ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಅತಿ ಹೆಚ್ಚು ಟಿ20 ವಿಕೆಟ್‌ ದಾಖಲೆ ಸರಿಗಟ್ಟಿದ ಅರ್ಷ್‌ದೀಪ್ ಸಿಂಗ್

Arshdeep Singh: ಮಂಗಳವಾರ ಅರ್ಶ್‌ದೀಪ್ ಪಡೆದ ಒಂದು ವಿಕೆಟ್‌ನೊಂದಿಗೆ, ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಅವರ ಒಟ್ಟು ವಿಕೆಟ್‌ಗಳ ಸಂಖ್ಯೆ 149ಕ್ಕೇರಿದೆ. ಕ್ರಿಕೆಟ್‌ನ ಈ ಅತಿ ಚಿಕ್ಕ ಮಾದರಿಯಲ್ಲಿ 150 ವಿಕೆಟ್‌ಗಳನ್ನು ಪಡೆದ ಮೊದಲ ಭಾರತೀಯ ಆಟಗಾರನಾಗಲು ಅವರಿಗೆ ಇನ್ನು ಕೇವಲ ಒಂದು ವಿಕೆಟ್‌ನ ಅಗತ್ಯವಿದೆ.

ಅತಿ ಹೆಚ್ಚು ಟಿ20 ವಿಕೆಟ್‌ ದಾಖಲೆ ಸರಿಗಟ್ಟಿದ ಅರ್ಷ್‌ದೀಪ್ ಸಿಂಗ್

arshdeep singh -

Abhilash BC
Abhilash BC Oct 27, 2026 3:47 PM

ವೆಲ್ಲಿಂಗ್ಟನ್‌, ಅ.27: ಎಡಗೈ ವೇಗಿ ಅರ್ಶ್‌ದೀಪ್ ಸಿಂಗ್ ಟಿ20 ಅಂತರರಾಷ್ಟ್ರೀಯ (T20I) ಪಂದ್ಯಗಳಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಅವರು ಈ ಸಾಧನೆಗೈದರು.

ಪಂದ್ಯದಲ್ಲಿ ಒಂದು ವಿಕೆಟ್‌ ಪಡೆಯುವ ಮೂಲಕ ಅವರು, ಕ್ಯಾಲೆಂಡರ್ ವರ್ಷದಲ್ಲಿ ಪೂರ್ಣ ಸದಸ್ಯ ತಂಡದ ಆಟಗಾರನೊಬ್ಬ ಪಡೆದ ಗರಿಷ್ಠ ಟಿ20 ವಿಕೆಟ್‌ಗಳ ದಾಖಲೆಯನ್ನು ಸರಿಗಟ್ಟಿದರು. 102ನೇ ಟಿ20 ಅಂತಾರಾಷ್ಟ್ರೀಯ (T20I) ಪಂದ್ಯವನ್ನು ಆಡಿದ ಅರ್ಶ್‌ದೀಪ್, 2026ರಲ್ಲಿ ಆಡಿದ 30 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಒಟ್ಟು 39 ವಿಕೆಟ್‌ಗಳನ್ನು ಪಡೆದಿದ್ದಾರೆ.

T20I ಕ್ರಿಕೆಟ್‌ನಲ್ಲಿ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ಆಟಗಾರರ ಪಟ್ಟಿಯಲ್ಲಿ, ಅರ್ಶ್‌ದೀಪ್ ಮತ್ತು ಲಿಟಲ್ ಅವರ ನಂತರ ಶ್ರೀಲಂಕಾದ ವನಿಂದು ಹಸರಂಗ ಹಾಗೂ ಭಾರತದ ಭುವನೇಶ್ವರ್ ಕುಮಾರ್ ಇದ್ದಾರೆ. ಹಸರಂಗ 2024ರಲ್ಲಿ 38 ಬ್ಯಾಟರ್‌ಗಳನ್ನು ಔಟ್ ಮಾಡಿದ್ದರೆ, ಭುವನೇಶ್ವರ್ 2022ರಲ್ಲಿ 37 ವಿಕೆಟ್‌ಗಳನ್ನು ಪಡೆದಿದ್ದರು.

ಟಿ20 ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ವಿಕೆಟ್‌ಗಳು

ಅರ್ಶ್‌ದೀಪ್ ಸಿಂಗ್- 39* ವಿಕೆಟ್‌

ಜೋಶ್ ಲಿಟಲ್- 39 ವಿಕೆಟ್‌

ವನಿಂದು ಹಸರಂಗ- 38 ವಿಕೆಟ್‌

ಭುವನೇಶ್ವರ್ ಕುಮಾರ್- 37 ವಿಕೆಟ್‌

ತಬ್ರೈಜ್ ಶಮ್ಸಿ- 36 ವಿಕೆಟ್‌

ಸಿಎಸ್‌ಕೆ ನೂತನ ಕೋಚಿಂಗ್‌ ಬಳಗ ಸೇರಿದ ಆಲ್ಬಿ ಮಾರ್ಕೆಲ್, ಮೋಹಿತ್ ಶರ್ಮಾ

ಮಂಗಳವಾರ ಅರ್ಶ್‌ದೀಪ್ ಪಡೆದ ಒಂದು ವಿಕೆಟ್‌ನೊಂದಿಗೆ, ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಅವರ ಒಟ್ಟು ವಿಕೆಟ್‌ಗಳ ಸಂಖ್ಯೆ 149ಕ್ಕೇರಿದೆ. ಕ್ರಿಕೆಟ್‌ನ ಈ ಅತಿ ಚಿಕ್ಕ ಮಾದರಿಯಲ್ಲಿ 150 ವಿಕೆಟ್‌ಗಳನ್ನು ಪಡೆದ ಮೊದಲ ಭಾರತೀಯ ಆಟಗಾರನಾಗಲು ಅವರಿಗೆ ಇನ್ನು ಕೇವಲ ಒಂದು ವಿಕೆಟ್‌ನ ಅಗತ್ಯವಿದೆ.

ಸರಣಿ ಗೆದ್ದ ಭಾರತ

ಮೂರನೇ ಟಿ20 ಪಂದ್ಯದಲ್ಲಿ 6 ವಿಕೆಟ್‌ ಅಂತರದ ಗೆಲುವು ಸಾಧಿಸುವ ಮೂಲಕ ಇನ್ನೂ ಎರಡು ಪಂದ್ಯಗಳು ಬಾಕಿ ಇರುವಂತೆಯೇ ಸರಣಿ ಕೈವಶ ಮಾಡಿಕೊಂಡಿತು. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ನ್ಯೂಜಿಲೆಂಡ್‌ 3 ವಿಕೆಟ್‌ಗೆ 198 ರನ್‌ ಬಾರಿಸಿತು. ಗುರಿ ಬೆನ್ನಟ್ಟಿದ ಭಾರತ ಅಭಿಷೇಕ್‌ ಶರ್ಮ ಮತ್ತು ವೈಭವ್‌ ಸೂರ್ಯವಂಶಿ ಬ್ಯಾಟಿಂಗ್‌ ಆರ್ಭಟದಿಂದ 13.2 ಓವರ್‌ಗಳಲ್ಲಿ 199 ರನ್‌ ಬಾರಿಸಿ ಗೆಲುವು ಸಾಧಿಸಿತು.

ಸೂರ್ಯವಂಶಿ ಜತೆ ಜಿದ್ದಿಗೆ ಬಿದ್ದವರಂತೆ ಬ್ಯಾಟ್‌ ಬೀಸಿದ ಅಭಿಷೇಕ್‌ ಶರ್ಮ, ಸಿಕ್ಸರ್‌ಗಳ ಮಳೆಯೇ ಸುರಿಸಿ 38 ಎಸೆತಗಳಿಂದ 133 ರನ್‌ ಬಾರಿಸಿದರು. ಈ ಇನಿಂಗ್ಸ್‌ನಲ್ಲಿ 11 ಸಿಕ್ಸರ್‌ ಮತ್ತು 9 ಬೌಂಡರಿ ಸಿಡಿಯಿತು. ಸೂರ್ಯವಂಶಿ 19 ಎಸೆತದಲ್ಲಿ ತಲಾ 4 ಬೌಂಡರಿ ಮತ್ತು ಸಿಕ್ಸರ್‌ ನೆರವಿನಿಂದ 45 ರನ್‌ ಗಳಿಸಿದರು.