ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Narada Sanchara: ಹೀಗೊಬ್ಬರು ಸರಳಜೀವಿ

“ಉನ್ನತ ಸ್ತರದ ರಾಜಕಾರಣಿಗಳ ಕಾಲು ನೆಲದ ಮೇಲೆ ನಿಲ್ಲೋದು ದುಸ್ತರ, ಅವರು ಬಸ್ಸು-ರೈಲುಗಳಂಥ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳಲ್ಲಿ ಸಂಚರಿಸೋದೂ ಅಪರೂಪವೇ; ಅವರೇ ನಿದ್ದರೂ ಒಂಥರದಲ್ಲಿ ‘ಗಗನಯಾತ್ರಿಗಳು’. ಏಕೆಂದರೆ ತುರ್ತು ಕೆಲಸವೇ ಇರಲಿ, ಇನ್ನಾವ ಕಾರು ಬಾರೇ ಇರಲಿ ಅವರು ಹತ್ತೋದೇ ವಿಮಾನವನ್ನು" ಎಂಬ ಗ್ರಹಿಕೆ ಸಾರ್ವತ್ರಿಕವಾಗಿರುವಾಗಲೇ, ಕಾಂಗ್ರೆಸ್ ನಾಯಕಿ ಮೀನಾಕ್ಷಿ ನಟರಾಜನ್ ಅವರು ರೈಲು ಪ್ರಯಾಣವನ್ನು ಮತ್ತೆ ‘ಫ್ಯಾಷನಬಲ್’ ಮಾಡುವ ನಿಟ್ಟಿನಲ್ಲಿ ತಮ್ಮದೇ ಆದ ಪಾತ್ರವನ್ನು ವಹಿಸುತ್ತಿದ್ದಾರೆ.

Narada Sanchara: ಹೀಗೊಬ್ಬರು ಸರಳಜೀವಿ

Profile Ashok Nayak Apr 16, 2025 12:26 PM

‘ರಾಜಕಾರಣಿಗಳಿಗೂ ರೈಲುಗಳಿಗೂ ಏನಾದರೂ ಸಂಬಂಧವಿದೆಯೇ?’‘ ಅಂತ ಕಲಹಪ್ರಿಯ ನಾರದರು ಒಂದೊಮ್ಮೆ ನಿಮ್ಮನ್ನು ಪ್ರಶ್ನಿಸಿದರೆ, “ಖಂಡಿತಾ ಸಂಬಂಧವಿದೆ. ನಮ್ಮ ಕೆಲವು ರಾಜಕಾರಣಿಗಳು ‘ರೈಲು ಬಿಡೋದ್ರಲ್ಲಿ’ ಪಂಟರುಗಳು" ಎಂಬ ‘ಸಾರ್ವಕಾಲಿಕ’ ಉತ್ತರವನ್ನೇ ನೀವು ನೀಡಿಬಿಡುತ್ತೀರಿ ಅಂತ ಗೊತ್ತು. ಆದರೆ ಇದಕ್ಕೆ ಹೊರತಾದ ಸಾಧ್ಯತೆಗಳೂ ಇವೆ ಎಂಬುದಕ್ಕೆ ಎಐಸಿಸಿ ತೆಲಂಗಾಣ ಉಸ್ತುವಾರಿಯಾಗಿರುವ ಮೀನಾಕ್ಷಿ ನಟರಾಜನ್ ಅವರೇ ಜೀವಂತ ಉದಾಹರಣೆ.

“ಉನ್ನತ ಸ್ತರದ ರಾಜಕಾರಣಿಗಳ ಕಾಲು ನೆಲದ ಮೇಲೆ ನಿಲ್ಲೋದು ದುಸ್ತರ, ಅವರು ಬಸ್ಸು-ರೈಲುಗಳಂಥ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳಲ್ಲಿ ಸಂಚರಿಸೋದೂ ಅಪರೂಪವೇ; ಅವರೇ ನಿದ್ದರೂ ಒಂಥರದಲ್ಲಿ ‘ಗಗನಯಾತ್ರಿಗಳು’. ಏಕೆಂದರೆ ತುರ್ತು ಕೆಲಸವೇ ಇರಲಿ, ಇನ್ನಾವ ಕಾರು ಬಾರೇ ಇರಲಿ ಅವರು ಹತ್ತೋದೇ ವಿಮಾನವನ್ನು" ಎಂಬ ಗ್ರಹಿಕೆ ಸಾರ್ವತ್ರಿಕವಾಗಿರುವಾಗಲೇ, ಕಾಂಗ್ರೆಸ್ ನಾಯಕಿ ಮೀನಾಕ್ಷಿ ನಟರಾಜನ್ ಅವರು ರೈಲು ಪ್ರಯಾಣವನ್ನು ಮತ್ತೆ ‘ಫ್ಯಾಷನಬಲ್’ ಮಾಡುವ ನಿಟ್ಟಿನಲ್ಲಿ ತಮ್ಮದೇ ಆದ ಪಾತ್ರವನ್ನು ವಹಿಸುತ್ತಿದ್ದಾರೆ.

ಇದನ್ನೂ ಓದಿ: Yagati Raghu Naadig Column: ಕೈತಪ್ಪಿದ ಅಕ್ಷಯಪಾತ್ರೆ, ಕಾಡಿದ ಅನಾಥಪ್ರಜ್ಞೆ...

ತೀರಾ ತುರ್ತು ಸಂದರ್ಭಗಳಲ್ಲಿ ವಿಮಾನ ಹತ್ತುವುದನ್ನು ಹೊರತುಪಡಿಸಿದರೆ, ಮಿಕ್ಕ ವೇಳೆ ಅವರು ನೆಚ್ಚುವುದು ರೈಲನ್ನೇ. ಕಾರಣ, ಹೇಳಿ-ಕೇಳಿ ಅವರು ಸರಳ ಜೀವನಶೈಲಿಗೆ ಅಂಟಿಕೊಂಡಿರುವ ಒಬ್ಬ ಗಾಂಧೀವಾದಿ. ಹೀಗಾಗಿ ಅವರು ಪಕ್ಷದ ಕಾರ್ಯದ ನಿಮಿತ್ತ ತೆಲಂಗಾಣದಲ್ಲಿ ಸುತ್ತು ಹೊಡೆಯು ವಾಗ, ಆಯಾ ಪ್ರದೇಶಗಳ ಕಾಂಗ್ರೆಸ್ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಅವರನ್ನು ಸ್ವಾಗತಿಸಲೆಂದು, ತಾವು ಬಹಳ ಕಾಲದಿಂದ ಮರೆತೇಬಿಟ್ಟಿರುವ ರೈಲು ನಿಲ್ದಾಣಗಳಿಗೆ ಬಲವಂತವಾಗಿಯಾದರೂ ನಗುತ್ತಾ ಬರುವುದನ್ನು ಬಿಟ್ಟರೆ ಗತ್ಯಂತರವಿಲ್ಲವಂತೆ. ಇಂಥ ಸಂದರ್ಭ ಗಳಲ್ಲೆಲ್ಲ ಮೀನಾಕ್ಷಿ ನಟರಾಜನ್ ಅವರು, ರೈಲು ಪ್ರಯಾಣವನ್ನು ನೆಚ್ಚಬೇಕಿರುವುದರ ಅನಿವಾ ರ್ಯತೆಯ ಕುರಿತು ‘ಪಕ್ಷಸ್ಥರಿಗೆ’ ಮನವರಿಕೆ ಮಾಡಿಕೊಡುತ್ತಾರಂತೆ! “ಅದರಿಂದ ಯಾರಾದರೂ ಪಾಠ ಕಲಿತಿದ್ದಾರಾ?" ಅಂತ ಮಾತ್ರ ನೀವು ನಾರದರನ್ನು ಪ್ರಶ್ನಿಸಬಾರದು, ಜೋಕೆ!!

ಅರ್ಥವಾಗೋದಿಲ್ಲ ಕಣ್ರೀ!

“ನನ್ನನ್ನು ಮುಗಿಸಲು ಯಾರಿಗೂ ಸಾಧ್ಯವಿಲ್ಲ; ಇಡೀ ಕರ್ನಾಟಕದ ಹಿಂದೂಗಳು ನನ್ನ ಜತೆಗಿದ್ದಾರೆ. ನನ್ನಲ್ಲಿ ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಅಂಬೇಡ್ಕರ್ ರಕ್ತ ಹರಿಯುತ್ತಿದೆ. ನನ್ನನ್ನು ಮುಗಿಸಲು ಯತ್ನಿಸಿದರೆ ಕರ್ನಾಟಕದಲ್ಲಿ ಬೆಂಕಿ ಹೊತ್ತಿಕೊಳ್ಳುತ್ತದೆ" ಎಂದು ಬಿಜೆಪಿ ಯಿಂದ ಇತ್ತೀಚೆಗಷ್ಟೇ ಉಚ್ಚಾಟಿಸಲ್ಪಟ್ಟ ಶಾಸಕ ಬಸನಗೌಡ ಪಾಟೀಲ್ ಯತ್ನಾಳರು ಅಬ್ಬರಿಸಿದ್ದಾರೆ. ಈ ಮಾತಿಗೆ ಅವರ ಎದುರಾಳಿಗಳು ಪ್ರತಿಕ್ರಿಯಿಸೋದು ಇರಲಿ, ಭಿನ್ನಮತದ ದನಿಯೆತ್ತಿ ಯತ್ನಾಳರು ಕಟ್ಟಿಕೊಂಡಿದ್ದ ಬಣದವರು ಕೂಡ ‘ಕಮಕ್-ಕಿಮಕ್’ ಎಂದಿಲ್ಲ. ಒಟ್ನಲ್ಲಿ, ರಾಜಕೀಯ ರಂಗದವರ ಲೆಕ್ಕಾಚಾರಗಳನ್ನು ಅರ್ಥಮಾಡಿಕೊಳ್ಳೋದೇ ಕಷ್ಟ ಕಣ್ರೀ!