ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

SBI Mutual Fund ಇತಿಹಾಸ ಸೃಷ್ಟಿ; ₹ 1,000 ಸಿಪ್‌ಗೆ 1.4 ಕೋಟಿ ರೂ., ₹ 10,000ಕ್ಕೆ 14.40 ಕೋಟಿ ರೂ!

Mutual Fund: SBI Mutual fund scheme ಇತಿಹಾಸವನ್ನೇ ಸೃಷ್ಟಿಸಿದೆ. ಅಂದರೆ ಈ ಮ್ಯೂಚುವಲ್‌ ಫಂಡ್‌ ಸ್ಕೀಮ್‌ 32 ವರ್ಷಗಳ ತನ್ನ ಇತಿಹಾಸದಲ್ಲಿ 37 ಪಟ್ಟು ರಿಟರ್ನ್ಸ್‌ ಅನ್ನು ಹೂಡಿಕೆದಾರರಿಗೆ ಕೊಟ್ಟಿದೆ. ಆ ಕುರಿತಾದ ವಿವರ ಇಲ್ಲಿದೆ.

SBI Mutual Fundನಿಂದ ಇತಿಹಾಸ ಸೃಷ್ಟಿ

ಸಾಂದರ್ಭಿಕ ಚಿತ್ರ.

Profile Ramesh B Apr 5, 2025 5:58 PM

-ಕೇಶವ ಪ್ರಸಾದ್‌ ಬಿ.

ಬೆಂಗಳೂರು: ನಾವೀಗ ಪ್ರತಿ ತಿಂಗಳು 10,000 ರೂಪಾಯಿ ಹೂಡಿಕೆಗೆ 32 ವರ್ಷಗಳ ಬಳಿಕ ಬರೋಬ್ಬರಿ 14 ಕೋಟಿ 40 ಲಕ್ಷ ರೂ.ಗಳ ಭರ್ಜರಿ ಸಂಪತ್ತನ್ನು ಕೊಟ್ಟಿರುವ ಅದ್ಭತವಾದ ಮ್ಯೂಚುವಲ್‌ ಫಂಡ್‌ (Mutual fund) ಯೋಜನೆಯನ್ನು ಪರಿಚಯಿಸುತ್ತಿದ್ದೇವೆ. ಇದು ಶಿಸ್ತಿನಿಂದ ಹೂಡಿಕೆ ಮಾಡಿದವರನ್ನು 3 ದಶಕಗಳಲ್ಲಿ ಬಹು ಕೋಟ್ಯಧಿಪತಿಗಳನ್ನಾಗಿಸಿದೆ. ಈ ರೋಚಕ ಇತಿಹಾಸದ ಮ್ಯೂಚುವಲ್‌ ಫಂಡ್‌ ಸ್ಕೀಮ್‌ನ ಹೆಸರು SBI Long Term Equity Fund ಎಂದೂ ಕರೆಯುತ್ತಾರೆ. ಸಂಕ್ಷಿಪ್ತವಾಗಿ SBI mutual fund ಎನ್ನುತ್ತಾರೆ.

"ಅಯ್ಯೋ, ಸ್ವಾಮಿ, 30 ವರ್ಷಗಳ ಹಿಂದೆ ಪ್ರತಿ ತಿಂಗಳು 10,000 ರೂ. ಕಟ್ಟಲು ನಮ್ಮಿಂದ ಸಾಧ್ಯವೇ ಇರುತ್ತಿರಲಿಲ್ಲ. ಆಗ ನಮ್ಮ ಆದಾಯವೇ 10-15 ಸಾವಿರ ರೂ. ಇತ್ತುʼʼ ಅಂತ ಹೇಳುತ್ತೀರಾ? ಹಾಗಾದ್ರೆ ಸ್ವಲ್ಪ ತಡೀರಿ. ಒಂದು ವೇಳೆ 32 ವರ್ಷಗಳ ಹಿಂದೆ ನೀವು ತಿಂಗಳಿಗೆ ಕೇವಲ 1,000 ರೂ.ಗಳನ್ನು SBI Mutual fund ಸ್ಕೀಮ್‌ನಲ್ಲಿ ಒಂದು ವೇಳೆ ಹೂಡಿಕೆ ಮಾಡುತ್ತಾ ಬಂದಿದ್ದರೆ ಕೂಡಾ, ಈಗ ನೀವು 1 ಕೋಟಿ 40 ಲಕ್ಷ ರೂ.ಗೆ ಮಾಲೀಕರಾಗಿರುತ್ತಿದ್ದರಿ. ಈಗ ಹೇಳಿ, 1 ಕೋಟಿ 40 ಲಕ್ಷ ರೂ. ಅಂದ್ರೆ ಏನು ಕಡಿಮೆಯಾ? ಅಲ್ವಲ್ಲ.



ಈ ಸುದ್ದಿಯನ್ನೂ ಓದಿ: Donald Trump's Tariff War: ಟ್ರಂಪ್‌ ತೆರಿಗೆ ಸಮರ; ಭಾರತಕ್ಕೇನು ಎಫೆಕ್ಟ್?

ಹೌದು, SBI Mutual fund scheme ಇತಿಹಾಸವನ್ನೇ ಸೃಷ್ಟಿಸಿದೆ ಅಂದರೆ ತಪ್ಪಲ್ಲ. ಈ ಮ್ಯೂಚುವಲ್‌ ಫಂಡ್‌ ಸ್ಕೀಮ್‌ 32 ವರ್ಷಗಳ ತನ್ನ ಇತಿಹಾಸದಲ್ಲಿ 37 ಪಟ್ಟು ರಿಟರ್ನ್ಸ್‌ ಅನ್ನು ಹೂಡಿಕೆದಾರರಿಗೆ ಕೊಟ್ಟಿದೆ.

ಮ್ಯೂಚುವಲ್‌ ಫಂಡ್‌ ಸ್ಕೀಮ್‌ಗಳಲ್ಲಿ ಪ್ರತಿ ತಿಂಗಳೂ ನಿಮ್ಮ ಕೈಲಾದಷ್ಟು ಮೊತ್ತವನ್ನು ಹೂಡಿಕೆ ಮಾಡುವುದಕ್ಕೆ ಸಿಪ್‌ ಇನ್ವೆಸ್ಟ್‌ಮೆಂಟ್‌ ಎನ್ನುತ್ತಾರೆ. ಸಿಪ್‌ ಅಂದ್ರೆ ಸಿಸ್ಟಮ್ಯಾಟಿಕ್‌ ಇನ್ವೆಸ್ಟ್‌ಮೆಂಟ್‌ ಪ್ಲಾನ್.‌ ನೀವು ಈಕ್ವಿಟಿ ಮ್ಯೂಚುವಲ್‌ ಫಂಡ್‌ ಯೋಜನೆಗಳಲ್ಲಿ ಸಿಪ್‌ ಮುಖಾಂತರ ಪ್ರತಿ ತಿಂಗಳು ಹೂಡಿಕೆ ಮಾಡುತ್ತಿದ್ದರೆ ಎರಡು ಅಥವಾ ಮೂರು ದಶಕಗಳ ಬಳಿಕ ನಿಮಗೇ ನಂಬಲು ಕಷ್ಟವಾಗುವಷ್ಟು ಬಹು ದೊಡ್ಡ ಮೊತ್ತದ ಸಂಪತ್ತು ನಿಮ್ಮದಾಗುತ್ತದೆ. ಈಕ್ವಿಟಿ ಮಾರುಕಟ್ಟೆಯನ್ನು ಮ್ಯಾರಥಾನ್‌ ಗೆ ಹೋಲಿಸಬಹುದು. ಇಲ್ಲಿ ದೀರ್ಘಾವಧಿಗೆ ಸಂಪತ್ತು ಸೃಷ್ಟಿಯಾಗುತ್ತದೆ. ಏಕೆಂದರೆ ಪವರ್‌ ಆಫ್‌ ಕಂಪೌಂಡಿಂಗ್‌ ಅಥವಾ ಚಕ್ರ ಬಡ್ಡಿಯ ಪ್ರಯೋಜನ ನಿಮ್ಮದಾಗುತ್ತದೆ.

ಈ ರೀತಿಯಾಗಿ ಕಳೆದ 32 ವರ್ಷಗಳಲ್ಲಿ ಹೂಡಿಕೆಗೆ ಪ್ರತಿಯಾಗಿ 37 ಪಟ್ಟು ಲಾಭವನ್ನು ನೀಡಿದ ಮ್ಯೂಚುವಲ್‌ ಫಂಡ್‌ ಯೋಜನೆಗಳಲ್ಲಿ SBI Long Term Equity Fund ಕೂಡ ಒಂದು.

ಈಗ ಈ ಎಸ್‌ಬಿಐ ಲಾಂಗ್‌ ಟರ್ಮ್‌ ಈಕ್ವಿಟಿ ಫಂಡ್‌ ಬಗ್ಗೆ ವಿವರಗಳನ್ನು ತಿಳಿಯೋಣ. ಇದು ಓಪನ್‌ ಎಂಡೆಡ್‌ ಈಕ್ವಿಟಿ ಲಿಂಕ್ಡ್‌ ಸೇವಿಂಗ್ಸ್‌ ಸ್ಕೀಮ್‌ ಆಗಿದೆ. ಇದರಲ್ಲಿ 3 ವರ್ಷಗಳ ಲಾಕ್‌ ಇನ್‌ ಅವಧಿ ಇದೆ. ಜತೆಗೆ ಟ್ಯಾಕ್ಸ್‌ ಬೆನಿಫಿಟ್‌ ಸಿಗುತ್ತದೆ. ಕಳೆದ 32 ವರ್ಷಗಳಲ್ಲಿ ಐತಿಹಾಸಿಕ ಮೈಲಿಗಲ್ಲನ್ನು ಇದು ದಾಟಿದೆ.

ಆರಂಭದಲ್ಲಿ 1993ರ ಮಾರ್ಚ್‌ 31ರಂದು ಈ ಯೋಜನೆಯನ್ನು IDCW Option ಆಗಿ ಬಿಡುಗಡೆಗೊಳಿಸಲಾಯಿತು. IDCW ಎಂದರೆ Income Distribution cum Capital Withdrawal ಎಂದರ್ಥ. ಡಿವಿಡೆಂಡ್‌ ಆಪ್ಷನ್‌ ಎಂದು ಈ ಹಿಂದೆ ಇದನ್ನು ಕರೆಯಲಾಗುತ್ತಿತ್ತು. ಆದರೆ 2007ರ ಮೇ 7ರಂದು Growth Option ಆಗಿ ಪರಿಚಯಿಸಲಾಯಿತು.

ಕಳೆದ 32 ವರ್ಷಗಳಲ್ಲಿ ಹೂಡಿಕೆದಾರರಿಗೆ ವಾರ್ಷಿಕ ಸರಾಸರಿ ಶೇಕಡಾ 17.94 CAGR ರಿಟರ್ನ್‌ ಅನ್ನು ಈ ಸ್ಕೀಮ್‌ ಕೊಟ್ಟಿದೆ. (CAGR ಅಂದ್ರೆ Compound annual growth rate) ಈ ಯೋಜನೆಯು ಬೇರೆ ಬೇರೆ ಅವಧಿಯಲ್ಲೂ ಗಮನಾರ್ಹ ಆದಾಯ ಕೊಟ್ಟಿದೆ. ಅದರ ವಿವರಗಳನ್ನು ನೋಡೋಣ.

SBI MUTUAL FUND ರಿಟರ್ನ್ಸ್‌ ಎಷ್ಟು?

32 ವರ್ಷಗಳಲ್ಲಿ: 17.94%

15 ವರ್ಷಗಳಲ್ಲಿ: 16.03%

10 ವರ್ಷಗಳಲ್ಲಿ: 17.59%

5 ವರ್ಷಗಳಲ್ಲಿ: 24.31%

3 ವರ್ಷಗಳಲ್ಲಿ: 23.42%

ಎಸ್‌ಬಿಐ Long term ಮ್ಯೂಚುವಲ್‌ ಫಂಡ್‌ನ AUM 27,730 ಕೋಟಿ ರೂಪಾಯಿಗಳಾಗಿದೆ. ಎಯುಎಂ ಅಂದ್ರೆ ಅಸೆಟ್‌ ಅಂಡರ್‌ ಮ್ಯಾನೇಜ್‌ಮೆಂಟ್.‌ ಹೂಡಿಕೆದಾರರ ಅಷ್ಟು ಹಣವನ್ನು ಈ ಮ್ಯೂಚುವಲ್‌ ಫಂಡ್‌ ನಿರ್ವಹಿಸುತ್ತಿದೆ ಎಂದರ್ಥ.

2016ರ ಸೆಪ್ಟೆಂಬರ್‌ನಿಂದ ದಿನೇಶ್‌ ಬಾಲಚಂದ್ರನ್‌ ಅವರು ಈ ಫಂಡ್‌ನ ಮ್ಯಾನೇಜರ್‌ ಆಗಿದ್ದಾರೆ. ಎಸ್‌ಬಿಐ ಮ್ಯೂಚುವಲ್‌ ಪಂಡ್‌ 90% ಹಣವನ್ನು ಈಕ್ವಿಟಿ ಮತ್ತು ಈಕ್ವಿಟಿ ಲಿಂಕ್ಡ್‌ ಸ್ಕೀಮ್‌ಗಳಲ್ಲಿ ಹೂಡಿಕೆ ಮಾಡುತ್ತದೆ.

SBI Long Term Equity Fund ನಲ್ಲಿ ಸಂಪತ್ತು ಸೃಷ್ಟಿ ಹೀಗೆ:

ಪ್ರತಿ ತಿಂಗಳಿನ ಹೂಡಿಕೆ: 10,000 ರೂ.

ಹೂಡಿಕೆಯ ಅವಧಿ: 32 ವರ್ಷಗಳು

ಹೂಡಿಕೆ ಮಾಡಿದ ಮೊತ್ತ: 38.50 ಲಕ್ಷ ರೂ.

CAGR: 17.94%

ಗಳಿಕೆಯಾದ ಮೊತ್ತ: 14 ಕೋಟಿ 44 ಲಕ್ಷ ರೂ.

ಪ್ರತಿ ತಿಂಗಳಿನ ಹೂಡಿಕೆ: 1,000 ರೂ.

ಹೂಡಿಕೆಯ ಅವಧಿ: 32 ವರ್ಷಗಳು

ಹೂಡಿಕೆ ಮಾಡಿದ ಮೊತ್ತ: 3,84,000 ರೂ.

ಗಳಿಕೆಯಾದ ಮೊತ್ತ : 1 ಕೋಟಿ 44 ಲಕ್ಷ ರೂ.