಿಶ್ಲೇಷಕರ ಪ್ರಕಾರ, ಈ ಪ್ರದೇಶದ ತೈಲ ಮತ್ತು ಸಾಗಣೆ ಮಾರ್ಗಗಳ ಮೇಲಿನ ಪ್ರಭಾವ ವನ್ನು ಉಳಿಸಿಕೊಳ್ಳುವುದು ಅಮೆರಿಕಾದ ಪ್ರಮುಖ ಹಿತಾಸಕ್ತಿಗಳಂದಾಗಿದೆ. ಯುದ್ಧಗಳ ಮೂಲಕ ಮಾನವ ಜನಾಂಗ ಉನ್ನತಿ ಸಾಧಿಸಿದ್ದು ಇತಿಹಾಸದಲ್ಲಿ ಸಾಧ್ಯಂತ ಇಲ್ಲವೆನ್ನಬಹುದು.

ಹೀಗಿದ್ದರೂ, If you want peace, prepare for war (Si vis pacem, para bellum) ಎಂಬ ಲ್ಯಾಟಿನ್ ಗಾದೆಯನ್ನು ಇಂದಿನ ಮುಂದುವರೆದ ರಾಷ್ಟ್ರಗಳೆನಿಸಿಕೊಂಡವರು ಅನುಸರಿಸುತ್ತಿರುವುದು ಜಾಗತಿಕ ರಾಜಕೀಯದ ವೈರುಧ್ಯಗಳನ್ನು ಸ್ಪಷ್ಟಪಡಿಸುತ್ತದೆ. ಜಾಗತಿಕ ರಾಜಕೀಯದಲ್ಲಿ ಸುಮ್ಮನೆ ಇರಲಾರದಂತಹ ಪರಿಸ್ಥಿತಿಯನ್ನು ರಾಷ್ಟ್ರಗಳು ಪರಸ್ಪರವಾಗಿ ನಿರ್ಮಿಸಿಕೊಳ್ಳುತ್ತವೆ.ಯುದ್ಧ ಮತ್ತು ಪ್ರೀತಿಯ ಸಂಘರ್ಷದಲ್ಲಿ ಸರಿ-ತಪ್ಪು ಇಲ್ಲವೆಂದೂ ಮತ್ತು ಎಲ್ಲಿಗೆ ಹೋಗಿ ಮುಟ್ಟುವುದೋ, ತಿಳಿಯದು ಎಂದು 1579ರಲ್ಲಿ ರಚಿತವಾದ ಜಾನ್ ಲೈಲಿಯ ಯುಫ್ಯೂಸ್ ಕಾದಂಬರಿಯ ಸಾಲು ನೆನಪಾಗುತ್ತದೆ. ಮಧ್ಯಪೂರ್ವದ ಯುದ್ಧಗಳು ಧರ್ಮದ ಹೆಸರಿನಲ್ಲಿ ನಡೆದರೂ, ಅವುಗಳ ನೆರಳಿ ನಲ್ಲಿ ತೈಲ, ಜಲಮಾರ್ಗ ಮತ್ತು ಜಾಗತಿಕ ಶಕ್ತಿಯ ಆಟ ನಡೆಯುತ್ತಿದೆ.