ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮೆಲೋಡಿ ಸಿಹಿ, ವಿರೋಧಿಗಳಿಗೆ ಕಹಿ!

ರಾಜಕಾರಣಿಗಳಿಗೆ ಎಲ್ಲದರಲ್ಲೂ ಹುಳುಕು ಹುಡುಕುವ ಚಾಳಿ ಇದೆ ಎಂಬುದು ಮತ್ತೊಮ್ಮೆ ಸಾಬೀತಾ ಯಿತು. ಅಷ್ಟೇ ಅಲ್ಲ, ಅವರಲ್ಲಿ ಕಿಂಚಿತ್ ಜವಾಬ್ದಾರಿ ಮತ್ತು ವಿನೋದಪ್ರಜ್ಞೆ ಎಂಬುದೇ ಇಲ್ಲ ಎಂಬುದೂ ತಿಳಿದಂತಾಯಿತು. ನಮ್ಮ ದೇಶದ ಪ್ರಧಾನಿ ಮೋದಿ, ಇಟಲಿಯ ಪ್ರವಾಸದ ವೇಳೆ ಅಲ್ಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರಿಗೆ, ಭಾರತದ ಪ್ರಸಿದ್ಧ ಬ್ರಾಂಡ್ ಆದ ಪಾರ್ಲೆ ಅವರ ‘ಮೆಲೋಡಿ’ ಚಾಕಲೇಟ್ ಕೊಟ್ಟಿದ್ದೇ ಈಗ ವಿಪಕ್ಷ ಕಾಂಗ್ರೆಸ್ಸಿಗೆ ಗೇಲಿ ಮಾಡುವಂತಹ ವಿಷಯ ವಾಗಿ ಬಿಟ್ಟಿದೆ.

ಮೆಲೋಡಿ ಸಿಹಿ, ವಿರೋಧಿಗಳಿಗೆ ಕಹಿ!

-

Profile
Ashok Nayak May 23, 2026 6:08 PM

ಸವಿಮಾತು

ಶಂಕರನಾರಾಯಣ ಭಟ್

ರಾಜಕಾರಣಿಗಳಿಗೆ ಎಲ್ಲದರಲ್ಲೂ ಹುಳುಕು ಹುಡುಕುವ ಚಾಳಿ ಇದೆ ಎಂಬುದು ಮತ್ತೊಮ್ಮೆ ಸಾಬೀತಾಯಿತು. ಅಷ್ಟೇ ಅಲ್ಲ, ಅವರಲ್ಲಿ ಕಿಂಚಿತ್ ಜವಾಬ್ದಾರಿ ಮತ್ತು ವಿನೋದಪ್ರಜ್ಞೆ ಎಂಬುದೇ ಇಲ್ಲ ಎಂಬುದೂ ತಿಳಿದಂತಾಯಿತು. ನಮ್ಮ ದೇಶದ ಪ್ರಧಾನಿ ಮೋದಿ, ಇಟಲಿಯ ಪ್ರವಾಸದ ವೇಳೆ ಅಲ್ಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರಿಗೆ, ಭಾರತದ ಪ್ರಸಿದ್ಧ ಬ್ರಾಂಡ್ ಆದ ಪಾರ್ಲೆ ಅವರ ‘ಮೆಲೋಡಿ’ ಚಾಕಲೇಟ್ ಕೊಟ್ಟಿದ್ದೇ ಈಗ ವಿಪಕ್ಷ ಕಾಂಗ್ರೆಸ್ಸಿಗೆ ಗೇಲಿ ಮಾಡುವಂತಹ ವಿಷಯ ವಾಗಿ ಬಿಟ್ಟಿದೆ.

ಇಲ್ಲಿ ನಿಜವಾಗಿ ಗಮನಿಸಬೇಕಾದ್ದು, ಮೋದಿ ಅವರ ವಿನೋದಪ್ರಜ್ಞೆ ಒಂದೆಡೆ ಆದರೆ, ಭಾರತದ ಉತ್ಪನ್ನವನ್ನು ವಿದೇಶದಲ್ಲಿ ಪರಿಚಯಿಸುವ ಕೆಲಸವೂ ಆಗಿದೆ. ಅದನ್ನು ಇಟಲಿ ಪ್ರಧಾನಿಯೂ ಅತ್ಯಂತ ಸಂತೋಷ, ಸಡಗರದಿಂದ ಸ್ವೀಕರಿಸಿ, ಸೆಲ್ಫಿ ಸಹ ತೆಗೆದುಕೊಂಡಿದ್ದಾರೆ. ಇದು ಸಣ್ಣ ವಿಷಯವಲ್ಲ. ಮೋದಿ ಕೊಟ್ಟ ಉಡುಗೊರೆಯ ಬೆಲೆ ಕೇವಲ ರೂ.50! ಅದು ಮುಖ್ಯ ಅಲ್ಲವೇ ಅಲ್ಲ. ಒಂದೆಡೆ ಮೋದಿಯವರ ಸೃಜನಶೀಲ ಐಡಿಯಾವನ್ನು ಮೆಚ್ಚಬೇಕು.

ಇದನ್ನೂ ಓದಿ: Benefits Of Eating Chocolate: ವಿಶ್ವ ಚಾಕೊಲೇಟ್ ದಿನ: ಕೊಕೊ ಮೆಲ್ಲುವುದಕ್ಕೆ ಕಾರಣಗಳು ಬೇಕೇ?

ಇನ್ನೊಂದೆಡೆ, ಇಷ್ಟು ಸಣ್ಣ ಮೊತ್ತದ ಉಡುಗೊರೆ ಕೊಡುವಾಗಲೂ ಯಾವುದೇ ಕೀಳರಿಮೆ ಯಾಗಲೀ, ಅಳುಕಾಗಲೀ ಇರಲಿಲ್ಲ. ಕಾರಣ, ಅದೊಂದು ಸೌಹಾರ್ದಯುತ ಭೆಟ್ಟಿ. ಪಾರ್ಲೆ ಕಂಪನಿ, ಗುಜರಾತದ ಉದ್ಯಮಿಯೊಬ್ಬರದ್ದು, ನಮ್ಮ ರಾಜ್ಯದ ಉದ್ಯಮಿಯ ವಸ್ತುವನ್ನು ಪ್ರಚಾರ ಮಾಡಲು ಮೋದಿ ಯತ್ನ ಎಂಬೆಲ್ಲ ಮಾತುಗಳೂ ಕಾಂಗ್ರೆಸ್ಸಿನಿಂದ ಬರುತ್ತಿದೆ.

ಒಂದು ವೇಳೆ ಅದೇ ಸರಿ ಅಂದು ಕೊಂಡರೂ ಅದರನು ತಪ್ಪಿದೆ? ಅವರೇನು ಆ ವಸ್ತುವಿನ ರಾಯಭಾರಿ ಆಗಿಯೋ, ಮಾಡೆಲ ಆಗಿಯೋ ಕೊಟ್ಟಿದ್ದಲ್ಲವಲ್ಲ. ಹೆಸರಿನ ಕೂಡುವಿಕೆ - ಮೆಲೋನಿ- ಮೆಲೋಡಿ ! ಇದು ಮೋದಿ - ಮೆಲೋನಿ ಸೇರಿ ಆಗಿದ್ದೂ ಕಾಕತಾಳೀಯವೆ. ಇದನ್ನೇ ಮೋದಿ ಹೇಗೆ ಬಳಸಿಕೊಂಡಿದ್ದಾರೆ ಎಂಬುದರ ಶ್ಲಾಘನೆ ಮಾಡುವುದನ್ನು ಬಿಟ್ಟು ಲೇವಡಿಗೆ ಮುಂದಾಗಿರುವುದು ಮಾತ್ರ ಎಷ್ಟಕ್ಕೂ ಒಪ್ಪಿತವಲ್ಲ.

ವಿರೋಧ ಪಕ್ಷ ಅಂದಕೂಡಲೇ ಎಲ್ಲವನ್ನೂ ವಿರೋಧಿಸಬೇಕೆಂದೇನಿಲ್ಲವಲ್ಲ. ಆದರೇನು, ಮೊಸರಲ್ಲೂ ಕಲ್ಲು ಹುಡುಕುವ ಸ್ವಭಾವದವರು ಎಂದೂ ಬದಲಾಗರು. ಇನ್ನೂ ಚೋದ್ಯವೆಂದರೆ, ಪಾರ್ಲೆ ಮೆಲೋಡಿ ಚಾಕಲೇಟ್ ಕೊಟ್ಟ ವಿಷಯ ಸಾಮಾಜಿಕ ಜಾಲತಾಣದಲ್ಲಿ ಭರದಿಂದ ಹರಿದಾಡುತ್ತಿರುವಾಗಲೇ ಪಾರ್ಲೆ ಶೇರ್ ಬೆಲೆ 5% ಹೆಚ್ಚಾಗಿ ಬಿಟ್ಟಿದೆ !

ಹೇಗಿದೆ ನೋಡಿ ಮಾರ್ಕೆಟ್ ಟ್ರೆಂಡ್? ಎರಡು ದೇಶದ ಪ್ರಧಾನಿಗಳ ಈ ಉಡುಗೊರೆ ಪ್ರಹಸನ ಶೇರ್ ಖರೀದಿದಾರರಲ್ಲೂ ಸಂಚಲನ ತಂದಂತಿದೆ. ಈ ಸೆನ್ಸೆಕ್ಸ್ ಎಂಬುದು ಬಹು ಸೆನ್ಸಿಟಿವ್ ಎಂಬುದೂ ತಿಳಿದಂತಾಯಿತು. ಏನೇ ಇರಲಿ, ಎರಡೂ ದೇಶಗಳ ಮಧ್ಯೆ ಅತ್ಯಂತ ಉಪಯುಕ್ತ ಹೊಂದಾಣಿಕೆ ನಡೆದಿದೆ. ಇದು ಭಾರತದ ಮಟ್ಟಿಗೆ ಉತ್ತಮ ಸಂಕೇತವೇ. ಮೆಲೋಡಿ, ಕಿಲಾಡಿಗಳಿಗೆ ಏನು ಅನಿಸಿರಬಹುದು ಎಂಬುದು ಮುಖ್ಯವಲ್ಲವೇ ಅಲ್ಲ. ದೇಶದ ಹಿತ ದೃಷ್ಟಿಯಿಂದ ಇಂತಹ ಸಣ್ಣ - ಪುಟ್ಟ ವಿಷಯಗಳೂ ಹೇಗೆ ಪ್ರಯೋಜನಕಾರಿ ಆದೀತು ಎಂಬುದೇ ಮುಖ್ಯ. ಉದ್ದೇಶ ಸ್ಪಷ್ಟವಿರು ವಾಗ, ಯಾರು ಏನಂದುಕೊಳ್ಳುತ್ತಾರೆ ಎಂಬುದೂ ಗೌಣ !?