ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಡ್ರೋನ್‌, ಹೆಲಿಕಾಪ್ಟರ್‌ ಬಳಸಿ ಮೂವರು ಭಯೋತ್ಪಾದಕರಿಗಾಗಿ ರಾಜೌರಿಯಲ್ಲಿ ತೀವ್ರ ಶೋಧ

ಜಮ್ಮು ಮತ್ತು ಕಾಶ್ಮೀರದ ದಟ್ಟವಾದ ಕಾಡಿನಲ್ಲಿ ಸುಮಾರು 56 ಗಂಟೆಗಳ ಕಾಲ ಡ್ರೋನ್‌ ಮತ್ತು ಹೆಲಿಕಾಪ್ಟರ್‌ ಗಳನ್ನು ಬಳಸಿ ಮೂವರು ಭಯೋತ್ಪಾದಕರಿಗಾಗಿ ತೀವ್ರ ಶೋಧ ಕಾರ್ಯಾಚರಣೆಯನ್ನು ನಡೆಸಲಾಯಿತು. ರೋಮಿಯೋ ಪಡೆಯ ಪಡೆಗಳು, ಸಿಆರ್‌ಪಿಎಫ್, ವಿಶೇಷ ಕಾರ್ಯಾಚರಣೆ ತಂಡವು ಜಮ್ಮು ಮತ್ತು ಕಾಶ್ಮೀರ ಪೊಲೀಸರೊಂದಿಗೆ ಸೇರಿ ಈ ಕಾರ್ಯಾಚರಣೆಯನ್ನು ನಡೆಸಿದ್ದು, ಭಯೋತ್ಪಾದಕರು ಮಾತ್ರ ತಪ್ಪಿಸಿಕೊಂಡು ಕುಳಿತಿದ್ದಾರೆ ಎನ್ನಲಾಗಿದೆ.

ಮೂವರು ಭಯೋತ್ಪಾದಕರಿಗಾಗಿ ತೀವ್ರ ಶೋಧ

ಸಂಗ್ರಹ ಚಿತ್ರ -

ಕಾಶ್ಮೀರ: ಮೂವರು ಭಯೋತ್ಪಾದಕರಿಗಾಗಿ (terrorist) ಜಮ್ಮು ಮತ್ತು ಕಾಶ್ಮೀರದ (jammu and kashmir) ದಟ್ಟವಾದ ಕಾಡಿನಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸರೊಂದಿಗೆ ರೋಮಿಯೋ ಪಡೆಯ ಪಡೆಗಳು, ಸಿಆರ್‌ಪಿಎಫ್, ವಿಶೇಷ ಕಾರ್ಯಾಚರಣೆ ತಂಡ ಸೇರಿ ತೀವ್ರ ಶೋಧ ಕಾರ್ಯಾಚರಣೆಯನ್ನು (Operation Sherawali ) ನಡೆಸಿದೆ. ಸುಮಾರು 56 ಗಂಟೆಗಳ ಕಾಲ ನಡೆದ ಕಾರ್ಯಾಚರಣೆಗೆ ಡ್ರೋನ್‌ ಮತ್ತು ಹೆಲಿಕಾಪ್ಟರ್‌ಗಳನ್ನು ಬಳಸಲಾಗಿದೆ. ಮೇ 24ರಂದು ಬೆಳಗ್ಗೆ 11.30ರಿಂದ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದ್ದು, ಭಯೋತ್ಪಾದಕರು ಮಾತ್ರ ತಪ್ಪಿಸಿಕೊಂಡಿದ್ದಾರೆ ಎನ್ನಲಾಗಿದೆ.

ಜಮ್ಮು ಮತ್ತು ಕಾಶ್ಮೀರದ ರಾಜೌರಿಯಲ್ಲಿ ಮೂವರು ಪಾಕ್ ಭಯೋತ್ಪಾದಕರು ಅವಿತು ಕುಳಿತಿದ್ದಾರೆ ಎನ್ನುವ ಖಚಿತ ಮಾಹಿತಿ ಮೇರೆಗೆ ಮೇ 24ರಂದು ಬೆಳಗ್ಗೆ 11.30ರ ಸುಮಾರಿಗೆ ಡೋರಿಮಲ್-ಗಂಭೀರ್ ಮುಘ್ಲಾನ್ ಬೆಲ್ಟ್‌ನಲ್ಲಿ ಜಂಟಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು.

ಅಧಿಕಾರಕ್ಕೆ ಬರುತ್ತಿದ್ದಂತೆ ಕರ್ನಾಟಕ ವಿರುದ್ಧ ಸಮರ ಸಾರಿದ ದಳಪತಿ ವಿಜಯ್‌; ಮೇಕೆದಾಟು ಯೋಜನೆ ಸ್ಥಗಿತಗೊಳಿಸುವಂತೆ ಪ್ರಧಾನಿ ಮೋದಿಗೆ ಪತ್ರ

ದೇಶದ ಗಡಿ ಭಾಗದಲ್ಲಿರುವ ರಾಜೌರಿಯ ದಟ್ಟವಾದ ಗಂಭೀರ್ ಮುಘ್ಲಾನ್ ಕಾಡುಗಳಲ್ಲಿ ಸುಮಾರು 56 ಗಂಟೆಗಳಿಂದ ರ್ ಕಾರ್ಯಾಚರಣೆ ನಡೆಯುತ್ತಿದೆ. ದಟ್ಟವಾದ ಎಲೆಗಳಿಂದ ಆವೃತವಾದ ಒರಟಾದ ಭೂಪ್ರದೇಶದಲ್ಲಿ ಭಯೋತ್ಪಾದಕರು ಅವಿತು ಕುಳಿತಿದ್ದಾರೆ ಎಂದು ನಂಬಿರುವ ಭದ್ರತಾ ಪಡೆಗಳು ಕಾರ್ಯಾಚರಣೆಯನ್ನು ಮುಂದುವರಿಸಿದೆ.

ಭಾರತೀಯ ಸೇನೆಯ ರೋಮಿಯೋ ಪಡೆಯ ಪಡೆಗಳು, ಸಿಆರ್‌ಪಿಎಫ್, ವಿಶೇಷ ಕಾರ್ಯಾಚರಣೆ ತಂಡದೊಂದಿಗೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಪ್ರದೇಶವನ್ನು ಸುತ್ತುವರಿದು, ಭಯೋತ್ಪಾದಕರು ತಪ್ಪಿಸಿಕೊಳ್ಳದಂತೆ ಡ್ರೋನ್‌ಗಳು ಮತ್ತು ಸುಧಾರಿತ ಕಣ್ಗಾವಲು ಉಪಕರಣಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಭಯೋತ್ಪಾದಕರ ತಂಡವನ್ನು ಪತ್ತೆ ಹಚ್ಚಲು ಭದ್ರತಾ ಪಡೆಗಳು ಹೆಲಿಕಾಪ್ಟರ್‌ಗಳನ್ನು ಕೂಡ ಬಳಸಿಕೊಂಡು ವೈಮಾನಿಕವಾಗಿ ದೃಷ್ಟಿಯನ್ನು ಇರಿಸಿದೆ.

ಈ ಕುರಿತು ಮಾಹಿತಿ ನೀಡಿರುವ ವೈಟ್ ನೈಟ್ ಕಾರ್ಪ್ಸ್, ಭಾರತೀಯ ಸೇನಾ ಪಡೆಗಳು ಮಾಹಿತಿ ತಿಳಿದ ತಕ್ಷಣವೇ ಕಾರ್ಯಪ್ರವೃತ್ತವಾಗಿದೆ. ಪ್ರದೇಶವನ್ನು ಸುತ್ತುವರಿದು ಭಯೋತ್ಪಾದಕ ಗುಂಪಿನೊಂದಿಗೆ ಗುಂಡಿನ ಕಾಳಗವನ್ನು ಕೂಡ ನಡೆಸಿದೆ. ಈ ಕಾರ್ಯಾಚರಣೆಗೆ ಆಪರೇಷನ್ ಶೇರುವಾಲಿ ಎಂದು ಹೆಸರಿಸಲಾಗಿದ್ದು, ಇದನ್ನು ಮುಂದುವರಿಸಲಾಗುವುದು ಎಂದು ಹೇಳಿದೆ.

ಅರಣ್ಯದೊಳಗೆ ಎರಡು ಸ್ಥಳಗಳಲ್ಲಿ ಭದ್ರತಾ ಸಿಬ್ಬಂದಿ ಗುಂಡು ಹಾರಿಸಿದ್ದಾರೆ. ಆದರೆ ಭಯೋತ್ಪಾದಕರ ಕಡೆಯಿಂದ ಯಾವುದೇ ದಾಳಿ ನಡೆದಿಲ್ಲ. ಶೋಧ ಕಾರ್ಯಾಚರಣೆಯನ್ನು ರಾತ್ರಿ ಪೂರ್ತಿ ಮುಂದುವರಿಸಲಾಗಿದೆ. ಮೂವರು ಶಂಕಿತ ಭಯೋತ್ಪಾದಕರು ಪಾಕಿಸ್ತಾನಿ ಪ್ರಜೆಗಳು ಎಂದು ಹೇಳಿದೆ.

ಆಸ್ಪತ್ರೆಯ ಶೌಚಾಲಯದ ಕಿಟಕಿಯಿಂದ ನವಜಾತ ಶಿಶುವನ್ನು ಎಸೆದ 19ರ ಯುವತಿ; ಹೆತ್ತಮ್ಮನ ಕ್ರೌರ್ಯ ಕಂಡು ಬೆಚ್ಚಿಬಿದ್ದ ದೇಶ

ಮೂವರು ಭಯೋತ್ಪಾದಕರನ್ನು ಮಣಿಸಲು ಭದ್ರತಾ ಪಡೆಗಳು ನಿಧಾನವಾಗಿ ಕಾಡಿನೊಳಗೆ ತೆರಳುತ್ತಿವೆ. ಈ ಹಿಂದೆ ಕೂಡ ಇದೇ ತಂಡ ಇಲ್ಲಿ ಕಾಣಿಸಿಕೊಂಡಿತ್ತು. ಆದರೆ ಭದ್ರತಾ ಪಡೆಗಳಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.