ಪತ್ನಿ, ಸಹೋದರಿಯನ್ನು ಗುಂಡಿಕ್ಕಿ ಹತ್ಯೆಗೈದು ಆತ್ಮಹತ್ಯೆಗೆ ಶರಣಾದ ಎಸ್‌ಬಿಐ ಉದ್ಯೋಗಿ; ಕೊಲೆ ವಿಚಾರ ವಾಟ್ಸ್‌ಆ್ಯಪ್ ಸ್ಟೇಟಸ್‌ನಲ್ಲಿ ಹಾಕಿ ವಿಕೃತಿ
Crime News: ಪತ್ನಿ, ಸಹೋದರಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ ವ್ಯಕ್ತಿಯೊಬ್ಬ ಬಳಿಕ ತಾನೂ ಆತ್ಮಹತ್ಯೆಗೆ ಶರಣಾದ ಘಟನೆ ಉತ್ತರ ಪ್ರದೇಶದ ಲಖನೌದಲ್ಲಿ ನಡೆದಿದೆ. 38 ವರ್ಷದ ಮಾನಸ್ ವಾಜಪೇಯಿ ತನ್ನ ಪತ್ನಿ ದಿವ್ಯಾ ಅವರನ್ನು ಬ್ಯಾಂಕಿನ ಹೊರಗೆ ಕರೆದು ಕೆಲವು ನಿಮಿಷಗಳ ಕಾಲ ಮಾತನಾಡಿ, ಗುಂಡು ಹಾರಿಸಿ ಪರಾರಿಯಾಗಿದ್ದಾನೆ.
ಮಾನಸ್ ಮತ್ತು ದಿವ್ಯಾ (ಸಂಗ್ರಹ ಚಿತ್ರ) -
ಲಖನೌ, ಆ. 20: ಪತ್ನಿ, ಸಹೋದರಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ ವ್ಯಕ್ತಿಯೊಬ್ಬ ಬಳಿಕ ತಾನೂ ಆತ್ಮಹತ್ಯೆಗೆ ಶರಣಾದ ಘಟನೆ ಉತ್ತರ ಪ್ರದೇಶದ (Uttar Pradesh) ಲಖನೌದಲ್ಲಿ ನಡೆದಿದೆ. ವ್ಯಕ್ತಿಯು ತನ್ನ ಪತ್ನಿ ಕಾರ್ಯ ನಿರ್ವಹಿಸುತ್ತಿದ್ದ ಬ್ಯಾಂಕ್‌ಗೆ ತೆರಳಿ ಅವರನ್ನು ಹೊರಗೆ ಕರೆದು ಗುಂಡು ಹಾರಿಸಿದ್ದಾನೆ. ನಂತರ ಮನೆಗೆ ಹಿಂತಿರುಗಿ ತನ್ನ ಸಹೋದರಿಗೆ ಗುಂಡು ಹಾರಿಸಿ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ (Crime News). ಅಲ್ಲದೆ ಕೊಲೆಯ ವಿಚಾರವನ್ನು ವಾಟ್ಸ್‌ಆ್ಯಪ್ ಸ್ಟೇಟಸ್‌ನಲ್ಲಿ ಬರೆದುಕೊಂಡು ವಿಕೃತಿ ಮೆರೆದಿದ್ದಾನೆ.
ಗುರುವಾರ (ಆ. 20) ಮಧ್ಯಾಹ್ನ ಗೋಮತಿ ನಗರ ಪ್ರದೇಶದ ಐಸಿಐಸಿಐ ಬ್ಯಾಂಕ್ ಶಾಖೆಯ ಹೊರಗೆ ಎಸ್‌ಬಿಐ ಬ್ಯಾಂಕ್ ಉದ್ಯೋಗಿ ಮಾನಸ್ ವಾಜಪೇಯಿ ತನ್ನ ಪತ್ನಿ ದಿವ್ಯಾ ಮಿಶ್ರಾ ಅವರ ಮೇಲೆ ಗುಂಡು ಹಾರಿಸಿ ಹತ್ಯೆಗೈದಿದ್ದಾನೆ. 38 ವರ್ಷದ ಮಾನಸ್ ವಾಜಪೇಯಿ ತನ್ನ ಪತ್ನಿ ದಿವ್ಯಾಗೆ ಕರೆ ಮಾಡಿ ಅವರು ಕೆಲಸ ಮಾಡುತ್ತಿದ್ದ ಐಸಿಐಸಿಐ ಬ್ಯಾಂಕ್ ಶಾಖೆಯ ಹೊರಗೆ ಬರಲು ಕರೆ ಮಾಡಿದ್ದಾನೆ. ನಂತರ ಕೆಲವು ನಿಮಿಷಗಳ ಕಾಲ ಮಾತನಾಡಿ, ಗುಂಡು ಹಾರಿಸಿ ಪರಾರಿಯಾಗಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ತಿಳಿಸಿದ್ದಾರೆ.
ದಿವ್ಯಾ ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ದಿವ್ಯಾ ಮತ್ತು ಮಾನಸ್ 12 ವರ್ಷಗಳ ಹಿಂದೆ ವಿವಾಹವಾಗಿದ್ದರು. ಆದರೆ ಒಂದು ವರ್ಷಕ್ಕೂ ಹೆಚ್ಚು ಕಾಲ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ದಿವ್ಯಾ ಕಳೆದ ವರ್ಷ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ದಿವ್ಯಾ ತನಗೆ ಮೋಸ ಮಾಡಿದ್ದಾಳೆ ಮಾನಸ್ ಆರೋಪಿಸಿದ್ದಾರೆ.
ಶಾಲಾ ಬಿಸಿಯೂಟದಲ್ಲಿ ಉಪ್ಪಿನ ಬದಲು ಡಿಟರ್ಜೆಂಟ್ ಪೌಡರ್ ಬಳಕೆ
ಮಾನಸ್ ತನ್ನ 28 ವರ್ಷದ ಸಹೋದರಿ ಶಿವಾ ವಾಜಪೇಯಿ ಅವರ ಮೇಲೂ ಗುಂಡು ಹಾರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ವಾಜಪೇಯಿ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದ ಎನ್ನಲಾಗಿದೆ. ಪ್ರಕರಣದ ಮತ್ತೊಂದು ಆಘಾತಕಾರಿ ಅಂಶವೆಂದರೆ, ಮಾನಸ್ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ತನ್ನ ಹೆಂಡತಿ ಮತ್ತು ಸಹೋದರಿಯನ್ನು ಕೊಂದಿರುವುದಾಗಿ ವಾಟ್ಸ್‌ಆ್ಯಪ್ ಸ್ಟೇಟಸ್ ಹಾಕಿದ್ದ.
“ನನಗೆ ಮೋಸ ಮಾಡಿದ ನನ್ನ ಪತ್ನಿಯನ್ನು ಇಂದು ನಾನು ಕೊಂದಿದ್ದೇನೆ. ಈಗ ನಾನು, ನನ್ನನ್ನು ಮತ್ತು ನನ್ನ ಸದೋದರಿಯನ್ನು ಎಲ್ಲರನ್ನೂ ಕೊಲ್ಲಬೇಕು” ಎಂದು ವಾಟ್ಸ್‌ಆ್ಯಪ್ ಸ್ಟೇಟಸ್ ಹಾಕಿದ್ದ. ಮಾನಸ್ ವಾಜಪೇಯಿ ಮಧ್ಯಾಹ್ನ 12:30ರ ಸುಮಾರಿಗೆ ತನ್ನ ಮನೆಗೆ ಮರಳಿದ್ದಾನೆ. ಮಾನಸ್ ಆತುರದಲ್ಲಿದ್ದ ಮತ್ತು ತುಂಬಾ ಬೆವರುತ್ತಿದ್ದ ಎನ್ನಲಾಗಿದೆ. ಮನೆಯೊಳಗೆ ಹೋಗಿ ಹನುಮಾನ್ ಚಾಲೀಸಾ ಪಠಣ ಮಾಡುತ್ತಿದ್ದ ಎಂದು ಮನೆ ಬಳಿಯ ಅಂಗಡಿ ಮಾಲಕರೊಬ್ಬರು ಹೇಳಿದ್ದಾರೆ. ನೆರೆಹೊರೆಯವರು ಆತನ ವಾಟ್ಸ್‌ಆ್ಯಪ್ ಸ್ಟೇಟಸ್ ನೋಡಿದ ಬಳಿಕ ಮನೆಯೊಳಗೆ ಹೋಗಿ ನೋಡಿದಾಗ ಮಾನಸ್ ಮನೆಯೊಳಗೆ ಮೃತಪಟ್ಟಿರುವುದು ಕಂಡುಬಂದಿದೆ.
ಗುಂಡಿನ ದಾಳಿ ನಡೆದ ಕೂಡಲೇ, ದಿವ್ಯಾ ಅವರ ಸಹೋದರಿ ಪ್ರಜ್ಞಾ ಮಿಶ್ರಾ ಕೊಲೆಯ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. “ನನ್ನ ಸಹೋದರಿಗೆ ಗುಂಡು ಹಾರಿಸಲಾಗಿದೆ ಎಂದು ನನಗೆ ಈಗಷ್ಟೇ ಕರೆ ಬಂದಿದೆ. ಅವರನ್ನು ಲೋಹಿಯಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ” ಎಂದು ಅವರು ಉತ್ತರ ಪ್ರದೇಶ ಪೊಲೀಸರನ್ನು ಟ್ಯಾಗ್ ಮಾಡಿ ಪೋಸ್ಟ್ ಮಾಡಿದ್ದಾರೆ. ಮಾನಸ್ ತನ್ನ ವಾಟ್ಸ್‌ಆ್ಯಪ್ ಸ್ಟೇಟಸ್‌ನಲ್ಲಿ ಪ್ರಜ್ಞಾ ಅವರ ಹೆಸರನ್ನೂ ಉಲ್ಲೇಖಿಸಿದ್ದ.