Swati Maliwal: ಕೇಜ್ರಿವಾಲ್‌ಗೆ ಸೋಲು: ದ್ರೌಪದಿ ವಸ್ತ್ರಾಪಹರಣದ ಪೋಸ್ಟ್ ಶೇರ್ ಮಾಡಿದ ಸ್ವಾತಿ ಮಲಿವಾಲ್!
ಕಳೆದ ಹತ್ತು ವರ್ಷಗಳಿಂದ ದೆಹಲಿಯಲ್ಲಿ ಪ್ರಾಬಲ್ಯ ಸಾಧಿಸಿದ್ದ ಆಮ್ ಆದ್ಮಿ ಸೋಲಿನತ್ತ ಮುಖ ಮಾಡಿದೆ. ಅರವಿಂದ್ ಕೇಜ್ರಿವಾಲ್ ಕೂಡ ಹೀನಾಯವಾಗಿ ಸೋತಿದ್ದಾರೆ. ಕೇಜ್ರಿವಾಲ್ ಸೋತ ಬೆನ್ನಲ್ಲೇ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ದ್ರೌಪದಿ ವಸ್ತ್ರಾಪಹರಣದ ಪೋಸ್ಟ್‌ವೊಂದನ್ನು ತಮ್ಮ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಇದೀಗ ಅದು ಫುಲ್ ವೈರಲ್ ಆಗಿದೆ.
![ಕೇಜ್ರಿವಾಲ್‌ಗೆ ಸೋಲು: ದ್ರೌಪದಿ ವಸ್ತ್ರಾಪಹರಣದ ಪೋಸ್ಟ್ ಫುಲ್ ವೈರಲ್!](https://cdn-vishwavani-prod.hindverse.com/media/original_images/Swati_Maliwal.jpg)
Swati Maliwal
![Profile](https://vishwavani.news/static/img/user.png)
ನವದೆಹಲಿ: ಕಳೆದ ಹತ್ತು ವರ್ಷಗಳಿಂದ ಆಮ್ ಆದ್ಮಿ ಪಕ್ಷದ(AAP) ಭದ್ರಕೋಟೆಯಾಗಿದ್ದ ದೆಹಲಿ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಪಾಲಾಗಿದೆ. ಮತದಾರ ಬಿಜೆಪಿಗೆ ಅಸ್ತು ಎಂದಿದ್ದಾನೆ. ಭಾರೀ ಪ್ರಾಬಲ್ಯ ಸಾಧಿಸಿದ್ದ ಆಪ್ ಸೋಲಿನತ್ತ ಮುಖ ಮಾಡಿದೆ. ಅರವಿಂದ್ ಕೇಜ್ರಿವಾಲ್(Aravind Kejriwal) ಕೂಡ ತಮ್ಮ ತವರು ಕ್ಷೇತ್ರದಲ್ಲಿಯೇ ಹೀನಾಯವಾಗಿ ಸೋತಿದ್ದಾರೆ. ಕೇಜ್ರಿವಾಲ್ ಸೋತ ಬೆನ್ನಲ್ಲೇ ರಾಜ್ಯಸಭಾ(Rajya Sabha) ಸಂಸದೆ ಸ್ವಾತಿ ಮಲಿವಾಲ್(Swati Maliwal) ದ್ರೌಪದಿ ವಸ್ತ್ರಾಪಹರಣದ ಪೋಸ್ಟ್‌ವೊಂದನ್ನು ತಮ್ಮ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಇದೀಗ ಅದು ಫುಲ್ ವೈರಲ್ ಆಗಿದೆ.
ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಮತ್ತು ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ನಿರೀಕ್ಷೆ ಹುಸಿಯಾಗಿದೆ. ಹ್ಯಾಟ್ರಿಕ್ ಗೆಲುವು ಸಾಧಿಸುವ ಗೆಲುವ ಭಗ್ನಗೊಂಡಿದೆ. ಬಿಜೆಪಿ ಅಭ್ಯರ್ಥಿ ಪರ್ವೇಶ್ ವರ್ಮಾ ವಿರುದ್ಧ ಕೇಜ್ರಿವಾಲ್ ಸೋತಿದ್ದಾರೆ. ಸಾಲು ಸಾಲು ಹಗರಣಗಳೇ ಅವರ ಸೋಲಿಗೆ ಕಾರಣ ಎಂಬ ಮಾತು ಕೇಳಿ ಬರುತ್ತಿದೆ. ಕೇಜ್ರಿವಾಲ್ ಸೋತ ಬೆನ್ನಲ್ಲೇ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಮಹಾಭಾರತದ ದ್ರೌಪದಿ ವಸ್ತ್ರಾಪಹರಣದ ಫೋಟೊವೊಂದನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅವರ ಪೋಸ್ಟ್ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದೆ.
ಮಹಾಭಾರತದ ದ್ರೌಪದಿ ವಸ್ತ್ರಾಪಹರಣದ ಚಿತ್ರವನ್ನು ಪೋಸ್ಟ್ ಮಾಡುವ ಮೂಲಕ ಅರವಿಂದ್ ಕೇಜ್ರಿವಾಲ್‌ಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ. ಅರವಿಂದ್ ಕೇಜ್ರಿವಾಲ್ ಅವರ ಇಡೀ ಪಕ್ಷವನ್ನು ಕೌರವರಿಗೆ ಹೋಲಿಸಿದ್ದು, ಪೋಸ್ಟ್‌ನಲ್ಲಿ ಯಾವುದೇ ಬರಹವನ್ನು ಬರೆದಿಲ್ಲ. ಕೇವಲ ಫೋಟೋ ಮಾತ್ರ ಹಂಚಿಕೊಂಡಿದ್ದಾರೆ.
ಈ ಸುದ್ದಿಯನ್ನೂ ಓದಿ:Delhi Election 2025: ಹ್ಯಾಟ್ರಿಕ್ ಗೆಲುವಿನ ಕನಸು ಭಗ್ನ? ಆಪ್‌ಗೆ ಭ್ರಷ್ಟಾಚಾರವೇ ಮುಳುವಾಯ್ತ?
ಒಂದು ಕಾಲದಲ್ಲಿ ಕೇಜ್ರಿವಾಲ್ ಅವರ ನಿಕಟವರ್ತಿಯಾಗಿದ್ದ ಮಲಿವಾಲ್ ಇತ್ತೀಚಿನ ದಿನಗಳಲ್ಲಿ ಅವರ ಟೀಕಾಕಾರರಲ್ಲಿ ಒಬ್ಬರಾಗಿದ್ದಾರೆ. ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆಯಾಗಿಯೂ ಸೇವೆ ಸಲ್ಲಿಸಿದ್ದ ಅವರು, ಕೇಜ್ರಿವಾಲ್ ಅವರ ನಾಯಕತ್ವ ಮತ್ತು ಅವರ ಪಕ್ಷದ ನಡೆಯನ್ನು ಸಾರ್ವಜನಿಕವಾಗಿ ಸಾಕಷ್ಟು ಬಾರಿ ಟೀಕಿಸಿದ್ದಾರೆ.
ಸ್ವಾತಿ ಮೇಲೆ ಕೇಜ್ರಿವಾಲ್ ಸಿಬ್ಬಂದಿ ಹಲ್ಲೆ
ಈ ಹಿಂದೆ ಸ್ವಾತಿ ಮಲಿವಾಲ್ ಮೇಲೆ ಆಗಿನ ಮುಖ್ಯಮಂತ್ರಿಯಾಗಿದ್ದ ಅರವಿಂದ್ ಕೇಜ್ರಿವಾಲ್ ಅವರ ಆಪ್ತ ಸಹಾಯಕ ಬಿಭವ್ ಕುಮಾರ್ ಹಲ್ಲೆ ಮಾಡಿದ್ದ ವಿಚಾರ ದೇಶಾದ್ಯಂತ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಈ ಬೆಳವಣಿಗೆ ಬಳಿಕ ಸ್ವಾತಿ ಮಲಿವಾಲ್ ತಮ್ಮದೇ ಪಕ್ಷದ ವಿರುದ್ಧ ಆಕ್ರೋಶಗೊಂಡಿದ್ದರು. ಬಹಿರಂಗವಾಗಿಯೇ ಕೇಜ್ರಿವಾಲ್ ಮತ್ತು ಅವರ ಸರ್ಕಾರದ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದರು.