ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Shashil G. Namoshi in lead: ಈಶಾನ್ಯ ಶಿಕ್ಷಕರ ಕ್ಷೇತ್ರ ಚುನಾವಣೆ: ಮೊದಲ ಸುತ್ತಿನಲ್ಲಿ ಬಿಜೆಪಿಯ ನಮೋಶಿಗೆ 1,536 ಮತಗಳ ಮುನ್ನಡೆ

ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ-2026ರ ಮತ ಎಣಿಕೆಯಲ್ಲಿ ಮೊದಲ ಸುತ್ತಿನಲ್ಲೇ ಬಿಜೆಪಿ ಅಭ್ಯರ್ಥಿ ಶಶೀಲ್ ಜಿ. ನಮೋಶಿ(Shashil G. Namoshi) ಮುನ್ನಡೆ ಸಾಧಿಸಿದ್ದಾರೆ. ನಮೋಶಿ 7,239 ಮತಗಳನ್ನು ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮಟ್ಟೂರ(Sharanappa Mattur) 5,703 ಮತ ಗಳಿಸಿದ್ದಾರೆ. ಈ ಮೂಲಕ ನಮೋಶಿ 1,536 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಈಶಾನ್ಯ ಶಿಕ್ಷಕರ ಕ್ಷೇತ್ರ ಚುನಾವಣೆ: ಬಿಜೆಪಿಯ ನಮೋಶಿಗೆ ಮುನ್ನಡೆ

-

Profile
Ashok Nayak Oct 27, 2026 4:03 PM

ಕಲಬುರಗಿ: ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ-2026ರ ಮತ ಎಣಿಕೆಯಲ್ಲಿ ಮೊದಲ ಸುತ್ತಿನಲ್ಲೇ ಬಿಜೆಪಿ ಅಭ್ಯರ್ಥಿ ಶಶೀಲ್ ಜಿ. ನಮೋಶಿ(Shashil G. Namoshi) ಮುನ್ನಡೆ ಸಾಧಿಸಿದ್ದಾರೆ. ನಮೋಶಿ 7,239 ಮತಗಳನ್ನು ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮಟ್ಟೂರ(Sharanappa Mattur) 5,703 ಮತ ಗಳಿಸಿದ್ದಾರೆ. ಈ ಮೂಲಕ ನಮೋಶಿ 1,536 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಗುಲಬರ್ಗಾ ವಿಶ್ವವಿದ್ಯಾಲಯ(Gulbarga University)ದ ಗಣಿತ ವಿಭಾಗದ ಭಾಸ್ಕರ್ ಸಭಾಂಗಣ ದಲ್ಲಿ ಮಂಗಳವಾರ ಮತ ಎಣಿಕೆ(Vote Count) ನಡೆಯುತ್ತಿದ್ದು, ಮೊದಲ ಸುತ್ತಿನಲ್ಲೇ ನಮೋಶಿ ಮತ್ತು ಮಟ್ಟೂರ ನಡುವೆ ನೇರ ಪೈಪೋಟಿ ಕಂಡುಬಂದಿದೆ. ಪಕ್ಷೇತರರು ಹಾಗೂ ಇತರ ಅಭ್ಯರ್ಥಿ ಗಳು ಪಡೆದ ಮತಗಳೂ ಪ್ರಮುಖ ಅಭ್ಯರ್ಥಿಗಳ ಲೆಕ್ಕಾಚಾರದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಮುಂದಿನ ಸುತ್ತುಗಳತ್ತ ಕುತೂಹಲ ಹೆಚ್ಚಿದೆ.

ಇದನ್ನೂ ಓದಿ: Parishad Election: ಮಂಚೇನಹಳ್ಳಿ ತಾಲೂಕಿನಲ್ಲಿ ಗರಿಷ್ಠ ಶೇ.89.83, ಚೇಳೂರಿನಲ್ಲಿ ಕನಿಷ್ಠ ಶೇ.63.52ರಷ್ಟು ಮತ ಚಲಾವಣೆ

ಅ.23ರಂದು ನಡೆದ ಮತದಾನದಲ್ಲಿ ಕ್ಷೇತ್ರದಲ್ಲಿ ಒಟ್ಟು 30,250 ಮತಗಳು ಚಲಾವಣೆಯಾಗಿದ್ದವು. ಮತ ಎಣಿಕೆಗಾಗಿ 14 ಟೇಬಲ್‌ಗಳನ್ನು ಅಳವಡಿಸಲಾಗಿದ್ದು, ಪ್ರತಿ ಟೇಬಲ್‌ನಲ್ಲಿ ಒಂದು ಸುತ್ತಿಗೆ ಸಾವಿರ ಮತಪತ್ರಗಳ ಎಣಿಕೆ ನಡೆಯುತ್ತಿದೆ. ಮೊದಲ ಸುತ್ತಿನಲ್ಲಿ ಸುಮಾರು 14 ಸಾವಿರ ಮತಗಳ ಎಣಿಕೆ ನಡೆಯಬೇಕಿದ್ದರೂ, ಲೆಕ್ಕಾಚಾರದ ಅಂತ್ಯದಲ್ಲಿ ನಮೋಶಿ 7,239 ಮತ್ತು ಮಟ್ಟೂರ 5,703 ಮತಗಳನ್ನು ಪಡೆದಿದ್ದಾರೆ.

ಮತ ಎಣಿಕೆಗೂ ಮುನ್ನ ಚುನಾವಣಾ ವೀಕ್ಷಕ ಶಿವಕುಮಾರ ಕೆ.ಬಿ., ಚುನಾವಣಾಧಿಕಾರಿ ಜಹೀರಾ ನಸೀಮ್, ಅಭ್ಯರ್ಥಿಗಳು ಹಾಗೂ ಚುನಾವಣಾ ಏಜೆಂಟ್‌ಗಳ ಸಮ್ಮುಖದಲ್ಲಿ ಸ್ಟ್ರಾಂಗ್‌ರೂಂ ತೆರೆಯಲಾಯಿತು. 144 ಮತಪೆಟ್ಟಿಗೆಗಳಿಂದ ಮತಪತ್ರಗಳನ್ನು ಹೊರ ತೆಗೆದು ಬಂಡ್ಲಿಂಗ್ ಮಾಡುವ ಕಾರ್ಯ ಪೂರ್ಣಗೊಳಿಸಲಾಯಿತು. ಬಳಿಕ ಮತಪತ್ರಗಳ ರ್ಯಾಂಡಮೈಜೇಷನ್ ಪ್ರಕ್ರಿಯೆ ನಡೆಸಿ, ಪ್ರಥಮ ಪ್ರಾಶಸ್ತ್ಯದ ಮತಗಳ ಎಣಿಕೆ ಆರಂಭಿಸಲಾಯಿತು.

ಕ್ಷೇತ್ರದಲ್ಲಿ ಒಟ್ಟು 13 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕಾಂಗ್ರೆಸ್‌ನ ಶರಣಪ್ಪ ಮಟ್ಟೂರ, ಬಿಜೆಪಿ (BJP)ಯ ಶಶೀಲ್ ಜಿ. ನಮೋಶಿ, ಆಮ್ ಆದ್ಮಿ ಪಕ್ಷ(AAP)ದ ಸಾಯಬಣ್ಣಾ ಜಮಾದಾರ ಹಾಗೂ ಜನತಾ ದಳ (ಸಂಯುಕ್ತ)(JDU) ಪಕ್ಷದ ಶಂಕರೆಡ್ಡಿ ಪಾಟೀಲ್ ಪ್ರಮುಖ ಅಭ್ಯರ್ಥಿಗಳಾಗಿದ್ದಾರೆ. ಮುಂದಿನ ಸುತ್ತುಗಳಲ್ಲಿ ಮತಗಳ ಅಂತರ ಬದಲಾಗುವ ಸಾಧ್ಯತೆಯಿದ್ದು, ನಮೋಶಿ–ಮಟ್ಟೂರ ನಡುವಿನ ಪೈಪೋಟಿ ಮುಂದುವರಿದಿದೆ.