ಕರ್ನಾಟಕ ಬಜೆಟ್​ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

LIC: ವಿಮಾ ಯೋಜನೆ ಬಡವರ ಕೈಗೆಟಕುತ್ತಿಲ್ಲ ಎಂಬ ರಾಹುಲ್ ಗಾಂಧಿ ಆರೋಪಕ್ಕೆ ಎಲ್‌ಐಸಿ ತಿರುಗೇಟು

ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (IRDAI) ತಂದಿರುವ ಹೊಸ ನಿಯಮಗಳಿಂದಾಗಿ ವಿಮಾ ಯೋಜನೆ(Insurance)ಗಳು ಬಡವರ ಕೈಗೆಟಕುತ್ತಿಲ್ಲ ಮತ್ತು ವಿಮಾ ಏಜೆಂಟ್‌ಗಳ(Agents) ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ಕಾಂಗ್ರೆಸ್‌(congress) ಸಂಸದ ಹಾಗೂ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ರಾಹುಲ್ ಗಾಂಧಿ ಅಪವಾದ ಅಲ್ಲಗಳೆದ  LIC

ರಾಹುಲ್ ಗಾಂಧಿ

Profile Sushmitha Jain Mar 20, 2025 3:17 PM

ಹೊಸದಿಲ್ಲಿ: ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (IRDAI) ತಂದಿರುವ ಹೊಸ ನಿಯಮಗಳಿಂದಾಗಿ ವಿಮಾ ಯೋಜನೆ(Insurance)ಗಳು ಬಡವರ ಕೈಗೆಟಕುತ್ತಿಲ್ಲ ಮತ್ತು ವಿಮಾ ಏಜೆಂಟ್‌ಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ಕಾಂಗ್ರೆಸ್‌(congress) ಸಂಸದ ಹಾಗೂ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಆದರೆ, ಅವರ ಈ ಆರೋಪವನ್ನು ಸರ್ಕಾರಿ ಸ್ವಾಮ್ಯದ ಜೀವ ವಿಮಾ ನಿಗಮವು (LIC) ತಳ್ಳಿಹಾಕಿದೆ. ಬುಧವಾರ ತಡರಾತ್ರಿ ಪತ್ರಿಕಾ ಪ್ರಕಟಣೆ ಹೊರಡಿಸಿದ ಎಲ್‌ಐಸಿಯ ಸಿಇಒ ಮತ್ತು ಎಂಡಿ ಸಿದ್ಧಾರ್ಥ ಮೊಹಾಂತಿ ಅವರು, "ಪಾಲಿಸಿದಾರರ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು, ಅಕ್ಟೋಬರ್ 1, 2024 ರಿಂದ ಜಾರಿಗೆ ಬರುವಂತೆ ಐಆರ್‌ಡಿಎ ನಿಗದಿಪಡಿಸಿದ ಹೊಸ ನಿಯಮಗಳಿಗೆ ಹೊಂದಿಕೆಯಾಗುವ ಯೋಜನೆಗಳನ್ನು ಎಲ್‌ಐಸಿ ಪರಿಚಯಿಸಿದೆ ಎಂಬ ವಿಚಾರವನ್ನು ಸ್ಪಷ್ಟಪಡಿಸಲು ಬಯಸುತ್ತೇವೆ" ಎಂದು ತಿಳಿಸಿದ್ದಾರೆ.

"ಜೀವ ವಿಮಾ ರಕ್ಷಣೆಯನ್ನು ವಿಸ್ತರಿಸಲು ನಿಗಮವು ಬದ್ಧವಾಗಿದೆ. ನಾವು ನಿರಂತರವಾಗಿ ಗ್ರಾಮೀಣ ಪ್ರದೇಶ, ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ ವರ್ಗಗಳನ್ನು ತಲುಪುವತ್ತ ಗಮನಹರಿಸಿದ್ದೇವೆ. ವಿಮೆ ಮಾಡಬಹುದಾದ ಪ್ರತಿಯೊಬ್ಬ ವ್ಯಕ್ತಿಗೆ ಕೈಗೆಟುಕುವ ದರದಲ್ಲಿ ಆರ್ಥಿಕ ರಕ್ಷಣೆಯನ್ನು ವಿಸ್ತರಿಸುವುದು ನಮ್ಮ ಗುರಿಯಾಗಿದೆ," ಎಂದು ಮೊಹಾಂತಿ ಹೇಳಿದರು.

india

ಈ ಸುದ್ದಿಯನ್ನು ಓದಿ: Viral Video: ಫಾರೆಸ್ಟ್‌ ಆಫೀಸರ್‌ಗಳನ್ನೇ ಅಟ್ಟಾಡಿಸಿದ ಕಾಡಾನೆ; ಅಷ್ಟಕ್ಕೂ ಆಗಿದ್ದೇನು? ವಿಡಿಯೊ ಇದೆ

ನಮ್ಮ ಮೈಕ್ರೋ ಬಚತ್ ಯೋಜನೆಯು ಕನಿಷ್ಠ ₹1 ಲಕ್ಷ ವಿಮಾ ಮೊತ್ತವನ್ನು ನೀಡುತ್ತದೆ ಮತ್ತು ಇದಕ್ಕೆ GST ಯಿಂದ ವಿನಾಯಿತಿ ಕೂಡಾ ಇದೆ. ಉತ್ಪನ್ನ ನಿಯಮಗಳಲ್ಲಿನ ಬದಲಾವಣೆಗಳ ನಂತರವೂ ಕೂಡಾ, ಏಜೆಂಟ್‌ಗಳಿಗೆ ನೀಡುವ ಕಮಿಷನ್‌ ಅನ್ನು ನಾವು ಕಡಿಮೆ ಮಾಡಿಲ್ಲ. ಅದನ್ನು ಹಂತ ಹಂತವಾಗಿ ನೀಡಲಾಗಿದೆ ಎಂದು LIC ಮುಖ್ಯಸ್ಥರು ವಿವರಿಸಿದರು. ಎಲ್‌ಐಸಿ ತನ್ನ ಪಾಲಿಸಿದಾರರಿಗೆ ಆರ್ಥಿಕ ಭದ್ರತೆ ಒದಗಿಸಲು ಮತ್ತು ಅದರ ಏಜೆಂಟರನ್ನು ಬೆಂಬಲಿಸಲು ಸಮರ್ಪಿತವಾಗಿದೆ ಎಂದು ಮೊಹಾಂತಿ ಹೇಳಿದರು.

ರಾಹುಲ್‌ ಗಾಂಧಿ ಹೇಳಿದ್ದೇನು?

ಸಂಸತ್ ಭವನದ ತಮ್ಮ ಕಚೇರಿಯಲ್ಲಿ ರಾಹುಲ್ ಗಾಂಧಿ ಬುಧವಾರ ಎಲ್‌ಐಸಿ ಏಜೆಂಟ್‌ಗಳ ನಿಯೋಗವನ್ನು ಭೇಟಿಯಾಗಿದ್ದರು. "ನಾನು ದೇಶಾದ್ಯಂತದ ಎಲ್‌ಐಸಿ ಏಜೆಂಟ್‌ಗಳ ನಿಯೋಗವನ್ನು ಸಂಸತ್ ಭವನದಲ್ಲಿ ಭೇಟಿಯಾದೆ. ಐಆರ್‌ಡಿಎಐ ಮತ್ತು ಎಲ್‌ಐಸಿ ನಿಯಮಗಳಲ್ಲಿ ಇತ್ತೀಚೆಗೆ ಮಾಡಲಾದ ಬದಲಾವಣೆಗಳ ಬಗ್ಗೆ ಅವರು ತಮ್ಮ ಕಳವಳಗಳನ್ನು ವ್ಯಕ್ತಪಡಿಸಿದ್ದಾರೆ. ಇದು ಬಡ ಮತ್ತು ತಳ ಸಮುದಾಯಗಳ ಜನರಿಗೆ ವಿಮಾ ಸೌಲಭ್ಯ ಕೈಗೆಟುಕುದಂತೆ ಮಾಡುತ್ತದೆ. ಏಜೆಂಟ್‌ಗಳ ಸ್ಥಾನವನ್ನು ದುರ್ಬಲಗೊಳಿಸುತ್ತದೆ" ಎಂದು ರಾಹುಲ್‌ ಹೇಳಿದ್ದರು.

ಎಲ್ಲಾ ಭಾರತೀಯರಿಗೆ ಕೈಗೆಟುಕುವಂತೆ ವಿಮೆ ಒದಗಿಸುವ ಗುರಿಯೊಂದಿಗೆ 1956ರಲ್ಲಿ ಎಲ್‌ಐಸಿಯನ್ನು ರಚಿಸಲಾಯಿತು ಎಂದು ಅವರು ಪ್ರತಿಪಾದಿಸಿದ್ದಾರೆ. “ಎಲ್‌ಐಸಿಯ ಸಮಗ್ರ ದೃಷ್ಟಿಕೋನ ಬದಲಾಗಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ನಾನು ಈ ವಿಚಾರವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸುತ್ತೇನೆ” ಎಂದು ಅವರು ಹೇಳಿದರು.