ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

8th Pay Commission: ಮೂಲ ವೇತನದೊಂದಿಗೆ ಡಿಎ ವಿಲೀನ.. ಸಚಿವರು ಹೇಳಿದ್ದೇನು?

ರಂಜನಾ ದೇಸಾಯಿ ನೇತೃತ್ವದ ತ್ರಿಸದಸ್ಯ ಸಮಿತಿಯ 8ನೇ ವೇತನ ಆಯೋಗವು ಹೊರಡಿಸಿರುವ ಅಧಿಸೂಚನೆಯ ಪ್ರಕಾರ ತುಟ್ಟಿ ಭತ್ಯೆಯನ್ನು ಮೂಲ ವೇತನದೊಂದಿಗೆ ವಿಲೀನಗೊಳಿಸುವ ಯಾವುದೇ ಯೋāಜನೆ ಇಲ್ಲ. ಇಂತಹ ಯಾವುದೇ ಪ್ರಸ್ತಾಪವು ಕೂಡ ಸರ್ಕಾರದ ಮುಂದೆ ಬಂದಿಲ್ಲ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ತಿಳಿಸಿದ್ದಾರೆ.

8ನೇ ವೇತನ ಆಯೋಗದ ಅಧಿಸೂಚನೆಯಲ್ಲಿ ಏನಿದೆ?

(ಸಂಗ್ರಹ ಚಿತ್ರ) -

ನವದೆಹಲಿ: ಈಗಾಗಲೇ ಅಸ್ತಿತ್ವದಲ್ಲಿರುವ ತುಟ್ಟಿ ಭತ್ಯೆಯನ್ನು (dearness allowance) ಮೂಲ ವೇತನದೊಂದಿಗೆ ವಿಲೀನಗೊಳಿಸುವ ಯಾವುದೇ ಪ್ರಸ್ತಾಪ ಸರ್ಕಾರದ ಪರಿಶೀಲನೆಯಲ್ಲಿ ಇಲ್ಲ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ (Union Minister of State for Finance Pankaj Chaudhary) ತಿಳಿಸಿದ್ದಾರೆ. ರಂಜನಾ ದೇಸಾಯಿ ನೇತೃತ್ವದ ತ್ರಿಸದಸ್ಯ ಸಮಿತಿಯ 8ನೇ ವೇತನ ಆಯೋಗವು (8th Pay Commission) ಹೊರಡಿಸಿರುವ ಅಧಿಸೂಚನೆಯ ಪ್ರಕಾರ ತುಟ್ಟಿ ಭತ್ಯೆಯನ್ನು ಮೂಲ ವೇತನದೊಂದಿಗೆ ವಿಲೀನಗೊಳಿಸುವ ಯಾವುದೇ ಯೋಜನೆ ಇಲ್ಲ. ಈ ಕುರಿತಾದ ಪ್ರಸ್ತಾಪವು ಸರ್ಕಾರದ ಮುಂದೆ ಬಂದಿಲ್ಲ ಎಂದು ಅವರು ಹೇಳಿದರು.

ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಜನಜೀವನ ವೆಚ್ಚವನ್ನು ಸರಿಹೊಂದಿಸಲು ಮತ್ತು ಹಣದುಬ್ಬರದಿಂದಾಗಿ ಮೂಲ ವೇತನ, ಪಿಂಚಣಿ ಕಡಿಮೆಯಾಗುವುದನ್ನು ತಡೆಯಲು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಕಾರ್ಮಿಕ ಬ್ಯೂರೋ ಬಿಡುಗಡೆ ಮಾಡಿದ ಅಖಿಲ ಭಾರತ ಕೈಗಾರಿಕಾ ಕಾರ್ಮಿಕರ ಗ್ರಾಹಕ ಬೆಲೆ ಸೂಚ್ಯಂಕದ ಆಧಾರದ ಮೇಲೆ ಪ್ರತಿ ಆರು ತಿಂಗಳಿಗೊಮ್ಮೆ ಡಿಎ/ಡಿಆರ್ ದರಗಳನ್ನು ಪರಿಷ್ಕರಿಸಲಾಗುತ್ತದೆ ಎಂದು ಅವರು ತಿಳಿಸಿದರು.

ವ್ಲಾಡಿಮಿರ್ ಪುಟಿನ್ ಭಾರತ ಭೇಟಿ: ರಕ್ಷಣಾ ಸಹಕಾರ ಒಪ್ಪಂದದ ನಿರೀಕ್ಷೆ

ಕಳೆದ ನವೆಂಬರ್ 3ರಂದು ಎಂಟನೇ ಕೇಂದ್ರ ವೇತನ ಆಯೋಗದ ರಚನೆಗೆ ಸರ್ಕಾರ ಆದೇಶ ಹೊರಡಿಸಿತ್ತು.ದೀಪಾವಳಿಗೆ ಮುಂಚಿತವಾಗಿ ಸರ್ಕಾರವು ತುಟ್ಟಿಭತ್ಯೆ ಮತ್ತು ಡಿಆರ್ ಅನ್ನು ಶೇ. 3ರಷ್ಟು ಹೆಚ್ಚಿಸಿದ್ದು, ಇದರಿಂದ ಪ್ರಸ್ತುತ ತುಟ್ಟಿಭತ್ಯೆ ಮತ್ತು ಡಿಆರ್ ಎರಡೂ ಸೇರಿ ಕ್ರಮವಾಗಿ ಮೂಲ ವೇತನ ಅಥವಾ ಪಿಂಚಣಿಯ ಶೇ. 55ರಷ್ಟಿದೆ.

ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ (DA) ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆ (DR)ಯನ್ನು ನೀಡಲಾಗುತ್ತದೆ. 5 ಮಿಲಿಯನ್‌ಗಿಂತಲೂ ಹೆಚ್ಚು ಉದ್ಯೋಗಿಗಳು ಮತ್ತು 6.5 ಮಿಲಿಯನ್‌ಗಿಂತಲೂ ಹೆಚ್ಚು ಪಿಂಚಣಿದಾರರ ಇದರ ಮೇಲೆ ಅವಲಂಬಿತರಾಗಿದ್ದಾರೆ.

7ನೇ ವೇತನ ಆಯೋಗವು ತನ್ನ 10 ವರ್ಷಗಳ ಅವಧಿಯನ್ನು ಈ ವರ್ಷ ಕೊನೆಗೊಳಿಸುತ್ತಿರುವುದರಿಂದ ನಿವೃತ್ತ ನ್ಯಾಯಮೂರ್ತಿ ರಂಜನಾ ದೇಸಾಯಿ ನೇತೃತ್ವದ 8ನೇ ವೇತನ ಆಯೋಗವನ್ನು ರಚಿಸಲಾಗಿದೆ. ಈ ಆಯೋಗವು 18 ತಿಂಗಳೊಳಗೆ ಸಂಬಳ, ಮೂಲ ವೇತನ ಮತ್ತು ಫಿಟ್‌ಮೆಂಟ್ ಅಂಶದ ಕುರಿತು ಸರ್ಕಾರಕ್ಕೆ ಶಿಫಾರಸು ಸಲ್ಲಿಸುವ ಸಾಧ್ಯತೆ ಇದೆ.

ಸಂಬಳ ಎಷ್ಟು ಹೆಚ್ಚಾಗಬಹುದು?

ಆಂಬಿಟ್ ​​ಕ್ಯಾಪಿಟಲ್‌ನ ನಿರೀಕ್ಷೆಯ ಪ್ರಕಾರ ಕೇಂದ್ರ ಸರ್ಕಾರಿ ನೌಕರರ ಕನಿಷ್ಠ ವೇತನ ತಿಂಗಳಿಗೆ 18,000 ರೂ. ಗಳಿಂದ 32,940- 44,280 ರೂ. ವರೆಗೆ ಹೆಚ್ಚಾಗುವ ಸಾಧ್ಯತೆ ಇದೆ. ಸಂಬಳದಲ್ಲಿನ ಅಂತಿಮ ಹೆಚ್ಚಳವು ಫಿಟ್‌ಮೆಂಟ್ ಅಂಶವನ್ನು ಆಧರಿಸಿರುತ್ತದೆ. ಫಿಟ್‌ಮೆಂಟ್ ಅಂಶಗಳಲ್ಲಿ ಮನೆ ಬಾಡಿಗೆ ಭತ್ಯೆ (HRA), ಸಾರಿಗೆ ಭತ್ಯೆ (TA), ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS), ಮತ್ತು ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ (CGHS) ಭತ್ಯೆಗಳು ಸೇರಿರುತ್ತವೆ. ಇದರಲ್ಲಿ ಶೇ. 1.92 ಮತ್ತು 2.57 ರಷ್ಟು ಪರಿಷ್ಕರಣೆಯಾಗುವ ಸಾಧ್ಯತೆ ಇದೆ.

Fashion Factory: ಗ್ರಾಹಕರಿಗೆ ಗುಡ್‌ನ್ಯೂಸ್‌; ಡಿಸೆಂಬರ್ 3ರಿಂದ ಫ್ಯಾಷನ್ ಫ್ಯಾಕ್ಟರಿಯ 'ಉಚಿತ ಶಾಪಿಂಗ್ ವೀಕ್'!

8ನೇ ವೇತನ ಆಯೋಗವು ಸಂಬಳ, ಪಿಂಚಣಿ ಮತ್ತು ಭತ್ಯೆಗಳನ್ನು ಪರಿಷ್ಕರಿಸಲಿದ್ದು, 50 ಲಕ್ಷಕ್ಕೂ ಹೆಚ್ಚು ಕೇಂದ್ರ ಸರ್ಕಾರಿ ನೌಕರರು ಮತ್ತು 65 ಲಕ್ಷಕ್ಕೂ ಹೆಚ್ಚು ಪಿಂಚಣಿದಾರರಿಗೆ ಇದರಿಂದ ಪ್ರಯೋಜನವಾಗಲಿದೆ. ವೇತನದಲ್ಲಿ ಮೂಲ ವೇತನ ಮತ್ತು ಡಿಎ ಸೇರಿದಂತೆ ಕನಿಷ್ಠ ಶೇ. 14ರಷ್ಟು ಮತ್ತು ಗರಿಷ್ಠ ಶೇ. 54ರಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ನೈಜ್ಯ ವೇತನದಲ್ಲಿ ಗರಿಷ್ಠ ಶೇ. 54ರಷ್ಟು ಹೆಚ್ಚಳ ಅಸಾಧ್ಯವಾಗಿದ್ದು, ಇದನ್ನು ಸರ್ಕಾರ ಅನುಷ್ಠಾನಗೊಳಿಸಿದರೆ ಹೆಚ್ಚಿನ ಆರ್ಥಿಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ.