#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Aravind Kejriwal: ಜನಾದೇಶವನ್ನು ಒಪ್ಪಿಕೊಳ್ಳುತ್ತೇನೆ- ಅರವಿಂದ ಕೇಜ್ರಿವಾಲ್ ಫಸ್ಟ್‌ ರಿಯಾಕ್ಷನ್‌

ಕಳೆದ ಹತ್ತು ವರ್ಷಗಳಿಂದ ದೆಹಲಿಯಲ್ಲಿ ಅಧಿಪತ್ಯ ಸಾಧಿಸಿದ್ದ ಆಮ್‌ ಆದ್ಮಿ ಸೋಲಿನತ್ತ ಮುಖ ಮಾಡಿದೆ. ಅರವಿಂದ್‌ ಕೇಜ್ರಿವಾಲ್‌ ಕೂಡ‌ ಹೀನಾಯವಾಗಿ ಸೋತಿದ್ದಾರೆ. ಚುನಾವಣಾ ಫಲಿತಾಂಶ ಹೊರಬಿದ್ದ ನಂತರ ಸುದ್ದಿಗಾರರೊಂದಿಗೆ ಮಾತನಾಡಿರುವ ಕೇಜ್ರಿವಾಲ್‌ ಜನಾದೇಶವನ್ನು ಮತ್ತು ಚುನಾವಣೆಯ ಸೋಲನ್ನು ಒಪ್ಪಿಕೊಳ್ಳುತ್ತೇನೆ ಎಂದಿದ್ದಾರೆ.

ಹೀನಾಯ ಸೋಲಿನ ಬೆನ್ನಲ್ಲೇ ಕೇಜ್ರಿವಾಲ್‌ ಫಸ್ಟ್‌ ರಿಯಾಕ್ಷನ್‌

Aravind Kejriwal

Profile Deekshith Nair Feb 8, 2025 3:38 PM

ನವದೆಹಲಿ: ಬಹು ನಿರೀಕ್ಷಿತ ದೆಹಲಿ ಚುನಾವಣೆ ಫಲಿತಾಂಶ(Delhi Election 2025) ಹೊರಬಿದ್ದಿದ್ದು, ಬಿಜೆಪಿ(BJP) ಭಾರೀ ಮುನ್ನಡೆಯನ್ನು ಸಾಧಿಸುವ ಮೂಲಕ ವಿಜಯದ ಪತಾಕೆ ಹಾರಿಸಿದೆ. ಕಳೆದ ಹತ್ತು ವರ್ಷಗಳಿಂದ ದೆಹಲಿಯಲ್ಲಿ ಪ್ರಾಬಲ್ಯ ಸಾಧಿಸಿದ್ದ ಆಮ್‌ ಆದ್ಮಿ ಸೋಲಿನತ್ತ ಮುಖ ಮಾಡಿದೆ. ಅರವಿಂದ್‌ ಕೇಜ್ರಿವಾಲ್‌(Aravind Kejriwal) ಕೂಡ‌ ಹೀನಾಯವಾಗಿ ಸೋತಿದ್ದಾರೆ. ಚುನಾವಣಾ ಫಲಿತಾಂಶ ಹೊರಬಿದ್ದ ನಂತರ ಸುದ್ದಿಗಾರರೊಂದಿಗೆ ಮಾತನಾಡಿರುವ ಕೇಜ್ರಿವಾಲ್‌ ಜನಾದೇಶವನ್ನು ಮತ್ತು ಚುನಾವಣೆಯ ಸೋಲನ್ನು ಒಪ್ಪಿಕೊಳ್ಳುತ್ತೇನೆ ಎಂದಿದ್ದಾರೆ. ಚುನಾವಣೆಯಲ್ಲಿ ಸೋತ ತಕ್ಷಣ ಸುಮ್ಮನೆ ಕೂರುವುದಿಲ್ಲ. ನಮ್ಮ ಪಕ್ಷ ಜನಸೇವೆಯನ್ನು ಮುಂದುವರಿಸಲಿದೆ ಎಂದಿದ್ದಾರೆ.

ರಾಜಕೀಯ ಪಡಸಾಲೆಯಲ್ಲಿ ಭಾರೀ ಕುತೂಹಲ ಮೂಡಿಸಿದ್ದ ದೆಹಲಿ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. ಹ್ಯಾಟ್ರಿಕ್‌ ಗೆಲುವು ಸಾಧಿಸುವ ಹಗಲುಗನಸು ಕಾಣುತ್ತಿದ್ದ ಕೇಜ್ರಿವಾಲ್‌ ಅತಿಯಾದ ಆತ್ಮವಿಶ್ವಾಸ ಮಕಾಡೆ ಮಲಗಿದೆ. ತಮ್ಮ ಕ್ಷೇತ್ರವನ್ನು ಉಳಿಸಿಕೊಳ್ಳುವಲ್ಲಿಯೂ ಅರವಿಂದ್‌ ಕೇಜ್ರಿವಾಲ್‌ ವಿಫಲರಾಗಿದ್ದು,ಬಿಜೆಪಿಯ ಪರ್ವೇಶ್‌ ವರ್ಮಾ ವಿರುದ್ಧ ಚುನಾವಣಾ ಕಣದಲ್ಲಿ ಮಣ್ಣು ಮುಕ್ಕಿದ್ದಾರೆ. ಬರೋಬ್ಬರಿ 27 ವರ್ಷಗಳ ನಂತರ ಬಿಜೆಪಿ ದೆಹಲಿ ಗದ್ದುಗೆ ಏರಿದ್ದು, ದಾಖಲೆಯ ಗೆಲುವು ಸಾಧಿಸಿದೆ.



ಚುನಾವಣಾ ಫಲಿತಾಂಶ ಹೊರಬಿದ್ದ ನಂತರ ಅರವಿಂದ ಕೇಜ್ರಿವಾಲ್‌ ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ. ಮತದಾರರ ತೀರ್ಪನ್ನು ವಿನಯಪೂರ್ವಕವಾಗಿ ಒಪ್ಪಿಕೊಳ್ಳುತ್ತೇನೆ. ಜನರ ಸೇವೆಯನ್ನು ಎಂದಿನಂತೆ ಮುಂದುವರೆಸುತ್ತೇನೆ. ದೆಹಲಿ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದೆ. ಅವರನ್ನು ಅಭಿನಂದಿಸುತ್ತೇನೆ. ಅವರು ಮತದಾರರಿಗೆ ನೀಡಿರುವ ಭರವಸೆಗಳನ್ನು ಈಡೇರಿಸುತ್ತಾರೆ ಎಂದು ಭಾವಿಸುತ್ತೇನೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ:Delhi Election 2025: ಹ್ಯಾಟ್ರಿಕ್‌ ಗೆಲುವಿನ ಕನಸು ಭಗ್ನ? ಆಪ್‌ಗೆ ಭ್ರಷ್ಟಾಚಾರವೇ ಮುಳುವಾಯ್ತ?

70 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 47 ಕ್ಷೇತ್ರಗಳಲ್ಲಿ ವಿಜಯ ಸಾಧಿಸಿದ್ದು, ಆಪ್‌ ಕೇವಲ 23 ಸ್ಥಾನಗಳನ್ನು ಗೆಲ್ಲುವ ಮೂಲಕ ತೃಪ್ತಿಪಟ್ಟುಕೊಂಡಿದೆ. ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್‌ ಸೊನ್ನೆ ಸುತ್ತಿದೆ.

ಅ‍‍ಣ್ಣಾ ಹಜಾರೆ ಕಿಡಿ

ಇತ್ತ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಕೂಡ ಹಗರಣಗಳೇ ಆಪ್‌ ಕೊಚ್ಚಿ ಹೋಗುವಂತೆ ಮಾಡಿದೆ ಎಂದು ಗುಡುಗಿದ್ದಾರೆ. ಕಾರಣವಾಗಿದೆ. ಆಮ್‌ ಆದ್ಮಿ ಪಕ್ಷ ದೆಹಲಿ ಚುನಾವಣೆಯಲ್ಲಿ ಹೀನಾಯವಾಗಿ ಸೋತಿದೆ. ಅರವಿಂದ ಕೇಜ್ರಿವಾಲ್‌ ಅವರ ಹ್ಯಾಟ್ರಿಕ್‌ ಗೆಲುವಿನ ಕನಸು ಭಗ್ನಗೊಂಡಿದೆ. ಸ್ವತಃ ಕೇಜ್ರಿವಾಲ್‌ ತಮ್ಮ ತವರು ಕ್ಷೇತ್ರದಲ್ಲಿಯೇ ಮಕಾಡೆ ಮಲಗಿದ್ದಾರೆ. ಬಿಜೆಪಿಯ ಪರ್ವೇಶ್‌ ವರ್ಮಾ ಕೇಜ್ರಿವಾಲ್‌ ವಿರುದ್ಧ ಗೆದ್ದು ಬೀಗಿದ್ದಾರೆ. ಆಮ್‌ ಆದ್ಮಿ ಪಕ್ಷದ ಸಾಲು ಸಾಲು ಹಗರಣಗಳೇ ಸೋಲಿಗೆ ಕಾರಣವಾಗಿದೆ. ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದ್ದ ಆಪ್‌ಗೆ ಮತದಾರರು ಸೋಲಿನ ರುಚಿ ತೋರಿಸಿದ್ದಾರೆ.ಇತ್ತ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಕೂಡ ಹಗರಣಗಳೇ ಆಪ್‌ ಕೊಚ್ಚಿ ಹೋಗುವಂತೆ ಮಾಡಿದೆ ಎಂದು ಗುಡುಗಿದ್ದಾರೆ.