ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Gold Price Today On September 8th 2026: ಸ್ವರ್ಣ ಪ್ರಿಯರಿಗೆ ಭಾರೀ ಶಾಕ್‌; ಚಿನ್ನದ ದರದಲ್ಲಿಂದು ಮತ್ತೆ ಏರಿಕೆ

Gold Price Today: ನಿನ್ನೆಯಷ್ಟೇ ಕೊಂಚ ಇಳಿಕೆ ಕಂಡಿದ್ದ ಚಿನ್ನದ ದರದಲ್ಲಿಂದು ಮತ್ತೆ ಏರಿಕೆ ಕಂಡಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ದರದಲ್ಲಿ 110 ರೂ. ಏರಿಕೆಯಾಗಿ 14,240 ರೂ. ಇರಲಿದೆ. 24 ಕ್ಯಾರಟ್‌ನ 1 ಗ್ರಾಂ ಚಿನ್ನದ ದರದಲ್ಲಿ 120 ರೂ. ಏರಿಕೆಯಾಗಿ 15,535 ರೂ. ಇದೆ.

ಸ್ವರ್ಣ ಪ್ರಿಯರಿಗೆ ಭಾರೀ ಶಾಕ್‌; ಚಿನ್ನದ ದರದಲ್ಲಿಂದು ಮತ್ತೆ ಏರಿಕೆ

ಚಿನ್ನದ ದರದಲ್ಲಿಂದು ಏರಿಕೆ (ಸಂಗ್ರಹ ಚಿತ್ರ) -

Vishakha Bhat Heggar
Vishakha Bhat Heggar Sep 8, 2026 12:35 PM

ಬೆಂಗಳೂರು: ನಿನ್ನೆಯಷ್ಟೇ ಕೊಂಚ ಇಳಿಕೆ ಕಂಡಿದ್ದ ಚಿನ್ನದ ದರದಲ್ಲಿಂದು ಮತ್ತೆ ಏರಿಕೆ ಕಂಡಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ (Gold Price Today On September 8th 2026) ಚಿನ್ನದ ದರದಲ್ಲಿ 110 ರೂ. ಏರಿಕೆಯಾಗಿ 14,240 ರೂ. ಇರಲಿದೆ. 24 ಕ್ಯಾರಟ್‌ನ 1 ಗ್ರಾಂ ಚಿನ್ನದ ದರದಲ್ಲಿ 120 ರೂ. ಏರಿಕೆಯಾಗಿ 15,535 ರೂ. ಇದೆ. ಇನ್ನು 22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ 1,13,920 ರೂಪಾಯಿ ಆಗಿದ್ದರೆ, 10 ಗ್ರಾಂಗೆ 1,42,400 ರೂಪಾಯಿ ಹಾಗೂ 100 ಗ್ರಾಂಗೆ 14,24,000 ರೂಪಾಯಿ ಪಾವತಿಸಬೇಕು. 24 ಕ್ಯಾರಟ್‌ 8 ಗ್ರಾಂ ಚಿನ್ನದ ಬೆಲೆ 1,24, 280 ರೂಪಾಯಿ, 10 ಗ್ರಾಂಗೆ 1,55,350 ರೂಪಾಯಿ ಹಾಗೂ 100 ಗ್ರಾಂಗೆ 15,53,500 ರೂಪಾಯಿ ಇದೆ.

ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ

ನಗರ 22 ಕ್ಯಾರಟ್‌ (1 ಗ್ರಾಂ) 24 ಕ್ಯಾರಟ್‌ (1 ಗ್ರಾಂ)
ಚೆನ್ನೈ 14,240 ರೂ. 15,535 ರೂ.
ಮುಂಬೈ 14,240 ರೂ. 15,535 ರೂ.
ದೆಹಲಿ 14,240 ರೂ. 15,535 ರೂ.
ಕೋಲ್ಕತಾ 14,240 ರೂ. 15,535 ರೂ.
ಹೈದರಾಬಾದ್‌ 14,240 ರೂ. 15,535 ರೂ.

ಇತ್ತ ಬೆಳ್ಳಿ ದರದಲ್ಲಿ ಯಥಾಸ್ಥಿತಿ ಕಂಡು ಬಂದಿದೆ. ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿಗೆ 250 ರೂಪಾಯಿ ಇದೆ. 10 ಗ್ರಾಂ ಬೆಳ್ಳಿಗೆ 2,500 ರೂಪಾಯಿ ಹಾಗೂ 1 ಕೆಜಿಗೆ 2,50,000 ರೂಪಾಯಿ ಪಾವತಿಸಬೇಕು.