Rangaswamy Mookanahalli Column: ಅತ್ತ ದರಿ, ಇತ್ತ ಪುಲಿ ಹೊಸ ಬದುಕಿನ ರೀತಿ ಕಣ್ರೀ !
ಮಕ್ಕಳಿಗೆ ಅವರು ಹೇಳಿಕೊಡುವ ಬದುಕಿನ ಪಾಠ ಕೂಡ ಹೇಗಿರುತ್ತದೆ ಎಂದರೆ ಅವರು ಯಾವ ಜಾಗದಲ್ಲಿ ಬದುಕಿನ ಓಟವನ್ನು ನಿಲ್ಲಿಸುತ್ತಾರೆ ಮಕ್ಕಳು ಅಲ್ಲಿಂದ ಮುಂದಕ್ಕೆ ಅದನ್ನು ಮುನ್ನಡೆಸು ವಂತೆ ಹೇಳಿಕೊಡುತ್ತಾರೆ. ಇದರರ್ಥ ಮಕ್ಕಳು ತಮ್ಮ ಸ್ವಂತ ಇಚ್ಛೆಯಿಂದ ಬದುಕನ್ನು ಕಟ್ಟಿಕೊಳ್ಳ ಬಾರದು ಎಂದಲ್ಲ, ಹೆತ್ತವರು ಹಾಕಿದ ದಾರಿಯಲ್ಲಿ ಮಾತ್ರ ಸಾಗಬೇಕೂ ಎಂದಲ್ಲ.
-
ವಿಶ್ವರಂಗ
ಬದುಕು ಮೂರು ದಶಕದ ಹಿಂದೆ ಇದ್ದಷ್ಟು ಸರಳವಾಗಿಲ್ಲ ಎನ್ನುವುದನ್ನು ಮೊದಲು ಅರಿತುಕೊಳ್ಳಬೇಕು. ಅವತ್ತಿಗೆ ಅವಕಾಶಗಳು ಕಡಿಮೆ ಇದ್ದವು ಎನ್ನುವುದನ್ನು ಒಪ್ಪೋಣ. ಆದರೆ ಅವತ್ತಿನ ದಿನದಲ್ಲಿ ತಪ್ಪಾದರೆ ಬದುಕು ಇನ್ನೊಂದು ಅವಕಾಶವನ್ನು ಕೊಡುತ್ತಿತ್ತು. ಇವತ್ತಿನ ವೇಗದ ಬದುಕಿನಲ್ಲಿ ತಪ್ಪು ಮಾಡಿದರೆ ಬದುಕು ಮುಕ್ತಾಯ!
ನಾವು ನಮ್ಮ ಮಕ್ಕಳಿಗೆ ಹೇಗಿರಬೇಕು? ಹೇಗೆ ಬದುಕಬೇಕು? ಎನ್ನುವುದರ ಬಗ್ಗೆ ಬಹಳಷ್ಟು ಕಲಿಸಿ ಕೊಡುವ ಪ್ರಯತ್ನ ಮಾಡುತ್ತೇವೆ. ಆದರೆ ಇಂದು ವಿಷಯ ಬಹಳ ಮುಖ್ಯವಾಗುತ್ತದೆ. ನಮಗೇನು ಗೊತ್ತು? ನಾವೇಗೆ ಬದುಕನ್ನು ಕಟ್ಟಿಕೊಂಡೆವು ಎನ್ನುವ ಆಧಾರದ ಮೇಲೆ ಮಾತ್ರ ನಾವು ನಮ್ಮ ಮಕ್ಕಳಿಗೆ ಹೇಳುತ್ತಾ ಹೋಗುತ್ತೇವೆ. ಆದರೆ ನಾವು ಬದುಕು ಕಟ್ಟಿಕೊಂಡ ರೀತಿ ನಮಗೆ ಯಶಸ್ಸನ್ನು ತಂದು ಕೊಟ್ಟಿದ್ದೆಯೇ? ಎನ್ನುವ ಪ್ರಶ್ನೆಯನ್ನು ನಾವು ಕೇಳಿಕೊಳ್ಳುವುದಿಲ್ಲ.
ಸಮಾಜದಲ್ಲಿನ 99 ಪ್ರತಿಶತ ಜನ ಬದುಕುವುದೇ ಹೀಗೆ! ಅವರು ವೇಳೆಯನ್ನು, ಹಣವನ್ನು ಎಂದಿಗೂ ಸರಿಯಾಗಿ ಲೆಕ್ಕ ಹಾಕಿ, ವಿಂಗಡಿಸಿ ಅಂದರೆ ಬಜೆಟ್ ಮಾಡಿ ಬದುಕುವ ಗೋಜಿಗೆ ಹೋಗುವುದಿಲ್ಲ. ಹೀಗಾಗೇ ಬದುಕು ಜಾಳುಜಾಳು. ಉಳಿದೊಂದು ಪ್ರತಿಶತ ಜನರು ಎಲ್ಲವನ್ನೂ ಸರಿಯಾಗಿ ಲೆಕ್ಕ ಹಾಕುತ್ತಾರೆ.
ಮಕ್ಕಳಿಗೆ ಅವರು ಹೇಳಿಕೊಡುವ ಬದುಕಿನ ಪಾಠ ಕೂಡ ಹೇಗಿರುತ್ತದೆ ಎಂದರೆ ಅವರು ಯಾವ ಜಾಗದಲ್ಲಿ ಬದುಕಿನ ಓಟವನ್ನು ನಿಲ್ಲಿಸುತ್ತಾರೆ ಮಕ್ಕಳು ಅಲ್ಲಿಂದ ಮುಂದಕ್ಕೆ ಅದನ್ನು ಮುನ್ನಡೆಸು ವಂತೆ ಹೇಳಿಕೊಡುತ್ತಾರೆ. ಇದರರ್ಥ ಮಕ್ಕಳು ತಮ್ಮ ಸ್ವಂತ ಇಚ್ಛೆಯಿಂದ ಬದುಕನ್ನು ಕಟ್ಟಿಕೊಳ್ಳ ಬಾರದು ಎಂದಲ್ಲ, ಹೆತ್ತವರು ಹಾಕಿದ ದಾರಿಯಲ್ಲಿ ಮಾತ್ರ ಸಾಗಬೇಕೂ ಎಂದಲ್ಲ.
ಆದರೆ ಬದುಕಿನಲ್ಲಿ ಕಂಟಿನ್ಯೂಟಿ ಅದೆಷ್ಟು ಮುಖ್ಯವಾಗುತ್ತದೆ ಎನ್ನುವುದಕ್ಕೆ ಈ ಮಾತನ್ನು ಹೇಳಬೇಕಾಯ್ತು. ಮಕ್ಕಳು ಇಂದಿಗೆ ಪ್ಯಾಷನ್, ಮನಸ್ಸಿಗೆ ಇಷ್ಟವಾದದ್ದು ಮಾಡಬೇಕು ಎನ್ನುವ ಹುಚ್ಚಿಗೆ ಬಿದ್ದು ಬಿಟ್ಟಿವೆ, ಇವತ್ತಿನ ದಿನ ಎಲ್ಲರಿಗೂ ಯುಟ್ಯೂಬರ್ ಆಗಬೇಕು, ಕಂಟೆಂಟ್ ಕ್ರಿಯೇಟರ್ ಆಗಬೇಕು ಎನ್ನುವ ಹಂಬಲ ಶುರುವಾಗಿದೆ. ಯುಟ್ಯೂಬ್ ತೆರೆದು ವಿಡಿಯೋ ಹಾಕಲು ಶುರು ಮಾಡಿದರೆ ಸಾಕು ಹಣ, ಹೆಸರು ಮತ್ತು ಯಶಸ್ಸು ಪಕ್ಕಾ ಎನ್ನುವ ಮಟ್ಟಕ್ಕೆ ಮಕ್ಕಳು ಬದಲಾಗುತ್ತಿದ್ದಾರೆ!
ಇದನ್ನೂ ಓದಿ: Rangaswamy Mookanahalli Column: ಬದುಕಿನಲ್ಲಿ ಅಂಕಿ ಸಂಖ್ಯೆಗಳದ್ದೆ ಸಾಮ್ರಾಜ್ಯ !
ಇನ್ನಷ್ಟು ಮಕ್ಕಳದು ಇನ್ನೊಂದು ರೀತಿಯ ಗೋಳು. ಅವರಿಗೆ ತಾವು ಮಹಾಬುದ್ಧಿವಂತರು, ಶಾಲೆ, ಕಾಲೇಜಿನ ಓದು ನನಗಲ್ಲ ಎನ್ನುವ ಮನೋಭಾವ. ಬಿಸಿನೆಸ್ ಮಾಡಬೇಕು ಹಣ ಕೊಡು ಎಂದು ಪೋಷಕರನ್ನು ಪೀಡಿಸುತ್ತಾರೆ. ಒಂದಷ್ಟು ಪ್ರತಿಶತ ಮಕ್ಕಳು ಯುಟ್ಯೂಬ್ ವಿಡಿಯೋಗಳನ್ನು ನೋಡಿ ತಾವೇನೋ ಜ್ಞಾನಿಗಳು ಎನ್ನುವ ಅಹಂಭಾವ ಬೆಳಸಿಕೊಂಡು ಬಿಡುತ್ತಾರೆ.
ಶಾಲೆಗೆ ಕೆಟ್ಟವ ಫೀಸು ನನಗೆ ಕೊಡು ಅದನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಹಣ ಗಳಿಸುತ್ತೇನೆ ಎನ್ನುತ್ತಾರೆ. ಕಷ್ಟಪಟ್ಟು ಓದಿ ವಿಜ್ಞಾನಿ, ವೈದ್ಯ, ವಕೀಲ ಇತ್ಯಾದಿ ಆಗಬೇಕು ಎನ್ನುವುದು ಔಟ್ಡೇಟೆಡ್ ಎನ್ನಿಸಿಕೊಳ್ಳುತ್ತಿದೆ.
ಬದುಕು ಮೂರು ದಶಕದ ಹಿಂದೆ ಇದ್ದಷ್ಟು ಸರಳವಾಗಿಲ್ಲ ಎನ್ನುವುದನ್ನು ಮೊದಲು ಅರಿತುಕೊಳ್ಳ ಬೇಕು. ಅವತ್ತಿಗೆ ಅವಕಾಶಗಳು ಕಡಿಮೆ ಇದ್ದವು ಎನ್ನುವುದನ್ನು ಒಪ್ಪೋಣ. ಆದರೆ ಅವತ್ತಿನ ದಿನದಲ್ಲಿ ತಪ್ಪಾದರೆ ಬದುಕು ಇನ್ನೊಂದು ಅವಕಾಶವನ್ನು ಕೊಡುತ್ತಿತ್ತು. ಇವತ್ತಿನ ವೇಗದ ಬದುಕಿನಲ್ಲಿ ತಪ್ಪು ಮಾಡಿದರೆ ಬದುಕು ಮುಕ್ತಾಯ ಎನ್ನುವ ಮಟ್ಟಕ್ಕೆ ಬಂದು ನಿಂತಿದೆ.
ಸರಿಯಾದ ಸಮಯದಲ್ಲಿ ಸಿಕ್ಕ ಅವಕಾಶಗಳಿಗೆ ಬೆನ್ನು ತೋರಿಸಿದುರ ಫಲವಾಗಿ ಇಂದಿಗೆ ತಮ್ಮ ಹಿಂದಿನ ಬದುಕಿನ ಶೈಲಿ ಉಳಿಸಿಕೊಳ್ಳಲಾಗದೆ ಹೀನಾಯ ಬದುಕನ್ನು ಬದುಕುತ್ತಿರುವರ ಸಂಖ್ಯೆ ಕೂಡ ಅಸಂಖ್ಯ. ಇವತ್ತಿಗೆ ಎಲ್ಲರಿಗೂ ರಾತ್ರಿ ಕಳೆದು ಬೆಳಗಾಗುವುದರಲ್ಲಿ ಫೇಮಸ್ ಆಗಿಬಿಡಬೇಕು ಎನ್ನುವ ಮನೋಭಾವ ಹೆಚ್ಚಾಗಿದೆ.
ಒಬ್ಬ ವ್ಯಕ್ತಿ ಸಮಾಜದಲ್ಲಿ ಆ ಮಟ್ಟದ ಯಶಸ್ಸು ಪಡೆದುಕೊಳ್ಳುವುದರ ಹಿಂದೆ ಅನೇಕ ವರ್ಷಗಳ ಕಸರತ್ತು, ಪರಿಶ್ರಮ ಇರುತ್ತದೆ ಎನ್ನುವುದನ್ನು ಮಾತ್ರ ಗಮನಿಸುವುದಿಲ್ಲ. ಹೀಗಾಗುವುದಕ್ಕೆ ಕೂಡ ಕಾರಣವಿದೆ. ಇವತ್ತು ಹೇಳಿಕೇಳಿ ಡಿಜಿಟಲ್ ಯುಗ ಅದ್ಯಾವುದೋ ಹಾಡನ್ನು ಬೇರೆ ರೀತಿ ತಿರುಚಿ ಹಾಡಿ ದರೂ ಸಾಕು ಬಕ ಪಕ್ಷಿಗಳಂತೆ ಕಾಯುತ್ತಿರುವ ಎಲ್ಲ ಯುಟ್ಯೂಬ್ ಚಾನಲ್ ಗಳು ಕೂಡ ಅದನ್ನೇ ಮತ್ತೆ ಮತ್ತೆ ಹಾಕುತ್ತವೆ. ನೋಡುಗರಿಗೆ ಯಾವುದೇ ಹೆಚ್ಚು ಚಿಂತೆ ಮಾಡದೆ, ವಿವೇಚನೆ ಬಳಸದೆ ಕನ್ಸುಮ್ ಮಾಡಲು ಬೇಕಿರುವುದು ಕೂಡ ಇಂತಹ ಕಂಟೆಂಟುಗಳು!
ಹೀಗಾಗಿ ಇಂತವು ವೈರಲ್ ಆಗುತ್ತವೆ. ಆ ವಿಡಿಯೋದಲ್ಲಿದ್ದವರು ಏಕಾಏಕಿ ಹೆಚ್ಚಿನ ಶ್ರಮವಿಲ್ಲದೆ ಪ್ರಸಿದ್ಧರಾಗಿ ಬಿಡುತ್ತಾರೆ. ಈ ಜಗತ್ತಿಗೆ ಬೇಕಿರುವುದು ಅವತ್ತಿನ ಲೆಕ್ಕಾಚಾರ ಮಾತ್ರ. ಇಂತಹ ಪ್ರಸಿದ್ಧಿ ಗಳು ಆ ಕ್ಷಣಕ್ಕೆ ಸಂಬಂಧಿಸಿದ್ದು ಮಾತ್ರ.
ಮೈಸೂರಿನ ಯುವ ದಸರಾದಲ್ಲಿ ಡ್ಯಾನ್ಸ್ ಮಾಡಿ ಪ್ರಸಿದ್ಧಳಾದ ಹುಡುಗಿ ಇರಬಹುದು, ಹೂವಿನ ಬಾಣದಂತೆ ಹಾಡನ್ನು ಹಾಡಿದ ಹುಡುಗಿ ಇರಬಹುದು ಅಥವಾ ಕುಂಭಮೇಳದ ತುಂಬು ಕಣ್ಣಿನ ಹುಡುಗಿ ಇರಬಹುದು, ಅದೇ ಕುಂಭಮೇಳದ ಐಐಟಿ ಬಾಬಾ ಇರಬಹುದು, ಇವೆಲ್ಲವೂ, ಇವರೆಲ್ಲರೂ ಆ ಕ್ಷಣದ ಜನರ ಸ್ಪಂದನೆಗೆ ಸಿಕ್ಕವರು.
ನಿಜವಾದ ಟ್ಯಾಲೆಂಟ್ ಸದಾ ಹಸಿರಾಗಿರುತ್ತದೆ. ನಡೆಯುವ ಹಾದಿಯಲ್ಲಿ ಏರುಪೇರು ಸಹಜ. ಹಾಗೆ ನಿಜವಾದ ಟ್ಯಾಲೆಂಟ್ ಇದ್ದವರಿಗೂ ಸಂಕಷ್ಟ ಎದುರಾಗುತ್ತದೆ. ಆದರೆ ಅವೆಲ್ಲವೂ ಕ್ಷಣಿಕ. ಹೀಗೆ ಆ ಕ್ಷಣದ ಪ್ರಸಿದ್ಧಿಗೆ ಸಿಕ್ಕವರ ಬದುಕು ಇವತ್ತಿಗೆ ಏನಾಗಿದೆ ಎನ್ನುವುದನ್ನು ನಾವು ನೋಡಬೇಕು.
ಪಿಯುಸಿ ರಿಸಲ್ಟ ಬಂದಾಗಿದೆ. ಮಕ್ಕಳ ಮುಂದೆ, ಹೆತ್ತವರ ಮುಂದೆ ಪ್ರಶ್ನೆ ಕೂಡ ದೊಡ್ಡದಾಗಿ ಎದುರಾಗಿದೆ. ಮುಂದೇನು? ಯಾವ ಕೋರ್ಸ್ ಮಾಡಿದರೆ ಬೆಸ್ಟ್? ಎನ್ನುವುದು ಆ ಪ್ರಶ್ನೆ. ಇವತ್ತಿನ ಗದ್ದಲದಲ್ಲಿ ಯಾವುದು ಸರಿ? ಯಾವುದು ತಪ್ಪು? ಎನ್ನುವುದನ್ನು ಬೇರ್ಪಡಿಸುವುದೇ ದೊಡ್ಡ ಸವಾಲಾಗಿದೆ. ಇವತ್ತಿನ ಮಕ್ಕಳಿಗೆ ಇರುವ ಜ್ಞಾನ ಅನುಭವ ಬಂದದ್ದು ವಿಡಿಯೋಗಳ ಮೂಲಕ. ಅದು ಅವರು ಗಳಿಸಿಕೊಂಡದ್ದಲ್ಲ. ಎಲ್ಲ ಅನುಭವವನ್ನೂ ನಾವೇ ಗಳಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವುದು ಒಪ್ಪುವ ಮಾತೆ ಆದರೂ, ಅವರು ವೀಕ್ಷಿಸಿದ ವಿಡಿಯೋದಲ್ಲಿನ ಸತ್ಯಾಸತ್ಯತೆವನ್ನು ಅರಿತುಕೊಳ್ಳುವ ಕ್ಷಮತೆ ಕೂಡ ಅವರಿಗಿರುವುದಿಲ್ಲ ಎನ್ನುವುದನ್ನು ಮರೆಯಬಾರದು.
ವಿದ್ಯಾವಂತ ಪೋಷಕರ ವಿಚಾರದಲ್ಲಿ ಒಂದಷ್ಟು ಮಾತುಕತೆಯ ನಂತರ ಮಕ್ಕಳನ್ನು ಹೇಗೋ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಾರೆ. ಪೋಷಕರಿಗೆ ಹೆಚ್ಚಿನ ತಿಳಿವಳಿಕೆ ಇಲ್ಲದ ಮನೆಗಳಲ್ಲಿ ಮಕ್ಕಳು ಹೇಳಿದ್ದು ನಿಜವೆಂದು ನಂಬುತ್ತಾರೆ. ಮಕ್ಕಳು ಹೇಳಿದ್ದಕ್ಕೆಲ್ಲ ಸರಿಯೆಂದು ತಲೆ ಅಡಿಸುತ್ತಾರೆ. ಕೋಟಿ ಕೋಟಿ ಬೆಲೆ ಬಾಳುವ ಆಸ್ತಿಯನ್ನು ಮಾರಿ ಮಗನ-ಮಗಳ ಕನಸಿಗೆ ನೀರೆರೆಯುತ್ತಾರೆ.
ಗೆಲುವಿನ ಪ್ರತಿಶತ ಒಂದು ಪ್ರತಿಶತಕ್ಕಿಂತ ಬಹಳ ಕಡಿಮೆ ಎನ್ನುವುದು ಅವರಿಗೆ ಗೊತ್ತಿರುವುದಿಲ್ಲ. ಬಿಸಿನೆಸ್ ಮಾಡುತ್ತೇನೆ ಹಣ ನೀಡಿ, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತೇನೆ ಹಣ ನೀಡಿ, ಕಾಲೇಜಿಗೆ ಕಟ್ಟುವ ಹಣವನ್ನು ನನಗೆ ಕೊಡಿ, ಅದರಲ್ಲಿ ವಿಡಿಯೋ ಮಾಡಲು ಬೇಕಾಗುವ ಕ್ಯಾಮರಾ ಸಹಿತ ಎಲ್ಲ ಪರಿಕರಗಳನ್ನು ಕೊಳ್ಳುತ್ತೇನೆ, ಇಂತಹ ವಿಚಿತ್ರ ಬೇಡಿಕೆಗಳು ಹೆತ್ತವರು ಮಕ್ಕಳಿಂದ ಪಡೆದುಕೊಳ್ಳುತ್ತಿದ್ದಾರೆ.
ಇದು ಹೇಳಿಕೇಳಿ ಫಲಿತಾಂಶದ ಸಮಯ. ಈ ಸನ್ನಿವೇಶಗಳು ಇನ್ನಷ್ಟು ಹೆಚ್ಚಾಗುತ್ತವೆ. ಪೋಷಕ ರಾಗಿ ಇಲ್ಲ ಎನ್ನುವುದನ್ನು ನಮ್ಮ ಭಾರತೀಯ ಮಧ್ಯಮವರ್ಗದ ಪೋಷಕರು ಕಲಿಯಬೇಕಿದೆ. ಯಾವುದೇ ವಿಚಾರ ಆಗಲಿ ಅನುಭವವಿಲ್ಲದೆ ಹಣವನ್ನು ಹೂಡಿಕೆ ಮಾಡಲು ಸಾಧ್ಯವಿಲ್ಲ ಎನ್ನುವು ದನ್ನು ಸ್ಪಷ್ಟವಾಗಿಸಬೇಕು.
ಏನು ಮಾಡಬೇಕು ಎಂದು ನಿರ್ಧರಿಸಿದ್ದೀಯಾ ಅದನ್ನು ಒಂದೆರೆಡು ವರ್ಷ ಮಾಡಿ ಅನುಭವ ಗಳಿಸಿಕೊಂಡು ನಂತರ ಅದರ ಸಾಧಕ-ಬಾಧಕಗಳನ್ನು ಅರಿತುಕೊಂಡು ಹೇಳು, ಆಮೇಲೆ ನೋಡೋಣ ಎನ್ನಬೇಕು. ಮಕ್ಕಳು ಹೇಳಿದಂತೆ ಕುಣಿಯುತ್ತ ಹೋದರೆ ಅವರಿಗೆ ಭವಿಷ್ಯ ವಿರುವುದಿಲ್ಲ ಎನ್ನುವುದನ್ನು ಪೋಷಕರು ಅರಿತು ಕೊಳ್ಳಬೇಕು.
ಇನ್ʼಫ್ಯಾಕ್ಟ್ ಅವರು ಹೇಳಿದ್ದಕ್ಕೆಲ್ಲ ಯಸ್ ಎನ್ನುವುದು ನೀವು ಅವರ ಅಭ್ಯುದಯಕ್ಕೆ ಅಡ್ಡಗಾಲು ಹಾಕಿದಂತೆ ಎನ್ನುವುದನ್ನು ಕೂಡ ಪೋಷಕರು ಅರಿತುಕೊಂಡರೆ ಒಳ್ಳೆಯದು. ವ್ಯಾಪಾರಿ ಯೊಬ್ಬರಿಗೆ ನಾಲ್ಕು ಜನ ಮಕ್ಕಳು. ಎರಡು ಮೂರು ವರ್ಷಗಳ ಅಂತರದಲ್ಲಿ ಜನಿಸಿದವರು.
ವ್ಯಾಪಾರಿಗೆ ಮಕ್ಕಳು ತನ್ನ ವ್ಯಾಪಾರವನ್ನು ಮುಂದುವರಿಸಲಿ ಎನ್ನುವ ಹಂಬಲ. ಮಕ್ಕಳು ಬೆಳೆಯುತ್ತಾ ಬಂದಂತೆ ನನ್ನ ವ್ಯಾಪಾರವನ್ನು ಮುಂದುವರಿಸದಿದ್ದರೂ ಪರವಾಗಿಲ್ಲ, ಯಾವ ಕೆಲಸ ಮಾಡಿದರೂ ಅದರಲ್ಲಿ ಉನ್ನತಿಗೇರಲಿ. ಒಂದೊಳ್ಳೆ ಬದುಕು ಕಟ್ಟಿಕೊಳ್ಳಲಿ ಎನ್ನುವ ಮನೋ ಭಾವವನ್ನು ಬೆಳಸಿಕೊಳ್ಳುತ್ತಾರೆ. ಮೊದಲ ಮಗ ಹಂದಿನೆಂಟು ತುಂಬಿದ ತಕ್ಷಣ ವ್ಯಾಪಾರ ಮಾಡುವುದಾಗಿ ವ್ಯಾಪಾರಿಯ ಬಳಿ ಹೇಳುತ್ತಾನೆ.
ವ್ಯಾಪಾರಿ ಬಹಳ ಖುಷಿಯಿಂದ ಯಾವ ವ್ಯಾಪಾರ ಮಾಡಬೇಕೆಂದು ನಿರ್ಧರಿಸಿದ್ದೀಯಾ? ಎಂದು ಕೇಳುತ್ತಾರೆ. ಪಿಜ್ಜಾ ಮಳಿಗೆಯನ್ನು ತೆರೆಯಬೇಕು ಎಂದಿದ್ದೇನೆ ಎನ್ನುವ ಮಾತನ್ನು ಮಗ ಹೇಳುತ್ತಾನೆ. ಪಿಜ್ಜಾ ವ್ಯಾಪಾರದ ಬಗ್ಗೆ ಒಂದಷ್ಟು ವಿಚಾರಗಳನ್ನು ಹೇಳು ಎನ್ನುವ ಅಪ್ಪನ ಮಾತಿಗೆ ಮಗನಲ್ಲಿ ಬೇಸರ ಉಂಟಾಗುತ್ತದೆ. ಸಾಲದ ರೂಪದಲ್ಲಿ ನನಗೆ ಹತ್ತು ಲಕ್ಷ ರೂಪಾಯಿ ನೀಡಿದರೆ ಅದಕ್ಕೆ ಬಡ್ಡಿಯನ್ನು ನೀಡುತ್ತಾ ವ್ಯಾಪಾರವನ್ನು ಕಟ್ಟಿ ಬೆಳೆಸುತ್ತೇನೆ ಎನ್ನುವ ಮಗನ ಮಾತಿಗೆ ಇಲ್ಲವೆನ್ನಲಾಗದೆ ವ್ಯಾಪಾರಿ ಹಣವನ್ನು ನೀಡುತ್ತಾರೆ.
ವ್ಯಾಪಾರಿಯ ಮಗ ತುಂಬಾ ಒಳ್ಳೆಯವನು. ಕಷ್ಟಜೀವಿ. ನಗರದ ಹೃದಯ ಭಾಗದಲ್ಲಿ ಪಿಜ್ಜಾ ಅಂಗಡಿ ತೆರೆಯುತ್ತಾನೆ. ಪಿಜ್ಜಾ ಮಾಡುವವರನ್ನು ನೇಮಿಸಿಕೊಳ್ಳುತ್ತಾನೆ. ಬೆಳಗಿನಿಂದ ರಾತ್ರಿಯ ವರೆಗೂ ದಿನದಲ್ಲಿ ಹದಿನಾಲ್ಕು ಗಂಟೆ ದುಡಿಯುತ್ತಾನೆ. ದೈವ ಕೃಪೆಯಿಂದ ಮೊದಲ ತಿಂಗಳ ಒಳ್ಳೆಯ ವ್ಯಾಪಾರ ಕೂಡ ಆಗುತ್ತದೆ. ಮೊದಲ ತಿಂಗಳಿಗೆ ಇಷ್ಟೊಂದು ವ್ಯಾಪಾರವಾಗಿದೆ ಎನ್ನುವುದು ಎಲ್ಲರಿಗೂ ಅಚ್ಚರಿಯಾಗುತ್ತದೆ. ಆದರೆ ಲೆಕ್ಕಾಚಾರಕ್ಕೆ ಕುಳಿತಾಗ, ಸಂಬಳ, ಬಾಡಿಗೆ, ಪದಾರ್ಥಗಳ ವೆಚ್ಚ , ಬಡ್ಡಿ ಎಲ್ಲವನ್ನೂ ತೆಗೆದ ಮೇಲೆ ಕೈಯಲ್ಲಿ ಉಳಿದದ್ದು ಮುಖದಲ್ಲಿ ನಗು ಉಳಿಸುವುದಿಲ್ಲ.
ಇಷ್ಟೆ ಮಾಡಿದ್ದು ಈ ಹಣಕ್ಕಾಗಿಯೇ? ಎನ್ನುವ ಪ್ರಶ್ನೆ ಆತನಲ್ಲಿ ಮೂಡುತ್ತದೆ. ಆದರೂ ವ್ಯಾಪಾರ ಮುಂದುವರಿಸುತ್ತಾನೆ. ಐದಾರು ತಿಂಗಳು ಕಳೆದರೂ ಹೆಚ್ಚಿನ ಬದಲಾವಣೆ ಕಾಣುವುದಿಲ್ಲ. ವ್ಯಾಪಾರ ಹೆಚ್ಚಾದಂತೆ ಖರ್ಚು ಕೂಡ ಹೆಚ್ಚಾಗುತ್ತಿತ್ತು. ಕೈಯಲ್ಲಿ ಉಳಿಯುತ್ತಿದ್ದ ಲಾಭಾಂಶ ಮಾತ್ರ ಹಾಕುತ್ತಿದ್ದ ಶ್ರಮಕ್ಕೆ ತಕ್ಕನಾಗಿರಲಿಲ್ಲ. ಇದರರ್ಥ ಸರಳ. ಕೇವಲ ಹಾರ್ಡ್ ವರ್ಕ್ ಕೆಲಸಕ್ಕೆ ಬರುವುದಿಲ್ಲ.
ಸಿದ್ಧತೆ, ಒಂದಷ್ಟು ಅನುಭವದ ಜತೆಗೆ ವ್ಯಾಪಾರಕ್ಕೆ ಇಳಿದಿದ್ದರೆ ಆಗ ಫಲಿತಾಂಶ ಬೇರೆಯ ದಿರುತ್ತಿತ್ತು. ಇದೊಂದು ಕಥೆಯಂತೆ ಕಾಣಿಸುತ್ತದೆ. ಆದರೆ, ಇಂತಹ ಕಥೆಯನ್ನು ಒಂದಲ್ಲ, ಎರಡಲ್ಲ, ನೂರಾರು ಕಂಡ ಅನುಭವದಿಂದ ಇದನ್ನು ಬರೆದಿದ್ದೇನೆ.
ಜೋಷ್‌ನಲ್ಲಿ ಕೆಲಸ, ವ್ಯಾಪಾರ ಇತ್ಯಾದಿ ಶುರು ಮಾಡಿಬಿಡಬಹುದು. ಆದರೆ ಎಷ್ಟು ಕಾಲ ನಾವು ಆ ಜೋಷ್ ಉಳಿಸಿಕೊಳ್ಳಬಹುದು? ಎಲ್ಲಿಯವರೆಗೆ ನಮ್ಮ ಜೇಬು ಭದ್ರವಾಗಿರುತ್ತದೆ? ಎಷ್ಟು ರಿಸ್ಕ್ ನಾವು ತೆಗೆದುಕೊಳ್ಳಬಹುದು? ನಾವು ಮಾಡಲಿಚ್ಛಿಸಿರುವ ವ್ಯಾಪಾರದಲ್ಲಿರುವ ಇತರರ ಪರಿಸ್ಥಿತಿ ಯೇನು? ಎನ್ನುವುದನ್ನು ತಿಳಿದುಕೊಳ್ಳಬೇಕು.
ಒಂದಷ್ಟು ವರ್ಷ ಇಚ್ಛಿಸಿದ ವ್ಯಾಪಾರ ಶುರು ಮಾಡುವ ಮುನ್ನ ಕೆಲಸ ಮಾಡಿ ಅನುಭವ ಪಡೆದು ಕೊಳ್ಳಬೇಕು. ವರ್ಷದಿಂದ ವರ್ಷಕ್ಕೆ ಬದುಕು ಇನ್ನಷ್ಟು ಸಂಕ್ಲಿಷ್ಟವಾಗುತ್ತಾ ಹೋಗುತ್ತಿದೆ. ಮಕ್ಕಳಿಗೆ ಮಾಹಿತಿ ಬಹಳಷ್ಟು ಸಿಗುತ್ತಿದೆ. ಅದರ ಆಧಾರದ ಮೇಲೆ ಮಹತ್ತರ ಸಾಧಿಸಿ ಬಿಡಬೇಕು ಎನ್ನುವ ಹಂಬಲ ಅವರಲ್ಲಿ ಚಿಗುರುತ್ತದೆ. ಅದಕ್ಕೆ ಹಣ ಅಥವಾ ಮಾನಸಿಕ ಬೆಂಬಲ ಮನೆಯಲ್ಲಿ ಸಿಗದೆ ಹೋದರೆ ಹೆತ್ತವರನ್ನೇ ಶತ್ರುಗಳಂತೆ ನೋಡುವ ಪರಿಪಾಟು ಹೆಚ್ಚಾಗುತ್ತಿದೆ.
ಇವುಗಳ ನಡುವೆ ಆನ್ಲೈನ್ ಗೇಮಿಂಗ್, ಬೆಟ್ಟಿಂಗ್ ಭೂತಗಳು ಕೂಡ ಯುವಜನತೆಯನ್ನು ಕಾಡುತ್ತಿದೆ. ಕೇಳಿದ ಹಣ ಕೊಡಲಿಲ್ಲ ಎನ್ನುವ ಏಕೈಕ ಕಾರಣಕ್ಕೆ ಹೆತ್ತವರನ್ನು ಕೊಲ್ಲುವ ಮಟ್ಟಕ್ಕೆ ಮಕ್ಕಳು ಬದಲಾಗುತ್ತಿದ್ದಾರೆ. ಇಂತಹ ಮನಸ್ಥಿತಿ ಒಂದು ದಿನದಲ್ಲಿ ಉಂಟಾಗುವುದಿಲ್ಲ. ಮಕ್ಕಳೊಂದಿಗೆ ನಿತ್ಯ ಸಂವಹನ ನಡೆಸುತ್ತಿದ್ದರೆ ಅವರಗುತ್ತಿರುವ ಬದಲಾವಣೆಯನ್ನು ಗಮನಿಸ ಬಹುದು. ಆದರೆ ಮನೆಯಲ್ಲಿ ಹೆಣ್ಣು ಗಂಡು ಇಬ್ಬರೂ ದುಡಿಯದಿದ್ದರೆ ಬದುಕಿನ ಬಂಡಿ ಸಾಗುವುದಿಲ್ಲ ಎನ್ನುವ ಈ ಕಾಲಘಟ್ಟದಲ್ಲಿ ಮಕ್ಕಳೊಂದಿಗೆ ಮಾತಾಡುವ ವ್ಯವಧಾನ ಹೆತ್ತವರಿ ಗೆಲ್ಲಿದೆ? ಬದಲಾಗುತ್ತಿರುವ ಸಮಯ, ಬದುಕಿನ ರೀತಿ ಉತ್ತರಕ್ಕಾಗಿ ಪರದಾಡುವಂತೆ ಮಾಡುತ್ತಿದೆ. ಇನ್ನೂ ಎಚ್ಚೆತ್ತುಕೊಳ್ಳದಿದ್ದರೆ ಉತ್ತರಗಳಿಲ್ಲದ ಪ್ರಶ್ನೆಗಳು ಸಿದ್ಧವಾಗುತ್ತವೆ. ಎಚ್ಚರ !