ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Murder Case: ಗಂಡನನ್ನು ಕೊಂದು ಕರೆಂಟ್‌ ಶಾಕ್‌ ಹೊಡೀತು ಎಂದ ನಾಟಕ ಮಾಡಿದ್ಲು; ಇನ್ಸ್ಟಾಗ್ರಾಂ ಚಾಟ್‌ನಲ್ಲಿ ಬಯಲಾಯ್ತು ಸತ್ಯ

ಇತ್ತೀಚೆಗೆ ಪತ್ನಿಯೇ ತನ್ನ ಗಂಡನನ್ನು ಕೊಲೆ ಮಾಡಿಸುವ ಘಟನೆ ಸಾಲು ಸಾಲು ಬೆಳಕಿಗೆ ಬಂದಿದೆ. ದೆಹಲಿಯಲ್ಲೂ ಇದೇ ರೀತಿಯ ಘಟನೆ ನಡೆದಿದ್ದು, ಮಹಿಳೆಯೇ ತನ್ನ ಪ್ರಿಯಕರ ಜೊತೆಗೆ ಸೇರಿ ಪತಿಯನ್ನು ಕೊಲೆ ಮಾಡಿದ್ದಾಳೆ. ಸದ್ಯ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಪ್ರಿಯಕರನ ಜೊತೆ ಸೇರಿ ಗಂಡನಿಗೆ ಮುಹೂರ್ತ ಇಟ್ಟಳು ಈ ಚಾಲಾಕಿ ಹೆಣ್ಣು

Profile Vishakha Bhat Jul 19, 2025 4:57 PM

ನವದೆಹಲಿ: ಇತ್ತೀಚೆಗೆ ಪತ್ನಿಯೇ ತನ್ನ ಗಂಡನನ್ನು ಕೊಲೆ ಮಾಡಿಸುವ ಘಟನೆ ಸಾಲು ಸಾಲು ಬೆಳಕಿಗೆ ಬಂದಿದೆ. ದೆಹಲಿಯಲ್ಲೂ (Delhi) ಇದೇ ರೀತಿಯ (Murder Case) ಘಟನೆ ನಡೆದಿದ್ದು, ಮಹಿಳೆಯೇ ತನ್ನ ಪ್ರಿಯಕರ ಜೊತೆಗೆ ಸೇರಿ ಪತಿಯನ್ನು ಕೊಲೆ ಮಾಡಿದ್ದಾಳೆ. ದೆಹಲಿಯ ಉತ್ತಮ್ ನಗರದಲ್ಲಿ 36 ವರ್ಷದ ವ್ಯಕ್ತಿಯೊಬ್ಬ ಆಕಸ್ಮಿಕ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ್ದನೆಂದು ಆರಂಭದಲ್ಲಿ ಹೇಳಲಾಗಿತ್ತು, ಆದರೆ ಆತನ ಪತ್ನಿ ಮತ್ತು ಸೋದರಸಂಬಂಧಿ ನಡುವಿನ ಸಂಭಾಷಣೆ ಬೆಳಕಿಗೆ ಬಂದ ನಂತರ ಪ್ರಕರಣವು ಕೊಲೆ ಎಂದು ತಿಳಿದು ಬಂದಿದೆ. ಸದ್ಯ ಪೊಲೀಸರು ಆಕೆ ಹಾಗೂ ಆಕೆಯ ಪ್ರಿಯತಮನನ್ನು ಬಂಧಿಸಿದ್ದಾರೆ.

ಜುಲೈ 13 ರ ಬೆಳಿಗ್ಗೆ ಪಶ್ಚಿಮ ದೆಹಲಿಯ ಜನಕ್‌ಪುರಿ ಪ್ರದೇಶದ ಆಸ್ಪತ್ರೆಯಲ್ಲಿ ಕರಣ್ ದೇವ್ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು. ಆ ಸಮಯದಲ್ಲಿ, ಅವರ ಪತ್ನಿ ಸುಷ್ಮಿತಾ ಅವರು ಮನೆಯಲ್ಲಿ ಆಕಸ್ಮಿಕ ವಿದ್ಯುತ್ ಆಘಾತಕ್ಕೊಳಗಾಗಿದ್ದಾರೆ ಎಂದು ಹೇಳಿಕೊಂಡರು. ಕುಟುಂಬವು ಸಾವು ಸಹಜ ಎಂದು ನಂಬಿ ಮರಣೋತ್ತರ ಪರೀಕ್ಷೆಯನ್ನು ನಿರಾಕರಿಸಿತು. ಆದರೂ ಪೊಲೀಸರು ಶವ ಪರೀಕ್ಷೆಗೆ ಒತ್ತಾಯ ಪಡಿಸಿದ್ದರು. ನಂತರ ಅವರ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಹರಿನಗರದ ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಗೆ ಕಳುಹಿಸಲಾಯಿತು.

ನಂತರ ತನಿಖೆಯಲ್ಲಿ ಇದು ಕೊಲೆ ಎಂದು ತಿಳಿದು ಬಂದಿದೆ. ಕರಣ್ ದೇವ್ ಅವರ ಕಿರಿಯ ಸಹೋದರ ಕುನಾಲ್ ದೇವ್, ಸುಶ್ಮಿತಾ ಮತ್ತು ಕರಣ್‌ನ ತಂದೆಯ ಸೋದರಸಂಬಂಧಿ ರಾಹುಲ್ ನಡುವಿನ ಚಾಟ್‌ಗಳನ್ನು ಬಹಿರಂಗ ಪಡಿಸಲಾಗಿತ್ತು. ಕುನಾಲ್ ಸಂಭಾಷಣೆಯನ್ನು ವೀಡಿಯೊದಲ್ಲಿ ಉಳಿಸಿಕೊಂಡು ಜುಲೈ 16 ರಂದು ಪೊಲೀಸರಿಗೆ ಸಲ್ಲಿಸಿದರು. ಜುಲೈ 12 ರ ರಾತ್ರಿ ಕರಣ್ ಅವರ ಆಹಾರದಲ್ಲಿ ಆರೋಪಿಗಳು 15 ನಿದ್ರೆ ಮಾತ್ರೆಗಳನ್ನು ಬೆರೆಸಿದ್ದಾರೆ ಎಂದು ಸಂದೇಶಗಳು ಬಹಿರಂಗಪಡಿಸುತ್ತವೆ . ಆಕೆ ರಾಹುಲ್‌ಗೆ ಸಂದೇಶದಲ್ಲಿ ಔಷಧಿ ತೆಗೆದುಕೊಂಡ ನಂತರ ಸಾಯಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂದು ಒಮ್ಮೆ ಪರಿಶೀಲಿಸಿ. ಅವನು ಆಹಾರ ತಿಂದು ಮೂರು ಗಂಟೆಗಳಾಗಿವೆ. ವಾಂತಿಯಾಗಿಲ್ಲ. ಆತ ಇನ್ನೂ ಸತ್ತಿಲ್ಲ ಎಂದು ಹೇಳಿದ್ದಳು.

ಈ ಸುದ್ದಿಯನ್ನೂ ಓದಿ: Missing Case: 2023ರಲ್ಲಿಯೇ ಕೊಲೆಯಾಗಿದ್ದಾಳೆಂದು ಭಾವಿಸಲಾಗಿದ್ದ ಮಹಿಳೆ ಮನೆಗೆ ವಾಪಸ್‌, ಆಕೆಯ ಕೊಲೆ ಆರೋಪದ ಮೇಲೆ ಜೈಲಿನಲ್ಲಿರುವ ನಾಲ್ವರು

ಪೊಲೀಸರ ಪ್ರಕಾರ, ಆರೋಪಿಗಳು ಕರಣ್‌ಗೆ ನಿದ್ದೆ ಬರುವಂತೆ ಮಾಡಿ ನಂತರ ವಿದ್ಯುತ್ ಸ್ಪರ್ಶಿಸಿ ಸಾವನ್ನು ಆಕಸ್ಮಿಕವೆಂದು ಬಿಂಬಿಸುವ ಉದ್ದೇಶ ಹೊಂದಿದ್ದರು ಎಂದು ತಿಳಿದು ಬಂದಿದೆ. ಕೊಲೆ ನಡೆದ ತಕ್ಷಣ, ಸುಶ್ಮಿತಾ ಹತ್ತಿರದ ತನ್ನ ಅತ್ತೆಯ ಮನೆಗೆ ಹೋಗಿ ಕರಣ್‌ಗೆ ವಿದ್ಯುತ್ ಆಘಾತವಾಗಿದೆ ಎಂದು ತಿಳಿಸಿದ್ದಾಳೆ ಎಂದು ವರದಿಯಾಗಿದೆ. ಕುಟುಂಬವು ಫ್ಲಾಟ್‌ಗೆ ಧಾವಿಸಿ ಅವರನ್ನು ಆಸ್ಪತ್ರೆಗೆ ಸಾಗಿಸಿತು, ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು. ಸದ್ಯ ಆರೋಪಿಗಳನ್ನು ಬಂಧಿಸಲಾಗಿದೆ.