Gold Price Today on 6th January 2026: ಚಿನ್ನದ ದರದಲ್ಲಿ ಭಾರಿ ಏರಿಕೆ; ಇಂದು ಹೆಚ್ಚಾಗಿದ್ದು ಇಷ್ಟು
ಚಿನ್ನದ ದರದ ನಾಗಾಲೋಟ ಮತ್ತೆ ಮುಂದುವರಿದಿದೆ. ಬೆಂಗಳೂರಿನಲ್ಲಿ ಮಂಗಳವಾರ (ಜನವರಿ 6) 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯಲ್ಲಿ 55 ರುಪಾಯಿ ಏರಿಕೆ ಕಂಡು ಬಂದಿದ್ದು,12,725 ರುಪಾಯಿಗೆ ತಲುಪಿದೆ. 24 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯಲ್ಲಿ 60 ರುಪಾಯಿ ಹೆಚ್ಚಾಗಿದ್ದು, ಗ್ರಾಹಕರು 13,882 ರುಪಾಯಿ ಪಾವತಿಸಬೇಕು.
ಸಾಂದರ್ಭಿಕ ಚಿತ್ರ. -
ಬೆಂಗಳೂರು, ಜ. 6: ಚಿಕ್ಕ ಬ್ರೇಕ್ ಬಳಿಕ ಚಿನ್ನದ ದರದ ನಾಗಾಲೋಟ ಮತ್ತೆ ಮುಂದುವರಿದಿದೆ (Gold Price Today on 6th January 2026). ಬೆಂಗಳೂರಿನಲ್ಲಿ ಮಂಗಳವಾರ (ಜನವರಿ 6) 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯಲ್ಲಿ 55 ರುಪಾಯಿ ಏರಿಕೆ ಕಂಡು ಬಂದಿದ್ದು,12,725 ರುಪಾಯಿಗೆ ತಲುಪಿದೆ. 24 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯಲ್ಲಿ 60 ರುಪಾಯಿ ಹೆಚ್ಚಾಗಿ 13,882 ರುಪಾಯಿಗೆ ಏರಿಕೆಯಾಗಿದೆ. 22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ 1,01,800 ರುಪಾಯಿ ಇದ್ದರೆ, 10 ಗ್ರಾಂಗೆ ನೀವು 1,27,250 ರುಪಾಯಿ ಪಾವತಿಸಬೇಕು. ಇನ್ನು 100 ಗ್ರಾಂಗೆ 12,72,500 ರುಪಾಯಿ ಇದೆ. 24 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ 1,11,056 ರುಪಾಯಿ, 10 ಗ್ರಾಂ ಚಿನ್ನದ ಬೆಲೆ 1,38,820 ರುಪಾಯಿ ಇದ್ದರೆ, 100 ಗ್ರಾಂಗೆ ನೀವು 13,88,200 ರುಪಾಯಿ ಪಾವತಿಸಬೇಕು.
ಚೆನ್ನೈಯಲ್ಲಿ 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 12,830 ರುಪಾಯಿ, 24 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 13,997 ರುಪಾಯಿ, ಮುಂಬೈಯಲ್ಲಿ 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 12,725 ರುಪಾಯಿ, 24 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 13,882 ರುಪಾಯಿ, ದೆಹಲಿಯಲ್ಲಿ 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 12,740 ರುಪಾಯಿ, 24 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 13,897 ರುಪಾಯಿ, ಕೋಲ್ಕತ್ತಾದಲ್ಲಿ 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 12,725 ರುಪಾಯಿ, 24 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 13,882 ರುಪಾಯಿ, ಹೈದರಾಬಾದ್‌ನಲ್ಲಿ 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 12,725 ರುಪಾಯಿ, 24 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 13,882 ರುಪಾಯಿ ಇದೆ.
ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ
ದರ ಪಟ್ಟಿ ಹೀಗಿದೆ
| ನಗರ | 22 ಕ್ಯಾರಟ್ (1 ಗ್ರಾಂ) | 24 ಕ್ಯಾರಟ್ (1 ಗ್ರಾಂ) |
|---|---|---|
| ಚೆನ್ನೈ | 12,830 ರುಪಾಯಿ | 13,997 ರುಪಾಯಿ |
| ಮುಂಬೈ | 12,725 ರುಪಾಯಿ | 13,882 ರುಪಾಯಿ |
| ದೆಹಲಿ | 12,740 ರುಪಾಯಿ | 13,897 ರುಪಾಯಿ |
| ಕೋಲ್ಕತ್ತಾ | 12,725 ರುಪಾಯಿ | 13,882 ರುಪಾಯಿ |
| ಹೈದರಾಬಾದ್ | 12,725 ರುಪಾಯಿ | 13,882 ರುಪಾಯಿ |
ತಿಂಗಳ ಖರ್ಚು ಈಗ 1 ಲಕ್ಷ ರುಪಾಯಿಯಾದರೆ 20 ವರ್ಷಗಳ ಬಳಿಕ ಎಷ್ಟಾಗುತ್ತೆ?
ಬೆಳ್ಳಿ ದರ
ಇನ್ನು ಬೆಂಗಳೂರಿನಲ್ಲಿ ಬೆಳ್ಳಿ ದರದಲ್ಲಿಯೂ ಭಾರಿ ಏರಿಕೆ ಕಂಡು ಬಂದಿದೆ. ಬೆಳ್ಳಿ 1 ಗ್ರಾಂಗೆ 253 ರುಪಾಯಿ, 8 ಗ್ರಾಂಗೆ 2,024 ರುಪಾಯಿ, 10 ಗ್ರಾಂಗೆ 2,530 ರುಪಾಯಿ, 100 ಗ್ರಾಂಗೆ 25,300 ರುಪಾಯಿ, 1 ಕೆಜಿಗೆ 2,53,000 ರುಪಾಯಿ ಇದೆ.