#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Vishweshwar Bhat Column: ಇಲ್ಲಿ ಸಕ್ರಮ, ಅಲ್ಲಿ ಅಕ್ರಮ

ಸಾರ್ವಜನಿಕ ಉದ್ಯಾನಗಳಲ್ಲಿ, ರಸ್ತೆಗಳಲ್ಲಿ ಅಥವಾ ರೈಲು ನಿಲ್ದಾಣಗಳಲ್ಲಿ ಸಹ ಜನರು ಮದ್ಯಪಾನ ಮಾಡಬಹುದು. ಇದನ್ನು ಅಲ್ಲಿನ ಸಮಾಜ ಸಾಮಾನ್ಯ ಚಟುವಟಿಕೆಯಾಗಿ ನೋಡುತ್ತದೆ. ಆದರೆ ವಿಶ್ವದ ಅನೇಕ ರಾಷ್ಟ್ರಗಳಲ್ಲಿ, ವಿಶೇಷವಾಗಿ ದಕ್ಷಿಣ ಕೊರಿಯಾ ಮತ್ತು ಅರಬ್ ದೇಶಗಳಲ್ಲಿ, ಸಾರ್ವಜನಿಕವಾಗಿ ಮದ್ಯಪಾನ ಮಾಡುವುದನ್ನು ನಿಷೇಧಿಸಲಾಗಿದೆ

Vishweshwar Bhat Column: ಇಲ್ಲಿ ಸಕ್ರಮ, ಅಲ್ಲಿ ಅಕ್ರಮ

Profile Ashok Nayak Jan 25, 2025 8:15 AM

ಸಂಪಾದಕರ ಸದ್ಯಶೋಧನೆ

ವಿಶ್ವೇಶ್ವರ ಭಟ್

ಜಪಾನ್ ಒಂದು ವಿಶಿಷ್ಟ ಸಂಸ್ಕೃತಿಯ ನಾಡಾಗಿದ್ದು, ಅಲ್ಲಿನ ದೈನಂದಿನ ಜೀವನ, ಕಾನೂನುಗಳು ಮತ್ತು ಸಂಪ್ರದಾಯಗಳು ಅನೇಕರಿಗೆ ಹೊಸ ಅನುಭವವನ್ನು ನೀಡಬಹುದು. ಬೇರೆ ದೇಶಗಳಲ್ಲಿ ವಿಚಿತ್ರ, ಅಕ್ರಮ ಅಥವಾ ಕಾನೂನುಬಾಹಿರ ಎಂದು ಅನಿಸಿಕೊಂಡಿದ್ದು ಜಪಾನಿನಲ್ಲಿ ಸಹಜ, ಸಕ್ರಮ ಅಥವಾ ಸ್ವೀಕಾರಾರ್ಹ ಅಂತ ಅನಿಸಿಕೊಂಡಿರುವುದುಂಟು.

ಉದಾಹರಣೆಗೆ, ಬಹುತೇಕ ದೇಶಗಳಲ್ಲಿ ಯಾರೂ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡುವು ದಿಲ್ಲ. ಕೆಲವು ದೇಶಗಳಲ್ಲಿ ಅದು ಕಾನೂನುಬಾಹಿರ ಚಟುವಟಿಕೆ ಎಂದು ಪರಿಗಣಿತವಾಗಿದೆ. ಆದರೆ ಜಪಾನಿನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ( alcohol consumption ) ಮಾಡಬಹುದು.

ಕಾನೂನಿನ ಪ್ರಕಾರ ಅದು ತಪ್ಪಲ್ಲ. ಸಾರ್ವಜನಿಕ ಉದ್ಯಾನಗಳಲ್ಲಿ, ರಸ್ತೆಗಳಲ್ಲಿ ಅಥವಾ ರೈಲು ನಿಲ್ದಾಣಗಳಲ್ಲಿ ಸಹ ಜನರು ಮದ್ಯಪಾನ ಮಾಡಬಹುದು. ಇದನ್ನು ಅಲ್ಲಿನ ಸಮಾಜ ಸಾಮಾನ್ಯ ಚಟುವಟಿಕೆಯಾಗಿ ನೋಡುತ್ತದೆ. ಆದರೆ ವಿಶ್ವದ ಅನೇಕ ರಾಷ್ಟ್ರಗಳಲ್ಲಿ, ವಿಶೇಷವಾಗಿ ದಕ್ಷಿಣ ಕೊರಿಯಾ ಮತ್ತು ಅರಬ್ ದೇಶಗಳಲ್ಲಿ, ಸಾರ್ವಜನಿಕವಾಗಿ ಮದ್ಯಪಾನ ಮಾಡುವುದನ್ನು ನಿಷೇಧಿಸ ಲಾಗಿದೆ.

ಇದನ್ನೂ ಓದಿ: Vishweshwar Bhat Column | ಕನ್ಸಾಯಿ ಮತ್ತು ಲಗೇಜ್‌ ನಿರ್ವಹಣೆ

ಜಪಾನಿನಲ್ಲಿ ಬೀದಿ ಬದಿಯಲ್ಲಿಯೇ ಸಾಕಿ ( Brewed alcohol ) ಅಥವಾ ಬಿಯರ್‌ಗಳನ್ನು ವೆಂಡಿಂಗ್ ಮಷಿನ್‌ಗಳ ಮೂಲಕ ಮಾರುವುದು ಸಾಮಾನ್ಯ. ಈ ವೆಂಡಿಂಗ್ ಮಷಿನ್‌ಗಳು ಎಡೆಯೂ ಸುಲಭವಾಗಿ ಲಭ್ಯ. ಆದರೆ ಇಂಥ ಮಷಿನ್‌ಗಳ ಮೂಲಕ ಮದ್ಯ ಮಾರಾಟವು ಅನೇಕ ದೇಶಗಳಲ್ಲಿ ಅಕ್ರಮವಾಗಿದೆ, ಜಪಾನಿನಲ್ಲಿ ಮಾತ್ರ ಇದಕ್ಕೆ ಯಾವ ನಿರ್ಬಂಧವೂ ಇಲ್ಲ. ಜಪಾನಿನಲ್ಲಿ ಪಚಿಂಕೋ ( Pachinko ) ಎಂಬ ಒಂಥರಾ ಜೂಜಿನ ಆಟವಿದೆ. ಅದನ್ನು ಆಟೋಮ್ಯಾಟಿಕ್ ಗೇಮ್ ಮಷಿನ್‌ಗಳಲ್ಲಿ ಆಡುವುದು ಬಹಳ ಜನಪ್ರಿಯ.

ಪಚಿಂಕೋ ಮಷೀನನ್ನು ಕಾನೂನಾತ್ಮಕವಾಗಿ ಸ್ಥಾಪಿಸಲಾಗಿದೆ. ಅಸಲಿಗೆ ಇದು ಗ್ಯಾಂಬಲಿಂಗ್ ಅಂದರೆ ಜೂಜು. ಅನೇಕ ದೇಶಗಳಲ್ಲಿ ಇದನ್ನು ನಿಷೇಧಿಸಲಾಗಿದೆ. ಆದರೆ ಜಪಾನಿನಲ್ಲಿ ಈ ಮಷೀನ ನ್ನು ಎಡೆ ಕಾಣಬಹುದು. ಜಪಾನಿನಲ್ಲಿ ದನದ ಕಚ್ಚಾ ಮಾಂಸ ( raw beef ), ಕುದುರೆ ಕಚ್ಚಾ ಮಾಂಸ ಮತ್ತು ಕಚ್ಚಾ ಮೀನು ( sashimi ) ಮಾಂಸ ಸೇವಿಸುವುದು ಸಾಮಾನ್ಯ. ಈ ಬಗೆಯ ಆಹಾರ ಪದ್ಧತಿಗಳನ್ನು ಜಪಾನ್‌ನಲ್ಲಿ ವೈಭವೀಕರಿಸಿzರೇನೋ ಎಂದು ಅನಿಸುವುದುಂಟು. ಆದರೆ ಅನೇಕ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಕಚ್ಚಾ ಮಾಂಸ ಸೇವನೆಯನ್ನು ನಿಯಂತ್ರಿಸಲಾಗಿದೆ ಅಥವಾ ನಿಷೇಧಿಸಲಾಗಿದೆ.

ಜಪಾನಿನಲ್ಲಿ ಹಸ್ತಿ (ಐವರಿ) ದಂತ ಕಲಾಕೃತಿ ಅಥವಾ ಉತ್ಪನ್ನಗಳನ್ನು ಬಳಸುವುದನ್ನು, ಮಾರಾಟ ಮಾಡುವುದನ್ನು ಕೆಲವೊಂದು ವಿನಾಯತಿ ನಿಯಮಗಳ ಮೂಲಕ ಅನುಮತಿ ನೀಡಲಾಗಿದೆ. ಇದು ಜಪಾನಿನ ಸಂಸ್ಕೃತಿಯ ಭಾಗವಾಗಿದೆ. ಆದರೆ ಅನೇಕ ದೇಶಗಳಲ್ಲಿ, ದಂತ ಕಲಾಕೃತಿಗಳ ಮಾರಾ ಟವು ಅಕ್ರಮವಾಗಿದೆ. ಏಕೆಂದರೆ ಇದು ಪ್ರಾಣಿ ಸಂರಕ್ಷಣೆ ನೀತಿಗಳಿಗೆ ವಿರುದ್ಧವಾಗಿದೆ. ಹಾಗೆಯೇ ಜಪಾನಿನಲ್ಲಿ ಪೋಲ್ ಡ್ಯಾನ್ಸಿಂಗ್ ಅನ್ನು ಜನರು ಸಾಮಾನ್ಯ ಮನರಂಜನೆಯ ರೂಪವಾಗಿ ಕಾಣುತ್ತಾರೆ. ಅನೇಕ ದೇಶಗಳಲ್ಲಿ ಇದು ಅಸಭ್ಯ ಹುಟ್ಟಿಸುವ ಕ್ರಿಯೆ.

ಆದರೆ ಜಪಾನಿನಲ್ಲಿ ಇದು ಸಂಪೂರ್ಣ ಕಾನೂನುಬದ್ಧ. ಅಲ್ಲಿ ಪೋಲ್ ಡಾನ್ಸಿಂಗ್‌ಗೆ ಜನ ಕುಟುಂಬ ಸಮೇತ ಹೋಗುವುದುಂಟು. ಜತೆಗೆ ಪ್ರವಾಸಿಗರಿಗೂ ಮುಕ್ತವಾಗಿದೆ. ಜಪಾನಿನಲ್ಲಿ ಹಲವು ಅಂಗಡಿಗಳಲ್ಲಿ ಕಾಮೋತ್ತೇಜಕ ವಸ್ತುಗಳನ್ನು ಮುಕ್ತವಾಗಿ ಮಾರಾಟ ಮಾಡಬಹುದು. ಇದು ಯುರೋಪಿನ ಹಲವು ದೇಶಗಳ ಸಂಸ್ಕೃತಿಗೆ ಸಂಪೂರ್ಣ ವಿರುದ್ಧ. ಅನೇಕ ದೇಶಗಳಲ್ಲಿ ಹನ್ನೆರಡು ವರ್ಷದೊಳಗಿನ ಅಪ್ರಾಪ್ತ ವಯಸ್ಕ ವ್ಯಕ್ತಿಗಳನ್ನು ಚಿತ್ರಿಸುವ ಅಥವಾ ಪ್ರತಿನಿಧಿಸುವ ಯಾವುದೇ ಮಾಧ್ಯಮ ಅಕ್ರಮ. ಆದರೆ ಜಪಾನಿನ ಮಾಂಗಾ ಮತ್ತು ಅನಿಮೆಯಲ್ಲಿ, ಕೆಲವು ಕಥಾ ಹಂದರಗಳು ವಿವಾದಾತ್ಮಕವಾಗಿ ಕಾಣಬಹುದು. ಇದನ್ನು ಜಪಾನ್‌ನಲ್ಲಿ ಸಹಜವೆಂದು ಪರಿಗಣಿಸಲಾಗುತ್ತದೆ, ಆದರೆ ಇತರ ದೇಶಗಳಲ್ಲಿ ಇದು ಕಾನೂನುಬಾಹಿರ.