ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Premi Movie: ವಿಭಿನ್ನ ‌ಪ್ರೇಮ ಕಥಾಹಂದರವುಳ್ಳ ʼಪ್ರೇಮಿʼ ಚಿತ್ರದ ಶೀರ್ಷಿಕೆ ಅನಾವರಣ

Premi Movie: ವಿಭಿನ್ನ ‌ಪ್ರೇಮ ಕಥಾಹಂದರ ಹೊಂದಿರುವ, ಎಸ್. ಪ್ರದೀಪ್ ವರ್ಮ ನಿರ್ದೇಶಿಸುತ್ತಿರುವ ಚಿತ್ರಕ್ಕೆ ʼಪ್ರೇಮಿʼ ಎಂದು ಹೆಸರಿಡಲಾಗಿದೆ. ನಿರ್ಮಾಪಕ ಸುರೇಶ್ ಗೌಡ ಈ ಚಿತ್ರದ ಶೀರ್ಷಿಕೆ ಅನಾವರಣ ಮಾಡಿದರು. ʼಪ್ರೇಮಿʼ ಚಿತ್ರದ ನಾಯಕನಾಗಿ ಅದ್ವಿಕ್ ನಟಿಸಿದ್ದಾರೆ.

ವಿಭಿನ್ನ ‌ಪ್ರೇಮ ಕಥಾಹಂದರವುಳ್ಳ ʼಪ್ರೇಮಿʼ ಚಿತ್ರದ ಶೀರ್ಷಿಕೆ ಅನಾವರಣ

-

Profile Siddalinga Swamy Sep 25, 2025 1:11 PM

ಬೆಂಗಳೂರು: ಕನ್ನಡದಲ್ಲಿ ಪ್ರೇಮ ಕಥೆಯುಳ್ಳ ಚಿತ್ರಗಳು ಸಾಕಷ್ಟು ಬಂದಿದೆ. ಆದರೆ, ವಿಭಿನ್ನ ‌ಪ್ರೇಮ ಕಥಾಹಂದರ ಹೊಂದಿರುವ ಪ್ರೇಮ ಕಥಾನಕವೊಂದು ಈಗ ನಿರ್ಮಾಣವಾಗುತ್ತಿದೆ. ಶ್ರೀ ಗುರು ಕಾಲಭೈರವೇಶ್ವರ ಪ್ರೊಡಕ್ಷನ್ ಲಾಂಛನದಲ್ಲಿ ಬಿ. ಸಿದ್ದಲಿಂಗಯ್ಯ ಅವರು ನಿರ್ಮಿಸುತ್ತಿರುವ ಹಾಗೂ ಎಸ್. ಪ್ರದೀಪ್ ವರ್ಮ ಅವರು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ʼಪ್ರೇಮಿʼ (Premi Movie) ಎಂದು ಹೆಸರಿಡಲಾಗಿದೆ. ಇತ್ತೀಚೆಗೆ ನಿರ್ಮಾಪಕ ಸುರೇಶ್ ಗೌಡ ಅವರು ಈ ಚಿತ್ರದ ಶೀರ್ಷಿಕೆ ಅನಾವರಣ ಮಾಡಿ‌ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ʼಪ್ರೇಮಿʼ ಚಿತ್ರಕ್ಕೆ ಈಗಾಗಲೇ ಚಿತ್ರೀಕರಣ ಮುಕ್ತಾಯವಾಗಿದೆ. ಮಾತಿನ ಜೋಡಣೆ ನಡೆಯುತ್ತಿದೆ. ದಾವಣಗೆರೆ, ದೇವರಬೆಳಕೆರೆ, ಗೋಕರ್ಣ,‌ ಕನಕಪುರ, ಚಿಕ್ಕಮಗಳೂರು ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆದಿದೆ.

ಜ್ಯೋತಿಷ್ಯದ ಮೂಲಕ ಪ್ರೀತಿಯನ್ನು ಹುಡುಕುವ ವಿಭಿನ್ನ ಕಥಾಹಂದರ ಹೊಂದಿರುವ ಈ ʼಪ್ರೇಮಿʼ ಚಿತ್ರಕ್ಕೆ ಟಿ.ಎಸ್. ಅಕ್ಕಮಹಾದೇವಿ ಕಥೆ ಬರೆದಿದ್ದಾರೆ. ಎಸ್. ಪ್ರದೀಪ್ ವರ್ಮ ನಿರ್ದೇಶನ ಮಾಡಿದ್ದಾರೆ. ಐದು ಹಾಡುಗಳಿರುವ ಈ ಚಿತ್ರಕ್ಕೆ ಪ್ರದೀಪ್ ವರ್ಮ ಅವರೇ ಸಂಗೀತ ಸಂಯೋಜನೆಯನ್ನೂ ಮಾಡಿದ್ದಾರೆ. ಇದು ಎಸ್. ಪ್ರದೀಪ್ ವರ್ಮ ನಿರ್ದೇಶನದ ಮೂರನೇ ಚಿತ್ರ. ಸಹ ನಿರ್ದೇಶನ ಮಾಡಿರುವ ಎನ್. ವಿಮಲ್ ರಾಜ್ ಅವರ ಸಂಭಾಷಣೆ, ಕಿರಣ್ ರಾಜ್ ಹಾಗೂ ಪೂರ್ಣಚಂದ್ರ ಎಂ ದೇವಾಂಗ ಸಹಾಯಕ ನಿರ್ದೇಶನ, ಗೌತಮ್ ಮಟ್ಟಿ ಛಾಯಾಗ್ರಹಣ, ಸಂಜೀವ್ ರೆಡ್ಡಿ ಸಂಕಲನ ಹಾಗೂ ರಾಮ್ ದೇವ್ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

ಕೆ.ಎಂ. ಹರೀಶ್ ಉಕ್ಕಡಗಾತ್ರಿ ಲೈನ್ ಪ್ರೊಡ್ಯೂಸರ್ ಹಾಗೂ ವೀರೇಶ್ ಎರೆಕುಪ್ಪಿ ಹಿರೇಮಠ ಕಾರ್ಯ ನಿರ್ವಾಹಕ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸಿರುವ ʼಪ್ರೇಮಿʼ ಚಿತ್ರದ ನಾಯಕನಾಗಿ ಅದ್ವಿಕ್ ನಟಿಸಿದ್ದಾರೆ. ಸಾತ್ವಿಕ, ಶೋಭಿತ, ಎಸ್. ಪ್ರದೀಪ್ ವರ್ಮ, ಹರೀಶ್ ಉಕ್ಕಡಗಾತ್ರಿ, ಶಂಕರ್ ಅಂಬಿ, ದ್ವಿತ, ಸಂಗಮೇಶ್ ದೇವರಬೆಳಕೆರೆ, ಕಲ್ಕಿ, ಮಾಸ್ಟರ್ ಹರೀಶ್, ಮಾಸ್ಟರ್ ಸಂತೃಪ್ತಿ ಶಿವಧರಮಠ, ಸಮರ್ಥ್ ರಾಘವೇಂದ್ರ, ಸುರೇಶ್ ಬಾಬು ಮುಂತಾದವರ ʼಪ್ರೇಮಿʼ ಚಿತ್ರದ ತಾರಾಬಳಗದಲ್ಲಿದ್ದಾರೆ.‌

ಈ ಸುದ್ದಿಯನ್ನೂ ಓದಿ | Navaratri Jewel trend 2025: ನವರಾತ್ರಿ ಸೀಸನ್‌ನಲ್ಲಿ ಟ್ರೆಂಡಿಯಾಗಿರುವ ಜ್ಯುವೆಲರಿಗಳಿವು