Roopa Gururaj Column: ಹೇಗೆ ಬದುಕುತ್ತೇವೆ ಎನ್ನುವುದು ಮುಖ್ಯ !
ರಾಜನಿಗೆ ಅವನನ್ನು ನೋಡಿ ಬರೀ ಅಮರತ್ವದಿಂದ ಏನೂ ಪ್ರಯೋಜನವಿಲ್ಲ, ಅದರ ಜೊತೆಗೆ ಯೌವ್ವನವನ್ನು ಪಡೆದುಕೊಂಡರೆ ಆಗ ಸರಿ ಹೋಗಬಹುದು ಎಂದು ಮತ್ತೆ ಋಷಿಯ ಮೊರೆ ಹೋದ. ಆಗ ಋಷಿಗಳು, ‘ನಿನಗೆ ಇದೇ ಸರೋವರನ್ನು ದಾಟಿದ ನಂತರ, ಮತ್ತೊಂದು ಮಹಾ ಪರ್ವತ ಕಾಣುತ್ತದೆ, ಅದನ್ನು ದಾಟಿದರೆ, ಹಳದಿ ಹಣ್ಣುಗಳಿಂದ ತುಂಬಿದ ಮರವೊಂದು ಕಾಣು ತ್ತದೆ, ಅವುಗಳಲ್ಲಿ ಒಂದು ಹಣ್ಣನ್ನು ತಿಂದರೆ, ನೀನು ಅಮರತ್ವ ಮತ್ತು ಯವ್ವನ ಎರಡನ್ನೂ ಪಡೆಯುತ್ತೀಯ’ ಎಂದು ಹೇಳಿದರು.


ಊರ ಹೊರಗಿನ ಮರದ ಕೆಳಗೆ ಸದಾ ಧ್ಯಾನಸ್ಥರಾಗಿ ಕುಳಿತಿರುವ ಒಬ್ಬ ಋಷಿಯ ಬಳಿಗೆ, ಒಬ್ಬ ರಾಜ ಹೋಗಿ, ಗುರುಗಳೇ, ಅಮರತ್ವವನ್ನು ನೀಡುವ ಯಾವುದಾದರೂ ಔಷಧಿ, ಅಥವಾ ಗಿಡಮೂಲಿಕೆಗಳಿದ್ದರೆ ದಯವಿಟ್ಟು ನನಗೆ ತಿಳಿಸಿ, ಎಂದು ಕೇಳಿದ. ಆಗ ಋಷಿಗಳು, ರಾಜ ಇಲ್ಲಿರುವ ಎರಡು ಮಹಾ ಪರ್ವತಗಳನ್ನು ದಾಟಿದ ನಂತರ, ಅಲ್ಲಿ ಒಂದು ಸರೋ ವರವಿದೆ, ಅದರ ನೀರನ್ನು ಕುಡಿದಾಗ, ನೀನು ಅಮರನಾಗುವೆ, ಎಂದು ಹೇಳಿದರು. ಋಷಿಗಳು ಹೇಳಿದಂತೆ ಎರಡು ಪರ್ವತಗಳನ್ನು ದಾಟಿದ ನಂತರ ರಾಜ, ಒಂದು ಸರೋವರ ವನ್ನು ಕಂಡ. ಇನ್ನೇನು ಅದರಲ್ಲಿನ ನೀರು ಬಾಚಿ ಕುಡಿಯಬೇಕೆಂದು ಕೊಂಡಾಗ, ಯಾರೋ ಜೋರಾಗಿ ನರಳುತ್ತಿರುವಂತ ಶಬ್ದ ಕೇಳಿಸಿತು. ಶಬ್ದ ಬಂದ ಕಡೆಗೆ ಹೋಗಿ ನೋಡಿದರೆ, ಅಲ್ಲೊಬ್ಬ ಅತ್ಯಂತ ದುರ್ಬಲ ವ್ಯಕ್ತಿಯನ್ನು ಕಂಡನು.
ಆ ವ್ಯಕ್ತಿ ನರಳುತ್ತಿರುವ ಕಾರಣವನ್ನು ರಾಜ ಕೇಳಿದಾಗ, ಆತ ‘ನಾನು ಈ ಸರೋವರದ ನೀರನ್ನು ಕುಡಿದು ಅಮರ ನಾದೆ, ನನಗೆ ನೂರು ವರ್ಷ ತುಂಬಿದ ನಂತರ ನನ್ನ ಮಗ ನನ್ನನ್ನು ಮನೆಯಿಂದ ಆಚೆ ಓಡಿಸಿದ, ಕಳೆದ ಐವತ್ತು ವರ್ಷಗಳಿಂದ ನಾನು ಹೀಗೇ ಇಲ್ಲೇ, ನರಳುತ್ತಾ ಮಲಗಿದ್ದೇನೆ, ನನ್ನನ್ನು ನೋಡಿಕೊಳ್ಳಲು ಯಾರೂ ಇಲ್ಲ, ನನ್ನ ಮಗ ಈಗ ತೀರಿಕೊಂಡಿದ್ದಾನೆ, ನನ್ನ ಮೊಮ್ಮಕ್ಕಳೂ ಈಗ ವೃದ್ಧರಾಗಿದ್ದಾರೆ, ಸಾಯಬೇಕೆಂದುಕೊಂಡು ನಾನು, ಅನ್ನ, ನೀರು ಸೇವಿಸುವುದನ್ನು ಬಿಟ್ಟು ಬಿಟ್ಟಿದ್ದೇನೆ, ಆದರೂ ಕೂಡ ನಾನಿನ್ನು ಬದುಕಿದ್ದೇನೆ’ ಎಂದು ದುಃಖಿಸುತ್ತಾ ಹೇಳಿದ.
ಇದನ್ನೂ ಓದಿ: Roopa Gururaj Column: ಮಕ್ಕಳಿಗೆ ಇಷ್ಟವಾದ ಕಲಿಕೆ ಆಯ್ಕೆ ಕೊಡಿ
ರಾಜನಿಗೆ ಅವನನ್ನು ನೋಡಿ ಬರೀ ಅಮರತ್ವದಿಂದ ಏನೂ ಪ್ರಯೋಜನವಿಲ್ಲ, ಅದರ ಜೊತೆಗೆ ಯೌವ್ವನವನ್ನು ಪಡೆದುಕೊಂಡರೆ ಆಗ ಸರಿ ಹೋಗಬಹುದು ಎಂದು ಮತ್ತೆ ಋಷಿಯ ಮೊರೆ ಹೋದ. ಆಗ ಋಷಿಗಳು, ‘ನಿನಗೆ ಇದೇ ಸರೋವರನ್ನು ದಾಟಿದ ನಂತರ, ಮತ್ತೊಂದು ಮಹಾ ಪರ್ವತ ಕಾಣುತ್ತದೆ, ಅದನ್ನು ದಾಟಿದರೆ, ಹಳದಿ ಹಣ್ಣುಗಳಿಂದ ತುಂಬಿದ ಮರವೊಂದು ಕಾಣುತ್ತದೆ, ಅವುಗಳಲ್ಲಿ ಒಂದು ಹಣ್ಣನ್ನು ತಿಂದರೆ, ನೀನು ಅಮರತ್ವ ಮತ್ತು ಯವ್ವನ ಎರಡನ್ನೂ ಪಡೆಯುತ್ತೀಯ’ ಎಂದು ಹೇಳಿದರು.
ಆಗ ರಾಜ ಋಷಿಗಳು ಹೇಳಿದಂತೆ, ಪರ್ವತವನ್ನು ದಾಟಿ, ಹಳದಿ ಹಣ್ಣಿನಿಂದ ತುಂಬಿದ ಮರದತ್ತ ಹೋದ. ಆತ ಒಂದು ಹಣ್ಣನ್ನು ಕಿತ್ತು ತಿನ್ನಲು ಹೋದಾಗ ಮೂರ್ನಾಲ್ಕು ಜನ ಜೋರಾಗಿ ಕಿರುಚಾಡುತ್ತಾ ಜಗಳವಾಡುತ್ತಿರುವ ಹಾಗೆ ಭಾಸವಾಯಿತು. ಶಬ್ದ ಬಂದ ಕಡೆ ಹೋಗಿ ನೋಡಿದಾಗ, ನಾಲ್ವರು ಯುವಕರು ಜೋರಾಗಿ ವಾದ ಮಾಡುತ್ತಾ ಜಗಳವಾಡು ತ್ತಿದ್ದರು.
ಒಬ್ಬ ಹೇಳಿದ, ನನಗೀಗ ಇನ್ನೂರೈವತ್ತು ವರ್ಷವಾಗಿದೆ. ಆತ ನನ್ನ ತಂದೆ, ಅವನಿಗೆ ಮುನ್ನೂರು ವರ್ಷವಾಗಿದೆ, ಅವರು ಇನ್ನೂ ನನ್ನ ಪಾಲಿನ ಆಸ್ತಿಯನ್ನು ನನಗೆ ನೀಡುತ್ತಿಲ್ಲ, ಎಂದು ದೂರಿದ. ರಾಜ ಬಲಭಾಗದಲ್ಲಿರುವ ವ್ಯಕ್ತಿಯನ್ನು ಏಕೆಂದು ಕೇಳಿದಾಗ ಆತ ಮುನ್ನೂರೈವತ್ತು ವರ್ಷ ವಯಸ್ಸಿನ ನನ್ನ ತಂದೆ ಇನ್ನೂ ಬದುಕಿದ್ದಾರೆ, ಆತ ನನ್ನ ಪಾಲ ನ್ನು ನನಗೇ ನೀಡಿಲ್ಲ, ಇನ್ನು ನಾನು ನನ್ನ ಮಗನಿಗೆ ಹೇಗೆ ಕೊಡಲಿ ಎಂದ.
ಮುನ್ನೂರೈವತ್ತರ ಯುವಕ, ನಾನೂರು ವರ್ಷ ವಯಸ್ಸಿನ ತನ್ನ ತಂದೆಯನ್ನು ತೋರಿಸಿ, ಅದೇ ದೂರನ್ನು ಹೇಳಿದನು. ಹೀಗೆ ಆಸ್ತಿಗಾಗಿ, ನಮ್ಮ ಅಂತ್ಯವಿಲ್ಲದ ಹೋರಾಟವನ್ನು ನೋಡಿ ಗ್ರಾಮಸ್ಥರು, ನಮ್ಮನ್ನು ಹಳ್ಳಿಯಿಂದ ಹೊರಗೆ ಹಾಕಿದ್ದಾರೆ, ಎಂದು ಅವರೆಲ್ಲರೂ ರಾಜನಿಗೆ ತಿಳಿದರು.
ಇದನ್ನು ಕೇಳಿದ ರಾಜ ಅಘಾತಕ್ಕೊಳಗಾಗಿ, ‘ಸದ್ಯ! ನಾನಿನ್ನೂ ಹಣ್ಣನ್ನು ತಿನ್ನಲಿಲ್ಲವಲ್ಲಾ!’ ಎಂದುಕೊಂಡು ಋಷಿಯ ಬಳಿಗೆ ಧಾವಿಸಿ ಬಂದು ನನಗೆ ಸಾವಿನ ಮಹತ್ವವನ್ನು ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು, ಗುರುಗಳೇ ಎಂದು ಅವರ ಪಾದಗಳಿಗೆ ಎರಗಿದನು. ಋಷಿಗಳು ನಗುತ್ತಾ ‘ಸಾವು ಅಸ್ತಿತ್ವದಲ್ಲಿರುವುದರಿಂದ, ಜಗತ್ತಿನಲ್ಲಿ ಇನ್ನೂ ಪ್ರೀತಿ ವಿಶ್ವಾಸವಿದೆ.
ಅಮರತ್ವವನ್ನು ಪಡೆಯಲು ಪ್ರಯತ್ನಿಸುವ ಬದಲು ಬದುಕಿರುವಷ್ಟು ದಿನವೂ ಪ್ರತಿಕ್ಷಣ ವನ್ನೂ ಸಂತೋಷದಿಂದ ಜೀವಿಸುವುದನ್ನು ಕಲಿಯಿರಿ ಮತ್ತು ಅಗತ್ಯವಿರುವವರಿಗೆ ನೆರವು ನೀಡಿ’ ಎಂದು ನುಡಿದರು. ಈ ಮಾತು ನಮ್ಮ ನಿಮ್ಮೆಲ್ಲರಿಗೂ ಅನ್ವಯಿಸುತ್ತದೆ ಅಲ್ಲವೇ?