ಇಂದೋರ್‌ನ ಉದ್ಯಮಿ ಮನೆಯಿಂದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕದ್ದೊಯ್ದ ಪೊಲೀಸರು
ಉದ್ಯಮಿಯೊಬ್ಬರ ಮನೆಯಿಂದ ಪೊಲೀಸರೇ ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳನ್ನು ಕದ್ದೊಯ್ದ ಘಟನೆ ಇಂದೋರ್‌ನಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿ ನಾಲ್ವರ ಪೊಲೀಸ್ ಸಿಬ್ಬಂದಿಯನ್ನು ಅಮಾನತು ಗೊಳಿಸಲಾಗಿದೆ. ವಾರೆಂಟ್ ಸಂಬಂಧಿಸಿ ದಾಳಿ ನಡೆಸಿದಾಗ ಪೊಲೀಸರು ಸುಮಾರು 35 ಲಕ್ಷ ರೂ.ಗಳಿಗೂ ಹೆಚ್ಚು ಮೌಲ್ಯದ ಆಭರಣಗಳನ್ನು ಕದ್ದೊಯ್ದಿದ್ದಾರೆ ಎಂದು ಆರೋಪಿಸಲಾಗಿದೆ.
ಸಂಗ್ರಹ ಚಿತ್ರ -
ಇಂದೋರ್: ಪೊಲೀಸರೇ (Indore cops) ಉದ್ಯಮಿಯೊಬ್ಬರ (businessman) ಮನೆಯಿಂದ ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳನ್ನು ಕದ್ದೊಯ್ದ ಘಟನೆ ಇಂದೋರ್‌ನಲ್ಲಿ (Indore) ನಡೆದಿದೆ. ವಾರೆಂಟ್ ಸಂಬಂಧಿಸಿ ಉದ್ಯಮಿಯ ಮನೆಗೆ ದಾಳಿ ನಡೆಸಿದ ಪೊಲೀಸರು ಸುಮಾರು 35 ಲಕ್ಷ ರೂ.ಗಳಿಗೂ ಹೆಚ್ಚು ಮೌಲ್ಯದ ಆಭರಣಗಳನ್ನು ಕದ್ದೊಯ್ದಿದ್ದಾರೆ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಸಬ್-ಇನ್ಸ್‌ಪೆಕ್ಟರ್ ಸೇರಿದಂತೆ ಐವರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಹಿರಿಯ ಅಧಿಕಾರಿಗಳ ಆದೇಶದ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೆಚ್ಚುವರಿ ಡಿಸಿಪಿ ಅಮರೇಂದ್ರ ಸಿಂಗ್ ( DCP Amrendra Singh) ತಿಳಿಸಿದ್ದಾರೆ.
ಉದ್ಯಮಿಗೆ ವಾರಂಟ್ ಜಾರಿಗೊಳಿಸಲಾಗಿದ್ದು, ಇದರ ವಿಚಾರಣೆಗೆಂದು ಹೋಗಿದ್ದಾಗ ಪೊಲೀಸರು ಚಿನ್ನ ಕದ್ದಿದ್ದಾರೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ಇಂದೋರ್ ನ ಸಬ್ ಇನ್ಸ್‌ಪೆಕ್ಟರ್ ಸಂಜಯ್ ಬಿಷ್ಣೋಯ್, ಕಾನ್‌ಸ್ಟೆಬಲ್ ಗಳಾದ ಪ್ರವೀಣ್ ಭಡೋರಿಯಾ, ದಿನೇಶ್ ಜಾಟ್, ರವೀಂದ್ರ ಕುಶ್ವಾಹ ಹಾಗೂ ಒಬ್ಬ ಹೆಡ್ ಕಾನ್‌ಸ್ಟೆಬಲ್ ಅವರನ್ನು ಅಮಾನತುಗೊಳಿಸಲಾಗಿದೆ.
Physical Abuse: ಕೊಡಗಿನ ಹೋಮ್‌ಸ್ಟೇಯಲ್ಲಿ ವಿದೇಶಿ ಮಹಿಳೆ ಮೇಲೆ ಅತ್ಯಾಚಾರ, ಇಬ್ಬರ ಬಂಧನ
ಈ ಘಟನೆ ಉದ್ಯಮಿ ಗೌರವ್ ಜೈನ್ ಮನೆಯಲ್ಲಿ ನಡೆದಿದೆ. ವಾರಂಟ್ ಜಾರಿಯಾದ ಮೇಲೆ ಉದ್ಯಮಿ ಗೌರವ್ ಜೈನ್ ಮನೆಗೆ ಬಲವಂತವಾಗಿ ಪ್ರವೇಶಿಸಿದ ಪೊಲೀಸರು ಸಿಸಿಟಿವಿ ಕೆಮರಾಗಳನ್ನು ಆಫ್ ಮಾಡಿ, ಬೆಲೆಬಾಳುವ ವಸ್ತುಗಳನ್ನು ದೋಚಿದ್ದಾರೆ ಎನ್ನಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಹೆಚ್ಚುವರಿ ಡಿಸಿಪಿ ಅಮರೇಂದ್ರ ಸಿಂಗ್, ಹಿರಿಯ ಅಧಿಕಾರಿಗಳ ಆದೇಶದ ಮೇರೆಗೆ ಇಂದೋರ್ ನ ಸಬ್ ಇನ್ಸ್‌ಪೆಕ್ಟರ್ ಸಂಜಯ್ ಬಿಷ್ಣೋಯ್, ಕಾನ್‌ಸ್ಟೆಬಲ್ ಗಳಾದ ಪ್ರವೀಣ್ ಭಡೋರಿಯಾ, ದಿನೇಶ್ ಜಾಟ್, ರವೀಂದ್ರ ಕುಶ್ವಾಹ ಹಾಗೂ ಒಬ್ಬ ಹೆಡ್ ಕಾನ್‌ಸ್ಟೆಬಲ್ ಅವರನ್ನು ಅಮಾನತುಗೊಳಿಸಲಾಗಿದೆ. ಘಟನೆಯ ಕುರಿತು ಇನ್ನೂ ಆರೋಪ ದೃಡೀಕರಣವಾಗಿಲ್ಲ.ಇಲಾಖಾ ವಿಚಾರಣೆ ಹಿನ್ನೆಲೆಯಲ್ಲಿ ಅವರನ್ನು ಅಮಾನತುಗೊಳಿಸಲಾಗಿದೆ. ತಿಳಿಸಿದ್ದಾರೆ.
In Indore, Madhya Pradesh, policemen in plane clothes could be seen disconnecting a CCTV outside residence of a businessman Gaurav jain. They later allegedly broke inside the house and decamped with 22 tolas of gold. Five policemen have been suspended. pic.twitter.com/o2Lpp8zqyP
— Piyush Rai (@Benarasiyaa) April 21, 2026
ಉದ್ಯಮಿ ಗೌರವ್ ಜೈನ್ ಮನೆಯನ್ನು ಪೊಲೀಸರು ಶೋಧಿಸಿದ್ದಾರೆ. ಅಧಿಕಾರಿಗಳು ಕಳ್ಳರಂತೆ ಮನೆಗೆ ಪ್ರವೇಶಿಸಿ, ಸಿಸಿಟಿವಿ ಕೆಮರಾಗಳನ್ನು ನಿಷ್ಕ್ರಿಯಗೊಳಿಸಿದ್ದಾರೆ. ಮಾಸ್ಟರ್ ಕೀ ಬಳಸಿ ಬೀಗಗಳನ್ನು ತೆರೆದಿದ್ದಾರೆ. ವಾರಂಟ್ ಇಲ್ಲದೆ ಮನೆಗೆ ಪ್ರವೇಶಿಸಿರುವ ಪೊಲೀಸರು ತಮ್ಮ ವೈಯಕ್ತಿಕ ಆಸ್ತಿಗೆ ಹಾನಿ ಮಾಡಿದ್ದಾರೆ. ಕಾರ್ಯಾಚರಣೆಯ ಸಮಯದಲ್ಲಿ ಸುಮಾರು 36 ಲಕ್ಷ ರೂ. ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಗೌರವ್ ಜೈನ್ ದೂರಿನಲ್ಲಿ ತಿಳಿಸಿದ್ದಾರೆ.
ಆಸ್ತಿ ವಿವಾದಕ್ಕೆ ಸಂಬಂಧಿಸಿ ನನ್ನ ಮೇಲೆ ಒತ್ತಡ ಹೇರಲು ಈ ರೀತಿ ಮಾಡಲಾಗಿದೆ ಎಂದು ಗೌರವ್ ಜೈನ್ ದೂರಿನಲ್ಲಿ ತಿಳಿಸಿದ್ದಾರೆ. ಪೋಲೀಸರ ನಡವಳಿಕೆಯ ಬಗ್ಗೆ ಈ ಘಟನೆಯು ಹಲವಾರು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಮುಖ್ಯವಾಗಿ ವರ್ಗಾವಣೆ ಆದೇಶವಿದ್ದರೂ ಅದೇ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳ ಬಗ್ಗೆ ಅನೇಕರು ಪ್ರಶ್ನೆ ಮಾಡಿದ್ದಾರೆ.
ಸಬ್-ಇನ್ಸ್‌ಪೆಕ್ಟರ್ ಸಂಜಯ್ ಬಿಷ್ಣೋಯ್ ಅವರನ್ನು ತಿಲಕ್ ನಗರಕ್ಕೆ ವರ್ಗಾಯಿಸಲಾಗಿದೆ. ಇನ್ನೊಬ್ಬ ಅಧಿಕಾರಿಯನ್ನು ಪರದೇಸಿಪುರಕ್ಕೆ ನಿಯೋಜಿಸಲಾಗಿದೆ. ಆದರೂ ಅವರು ಹಿಂದಿನ ಠಾಣೆಯಲ್ಲೇ ಕಾರ್ಯನಿರ್ವಹಿಸಿದ್ದಾರೆ. ಇದು ವರ್ಗಾವಣೆ ಕ್ರಮದ ಉಲ್ಲಂಘನೆಯಾಗಿದೆ. ಇದಕ್ಕೆ ಸಂಬಂಧಿಸಿ ಅಮಾನತುಗೊಳಿಸಲಾಗಿದೆಯೇ ಎಂಬುದನ್ನು ಅಧಿಕಾರಿಗಳು ಅಧಿಕೃತವಾಗಿ ದೃಢಪಡಿಸಿಲ್ಲ. ಇಲಾಖೆ ತನಿಖೆ ನಡೆಸಲಾಗುತ್ತಿದೆ ಎಂದು ಹೆಚ್ಚುವರಿ ಡಿಸಿಪಿ ಅಮರೇಂದ್ರ ಸಿಂಗ್ ಹೇಳಿದ್ದಾರೆ.
ದೂರಿನ ನಂತರ ಎಸಿಪಿ ಮಟ್ಟದ ಅಧಿಕಾರಿಗಳು ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಡಿಸಿಪಿ ಕುಮಾರ್ ಪ್ರತೀಕ್ ಅವರ ಆದೇಶದ ಮೇರೆಗೆ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ ಎಂದು ಅವರು ತಿಳಿಸಿದರು.