The Girlfriend OTT : ರಶ್ಮಿಕಾ ಮಂದಣ್ಣ ಅಭಿನಯದ 'ದಿ ಗರ್ಲ್‌ಫ್ರೆಂಡ್' ಒಟಿಟಿ ಎಂಟ್ರಿ ಯಾವಾಗ?
ತೆಲುಗು ರೊಮ್ಯಾಂಟಿಕ್ ಸಿನಿಮಾ 'ದಿ ಗರ್ಲ್‌ಫ್ರೆಂಡ್' (The Girlfriend) ಬಿಡುಗಡೆಯಾದ ಸುಮಾರು ಒಂದು ವಾರದ ನಂತರವೂ ಬಾಕ್ಸ್ ಆಫೀಸ್‌ನಲ್ಲಿ (Box Office) ಪ್ರದರ್ಶನ ಮುಂದುವರಿಸಿದೆ. ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಮತ್ತು ದೀಕ್ಷಿತ್ ಶೆಟ್ಟಿ (Dheekshith Shetty) ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ, ಅನು ಇಮ್ಯಾನುಯೆಲ್, ರಾಹುಲ್ ರವೀಂದ್ರನ್, ರಾವ್ ರಮೇಶ್ ಮತ್ತು ರೋಹಿಣಿ ಮೊಲ್ಲೇಟಿ ಬೆಂಬಲ ನೀಡಿದ್ದಾರೆ. ಕೃಷ್ಣನ್ ವಸಂತ್ ಕ್ಯಾಮರಾ ವರ್ಕ್, ಚೋಟಾ ಕೆ.ಪ್ರಸಾದ್ ಸಂಕಲನ ಈ ಸಿನಿಮಾಗಿದೆ.
ರಶ್ಮಿಕಾ ಮಂದಣ್ಣ -
ರಾಹುಲ್ ರವೀಂದ್ರನ್ (Rahul Ravichandran) ನಿರ್ದೇಶನದ ರಶ್ಮಿಕಾ ಮಂದಣ್ಣ (Rashmika Mandanna) ಅವರ ಇತ್ತೀಚಿನ ತೆಲುಗು ರೊಮ್ಯಾಂಟಿಕ್ ಸಿನಿಮಾ 'ದಿ ಗರ್ಲ್‌ಫ್ರೆಂಡ್' (The Girlfriend) ಬಿಡುಗಡೆಯಾದ ಸುಮಾರು ಒಂದು ವಾರದ ನಂತರವೂ ಬಾಕ್ಸ್ ಆಫೀಸ್‌ನಲ್ಲಿ (Box Office) ಪ್ರದರ್ಶನ ಮುಂದುವರಿಸಿದೆ. ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಗಳಿಕೆ ಮಾಡುತ್ತಿದ್ದರೂ, ಡಿಜಿಟಲ್ ಸ್ಟ್ರೀಮಿಂಗ್ (OTT Streaming) ಯಾವಾಗ ಎಂದು ಈಗಲೇ ಕಮೆಂಟ್ ಮಾಡುತ್ತಿದ್ದಾರೆ ವೀಕ್ಷಕರು.
ದಿ ಗರ್ಲ್‌ಫ್ರೆಂಡ್ ಬಾಕ್ಸ್ ಆಫೀಸ್
ಈ ತೆಲುಗು ಚಿತ್ರಕ್ಕೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ವ್ಯಾಪಾರ ವರದಿಗಳ ಪ್ರಕಾರ, ಆರನೇ ದಿನ ಸುಮಾರು ₹1.25 ಕೋಟಿ (ಭಾರತ ನಿವ್ವಳ) ಕಲೆಕ್ಷನ್ ಮಾಡಿದ್ದು, ಎಲ್ಲಾ ಭಾಷೆಗಳಲ್ಲಿ ಒಟ್ಟು ₹10.10 ಕೋಟಿ ಗಳಿಕೆ ಮಾಡಿದೆ. ಚಿತ್ರವು ಮೊದಲ ಐದು ದಿನಗಳಲ್ಲಿ ₹8.85 ಕೋಟಿ ಗಳಿಸಿದೆ, ಆದರೆ ಆರನೇ ದಿನ ತೆಲುಗು ಮಾರುಕಟ್ಟೆಯಲ್ಲಿ ಒಟ್ಟಾರೆ ಶೇ.18.85 ರಷ್ಟು ಗಳಿಕೆ ಕಂಡಿದೆ.
ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಮತ್ತು ದೀಕ್ಷಿತ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ, ಅನು ಇಮ್ಯಾನುಯೆಲ್, ರಾಹುಲ್ ರವೀಂದ್ರನ್, ರಾವ್ ರಮೇಶ್ ಮತ್ತು ರೋಹಿಣಿ ಮೊಲ್ಲೇಟಿ ಬೆಂಬಲ ನೀಡಿದ್ದಾರೆ.
ದಿ ಗರ್ಲ್‌ಫ್ರೆಂಡ್ OTT ಅಪ್‌ಡೇಟ್
ನೆಟ್‌ಫ್ಲಿಕ್ಸ್ ದಿ ಗರ್ಲ್‌ಫ್ರೆಂಡ್‌ನ ಡಿಜಿಟಲ್ ಸ್ಟ್ರೀಮಿಂಗ್ ಹಕ್ಕುಗಳನ್ನು ಪಡೆದುಕೊಂಡಿದೆ ಈ ಚಿತ್ರವು ಡಿಸೆಂಬರ್ 11, 2025 ರ ಸುಮಾರಿಗೆ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಥಮ ಪ್ರದರ್ಶನಗೊಳ್ಳುವ ನಿರೀಕ್ಷೆಯಿದೆ.
ಈ ವರ್ಷಾರಂಭದಲ್ಲಿ ಬಂದ ಛಾವಾ ಚಿತ್ರ ಬ್ಲಾಕ್ಬಸ್ಟರ್ ಹಿಟ್ ಕಂಡಿದೆ. ಅದಾದ ಬಳಿಕ ಬಂದ ಸಿಕಂದರ್, ಕುಬೇರ, ಇತ್ತೀಚಿನ ಥಾಮಾ ಉತ್ತಮ ಪ್ರದರ್ಶನ ಕಂಡು ಕೋಟಿ ಕೋಟಿ ಕಲೆಕ್ಷನ್ ಮಾಡಿವೆ. ನಟಿಯ ಈ ಹಿಂದಿನ ಸಿನಿಮಾಗಳ ಗಳಿಕೆ ದೊಡ್ಡ ಮಟ್ಟದಲ್ಲಿದ್ದು, 'ದಿ ಗರ್ಲ್‌ಫ್ರೆಂಡ್' ಸಾಧಾರಣ ಪ್ರದರ್ಶನ ಕಾಣುತ್ತಿದೆ.
Rashmika Mandanna in The Girlfriend is something else entirely. Goosebumps. Tears. That silence when the film ends and you just sit there processing it all .This one stays with you for a long time.@iamRashmika #TheGirlFriend pic.twitter.com/WsRD9k5yB3
— Sonaram Dewasi (@SonaRam522444) November 14, 2025
ಯಾರೆಲ್ಲ ಇದ್ದಾರೆ?
ಉಳಿದಂತೆ, ಅನು ಎಮ್ಯಾನುಯೆಲ್, ರಾವ್ ರಮೇಶ್ ಮತ್ತು ರೋಹಿಣಿ ಪ್ರಮುಖ ಪಾತ್ರದಲ್ಲಿದ್ದಾರೆ. ಹೇಶಮ್ ಅಬ್ದುಲ್ ವಹಾಬ್ ಸಂಗೀತ ಮತ್ತು ಪ್ರಶಾಂತ್ ಆರ್ ವಿಹಾರಿ ಹಿನ್ನೆಲೆ ಸಂಗೀತ ಚಿತ್ರದ ನಿರೂಪಣೆಯ ಅಂದ ಹೆಚ್ಚಿಸಿದೆ.
ಇದನ್ನೂ ಓದಿ: Bigg Boss Kannada 12: ಮುಖದ ಮೇಲೆ ಟವೆಲ್ ಹಾಕಿಕೊಂಡು ಬಿಕ್ಕಿ ಬಿಕ್ಕಿ ಅತ್ತ ಮಾಳು ; ವೀಕ್ಷಕರ ಬೇಸರ
ಅಲ್ಲು ಅರವಿಂದ್ ಅವರ ಗೀತಾ ಆರ್ಟ್ಸ್ ಬ್ಯಾನರ್ ಅಡಿ ಪ್ರಸ್ತುತಪಡಿಸಲಾದ ಈ ಸಿನಿಮಾಗೆ ವಿದ್ಯಾ ಕೊಪ್ಪಿನೀಡಿ ಮತ್ತು ಧೀರಜ್ ಮೊಗಿಲಿನೇನಿ ಹಣ ಹಾಕಿದ್ದಾರೆ. ಕೃಷ್ಣನ್ ವಸಂತ್ ಕ್ಯಾಮರಾ ವರ್ಕ್, ಚೋಟಾ ಕೆ.ಪ್ರಸಾದ್ ಸಂಕಲನ ಈ ಸಿನಿಮಾಗಿದೆ.