ಕರ್ನಾಟಕ ಬಜೆಟ್​ ವಿದೇಶ ಮಹಿಳಾ ದಿನಾಚರಣೆ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Narendra Modi: ದೆಹಲಿ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು: ಜಾಗತಿಕ ಮಾಧ್ಯಮಗಳು ಹೇಳಿದ್ದೇನು?

ದೆಹಲಿ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ಐತಿಹಾಸಿಕ ಗೆಲುವನ್ನು ಸಾಧಿಸಿದೆ. 27 ವರ್ಷಗಳ ನಂತರ ಬಿಜೆಪಿ ದೆಹಲಿ ಗದ್ದುಗೆ ಏರಿದ್ದು,ಆ ಮೂಲಕ ಪ್ರಧಾನಿ ನರೇಂದ್ರ ಅವರಿಗಿದ್ದ ಸ್ಟಾರ್‌ ಇಮೇಜ್ ಮರಳಿದೆ. 70 ಸದಸ್ಯ ಬಲದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 78 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದೆ. ಇತ್ತ ದೆಹಲಿ ಚುನಾವಣೆಯಲ್ಲಿನ ಬಿಜೆಪಿಯ ಭರ್ಜರಿ ಗೆಲುವನ್ನು ಜಾಗತಿಕ ಮಾಧ್ಯಮಗಳು ವಿಶ್ಲೇಷಿಸಿವೆ.

ದೆಹಲಿ ಚುನಾವಣೆ: ಬಿಜೆಪಿ ಗೆಲುವನ್ನು ವಿಶ್ಲೇಷಿಸಿದ ಜಾಗತಿಕ ಮಾಧ್ಯಮಗಳು!

Narendra Modi

Profile Deekshith Nair Feb 9, 2025 11:32 AM

ನವದೆಹಲಿ: ದೆಹಲಿ ಚುನಾವಣೆಯಲ್ಲಿ(Delhi Election 2025) ಬಿಜೆಪಿ(BJP) ಪಕ್ಷವು ಐತಿಹಾಸಿಕ ಗೆಲುವನ್ನು ಸಾಧಿಸಿದೆ. 27 ವರ್ಷಗಳ ನಂತರ ಬಿಜೆಪಿ ದೆಹಲಿ ಗದ್ದುಗೆ ಏರಿದ್ದು,ಆ ಮೂಲಕ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರಿಗಿದ್ದ ಜನಪ್ರಿಯತೆಯ ಇಮೇಜ್ ಮರಳಿದೆ. 70 ಸದಸ್ಯ ಬಲದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 78 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದೆ. ಕಮಲ ಕಮಾಲ್ ಮಾಡಿದ್ದು, ಆಪ್‌ನ(AAP) ಹ್ಯಾಟ್ರಿಕ್ ಕನಸಿನ ಗೆಲುವು ಭಗ್ನಗೊಂಡಿದೆ. ಇತ್ತ ದೆಹಲಿ ಚುನಾವಣೆಯಲ್ಲಿನ ಬಿಜೆಪಿಯ ಭರ್ಜರಿ ಗೆಲುವನ್ನು ಮತ್ತು ಆಮ್‌ ಆದ್ಮಿಯ ಹೀನಾಯ ಸೋಲನ್ನು ಜಾಗತಿಕ ಮಾಧ್ಯಮಗಳು ವಿಶ್ಲೇಷಿಸಿವೆ.

ಬಹು ನಿರೀಕ್ಷಿತ ಮತ್ತು ರಾಜಕೀಯ ಪಡಸಾಲೆಯಲ್ಲಿ ಸಾಕಷ್ಟು ಕುತೂಹಲ ಹುಟ್ಟುಹಾಕಿದ್ದ ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶ ನಿನ್ನೆ(ಫೆ.8) ಹೊರಬಿದ್ದಿದ್ದು, ಬಿಜೆಪಿ ಪಕ್ಷ ಅದ್ಭುತ ಗೆಲುವು ಸಾಧಿಸಿದೆ. ಕಳೆದ ಹತ್ತು ವರ್ಷಗಳಿಂದ ರಾಷ್ಟ್ರ ರಾಜಧಾನಿಯಲ್ಲಿ ಪ್ರಾಬಲ್ಯ ಸಾಧಿಸಿದ್ದ ಆಪ್‌ ಕೇವಲ 22 ಕ್ಷೇತ್ರಗಳನ್ನು ಗೆಲ್ಲುವಲ್ಲಿ ತೃಪ್ತಿಪಟ್ಟುಕೊಂಡಿದೆ. ಇನ್ನು ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್‌ ಸೊನ್ನೆ ಸುತ್ತಿದೆ. ಅಂದರೆ ಯಾವುದೇ ಕ್ಷೇತ್ರವನ್ನು ಗೆಲ್ಲದೆ ಮಕಾಡೆ ಮಲಗಿದೆ. ಬಿಜೆಪಿ ಐತಿಹಾಸಿಕ ಗೆಲುವು ಕಂಡ ಬೆನ್ನಲ್ಲೇ ಜಾಗತಿಕ ಮಾಧ್ಯಮಗಳು ನರೇಂದ್ರ ಮೋದಿ ಅವರ ನಾಯಕತ್ವ ಮತ್ತು ಬಿಜೆಪಿಯ ಗೆಲುವನ್ನು ವಿಶ್ಲೇಷಿಸಿವೆ. ಮಾಧ್ಯಮಗಳ ವಿಶ್ಲೇಷಣೆ ಎಲ್ಲರ ಗಮನಸೆಳೆದಿದೆ.



ಅನೇಕ ಮಾಧ್ಯಮಗಳು ರಾಜಧಾನಿ ಚುನಾವಣೆಯಲ್ಲಿನ ಬಿಜೆಪಿಯ ಗೆಲುವನ್ನು ಮಹತ್ವದ ರಾಜಕೀಯ ಬದಲಾವಣೆ ಎಂದು ಕರೆದಿವೆ. ಇದು ಹೊಸ ಶಕೆ ಮತ್ತು ಮೈಲಿಗಲ್ಲು ಎಂತಲೂ ವಿಶ್ಲೇಷಿಸಿವೆ. ಈ ಚುನಾವಣಾ ಫಲಿತಾಂಶವು ಪ್ರಧಾನಿ ನರೇಂದ್ರ ಮೋದಿ ಅವರ ಪಕ್ಷದ ಮಹತ್ವದ ಗೆಲುವು ಎಂದು ರಾಯಿಟರ್ಸ್ ಸುದ್ದಿ ಮಾಧ್ಯಮ ಬಣ್ಣಿಸಿದೆ. ಬಿಜೆಪಿಯ ಚುನಾವಣಾ ಪ್ರಚಾರವು ಆಡಳಿತ, ಕಾನೂನು ಸುವ್ಯವಸ್ಥೆ ಮತ್ತು ಮೂಲಸೌಕರ್ಯಗಳ ಮೇಲೆ ಗಮನಹರಿಸಿತ್ತು. ದೆಹಲಿ ನಗರ ಕೇಂದ್ರಗಳಲ್ಲಿ, ವಿಶೇಷವಾಗಿ ಒಂದು ಕಾಲದಲ್ಲಿ ಎಎಪಿಯನ್ನು ಬೆಂಬಲಿಸಿದ್ದ ಮಧ್ಯಮ ವರ್ಗದ ಮತದಾರರು ಈ ಬಾರಿ ಬಿಜೆಪಿಗೆ ಒಲವು ತೋರಿಸಿದ್ದಾರೆ.

ಈ ಸುದ್ದಿಯನ್ನೂ ಓದಿ:PM Narendra Modi: ಶಾರ್ಟ್ ಕಟ್ ರಾಜಕೀಯಕ್ಕೆ ಶಾರ್ಟ್ ಸರ್ಕ್ಯೂಟ್ ಆಗಿದೆ; ಆಪ್‌, ಕಾಂಗ್ರೆಸ್‌ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ ಹೀಗಿತ್ತು

ಸ್ಪ್ಯಾನಿಷ್‌ನ ಪ್ರಮುಖ ಪತ್ರಿಕೆಯಾದ ಎಲ್ ಪೈಸ್ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಪಕ್ಷವು ಸುಮಾರು ಮೂರು ದಶಕಗಳ ನಂತರ ದೆಹಲಿಯಲ್ಲಿ ಅಧಿಕಾರಕ್ಕೆ ಮರಳಿದೆ" ಎಂಬ ಶೀರ್ಷಿಕೆಯೊಂದಿಗೆ ವರದಿಯನ್ನು ಪ್ರಕಟಿಸಿದೆ. ಇಡೀ ವರದಿಯು ಬಿಜೆಪಿಯ ಚುನಾವಣಾ ಯಶಸ್ಸನ್ನು ವಿಶ್ಲೇಷಿಸಿದೆ.

ಫೈನಾನ್ಷಿಯಲ್ ಟೈಮ್ಸ್ ಪತ್ರಿಕೆ ಕೂಡ ಬಿಜೆಪಿ ಮಹತ್ವದ ಗೆಲುವನ್ನು ಬಣ್ಣಿಸಿದ್ದು,ಮೋದಿ ನಾಯಕತ್ವವನ್ನು ವಿಶ್ಲೇಷಿಸಿದೆ.ಅಷ್ಟೇ ಅಲ್ಲದೆ ಆಪ್‌ ಭದ್ರಕೋಟೆಯಾಗಿದ್ದ ದೆಹಲಿ ಚುನಾವಣೆಯಲ್ಲಿ ಕೇಜ್ರಿವಾಲ್‌ ಅಂತಹ ನಾಯಕರ ಸೋಲಿನ ಹಿಂದಿನ ಕಾರಣಗಳನ್ನು ವಿವರಿಸಿದೆ. ಒಟ್ಟಾರೆ ಜಗತ್ತಿನ ಅನೇಕ ಪತ್ರಿಕೆ ಮತ್ತು ಸುದ್ದಿ ಮಾಧ್ಯಮಗಳು ದೆಹಲಿ ಚುನಾವಣೆಯ ಕುರಿತು ಚರ್ಚೆಗಳನ್ನು ನಡೆಸಿವೆ.