Silver Price: ಬೆಳ್ಳಿ ಬೆಲೆ 4 ಲಕ್ಷ ರುಪಾಯಿಗೆ ಏರಿಕೆ; ಸಿಲ್ವರ್ ಪ್ರೈಸ್ ಹೆಚ್ಚಾಗಲು ಕಾರಣ ಇದೆ
ಚಿನ್ನದಂತೆ, ಬೆಳ್ಳಿಯ ಬೆಲೆಯೂ ನಿರಂತರ ಏರಿಕೆಯಾಗುತ್ತಿದೆ. ಕಳೆದ ಕೆಲವು ದಿನಗಳಲ್ಲಿ ಬೆಳ್ಳಿ ಬೆಲೆ ಒಂದು ಲಕ್ಷ ರೂಪಾಯಿಯಷ್ಟು ಏರಿಕೆಯಾಗಿದ್ದು, ಈಗ ಪ್ರತಿ ಕೆ.ಜಿ. 4 ಲಕ್ಷ ರೂಪಾಯಿಯ ಸಮೀಪ ತಲುಪಿದ್ದು, ಜನವರಿ 28ರಂದು ಬೆಳ್ಳಿ ಬೆಲೆಯ ಸ್ಥಿತಿಯೂ ಗಮನಾರ್ಹವಾಗಿ ಏರಿಕೆಯಾಗಿದೆ. 1 ಗ್ರಾಂಗೆ 380 ರೂಪಾಯಿ ಆಗಿದ್ದು, ಒಂದು ಕೆ.ಜಿ. ಬೆಳ್ಳಿ ಬೆಲೆಯು 3,80,000 ರೂಪಾಯಿಗೆ ತಲುಪಿದೆ. ಜನವರಿ 27ರ ಬೆಳ್ಳಿ ಬೆಲೆಗೆ ಹೋಲಿಕೆ ಮಾಡಿದರೆ ಒಂದು ಗ್ರಾಂ ಬೆಳ್ಳಿ ಬೆಲೆಯು 10 ರೂಪಾಯಿ ಹಾಗೂ ಒಂದು ಕೆ.ಜಿ.ಯ ಮೇಲೆ ಬರೋಬ್ಬರಿ 10,000 ಸಾವಿರ ರೂಪಾಯಿ ಹೆಚ್ಚಳವಾಗಿದೆ.
ಬೆಳ್ಳಿ -
ಮುಂಬೈ, ಜ. 28: ಜಾಗತಿಕ ಮಾರುಕಟ್ಟೆ ಆಗುತ್ತಿರುವ ಬೆಳವಣಿಗೆ ಹಾಗೂ ಅಮೆರಿಕದ ಸುಂಕ ನೀತಿಗಳ ಪರಿಣಾಮದಿಂದ ಚಿನ್ನದ ಬಳಿಕ ಬೆಳ್ಳಿ ಬೆಲೆ ಗಗನಕ್ಕೆ ಏರಿದ್ದು, ಬುಧವಾರ (ಜನವರಿ 28) ವಹಿವಾಟಿನಲ್ಲಿ ಬೆಳ್ಳಿ ಬೆಲೆ (Silver Price) ಐತಿಹಾಸಿಕ ಗರಿಷ್ಠ ಮಟ್ಟವನ್ನು ತಲುಪಿದೆ. ಇದರ ಪರಿಣಾಮವೂ ಷೇರು ಮಾರುಕಟ್ಟೆ ಮೇಲಾಗಿದ್ದು, ಹೂಡಿಕೆದಾರರಿಗೆ ಒಂದಷ್ಟು ಲಾಭ ತಂದು ಕೊಟ್ಟಿದೆ.
ಹೌದು ಚಿನ್ನದಂತೆ, ಬೆಳ್ಳಿಯ ಬೆಲೆಯೂ ನಿರಂತರ ಏರಿಕೆಯಾಗುತ್ತಿದೆ. ಕಳೆದ ಕೆಲವು ದಿನಗಳಲ್ಲಿ ಬೆಳ್ಳಿ ಬೆಲೆ ಒಂದು ಲಕ್ಷ ರುಪಾಯಿಯಷ್ಟು ಏರಿಕೆಯಾಗಿದ್ದು, ಈಗ ಪ್ರತಿ ಕೆ.ಜಿ. 4 ಲಕ್ಷ ರುಪಾಯಿಯ ಸಮೀಪ ತಲುಪಿದ್ದು, ಜನವರಿ 28ರಂದು ಬೆಳ್ಳಿ ಬೆಲೆಯ ಸ್ಥಿತಿಯೂ ಗಮನಾರ್ಹವಾಗಿ ಏರಿಕೆಯಾಗಿದೆ. 1 ಗ್ರಾಂಗೆ 380 ರುಪಾಯಿ ಆಗಿದ್ದು, ಒಂದು ಕೆ.ಜಿ. ಬೆಳ್ಳಿ ಬೆಲೆಯು 3,80,000 ರುಪಾಯಿ ಆಗಿದೆ. ಜನವರಿ 27ರ ಬೆಳ್ಳಿ ಬೆಲೆಗೆ ಹೋಲಿಕೆ ಮಾಡಿದರೆ ಒಂದು ಗ್ರಾಂ ಬೆಳ್ಳಿ ಬೆಲೆಯು 10 ರುಪಾಯಿ ಹಾಗೂ ಒಂದು ಕೆ.ಜಿ.ಯ ಮೇಲೆ ಬರೋಬ್ಬರಿ 10,000 ಸಾವಿರ ರುಪಾಯಿ ಹೆಚ್ಚಳವಾಗಿದೆ.
ಸಾಮಾನ್ಯವಾಗಿ ಚಿನ್ನ ಬೆಲೆಯ ಹೆಚ್ಚಳದ ಜತೆಗೆ ಬೆಳ್ಳಿ ಬೆಲೆ ಹೆಚ್ಚಾಗುವುದಿಲ್ಲ ಅಥವಾ ಅಲ್ಪ ಪ್ರಮಾಣದಲ್ಲೇ ಏರುತ್ತಿತ್ತು. ಆದರೆ ಕಳೆದ ಐದು ತಿಂಗಳಲ್ಲಿ ಬೆಳ್ಳಿ ಬೆಲೆ ನಿರಂತರವಾಗಿ ಏರಿಕೆಯಲ್ಲಿದೆ. ಅಮೂಲ್ಯ ಲೋಹಗಳಾದ ಚಿನ್ನ ಮತ್ತು ಬೆಳ್ಳಿ ಇತಿಹಾಸದಲ್ಲೇ ಗರಿಷ್ಠ ಮಟ್ಟವನ್ನು ತಲುಪಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ ಈ ಬೆಲೆ ಏರಿಕೆ ಗಮನಾರ್ಹವಾಗಿದೆ.
ಚಿನ್ನದ ದರದಲ್ಲಿಂದು ಯಥಾಸ್ಥಿತಿ; ಬೆಲೆ ಪಟ್ಟಿ ಇಲ್ಲಿದೆ
ಕಳೆದ ಒಂದು ವರ್ಷದ ಅವಧಿಯಲ್ಲಿ ಬೆಳ್ಳಿ ಬೆಲೆ ಸುಮಾರು 200% ಹೆಚ್ಚಳ ಕಂಡು, ಚಿನ್ನದ ಬೆಲೆ ಸುಮಾರು 80% ಏರಿಕೆಯಾಗಿದೆ. ಬೇಡಿಕೆ ಹೆಚ್ಚಾಗಿರುವುದರಲ್ಲಿ ಮುಖ್ಯ ಕಾರಣಗಳು: ಸೌರಶಕ್ತಿ, ಇವಿ ವಾಹನಗಳು, ಗ್ರಿಡ್ ಮೂಲಸೌಕರ್ಯಗಳಲ್ಲಿ ಬೆಳ್ಳಿ ಬಳಕೆ. ಚಿನ್ನವನ್ನು ಸುರಕ್ಷಿತ ಹೂಡಿಕೆ ಎಂದು ಪರಿಗಣಿಸುವ ಕಾರಣದಿಂದ ಕೂಡ ಅದರ ಬೆಲೆ ಏರಿಕೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ.
ರಾಜಕೀಯ ಅಸ್ಥಿರತೆ, ಹಣದುಬ್ಬರ ಪರಿಸ್ಥಿತಿ, ಕೇಂದ್ರ ಬ್ಯಾಂಕ್‌ಗಳಿಂದ ಚಿನ್ನದ ಖರೀದಿ ಹೆಚ್ಚಳ ಮತ್ತು ಅಮೆರಿಕದ ಸುಂಕ ನೀತಿಗಳ ಪರಿಣಾಮದಿಂದ ಬೆಲೆ ಗಗನಮುಖಿವಾಗಿದೆ. ಬೆಳ್ಳಿ ಬೆಲೆ ಏರಿಕೆಯ ಪರಿಣಾಮವಾಗಿ, ಭಾರತದಲ್ಲಿ ಪ್ರಮುಖ ಉತ್ಪಾದಕ ಸಂಸ್ಥೆ ‘ಹಿಂದುಸ್ತಾನ್ ಜಿಂಕ್’ ಷೇರುಗಳು 5% ಏರಿಕೆ ಕಂಡಿವೆ. ಸಿಲ್ವರ್ ಇಟಿಎಫ್‌ಗಳ ಹೂಡಿಕೆದಾರರು 12%ವರೆಗೆ ಲಾಭ ಗಳಿಸುತ್ತಿದ್ದು, ಬಂಪರ್ ಆದಾಯ ಪಡೆದಿದ್ದಾರೆ.
ಮುಂದಿನ ದಿನಗಳಲ್ಲಿಯೂ ಬೆಳ್ಳಿ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗುತ್ತಿದೆ. ಕೆಲವೊಂದು ಸಂದರ್ಭಗಳಲ್ಲಿ ಬೆಲೆ ಇಳಿಕೆಯಾಗುವ ಸಾಧ್ಯತೆ ಇದ್ದರೂ, ಅದು ಅಲ್ಪ ಪ್ರಮಾಣದಲ್ಲೇ ಸೀಮಿತವಾಗುವ ನಿರೀಕ್ಷೆಯಿದೆ. ಇದಲ್ಲದೆ, ಅಮೆರಿಕನ್ ಡಾಲರ್ ಮೌಲ್ಯ ಕುಸಿತ, ಡಾಲರ್ ಎದುರು ಭಾರತೀಯ ರುಪಾಯಿ ದುರ್ಬಲವಾಗಿರುವುದು, ಜಾಗತಿಕ ರಾಜಕೀಯ ಅಸ್ಥಿರತೆ ಮತ್ತು ಸುರಕ್ಷಿತ ಹೂಡಿಕೆಗಳ ಮೇಲಿನ ಹೂಡಿಕೆದಾರರ ಆಸಕ್ತಿ ಹೆಚ್ಚಿರುವುದು ಸೇರಿದಂತೆ ಹಲವು ಅಂಶಗಳು ಬೆಳ್ಳಿ ಬೆಲೆ ಏರಿಕೆಗೆ ಕಾರಣವಾಗಿವೆ.