ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

‘ಬಿಗ್ ಬಾಸ್‌’ ಮನೆಯಿಂದ ಹೊರಬಂದ ಲಕ್ಷ್ಮೀ ಗೌಡಗೆ ಬೆದರಿಕೆ; ಆಸಿಯಾ ಫಿರ್ದೋಸ್‌ ಫ್ಯಾನ್ಸ್ ವಿರುದ್ಧ ಗಂಭೀರ ಆರೋಪ!

Bigg Boss 13 Lakshmi Gowda: ʻಬಿಗ್‌ ಬಾಸ್‌ʼ ಮನೆಯಿಂದ ಎಲಿಮಿನೇಟ್ ಆಗಿ ಹೊರಬಂದ ಬೆನ್ನಲ್ಲೇ ಆಸಿಯಾ ಫಿರ್ದೋಸ್ ಅಭಿಮಾನಿಗಳಿಂದ ತಮಗೆ ಬೆದರಿಕೆ ಸಂದೇಶಗಳು ಬರುತ್ತಿವೆ ಎಂದು ಲಕ್ಷ್ಮೀ ಗೌಡ ಗಂಭೀರ ಆರೋಪ ಮಾಡಿದ್ದಾರೆ. ಆಸಿಯಾ ವರ್ತನೆ ಹಾಗೂ ಲೂಟಿ ಟಾಸ್ಕ್ ಘಟನೆಯನ್ನು ಟೀಕಿಸಿದ್ದಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

BBK 13: ಲಕ್ಷ್ಮೀ ಗೌಡಗೆ ಬೆದರಿಕೆ ಹಾಕಿದ್ರಾ ಆಸಿಯಾ ಫಿರ್ದೋಸ್‌ ಫ್ಯಾನ್ಸ್?

-

Avinash GR
Avinash GR Oct 27, 2026 4:05 PM

'ಬಿಗ್ ಬಾಸ್' ಮನೆಯಿಂದ ಇತ್ತೀಚೆಗಷ್ಟೇ ಎಲಿಮಿನೇಟ್ ಆಗಿ ಹೊರಬಂದಿರುವ ಸ್ಪರ್ಧಿ ಲಕ್ಷ್ಮೀ ಗೌಡ ಅವರು ಸಂದರ್ಶನದಲ್ಲಿ ಕೆಲವೊಂದು ಆತಂಕಕಾರಿ ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ. ಆಸಿಯಾ ಫಿರ್ದೋಸ್ ಅವರ ಅಭಿಮಾನಿಗಳಿಂದ ತಮಗೆ ಬೆದರಿಕೆ ಸಂದೇಶಗಳು ಬರುತ್ತಿವೆ ಎಂದು ಲಕ್ಷ್ಮೀ ಆರೋಪಿಸಿದ್ದಾರೆ. ದೊಡ್ಮನೆಯಿಂದ ಆಚೆ ಬಂದ ಬಳಿಕ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಈ ಆಘಾತಕಾರಿ ಸಂಗತಿಯನ್ನು ಬಹಿರಂಗಪಡಿಸಿರುವ ಲಕ್ಷ್ಮೀ ಗೌಡ, ಮನೆಯೊಳಗಿನ ಇತರ ಸ್ಪರ್ಧಿಗಳ ನೈಜ ಮುಖವಾಡವನ್ನೂ ಯಾವುದೇ ಮುಲಾಜಿಲ್ಲದೆ ಕಳಚಿದ್ದಾರೆ.

ಆಸಿಯಾಗೆ ಇನ್ನೊಬ್ಬರ ಬಗ್ಗೆ ಮೆಚ್ಚುಗೆ ಇಲ್ಲ

ಸಂದರ್ಶನವೊಂದರಲ್ಲಿ ಮಾತನಾಡಿದ ಲಕ್ಷ್ಮೀ ಅವರು, ಮನೆಯೊಳಗಿನ 'ಲೂಟಿ ಟಾಸ್ಕ್' ಸಂದರ್ಭದಲ್ಲಿ ನಡೆದ ವಿದ್ಯಮಾನಗಳನ್ನು ಉಲ್ಲೇಖಿಸಿ ಆಸಿಯಾ ಅವರ ವರ್ತನೆಯನ್ನು ತೀವ್ರವಾಗಿ ಟೀಕಿಸಿದ್ದಾರೆ. "ಆಸಿಯಾ ಅವರಿಗೆ ತಮ್ಮಿಂದಾದ ಒಂದು ಒಳ್ಳೆಯ ಕೆಲಸವನ್ನು ಪದೇಪದೇ ಹೇಳಿಕೊಳ್ಳುವ ಅಭ್ಯಾಸವಿದೆ, ಆದರೆ ತಮ್ಮ ತಪ್ಪುಗಳನ್ನು ಮುಚ್ಚಿಡುತ್ತಾರೆ. ಆ ಟಾಸ್ಕ್‌ನಲ್ಲಿ ಡೈಮಂಡ್ ಕದ್ದಿದ್ದು ನಾನು. ಆದರೆ ಆ ಬಗ್ಗೆ ಮಾತನಾಡುವಾಗ ಮಧ್ಯೆ ಬರುವ ಆಸಿಯಾ, 'ನೀನು ಏನೂ ಮಾಡಿಲ್ಲವೇ' ಎಂದು ಹೀಯಾಳಿಸಿ, ಪ್ರತಿಯೊಂದೂ ತಮ್ಮಿಂದಲೇ ಆಯ್ತು ಎಂಬಂತೆ ಬಿಂಬಿಸುತ್ತಾರೆ. ಅವರಿಗೆ ಇನ್ನೊಬ್ಬರ ಶ್ರಮವನ್ನು ಮೆಚ್ಚುವ ಅಥವಾ ಹೊಗಳುವ ಗುಣವೇ ಇಲ್ಲ. ಈ ವಿಚಾರವನ್ನು ಸ್ವತಃ ಗಗನ್ ಕೂಡ ನನ್ನ ಬಳಿ ಒಪ್ಪಿಕೊಂಡಿದ್ದರು" ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅವಾಚ್ಯ ಶಬ್ದಗಳಿಂದ ನಿಂದಿಸಿ ಮೆಸೇಜ್

ಇನ್ನು, ಮನೆಯೊಳಗಿನ ಈ ವಾಸ್ತವವನ್ನು ಮಾತನಾಡಿದ್ದಕ್ಕೆ ಆಸಿಯಾ ಅಭಿಮಾನಿಗಳಿಂದ ತಮಗೆ ಕಿರುಕುಳ ಆರಂಭವಾಗಿದೆ ಎಂದಿರುವ ಲಕ್ಷ್ಮೀ, "ನಾನು ಮನೆಯೊಳಗೆ ಮಾತನಾಡಿರುವುದನ್ನು ಸಹಿಸದ ಆಸಿಯಾ ಅವರ ಫ್ಯಾನ್ಸ್ ಮತ್ತು ಅವರ ಹೆಸರಿನ ಫ್ಯಾನ್ಸ್‌ ಪೇಜ್‌ಗಳಿಂದ ನನಗೆ ನಿರಂತರವಾಗಿ ಬೆದರಿಕೆ ರೂಪದ ಸಂದೇಶಗಳು ಬರುತ್ತಿವೆ. 'ಬಿಗ್ ಬಾಸ್‌ನಿಂದ ಹೊರಗೆ ಬಂದಮೇಲೆ ಆಸಿಯಾ ಬಗ್ಗೆ ಏನೂ ಮಾತನಾಡಬೇಡ, ಮಾತನಾಡಿದರೆ ಅತ್ಯಂತ ಕೆಟ್ಟದಾಗಿ ಟ್ರೋಲ್ ಮಾಡುತ್ತೇವೆ' ಎಂದು ಎಚ್ಚರಿಕೆ ನೀಡುತ್ತಿದ್ದಾರೆ. ಅಲ್ಲದೆ 'ನೀನು ಆಸಿಯಾ ಬಗ್ಗೆ ಮಾತನಾಡುತ್ತೀಯಾ' ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಮೆಸೇಜ್ ಕಳುಹಿಸುತ್ತಿದ್ದಾರೆ" ಎಂದು ಗಂಭೀರ ಆರೋಪ ಮಾಡಿದ್ದಾರೆ.

ಅಭಿಮಾನಿಗಳಿಂದಲೇ ಆಸಿಯಾಗೂ ಕೆಟ್ಟ ಹೆಸರು!

ಈ ಬೆದರಿಕೆಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಗುಡುಗಿರುವ ಅವರು, "ಅಭಿಮಾನಿಗಳು ಎಂದಮೇಲೆ ಒಳ್ಳೆಯದು ಮತ್ತು ಕೆಟ್ಟದ್ದು ಎರಡನ್ನೂ ಸ್ವೀಕರಿಸುವ ಮನಸ್ಥಿತಿ ಇರಬೇಕು. ಈ ರೀತಿ ಅತಿರೇಕದ ವರ್ತನೆ ತೋರುವುದರಿಂದ ಅವರ ಅಭಿಮಾನಿಗಳಿಂದಲೇ ಆಸಿಯಾಗೂ ಕೆಟ್ಟ ಹೆಸರು ಬರುತ್ತದೆ. ನನಗೆ ಯಾರ ಭಯವೂ ಇಲ್ಲ, ಅವರು ಟ್ರೋಲ್ ಆದರೂ ಮಾಡಿಕೊಳ್ಳಲಿ ಅಥವಾ ಇನ್ನೇನಾದರೂ ಮಾಡಿಕೊಳ್ಳಲಿ, ನಾನು ಸತ್ಯ ಹೇಳುವುದನ್ನು ನಿಲ್ಲಿಸುವುದಿಲ್ಲ" ಎಂದು ಖಡಕ್ ತಿರುಗೇಟು ನೀಡಿದ್ದಾರೆ.

ಕುಮಾರಿ ಪಕ್ಕಾ ಸಿಂಪಥಿ ಕಾರ್ಡ್ ಬಿಗ್ಬಾಸ್ ಗೆ ಲಾಯಕ್ಕಿಲ್ಲ



ಸ್ಪರ್ಧಿಗಳ ಬಗ್ಗೆ ಲಕ್ಷ್ಮೀ ಹೇಳಿದ್ದೇನು?

ಇದೇ ವೇಳೆ, ದೊಡ್ಮನೆಯಲ್ಲಿದ್ದ ಇತರ ಸ್ಪರ್ಧಿಗಳ ಬಗ್ಗೆಯೂ ನೇರ ಮಾತುಗಳನ್ನಾಡಿದ ಲಕ್ಷ್ಮೀ ಗೌಡ, ತಾಂಡವ್ ಅವರನ್ನು ಅತ್ಯಂತ ಪ್ರಾಮಾಣಿಕ ಹಾಗೂ ನಂಬಿಕಸ್ಥ ಸ್ಪರ್ಧಿ ಎಂದು ಶ್ಲಾಘಿಸಿದ್ದಾರೆ. ಆದರೆ ಜಗದೀಶ್ ಅವರು ಬಲವಂತಕ್ಕೆ ಆಟಕ್ಕೆ ಬಂದಂತಿದ್ದು, ಯಾವಾಗ ಹೊರಹೋಗುತ್ತೇನೋ ಎಂದು ಕಾಯುತ್ತಿದ್ದಾರೆ ಎಂದಿದ್ದಾರೆ. ಇನ್ನು ಸೌಂದರ್ಯ ಮುದ್ದಾದ ಹುಡುಗಿಯಾಗಿದ್ದರೆ, ಸೋನಿಕಾ ಯಾವುದೇ ಅಹಂ ಇಲ್ಲದ, ಡೌನ್ ಟು ಅರ್ಥ್ ವ್ಯಕ್ತಿ ಎಂದಿದ್ದಾರೆ. ಗಗನ್ ತುಂಬಾ ಲೆಕ್ಕಾಚಾರದ ಮನುಷ್ಯನಾದರೆ, ಯಶಸ್ ಅತ್ಯಂತ ಸ್ಮಾರ್ಟ್ ಆಗಿದ್ದಾರೆ. ಇದೇ ವೇಳೆ ಕಿರಣ್ ಕನ್ನಿಂಗ್, ಧನುಷ್‌ಗೆ ಟಾಸ್ಕ್ ಬಿಟ್ಟರೆ ಬೇರೇನೂ ಗೊತ್ತಿಲ್ಲ, ಕುಮಾರಿ ವೇಸ್ಟ್ ಪೀಸ್, ಗಾನವಿ ಡರ್ಟಿ ಗೇಮ್‌ ಆಡುತ್ತಿದ್ದಾರೆ ಹಾಗೂ ಕಾವ್ಯಾ ಅವರ ನಡವಳಿಕೆ ತಮಗೆ ಇನ್ನೂ ಅರ್ಥವಾಗಿಲ್ಲ ಎಂದು ಮನೆಯ ಇತರ ಸ್ಪರ್ಧಿಗಳ ಬಣ್ಣ ಬಯಲು ಮಾಡಿದ್ದಾರೆ.