ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Silver Price: ಮಾರುಕಟ್ಟೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ದಾಖಲೆ ಬರೆದ ಬೆಳ್ಳಿ ದರ

ಇದೇ ಮೊದಲ ಬಾರಿಗೆ ಮಾರುಕಟ್ಟೆ ಇತಿಹಾಸದಲ್ಲಿ ಬೆಳ್ಳಿಯ ದರ ದಾಖಲೆಯನ್ನು ಬರೆದಿದೆ. ಡಿಸೆಂಬರ್ 12 ರಂದು ಶುಕ್ರವಾರ ಚಿನ್ನದ ಬೆಲೆಯೊಂದಿಗೆ ಬೆಳ್ಳಿ ಬೆಲೆ ಕೂಡ ಏರಿಕೆಯಾಗಿದ್ದು, ಬೆಳ್ಳಿ ದರ 2 ಲಕ್ಷ ರೂ. ಗಡಿ ದಾಟಿದೆ. ಅಂತಾರಾಷ್ಟ್ರೀಯ ಸ್ಪಾಟ್ ಮಾರುಕಟ್ಟೆಯಲ್ಲೂ ಕೂಡ ಬೆಳ್ಳಿಯ ದರ ಏರಿಕೆಯನ್ನು ಕಂಡಿದೆ.

2 ಲಕ್ಷ ರೂ. ಗಡಿ ದಾಟಿದ ಬೆಳ್ಳಿ

(ಸಂಗ್ರಹ ಚಿತ್ರ) -

ನವದೆಹಲಿ: ಕಳೆದ ಕೆಲವು ದಿನಗಳಿಂದ ಚಿನ್ನದ ದರ (Gold rate) ಏರಿಕೆಯಾಗುತ್ತಿದ್ದು, ಇಂದು ಕೂಡ ಭಾರಿ ಪ್ರಮಾಣದಲ್ಲಿ ಹೆಚ್ಚಳ ಕಂಡಿದೆ. ಇದರೊಂದಿಗೆ ಬೆಳ್ಳಿ (silver rate) ಮಾತ್ರ ಈ ಬಾರಿ ದಾಖಲೆಯನ್ನು ಬರೆದಿದೆ. ಇದೇ ಮೊದಲ ಬಾರಿಗೆ ಮಾರುಕಟ್ಟೆ ಇತಿಹಾಸದಲ್ಲಿ ಬೆಳ್ಳಿಯ (Silver price) ದರ 2 ಲಕ್ಷ ರೂ. ಗಡಿ ದಾಟಿದೆ. ಮುಂಬೈನಲ್ಲಿ ಶುಕ್ರವಾರ 24 ಕ್ಯಾರೆಟ್ ಹತ್ತು ಗ್ರಾಮ್ ಚಿನ್ನದ ಬೆಲೆ 1,30,760 ರೂ. ಆಗಿದ್ದರೆ, 22 ಕ್ಯಾರೆಟ್ ನ ಹತ್ತು ಗ್ರಾಮ್ ಚಿನ್ನದ ಬೆಲೆ 1,20,010 ಸಾವಿರ ರೂ. ಆಗಿತ್ತು. ಇದೇ ಮೊದಲ ಬಾರಿಗೆ ಬೆಳ್ಳಿ ದರ ಕೆಜಿಗೆ 2,00,000 ರೂ. ದಾಟಿದೆ.

ಯುಎಸ್ ಫೆಡ್ ದರ ಶುಕ್ರವಾರ 0.25 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿತವಾಗಿದೆ. ಇದರಿಂದ ಶುಕ್ರವಾರ ಬೆಳಗ್ಗೆ ಚಿನ್ನದ ಬೆಲೆ ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಇದರಿಂದ ಶುಕ್ರವಾರ ಜಿಎಸ್‌ಟಿ ಮತ್ತು ಮೇಕಿಂಗ್ ಶುಲ್ಕ ಹೊರತುಪಡಿಸಿ ಮುಂಬೈನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 1,30,760 ರೂ. ಹಾಗೂ 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 1,19,860 ರೂ. ಆಗಿತ್ತು.

Gold Price Today on 12th December 2025: ಭಾರೀ ಏರಿಕೆ ಕಂಡ ಚಿನ್ನದ ದರ; ಇಲ್ಲಿದೆ ನೋಡಿ ಬೆಲೆ

ಭಾರತೀಯ ಮಾರುಕಟ್ಟೆ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಬೆಳ್ಳಿ ದರ ಕೆ.ಜಿ.ಗೆ 2,00,000 ರೂ.ಗಳನ್ನು ದಾಟಿದೆ. ಅಂತಾರಾಷ್ಟ್ರೀಯ ಸ್ಪಾಟ್ ಮಾರುಕಟ್ಟೆಯಲ್ಲಿ ಬೆಳ್ಳಿ ಬೆಲೆಗಳು ಶೇ.4.95 ರಷ್ಟು ಹೆಚ್ಚಳವಾಗಿದೆ. ಚಿನ್ನದ ದರ ಶೇ. 1.80ರಷ್ಟು ಹೆಚ್ಚಳವಾಗಿದೆ.

2026ರ ಫೆಬ್ರವರಿಗೆ ಚಿನ್ನದ ಬೆಲೆ ಶೇ. 0.20ರಷ್ಟು ಏರಿಕೆ ಕಂಡು 10 ಗ್ರಾಂಗೆ 1,32,737 ರೂ. ಹಾಗೂ ಬೆಳ್ಳಿ ದರದಲ್ಲಿ ಶೇ. 0.37ರಷ್ಟು ಇಳಿಕೆಯಾಗಿ ಪ್ರತಿ ಕೆಜಿಗೆ 1,98,212 ರೂ. ತಲುಪುವ ನಿರೀಕ್ಷೆ ಇದೆ.

ಚಿನ್ನದ ಬೆಲೆ ಶುಕ್ರವಾರ ಪ್ರತಿ 10 ಗ್ರಾಮ್ ಗೆ ದೆಹಲಿಯಲ್ಲಿ 22 ಕ್ಯಾರಟ್ ಗೆ 1,20,010 ರೂ. ಆಗಿದ್ದರೆ 24 ಕ್ಯಾರೆಟ್ ಗೆ 1,30,910 ರೂ. ಆಗಿತ್ತು. ಜೈಪುರದಲ್ಲಿ 22 ಕ್ಯಾರಟ್ ಗೆ 1,20,010 ರೂ., 24 ಕ್ಯಾರೆಟ್ ಗೆ 1,30,910 ರೂ. ಆಗಿದ್ದು ಅದೇ ರೀತಿ ಅಹಮದಾಬಾದ್ ನಲ್ಲಿ 1,19,910 ರೂ., 1,30,810 ರೂ., ಪುಣೆಯಲ್ಲಿ 1,19,910 ರೂ., 1,30,810 ರೂ., ಮುಂಬೈನಲ್ಲಿ 1,19,860 ರೂ.,1,30,760 ರೂ., ಹೈದರಾಬಾದ್ ನಲ್ಲಿ 1,19,860 ರೂ., 1,30,760 ರೂ., ಚೆನ್ನೈಯಲ್ಲಿ 1,19,860 ರೂ., 1,30,760 ರೂ., ಬೆಂಗಳೂರಿನಲ್ಲಿ 1,19,860 ರೂ., 1,30,760 ರೂ., ಕೋಲ್ಕತ್ತಾದಲ್ಲಿ 1,19,860 ರೂ., 1,30,760 ರೂ. ಆಗಿತ್ತು.

Ashok Devanampriya Money Tips: ಗ್ಲೋಬಲ್‌ ಮಾರ್ಕೆಟ್‌ ಸೈಕಲ್‌ ಹೇಗಿರುತ್ತೆ? ಪ್ರಯೋಜನ ಪಡೆಯುವುದು ಹೇಗೆ?

ಸಾಮಾನ್ಯವಾಗಿ ಚಿನ್ನದ ಬೆಲೆಗಳ ಏರಿಳಿತವಾಗಲು ಅಂತಾರಾಷ್ಟ್ರೀಯ ಮಾರುಕಟ್ಟೆ ದರಗಳು, ಆಮದು ಸುಂಕಗಳು, ತೆರಿಗೆಗಳು ಮತ್ತು ವಿನಿಮಯ ದರಗಳು ಕಾರಣವಾಗಿರುತ್ತವೆ.