ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಡೇಟಾಬೇಸ್ ಭದ್ರತೆಗೆ ಬಂತು 'ಎನ್‌ಲೈಟ್ ಜಟಾಯು': ಹೊಸ ತಂತ್ರಜ್ಞಾನ ಬಿಡುಗಡೆ ಮಾಡಿದ ESDS

Enlight Jatayoo: ಭಾರತದ ಪ್ರಮುಖ ಕ್ಲೌಡ್ ಮತ್ತು ಡೇಟಾ ಸೆಂಟರ್ ಪೂರೈಕೆದಾರ ಸಂಸ್ಥೆಯಾದ 'ESDS ಸಾಫ್ಟ್‌ವೇರ್ ಸೊಲ್ಯೂಷನ್ ಲಿ.', ಇದೀಗ 'ಎನ್‌ಲೈಟ್ ಜಟಾಯು' ಎಂಬ ಡೇಟಾಬೇಸ್ ಆಕ್ಟಿವಿಟಿ ಮಾನಿಟರಿಂಗ್ ಪ್ಲಾಟ್‌ಫಾರ್ಮ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಡೇಟಾಬೇಸ್ ಭದ್ರತೆಗೆ ಬಂತು 'ಎನ್‌ಲೈಟ್ ಜಟಾಯು'

ಡೇಟಾಬೇಸ್ ಭದ್ರತೆಗೆ 'ಎನ್‌ಲೈಟ್ ಜಟಾಯು' ಎಂಬ ಹೊಸ ತಂತ್ರಜ್ಞಾನ ಬಿಡುಗಡೆ ಮಾಡಿದ ESDS. -

Profile
Siddalinga Swamy May 29, 2026 4:34 PM

ಬೆಂಗಳೂರು, ಮೇ 29: ಇಂದಿನ ಡಿಜಿಟಲ್ ಯುಗದಲ್ಲಿ ಬ್ಯಾಂಕ್‌ಗಳು, ಹಣಕಾಸು ಸಂಸ್ಥೆಗಳು, ಸರ್ಕಾರಿ ಇಲಾಖೆಗಳು ಮತ್ತು ಆಸ್ಪತ್ರೆಗಳಲ್ಲಿರುವ ಗ್ರಾಹಕರ ಸೂಕ್ಷ್ಮ ಡೇಟಾವನ್ನು ಕಾಪಾಡುವುದು ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ. ಎಷ್ಟೇ ಬಿಗಿ ಭದ್ರತೆ ಕಲ್ಪಿಸಿದರೂ ಸೈಬರ್ ದಾಳಿಗಳು, ಡೇಟಾ ಕಳ್ಳತನಗಳು ನಡೆಯುತ್ತಲೇ ಇವೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಭಾರತದ ಪ್ರಮುಖ ಕ್ಲೌಡ್ ಮತ್ತು ಡೇಟಾ ಸೆಂಟರ್ ಪೂರೈಕೆದಾರ ಸಂಸ್ಥೆಯಾದ 'ESDS ಸಾಫ್ಟ್‌ವೇರ್ ಸೊಲ್ಯೂಷನ್ ಲಿ.', ಇದೀಗ 'ಎನ್‌ಲೈಟ್ ಜಟಾಯು' ಎಂಬ (Enlight Jatayoo) ಡೇಟಾಬೇಸ್ ಆಕ್ಟಿವಿಟಿ ಮಾನಿಟರಿಂಗ್ ಪ್ಲಾಟ್‌ಫಾರ್ಮ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಭಾರತದ ನಿಯಂತ್ರಿತ ಕೈಗಾರಿಕೆಗಳ ಭದ್ರತಾ ಅಗತ್ಯಗಳಿಗಾಗಿಯೇ ಇದನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.

ಸಮಸ್ಯೆ ಏನು? ಹೊಸ ಪರಿಹಾರ ಹೇಗೆ?

ಸಾಮಾನ್ಯವಾಗಿ ಕಂಪನಿಗಳು ಹ್ಯಾಕರ್‌ಗಳನ್ನು ತಡೆಯಲು ನೆಟ್‌ವರ್ಕ್ ಮಟ್ಟದಲ್ಲಿ ದೊಡ್ಡಮಟ್ಟದ ಫೈರ್‌ವಾಲ್, ಆ್ಯಂಟಿವೈರಸ್‌ನಂತಹ ಸೆಕ್ಯುರಿಟಿಗಳನ್ನು ಅಳವಡಿಸುತ್ತವೆ. ಆದರೆ, ಅಸಲಿ ಡೇಟಾ ಇರುವ 'ಡೇಟಾಬೇಸ್' ವಲಯದ ಭದ್ರತೆಯತ್ತ ಹೆಚ್ಚಿನ ಗಮನ ಹರಿಸುವುದಿಲ್ಲ.

ಜಾಗತಿಕ ಮಟ್ಟದಲ್ಲಿ ನಡೆಯುವ ಶೇ. 74 ರಷ್ಟು ದತ್ತಾಂಶ ಸೋರಿಕೆಗಳು ಪಾಸ್‌ವರ್ಡ್ ಕಳ್ಳತನದಿಂದಲೇ ನಡೆಯುತ್ತವೆ ಅಥವಾ ಕಂಪನಿಯ ಒಳಗಿನ ಉದ್ಯೋಗಿಗಳು/ಡೆವಲಪರ್‌ಗಳು ಮಾಹಿತಿ ಕದಿಯುತ್ತಾರೆ. ಇದನ್ನು ಪತ್ತೆ ಹಚ್ಚುವುದು ಕಷ್ಟ. ಆದರೆ, 'ಎನ್‌ಲೈಟ್ ಜಟಾಯು' ಈ ಸಮಸ್ಯೆಯನ್ನು ಬಗೆಹರಿಸಲಿದೆ.

ಡೇಟಾಬೇಸ್‌ಗೆ ಯಾರು ಲಾಗಿನ್ ಆಗುತ್ತಿದ್ದಾರೆ? ಯಾವೆಲ್ಲಾ ಮಾಹಿತಿಯನ್ನು ಹುಡುಕುತ್ತಿದ್ದಾರೆ? ಎಂಬುದರ ಮೇಲೆ ಇದು ರಿಯಲ್-ಟೈಮ್‌ನಲ್ಲಿ ನಿಗಾವಹಿಸುತ್ತದೆ. ಯಾರಾದರೂ ಅಕ್ರಮವಾಗಿ ಲಾಗಿನ್ ಆದ ತಕ್ಷಣ ಅಥವಾ ಡೇಟಾವನ್ನು ಡೌನ್‌ಲೋಡ್ ಮಾಡಲು ಪ್ರಯತ್ನಿಸಿದರೆ, 'ಕೃತಕ ಬುದ್ಧಿಮತ್ತೆ' ಆಧಾರಿತ ತಂತ್ರಜ್ಞಾನವು ತಕ್ಷಣವೇ ಎಚ್ಚರಿಕೆ ರವಾನಿಸುತ್ತದೆ.

ನಿಯಮಗಳ ಪಾಲನೆಗೆ ಪೂರಕ

ಭಾರತದಲ್ಲಿ ಪ್ರಸ್ತುತ ಆರ್‌ಬಿಐ, ಸೆಬಿ ಮತ್ತು ಸಿಇಆರ್‌ಟಿ-ಇನ್‌ ನಂತಹ ಸಂಸ್ಥೆಗಳು ಡೇಟಾ ಭದ್ರತೆಯ ಬಗ್ಗೆ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದಿವೆ. ಉದಾಹರಣೆಗೆ, ಡೇಟಾ ಲಾಗ್‌ಗಳನ್ನು ಕನಿಷ್ಠ 180 ದಿನಗಳವರೆಗೆ ಕಾಯ್ದಿರಿಸಬೇಕು ಎಂಬ ನಿಯಮವಿದೆ. 'ಎನ್‌ಲೈಟ್ ಜಟಾಯು' ಈ ಎಲ್ಲಾ ನಿಯಮಾವಳಿಗಳಿಗೆ ತಕ್ಕಂತೆ ಕಾರ್ಯನಿರ್ವಹಿಸುತ್ತದೆ. ಇದು PCI DSS, ISO 27001 ಮತ್ತು ಹೊಸ ಡೇಟಾ ಪ್ರೊಟೆಕ್ಷನ್ ಕಾಯ್ದೆ ಡಿಪಿಡಿಪಿಗೂ ಪೂರಕವಾಗಿದೆ.

ಸುಲಭ ಅಳವಡಿಕೆ, ರಿಸ್ಕ್ ಶೂನ್ಯ

ಈ ಹೊಸ ಪ್ಲಾಟ್‌ಫಾರ್ಮ್‌ನ ಬಹುದೊಡ್ಡ ಉಪಯೋಗವೆಂದರೆ, ಇದನ್ನು ಅಳವಡಿಸಲು ಕಂಪನಿಗಳು ತಮ್ಮ ಡೇಟಾಬೇಸ್ ಸಿಸ್ಟಮ್ ಅನ್ನು ರಿಸ್ಟಾರ್ಟ್ ಮಾಡುವ ಅಗತ್ಯವಿಲ್ಲ. ಇದರಿಂದ ಕಂಪನಿಯ ದೈನಂದಿನ ಕೆಲಸಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ. ಅಲ್ಲದೆ, ಗ್ರಾಹಕರ ಯಾವುದೇ ಡೇಟಾವು ಕಂಪನಿಯ ವ್ಯವಸ್ಥೆಯಿಂದ ಹೊರಗೆ ಹೋಗುವುದಿಲ್ಲ. ಯಾವುದೇ ವಿದೇಶಿ ಕ್ಲೌಡ್ ಸೇವೆಗಳ ಮೇಲೆ ಇದು ಅವಲಂಬಿತವಾಗಿಲ್ಲ.

ಹೊಸ ತಂತ್ರಜ್ಞಾನದ ಬಗ್ಗೆ ಮತ್ತಷ್ಟು ಮಾಹಿತಿಯನ್ನು ಹಂಚಿಕೊಂಡಿರುವ ESDS ಸಾಫ್ಟ್‌ವೇರ್ ಸೊಲ್ಯೂಷನ್ ಲಿ.ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಅಧ್ಯಕ್ಷ ಪಿಯೂಷ್ ಸೋಮಾನಿ, ʼಡೇಟಾಬೇಸ್ ವಲಯದ ಭದ್ರತೆಯನ್ನು ನಿರ್ಲಕ್ಷಿಸುವುದು ಇನ್ಮುಂದೆ ಅಸಾಧ್ಯ. ಭಾರತದ ಬ್ಯಾಂಕಿಂಗ್, ಆಸ್ಪತ್ರೆ ಹಾಗೂ ಸರ್ಕಾರಿ ಸಂಸ್ಥೆಗಳಿಗೆ ಡೇಟಾಬೇಸ್ ಮಟ್ಟದ ನಿಖರ ಭದ್ರತೆಯ ಅವಶ್ಯಕತೆ ಇದೆ. ಈ ಕಾರಣಕ್ಕಾಗಿಯೇ ನಾವು ಸಂಪೂರ್ಣವಾಗಿ ಭಾರತದಲ್ಲೇ, ಭಾರತೀಯ ಆಪರೇಟಿಂಗ್ ಸಿಸ್ಟಮ್‌ಗಳಿಗಾಗಿ 'ಎನ್‌ಲೈಟ್ ಜಟಾಯು' ಅನ್ನು ಅಭಿವೃದ್ಧಿಪಡಿಸಿದ್ದೇವೆ. ಸಂಸ್ಥೆಗಳ ಡೇಟಾಬೇಸ್‌ ಒಳಗೆ ಏನಾಗುತ್ತಿದೆ ಎಂಬುದನ್ನು ತಿಳಿಯಲು ಇದು ಸಹಾಯ ಮಾಡಲಿದೆʼ ಎಂದು ತಿಳಿಸಿದ್ದಾರೆ.

ಸಂಸ್ಥೆಯ ಪೂರ್ಣಾವಧಿ ನಿರ್ದೇಶಕಿ, ಸಿಎಂಒ ಮತ್ತು ಸಿಎಚ್‌ಆರ್‌ಒ ಕೋಮಲ್ ಸೋಮಾನಿ ಪ್ರತಿಕ್ರಿಯಿಸಿ, ʼಹಲವು ಸಂಸ್ಥೆಗಳು ಕೇವಲ ಹೊರಗಿನ ಭದ್ರತೆಗೆ ಹೂಡಿಕೆ ಮಾಡುತ್ತವೆ. ಆದರೆ ಡೇಟಾಬೇಸ್ ಲೇಯರ್ ಭದ್ರತೆಯಿಲ್ಲದೆ ಉಳಿಯುತ್ತದೆ. 'ಎನ್‌ಲೈಟ್ ಜಟಾಯು' ಈ ಪರಿಸ್ಥಿತಿಯನ್ನು ಬದಲಾಯಿಸಲಿದೆ. ಭಾರತೀಯ ನಿಯಮಗಳು ಮತ್ತು ಗ್ರಾಹಕರ ಅಗತ್ಯಗಳನ್ನು ಅರ್ಥಮಾಡಿಕೊಂಡಿರುವ ನಮ್ಮ ಸ್ಥಳೀಯ ತಂಡವೇ ಇದನ್ನು ಅಭಿವೃದ್ಧಿಪಡಿಸಿದೆʼ ಎಂದು ತಿಳಿಸಿದ್ದಾರೆ.

'ಎನ್‌ಲೈಟ್ ಜಟಾಯು' ಪ್ಲಾಟ್‌ಫಾರ್ಮ್ ಇದೀಗ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಬ್ಯಾಂಕಿಂಗ್, ಹಣಕಾಸು, ಸರ್ಕಾರಿ, ಆರೋಗ್ಯ ಮತ್ತು ಉತ್ಪಾದನಾ ವಲಯದ ಸಂಸ್ಥೆಗಳು ESDSನ ಅಧಿಕೃತ ವೆಬ್‌ಸೈಟ್ ಮೂಲಕ ಇದನ್ನು ಅಳವಡಿಸಿಕೊಳ್ಳಬಹುದು.

ಪ್ರವಾಸೋದ್ಯಮದಲ್ಲಿ ಶುರುವಾಗಲಿದೆ AI ಕ್ರಾಂತಿ: ವಿಮಾನ, ಹೋಟೆಲ್ ಬುಕ್ಕಿಂಗ್ ಇನ್ಮುಂದೆ ಭಾರೀ ಸುಲಭ!

ESDS ಸಾಫ್ಟ್‌ವೇರ್ ಸೊಲ್ಯೂಷನ್ ಲಿಮಿಟೆಡ್ ಭಾರತದ ಸಾರ್ವಭೌಮ ಕ್ಲೌಡ್ ಮತ್ತು ಮ್ಯಾನೇಜ್ಡ್ ಸೇವಾ ಪೂರೈಕೆದಾರ ಕಂಪನಿಯಾಗಿದ್ದು, ಟೈರ್ III ಪ್ರಮಾಣೀಕೃತ ಡೇಟಾ ಸೆಂಟರ್‌ಗಳನ್ನು ನಿರ್ವಹಿಸುತ್ತಿದೆ. ಇದು ಕ್ಲೌಡ್, ಡೇಟಾ ಸೆಂಟರ್, ಜಿಪಿಯು ಮೂಲಸೌಕರ್ಯ ಮತ್ತು ಎಂಟರ್‌ಪ್ರೈಸ್ ಸೆಕ್ಯುರಿಟಿ ಪರಿಹಾರಗಳನ್ನು ಒದಗಿಸುವಲ್ಲಿ ಮುಂಚೂಣಿಯಲ್ಲಿದೆ.