ಭಾರತ- ಯುಎಸ್ ವ್ಯಾಪಾರ ಮಾತುಕತೆ ಬಹುತೇಕ ಯಶಸ್ವಿ
ಕೃಷಿ, ಡಿಜಿಟಲ್, ವಾಯುಯಾನ, ಔಷಧ, ಖನಿಜ ಮಾರುಕಟ್ಟೆ ಸೇರಿದಂತೆ ವಿವಿಧ ವ್ಯಾಪಾರ ಕ್ಷೇತ್ರದಲ್ಲಿ ಪ್ರವೇಶಕ್ಕೆ ಭಾರತ ಮತ್ತು ಯುಎಸ್ ನಡುವೆ ಮಾತುಕತೆ ನಡೆಯುತ್ತಿದ್ದು, ಭಾರತವು ಯುಎಸ್ ಗೆ ಅತ್ಯುತ್ತಮ ಕೊಡುಗೆಗಳನ್ನು ನೀಡಿದೆ ಎಂದು ಯುಎಸ್ ಅಧಿಕಾರಿಯೇ ತಿಳಿಸಿದ್ದಾರೆ. ಇದು ಈವರೆಗೂ ಸಿಗದೇ ಇರುವಂತಹ ಅತ್ಯುತ್ತಮ ಕೊಡುಗೆಗಳು ಎಂದು ಅವರು ಹೇಳಿದ್ದಾರೆ.