ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಭಾರತದಲ್ಲಿ ಏಸಿ ವಿಭಾಗದಲ್ಲಿ ಭಾರಿ ಬೆಳವಣಿಗೆ ದಾಖಲಿಸಿದ ಸ್ಯಾಮ್‌ಸಂಗ್

19 ಹೊಸ ಏಸಿ ಮಾಡೆಲ್ ಗಳನ್ನು ಹೊಂದಿರುವ ಸ್ಯಾಮ್‌ ಸಂಗ್‌ ನ ಏಸಿ ಮಾರಾಟವು 2025ರ ಜನವರಿ ಮತ್ತು ಮಾರ್ಚ್ ನಡುವೆ ಎರಡು ಪಟ್ಟು ಹೆಚ್ಚಾಗಿದೆ. ಹೊಸ ಬೀಸ್ಪೋಕ್ ಎಐ ವಿಂಡ್‌ ಫ್ರೀ ಏಸಿಗಳು ಸ್ಮಾರ್ಟ್ ಕೂಲಿಂಗ್, ವಿದ್ಯುತ್ ಉಳಿತಾಯ ಮತ್ತು ಕನೆಕ್ಟೆಡ್ ಲಿವಿಂಗ್ ಅನುಭವಕ್ಕೆ ಹೆಚ್ಚು ಒತ್ತು ನೀಡುತ್ತವೆ ಮತ್ತು ಇವು ಭಾರತೀಯ ಗ್ರಾಹಕರ ಬದಲಾಗುತ್ತಿರುವ ಅಗತ್ಯಗಳಿಗೆ ಸರಿ ಹೊಂದುವಂತೆ ವಿನ್ಯಾಸಗೊಂಡಿವೆ.

ಭಾರತದಲ್ಲಿ ಏಸಿ ವಿಭಾಗದಲ್ಲಿ ಭಾರಿ ಬೆಳವಣಿಗೆ ದಾಖಲಿಸಿದ ಸ್ಯಾಮ್‌ಸಂಗ್

Profile Ashok Nayak Apr 11, 2025 6:11 PM

ಬೆಂಗಳೂರು: ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಆಗಿರುವ ಸ್ಯಾಮ್‌ ಸಂಗ್ ಇಂದು 2025ರ ಜನವರಿ ಮತ್ತು ಮಾರ್ಚ್ ನಡುವೆ ತನ್ನ ಏರ್ ಕಂಡೀಷನರ್‌ ಗಳ ಮಾರಾಟ 2 ಪಟ್ಟು ಹೆಚ್ಚಾಗಿದೆ ಎಂದು ಘೋಷಿಸಿದೆ. ಈ ಮೂಲಕ ಸ್ಯಾಮ್ ಸಂಸ್ಥೆಯು ಉದ್ಯಮದಲ್ಲಿ ಶೇ.20-25ರಷ್ಟು ಅಭಿವೃದ್ಧಿ ಸಾಧಿಸಿ ಮುಂಚೂಣಿಯಲ್ಲಿ ಸಾಗುತ್ತಿದೆ. ಈ ಉತ್ತಮ ಬೆಳವಣಿಗೆಯಿಂದ ಸ್ಯಾಮ್‌ಸಂಗ್ ಭಾರತದಲ್ಲಿ 2025ರ ಮೊದಲ ತ್ರೈಮಾಸಿಕದಲ್ಲಿ ಶೇ.10ರಷ್ಟು ಮಾರುಕಟ್ಟೆ ಪಾಲನ್ನು ಪಡೆದುಕೊಂಡಿದೆ. ಈ ಕುರಿತು ಮಾತನಾಡಿರುವ ಸ್ಯಾಮ್‌ ಸಂಗ್‌ ನ ಡಿಜಿಟಲ್ ಅಪ್ಲೈಯನ್ಸಸ್ ಬಿಸಿನೆಸ್ ವಿಭಾಗದ ಉಪಾಧ್ಯಕ್ಷ ಘುಫ್ರಾನ್ ಆಲಂ ಅವರು, "ನಮ್ಮ ಏಸಿ ಉದ್ಯಮ ಉತ್ತಮವಾಗಿ ಬೆಳವಣಿಗೆ ಹೊಂದುತ್ತಿದ್ದು, ನಾವು ಮಾರ್ಚ್ ತ್ರೈಮಾಸಿಕದಲ್ಲಿ 2 ಪಟ್ಟು ಬೆಳವಣಿಗೆ ಸಾಧಿಸಿದ್ದೇವೆ.

ಇದರಿಂದ ನಮಗೆ ಶೇ.10ರಷ್ಟು ಮಾರುಕಟ್ಟೆ ಪಾಲು ಸಿಕ್ಕಿದೆ ಎಂದು ನಮ್ಮ ಆಂತರಿಕ ಲೆಕ್ಕದಿಂದ ತಿಳಿದುಬಂದಿದೆ. ನಾವು ಉದ್ಯಮದ ಅಭಿವೃದ್ಧಿ ಪಥದಲ್ಲಿ ಮುಂಚೂಣಿಯಲ್ಲಿ ಇರುವ ಕುರಿತು ವಿಶ್ವಾಸ ಹೊಂದಿ ದ್ದೇವೆ. ಒಳ್ಳೆಯ ಬೆಳವಣಿಗೆ ಸಾಧಿಸುವುದರ ಜೊತೆಗೆ ಉತ್ತಮ ಮಾರುಕಟ್ಟೆ ಪಾಲನ್ನೂ ದೊರಕಿಸಿ ಕೊಳ್ಳುತ್ತೇವೆ" ಎಂದು ಹೇಳಿದರು.

ಇದನ್ನೂ ಓದಿ: Bangalore News: ಅವಧಿಗೂ ಮುನ್ನ ಜನಿಸಿದ 830 ಗ್ರಾಂ ತೂಕದ ಶಿಶುವನ್ನು ರಕ್ಷಿಸುವಲ್ಲಿ ಯಶಸ್ವಿಯಾದ ವೈದ್ಯರು!

ಸ್ಯಾಮ್‌ ಸಂಗ್ ಎಲ್ಲಾ ಕಡೆಗಳಲ್ಲಿ ಮತ್ತು ಎಲ್ಲಾ ಪ್ರದೇಶಗಳಲ್ಲಿ ಒಳ್ಳೆಯ ಬೆಳವಣಿಗೆಯನ್ನು ಎದುರು ನೋಡುತ್ತಿದೆ. ಜನರು ಖರ್ಚು ಮಾಡಬಹುದಾದ ಆದಾಯ ಹೆಚ್ಚಾಗುತ್ತಿರುವುದು, ಆಸೆಗಳು ಜಾಸ್ತಿಯಾಗುತ್ತಿರುವುದು ಮತ್ತು ಸಣ್ಣ ಪಟ್ಟಣಗಳಲ್ಲಿ ವಿದ್ಯುತ್ ಸೌಲಭ್ಯ ಹೆಚ್ಚಾಗುತ್ತಿರುವುದು ಈ ಬೆಳವಣಿಗೆಗೆ ಸಹಾಯ ಮಾಡಲಿದೆ. ಸ್ಯಾಮ್‌ಸಂಗ್ ತನ್ನ ವಿತರಣಾ ಜಾಲವನ್ನು ಶೇ.40ರಷ್ಟು ಹೆಚ್ಚಿ ಸಿದೆ ಮತ್ತು ರೂಮ್ ಏರ್ ಕಂಡೀಷನರ್ ಖರೀದಿಗೆ ಝೀರೋ ಕಾಸ್ಟ್ ಇಎಂಐ ಸೌಲಭ್ಯ ಒದಗಿಸಲು ಪ್ರಮುಖ ಆರ್ಥಿಕ ಸಂಸ್ಥೆಗಳೊಂದಿಗೆ ಪಾಲುದಾರಿಕೆ ಹೊಂದಿದೆ.

ಈ ಕುರಿತು ಮಾತು ಮುಂದುವರಿಸಿದ ಆಲಂ ಅವರು, "ಈ ವರ್ಷ ನಾವು 19 ಹೊಸ ಮಾಡೆಲ್ ಗಳನ್ನು ಬಿಡುಗಡೆ ಮಾಡಿದ್ದೇವೆ. ಇವು ಉತ್ತಮ ಕೂಲಿಂಗ್, ಇಂಧನ ಉಳಿತಾಯ, ದೀರ್ಘ ಬಾಳಿಕೆ ಮತ್ತು ಭವಿಷ್ಯ ಸಿದ್ಧ ವಿನ್ಯಾಸವನ್ನು ಒಳಗೊಂಡಿವೆ. ನಮ್ಮ ಹೊಸ ಬೀಸ್ಪೋಕ್ ಎಐ ವಿಂಡ್‌ ಫ್ರೀ ಏಸಿಗಳು ಗ್ರಾಹಕರ ವರ್ತನೆಗಳನ್ನು ಗಮನಿಸುತ್ತವೆ, ಅವರು ಮನೆಯಲ್ಲಿದ್ದಾರೆಯೇ, ಮಲಗಿದ್ದಾ ರೆಯೇ, ಅಥವಾ ಬಿಸಿಲಿನಿಂದ ಬಂದಿದ್ದಾರೆಯೇ ಎಂದು ಆ ಏಸಿಗಳು ಅರಿತುಕೊಳ್ಳುತ್ತವೆ. ಈ ಗಮನಿ ಸುವಿಕೆಯ ಆಧಾರದ ಮೇಲೆ ಏಸಿ ತನ್ನ ಸೆಟ್ಟಿಂಗ್‌ ಗಳನ್ನು ಬದಲಾಯಿಸಿ ಗ್ರಾಹಕರಿಗೆ ಉತ್ತಮ ಕೂಲಿಂಗ್ ವ್ಯವಸ್ಥೆ ಒದಗಿಸುತ್ತದೆ," ಎಂದು ಹೇಳಿದರು.

ಬೆಸ್ಪೋಕ್ ಎಐ ವಿಂಡ್‌ಫ್ರೀ ಏಸಿಗಳು ಎಐ ಎನರ್ಜಿ ಮೋಡ್‌ ನೊಂದಿಗೆ ಬರುತ್ತವೆ. ಈ ಫೀಚರ್ ಕೂಲಿಂಗ್ ಸೆಟ್ಟಿಂಗ್‌ ಗಳನ್ನು ಸ್ಮಾರ್ಟ್ ಆಗಿ ಅಡ್ಜಸ್ಟ್ ಮಾಡುವ ಮೂಲಕ ಶೇ.30ರಷ್ಟು ವಿದ್ಯುತ್ ಉಳಿತಾಯ ಮಾಡುತ್ತದೆ. ಗ್ರಾಹಕರು ಏಸಿ ಖರೀದಿಸುವಾಗ ವಿದ್ಯುತ್ ಉಳಿತಾಯದ ಕಡೆಗೆ ಗಮನ ಹರಿಸುತ್ತಿದ್ದು, ಆ ನಿಟ್ಟಿನಲ್ಲಿ ಇವು ಗ್ರಾಹಕರ ಅಗತ್ಯ ಪೂರೈಸುತ್ತವೆ. ಈ ಏಸಿಗಳು ಆರಾಮ ಒದಗಿಸು ವುದರಲ್ಲಿ ಯಾವುದೇ ರಾಜಿಯಾಗದೆ ಉತ್ತಮ ಸೌಕರ್ಯ ಒದಗಿಸುತ್ತದೆ.

ಎಐ ಫಾಸ್ಟ್ & ಕಂಫರ್ಟ್ ಕೂಲಿಂಗ್ ಫೀಚರ್ ಗರಿಷ್ಠ ಫ್ಯಾನ್ ವೇಗದ ಮೂಲಕ ಕೊಠಡಿಯ ತಾಪಮಾನವನ್ನು ತಕ್ಷಣವೇ ಕಡಿಮೆ ಮಾಡಿ ತಂಗಾಳಿ ಬೀಸಿದಂತಹ ಆರಾಮದಾಯಕ ಅನುಭವ ಒದಗಿಸುತ್ತದೆ. ಒಮ್ಮೆ ಆಹ್ಲಾದಕರ ತಾಪಮಾನ ದೊರಕಿದ ಬಳಿಕ ಇದು ಸ್ಮಾರ್ಟ್ ಆಗಿ ವಿಂಡ್‌ಫ್ರೀ ಮೋಡ್‌ ಗೆ ಬದಲಾಗಿ ಸ್ಥಿರವಾದ ಕೂಲಿಂಗ್ ಅನುಭವ ನೀಡುತ್ತದೆ. ಇದರಿಂದ ನಿದ್ದೆ ಮಾಡುವುದಕ್ಕೆ ಅಥವಾ ಅತಿಥಿಗಳ ಜೊತೆ ಕಾಲ ಕಳೆಯುವುದಕ್ಕೆ ಉತ್ತಮ ವಾತಾವರಣ ಕಲ್ಪಿಸಿಕೊಡುತ್ತದೆ.

ಹೊಸ ಬೀಸ್ಪೋಕ್ ಎಐ ವಿಂಡ್‌ ಫ್ರೀ ಏಸಿಗಳ ಬೆಲೆ 32,990 ರೂಪಾಯಿಗಳಿಂದ ಶುರುವಾಗುತ್ತಿದ್ದು, ಅತ್ಯಂತ ದುಬಾರಿ ಮಾಡೆಲ್ ನ ಬೆಲೆ 60,990 ರೂಪಾಯಿಗಳವರೆಗೆ ಇದೆ. ಸ್ಯಾಮ್‌ ಸಂಗ್ ಏಸಿಗಳಿಗೆ 5 ವರ್ಷಗಳ ಸಂಪೂರ್ಣ ವಾರಂಟಿ ನೀಡುತ್ತದೆ. ದೇಶದ 19,000+ ಪಿನ್ ಕೋಡ್‌ ಗಳ ಪ್ರದೇಶದಲ್ಲಿ ಉತ್ತಮ ಸರ್ವೀಸ್ ಮತ್ತು ಇನ್ ಸ್ಟಾಲೇಷನ್ ಸೌಲಭ್ಯವನ್ನು ಸ್ಯಾಮ್ ಸಂಗ್ ಗ್ರಾಹಕರಿಗೆ ನೀಡುತ್ತದೆ.