ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ತಪ್ಪಿದ ಭಾರಿ ದುರಂತ; ಬಿಹಾರದಲ್ಲಿ ಹಳಿ ತಪ್ಪಿದ ಸಿಕ್ಕಿಂ ಮಹಾನಂದ ಎಕ್ಸ್‌ಪ್ರೆಸ್‌ ರೈಲು

Indian railway: ಬಿಹಾರದಲ್ಲಿ ಸಿಕ್ಕಿಂ ಮಹಾನಂದ ಎಕ್ಸ್‌ಪ್ರೆಸ್‌ ರೈಲು ಹಳಿ ತಪ್ಪಿರುವ ಘಟನೆ ಭಾನುವಾರ ಬೆಳಗ್ಗೆ ನಡೆದಿದೆ. ದೆಹಲಿ- ಬೌಂಡ್ ಮಹಾನಂದ ಎಕ್ಸ್‌ಪ್ರೆಸ್‌ನ ಎಂಜಿನ್ ಮೂರು ಬೋಗಿಗಳು ಹಳಿ ತಪ್ಪಿದ್ದು, ಕೆಲಕಾಲ ಆತಂಕ ಮೂಡಿಸಿತ್ತು. ಮಾಹಿತಿ ತಿಳಿದ ತಕ್ಷವೇ ಸ್ಥಳಕ್ಕೆ ಧಾವಿಸಿದ ರೈಲ್ವೆ ಅಧಿಕಾರಿಗಳು ಮತ್ತು ಸಿಬ್ಬಂದಿ ರಕ್ಷಣೆ, ದುರಸ್ತಿ ಕಾಯಾಚರಣೆ ನಡೆಸಿ ಸಮಸ್ಯೆಯನ್ನು ನಿವಾರಿಸಿದರು.

ಹಳಿ ತಪ್ಪಿದ ರೈಲು ಬೋಗಿ; ತಪ್ಪಿದ ಭಾರಿ ದುರಂತ

ಸಂಗ್ರಹ ಚಿತ್ರ -

ಬಿಹಾರ: ಸಿಕ್ಕಿಂ ಮಹಾನಂದ ಎಕ್ಸ್‌ಪ್ರೆಸ್‌ನ (Sikkim Mahananda Express) ಮೂರು ಬೋಗಿಗಳು ಹಳಿ ತಪ್ಪಿರುವ ಘಟನೆ ಬಿಹಾರದಲ್ಲಿ (Bihar) ಭಾನುವಾರ ಬೆಳಗ್ಗೆ ನಡೆದಿದೆ. ಅರ್ರಾ ರೈಲು ನಿಲ್ದಾಣದ (Arrah Railway Station) ಬಳಿ ದೆಹಲಿ- ಬೌಂಡ್ ಮಹಾನಂದ ಎಕ್ಸ್‌ಪ್ರೆಸ್‌ (Delhi-Bound Mahananda Express) ರೈಲಿನ ಮೂರು ಬೋಗಿಗಳು ಹಳಿ ತಪ್ಪಿದೆ. ಇದರಿಂದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಮಾಹಿತಿ ತಿಳಿದ ತಕ್ಷಣವೇ ರೈಲ್ವೆ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ದುರಸ್ತಿ ಕಾಯಾಚರಣೆ ನಡೆಸಿ ಸಮಸ್ಯೆಯನ್ನು ನಿವಾರಿಸಿದರು. ಘಟನೆಯಿಂದ ಯಾವುದೇ ಹೆಚ್ಚಿನ ಅನಾಹುತವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

15483 ಅಲಿಪುರ್ದೂರ್ ಜಂಕ್ಷನ್- ದೆಹಲಿ ಸಿಕ್ಕಿಂ ಮಹಾನಂದ ಎಕ್ಸ್‌ಪ್ರೆಸ್ ಎರಡನೇ ಪ್ಲಾಟ್‌ಫಾರ್ಮ್‌ನಿಂದ ಸುಮಾರು 200 ಮೀಟರ್ ದೂರದಲ್ಲಿ ಅಪ್ ಲೈನ್‌ನಲ್ಲಿ ಹಳಿತಪ್ಪಿದೆ. ರೈಲಿನ ಎಂಜಿನ್, ಎಸ್‌ಎಲ್‌ಆರ್ ಮತ್ತು ಎಚ್-1 ಬೋಗಿಗಳು ಹಳಿ ತಪ್ಪಿದ್ದು, ಈ ಘಟನೆ ಕೆಲಕಾಲ ಆತಂಕಕ್ಕೆ ಕಾರಣವಾಗಿತ್ತು. ರೈಲ್ವೆ ಅಧಿಕಾರಿಗಳು ಮತ್ತು ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ರೈಲು ಬೋಗಿಗಳನ್ನು ಪುನಃಸ್ಥಾಪನೆ ಮಾಡಲಾಗಿದೆ.

ದೆಹಲಿಯಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ಕುಸಿತ; ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ

ಈ ಘಟನೆ ಬೆಳಗ್ಗೆ 4.12ಕ್ಕೆ ಈ ಘಟನೆ ನಡೆದಿದ್ದು, ರೈಲು ಕಾರ್ಯಾಚರಣೆಯ ಸಮಯದಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿದ್ದರಿಂದ ಸಿಗ್ನಲ್ ಸಸಾರಂ ಮಾರ್ಗದ ಕಡೆಗೆ ಸ್ಥಳಾಂತರಗೊಂಡಿತು ಎಂದು ರೈಲು ಅಧಿಕಾರಿಗಳು ತಿಳಿಸಿದ್ದಾರೆ.



ತಾಂತ್ರಿಕ ದೋಷ: ಲಂಡನ್‌ಗೆ ತೆರಳುತ್ತಿದ್ದ ವರ್ಜಿನ್‌ ಅಟ್ಲಾಂಟಿಕ್‌ ವಿಮಾನ ತುಮಕೂರಿನಲ್ಲಿ ಸುತ್ತು ಹಾಕಿ ಬೆಂಗಳೂರಿನಲ್ಲಿ ತುರ್ತು ಭೂಸ್ಪರ್ಶ; 270 ಪ್ರಯಾಣಿಕರು ಕೂದಲೆಳೆ ಅಂತರದಲ್ಲಿ ಪಾರು

ಈ ಘಟನೆಯ ಕಾರಣದಿಂದ ರೈಲು ಸಂಚಾರದಲ್ಲಿ ಕೆಲಕಾಲ ವ್ಯತ್ಯಯವಾಗಿತ್ತು. ಘಟನೆಯ ಬಳಿಕ ರೈಲು ಚಲನೆಯನ್ನು ಪುನಃಸ್ಥಾಪಿಸುವ ಮೊದಲು ಹಳಿ ಮತ್ತು ಸಿಗ್ನಲ್ ವ್ಯವಸ್ಥೆಯ ಸ್ಥಿತಿಯನ್ನು ಪರಿಶೀಲಿಸಲಾಯಿತು. ರೈಲ್ವೆ ತಾಂತ್ರಿಕ ತಂಡವು ಸ್ಥಳಕ್ಕೆ ಆಗಮಿಸಿ ಹಳಿ, ಸಿಗ್ನಲಿಂಗ್ ವ್ಯವಸ್ಥೆಗಳು ಮತ್ತು ಇತರ ಸಂಬಂಧಿತ ರೈಲ್ವೆ ಮೂಲಸೌಕರ್ಯಗಳ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.