ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಗೆಳೆಯನ ಮುಂದೆಯೇ ಯುವತಿ ಮೇಲೆ ಏಳು ಮಂದಿ ದುಷ್ಕರ್ಮಿಗಳಿಂದ ಸಾಮೂಹಿಕ ಅತ್ಯಾಚಾರ

crime news: 28 ವರ್ಷದ ಯುವತಿಯೊಬ್ಬಳ ಮೇಲೆ ಆಕೆಯ ಗೆಳೆಯನ ಮುಂದೆಯೇ ಏಳು ಮಂದಿ ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ನಡೆಸಿ, 10,000 ರೂ. ಗಳನ್ನು ಸುಲಿಗೆ ಮಾಡಿರುವ ಆಘಾತಕಾರಿ ಘಟನೆ ಅಸ್ಸಾಂನಲ್ಲಿ ನಡೆದಿದೆ. ಸಂತ್ರಸ್ಥೆ ಇಬ್ಬರು ಆರೋಪಿಗಳನ್ನು ಗುರುತಿಸಿದ ನಂತರ ಈ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಲಾಗಿದ್ದು, ಉಳಿದ ಆರೋಪಿಗಳನ್ನು ಬಂಧಿಸಲು ಹುಡುಕಾಟ ನಡೆಯುತ್ತಿದೆ.

ಗೆಳೆಯನ ಮುಂದೆಯೇ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ

ಸಾಂದರ್ಭಿಕ ಚಿತ್ರ -

Priyanka P
Priyanka P Feb 25, 2026 11:17 AM

ದಿಸ್ಪುರ್, ಫೆ.25: 28 ವರ್ಷದ ಯುವತಿಯೊಬ್ಬಳ ಮೇಲೆ ಆಕೆಯ ಗೆಳೆಯನ ಮುಂದೆಯೇ ಏಳು ಮಂದಿ ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ನಡೆಸಿ, 10,000 ರೂ.ಗಳನ್ನು ಸುಲಿಗೆ ಮಾಡಿರುವ ಆಘಾತಕಾರಿ ಘಟನೆ ಅಸ್ಸಾಂನಲ್ಲಿ (Assam) ನಡೆದಿದೆ. ಸಿಲ್ಚಾರ್ ಬಳಿ ಯುವತಿ ಹಾಗೂ ಆಕೆಯ ಗೆಳೆಯ ಕಾರಿನಲ್ಲಿ ಕುಳಿತಿದ್ದಾಗ ಎಸ್‌ಯುವಿಯಲ್ಲಿ ಬಂದ ದುಷ್ಕರ್ಮಿಗಳ ಗುಂಪೊಂದು ಅವರ ಮೇಲೆ ಹಲ್ಲೆ ನಡೆಸಿ ಒಬ್ಬೊಬ್ಬರಾಗಿ ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ (crime news).

ಸಂತ್ರಸ್ಥೆ ಇಬ್ಬರು ಆರೋಪಿಗಳನ್ನು ಗುರುತಿಸಿದ ನಂತರ ಈ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಲಾಗಿದ್ದು, ಉಳಿದ ಆರೋಪಿಗಳನ್ನು ಬಂಧಿಸಲು ಹುಡುಕಾಟ ನಡೆಯುತ್ತಿದೆ. ಫೆಬ್ರವರಿ 19 ರಂದು ನಡೆದ ಈ ಘಟನೆಯ ಬಗ್ಗೆ ಯುವತಿ ದೂರು ದಾಖಲಿಸಿದ್ದು, ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಿಲ್ಚಾರ್ ಸದರ್ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 308 (5) (ಕೊಲೆ ಬೆದರಿಕೆ ಮೂಲಕ ಸುಲಿಗೆ), 310 (2) (ದರೋಡೆ), 351 (2) (ಕ್ರಿಮಿನಲ್ ಬೆದರಿಕೆ), 61 (2) (ಇಬ್ಬರು ಅಥವಾ ಹೆಚ್ಚಿನ ವ್ಯಕ್ತಿಗಳಿಂದ ಮಾಡಿದ ಕಾನೂನುಬಾಹಿರ ಕೃತ್ಯ, 70 (1) (ಸಾಮೂಹಿಕ ಅತ್ಯಾಚಾರ), 76 (ಮಹಿಳೆಯ ಮೇಲೆ ಕ್ರಿಮಿನಲ್ ಬಲವಂತ, ಅವರ ಬಟ್ಟೆ ಬಿಚ್ಚುವ ಅಥವಾ ಬೆತ್ತಲೆಯಾಗುವಂತೆ ಒತ್ತಾಯಿಸುವ ಉದ್ದೇಶದಿಂದ), 79 (ಮಹಿಳೆಯ ನಮ್ರತೆಯನ್ನು ಅವಮಾನಿಸುವ ಉದ್ದೇಶದಿಂದ ಪದ, ಸನ್ನೆ ಅಥವಾ ಕೃತ್ಯ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗೋರಖ್‌ಪುರ ಏಮ್ಸ್‌ನಲ್ಲಿ ಘೋರ ಕೃತ್ಯ; ನಾಗಾಲ್ಯಾಂಡ್ ವೈದ್ಯೆಯ ಮೇಲೆ ಜನಾಂಗೀಯ ನಿಂದನೆ, ಲೈಂಗಿಕ ದೌರ್ಜನ್ಯ

ಸಂತ್ರಸ್ಥೆಯ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದ್ದು, ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ. ಈ ಮಧ್ಯೆ ಘಟನೆಯನ್ನು ವರದಿ ಮಾಡಿದ ಸಿಲ್ಚಾರ್ ಮೂಲದ ಪತ್ರಕರ್ತರೊಬ್ಬರನ್ನು ಆರೋಪಿಗಳಲ್ಲಿ ಒಬ್ಬನ ಕುಟುಂಬ ಸದಸ್ಯರು ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಆಷನಲ್ ಹೈವೇ ರಸ್ತೆ ಪೊಲೀಸ್ ಠಾಣೆಯ ಬಳಿ ಸದಸ್ಯರು ತನ್ನನ್ನು ತಡೆದು, ಪ್ರಕರಣವನ್ನು ವರದಿ ಮಾಡಿದ್ದಕ್ಕಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಹಲ್ಲೆಗೆ ಸಂಬಂಧಿಸಿದಂತೆ ಪತ್ರಕರ್ತೆಯೂ ದೂರು ದಾಖಲಿಸಿದ್ದು, ಪೊಲೀಸರು ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ.

ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಕೊಲೆ

ರಾಜಸ್ಥಾನದ ಬಿಕಾನೇರ್ ಜಿಲ್ಲೆಯ ಬಜ್ಜು ಉಪವಿಭಾಗದಲ್ಲಿ ಅತ್ಯಾಚಾರ ಮತ್ತು ಕೊಲೆಯ ಭಯಾನಕ ಘಟನೆ ಬೆಳಕಿಗೆ ಬಂದಿದೆ. 13 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಬರ್ಬರವಾಗಿ ಕೊಲೆ ಮಾಡಲಾಗಿದೆ. ವಿಚಾರಣೆಯ ಸಮಯದಲ್ಲಿ ಪೊಲೀಸರು ಪ್ರಮುಖ ಆರೋಪಿ ಶ್ಯಾಮ್ ಸುಂದರ್‌ನನ್ನು ಬಂಧಿಸಿದ್ದಾರೆ. ಅವನು ಅಪರಾಧವನ್ನು ಒಪ್ಪಿಕೊಂಡಿದ್ದಾನೆ ಮತ್ತು ಪ್ರಸ್ತುತ ಪೊಲೀಸ್ ಕಸ್ಟಡಿಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ.

ಈ ಹೃದಯವಿದ್ರಾವಕ ಘಟನೆ ಫೆಬ್ರವರಿ 21 ರಂದು ನಡೆದಿದೆ. ಎಂಟನೇ ತರಗತಿಯ ವಿದ್ಯಾರ್ಥಿನಿಯಾಗಿದ್ದ ಮುಗ್ಧ ಹುಡುಗಿ ತನ್ನ ಬೋರ್ಡ್ ಪರೀಕ್ಷೆಗೆ ಹಾಜರಾಗಲು ಮನೆಯಿಂದ ಶಾಲೆಗೆ ಹೋಗಿದ್ದಳು. ಆದರೆ, ಅವಳು ಮನೆಗೆ ಹಿಂತಿರುಗಿಲ್ಲ. ಆಕೆಯ ಕುಟುಂಬವು ಅವಳನ್ನು ಹುಡುಕಲು ಪ್ರಾರಂಭಿಸಿದಾಗ, ಆಕೆಯ ಮನೆಯಿಂದ ಸ್ವಲ್ಪ ದೂರದಲ್ಲಿ ಆಕೆಯ ಅರೆನಗ್ನ ಶವ ಪತ್ತೆಯಾಗಿದೆ.